Telugu బైబిల్

కీర్తనల గ్రంథము మొత్తం 150 అధ్యాయాలు

కీర్తనల గ్రంథము

కీర్తనల గ్రంథము అధ్యాయము 113
కీర్తనల గ్రంథము అధ్యాయము 113

1 ಯೆಹೋವನಿಗೆ ಸ್ತೋತ್ರವಾಗಲಿ! ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ! ಆತನ ಹೆಸರನ್ನು ಕೊಂಡಾಡಿರಿ.

2 ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.

3 ಪೂರ್ವದಿಂದಿಡಿದು ಪಶ್ಚಿಮದವರೆಗೂ ಯೆಹೋವನ ಹೆಸರು ಸ್ತುತಿಸಲ್ಪಡಲಿ.

కీర్తనల గ్రంథము అధ్యాయము 113

4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ; ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.

5 ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ. ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.

6 ಆತನು ಆಕಾಶವನ್ನೂ ಭೂಮಿಯನ್ನೂ ಬಾಗಿ ನೋಡುವನು.

కీర్తనల గ్రంథము అధ్యాయము 113

7 ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು; ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.

8 ಆತನು ಅವರನ್ನು ಪ್ರಮುಖರನ್ನಾಗಿಯೂ ನಾಯಕರುಗಳನ್ನಾಗಿಯೂ ಮಾಡುವನು.

9 ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ ಸಂತೋಷಪಡಿಸುವನು. ಯೆಹೋವನಿಗೆ ಸ್ತೋತ್ರವಾಗಲಿ!