దినవృత్తాంతములు మొదటి గ్రంథము 24 : 1 (ERVTE)
{#1ಯಾಜಕರ ವರ್ಗಗಳು } ಆರೋನನ ಸಂತಾನದವರು ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಗಂಡುಮಕ್ಕಳು: ನಾದ್ವಾ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್.
దినవృత్తాంతములు మొదటి గ్రంథము 24 : 2 (ERVTE)
ನಾದ್ವಾ್ ಮತ್ತು ಅಬೀಹೂ ತಮ್ಮ ತಂದೆ ಸಾಯುವ ಮೊದಲೇ ತೀರಿಹೋದರು. ಅವರಿಗೆ ಮಕ್ಕಳಿರಲಿಲ್ಲ. ಅವರ ಬದಲಿಗೆ ಎಲ್ಲಾಜಾರ್ ಮತ್ತು ಈತಾಮಾರ್ ಯಾಜಕರಾಗಿ ಸೇವೆಮಾಡಿದರು.
దినవృత్తాంతములు మొదటి గ్రంథము 24 : 3 (ERVTE)
ಎಲ್ಲಾಜಾರ್ ಮತ್ತು ಈತಾಮಾರ್ ಕುಲದ ಯಾಜಕರನ್ನು ದಾವೀದನು ಪ್ರತ್ಯೇಕಿಸಿ ಚಾದೋಕ್ ಮತ್ತು ಅಹೀಮೆಲೆಕ್ ಯಾಜಕರ ಸಹಾಯದಿಂದ ಎರಡು ವರ್ಗಗಳನ್ನಾಗಿ ಮಾಡಿದನು. ಚಾದೋಕನು ಎಲ್ಲಾಜಾರನ ವಂಶದವನಾಗಿದ್ದನು ಮತ್ತು ಅಹೀಮೆಲೆಕನು ಈತಾಮಾರನ ವಂಶದವನಾಗಿದ್ದನು.
దినవృత్తాంతములు మొదటి గ్రంథము 24 : 4 (ERVTE)
ಈತಾಮಾರನ ಸಂತತಿಗಿಂತಲೂ ಎಲ್ಲಾಜಾರನ ಸಂತತಿಯವರಲ್ಲಿ ಹೆಚ್ಚು ಮಂದಿ ನಾಯಕರಿದ್ದರು. ಎಲ್ಲಾಜಾರನ ಸಂತತಿಯವರಲ್ಲಿ ಹದಿನಾರು ಮಂದಿ ಮತ್ತು ಈತಾಮಾರನ ಸಂತತಿಯವರಲ್ಲಿ ಎಂಟು ಮಂದಿ ನಾಯಕರಿದ್ದರು.
దినవృత్తాంతములు మొదటి గ్రంథము 24 : 5 (ERVTE)
ಪ್ರತಿಯೊಂದು ಕುಲದಿಂದ ಚೀಟುಹಾಕುವುದರ ಮೂಲಕ ಜನರನ್ನು ಆರಿಸಿಕೊಳ್ಳಲಾಯಿತು. ಕೆಲವರನ್ನು ಪವಿತ್ರ ಸ್ಥಳದ ಸೇವೆಗಾಗಿ ಆರಿಸಿಕೊಳ್ಳಲಾಯಿತು; ಇನ್ನು ಕೆಲವರನ್ನು ಯಾಜಕರಾಗಿ ಸೇವೆಮಾಡಲು ಆರಿಸಿಕೊಳ್ಳಲಾಯಿತು; ಇವರೆಲ್ಲರೂ ಎಲ್ಲಾಜಾರ್ ಮತ್ತು ಈತಾಮಾರನ ಕುಲದವರಾಗಿದ್ದರು.
దినవృత్తాంతములు మొదటి గ్రంథము 24 : 6 (ERVTE)
ನೆತನೇಲನ ಮಗನಾದ ಶೆಮಾಯನು ಲೇಖಕನಾಗಿದ್ದನು. ಶೆಮಾಯನು ಲೇವಿ ಸಂತತಿಗೆ ಸೇರಿದವನಾಗಿದ್ದನು. ಇವನು ವಂಶಾವಳಿಯನ್ನು ಬರೆದಿಡುತ್ತಿದ್ದನು. ಅರಸನಾದ ದಾವೀದನ ಮತ್ತು ಯಾಜಕರಾದ ಚಾದೋಕನ, ಅಹೀಮೆಲೆಕನ ಮತ್ತು ಲೇವಿಯರ ನಾಯಕರ ಎದುರಿನಲ್ಲಿ ಸಂತತಿಯವರನ್ನು ಬರೆದನು. ಪ್ರತಿಸಲ ಚೀಟುಹಾಕಿ ಒಬ್ಬನನ್ನು ಒಂದು ಕೆಲಸಕ್ಕೆ ಆರಿಸಿದಾಗ ಅವನ ಹೆಸರನ್ನು ವಂಶಾವಳಿಯಲ್ಲಿ ಬರೆದನು. ಹೀಗೆ ಒಬ್ಬೊಬ್ಬನು ಯಾವಯಾವ ಕೆಲಸಗಳನ್ನು ಮಾಡಬೇಕೆಂದು ಎಲ್ಲರಿಗೂ ಗೊತ್ತುಪಡಿಸಿದರು. ಈ ರೀತಿಯಾಗಿ ಎಲ್ಲಾಜಾರ್ ಮತ್ತು ಈತಾಮಾರ್ ಕುಟುಂಬದವರಿಗೆ ಯಾಜಕೋದ್ಯೋಗವನ್ನು ಮಾಡುವಂತೆ ವರ್ಗಗಳಾಗಿ ಪ್ರತ್ಯೇಕಿಸಿ ಕೆಲಸಗಳನ್ನು ನೇಮಿಸಿದರು.
దినవృత్తాంతములు మొదటి గ్రంథము 24 : 7 (ERVTE)
ಮೊದಲನೆಯ ವರ್ಗ ಯೆಹೋಯಾರೀಬನದು. ಎರಡನೆಯ ವರ್ಗ ಯೆದಾಯನದು.
దినవృత్తాంతములు మొదటి గ్రంథము 24 : 8 (ERVTE)
ಮೂರನೆಯ ವರ್ಗ ಹಾರೀಮನದು. ನಾಲ್ಕನೆಯ ವರ್ಗ ಸೆಯೋರೀವುನದು.
దినవృత్తాంతములు మొదటి గ్రంథము 24 : 9 (ERVTE)
ಐದನೆಯ ವರ್ಗ ಮಲ್ಕೀಯನದು. ಆರನೆಯ ವರ್ಗ ಮಿಯ್ಯಾಮೀನನದು.
దినవృత్తాంతములు మొదటి గ్రంథము 24 : 10 (ERVTE)
ಏಳನೆಯ ವರ್ಗ ಹಕ್ಕೋಚನದು. ಎಂಟನೆಯ ವರ್ಗ ಅಬೀಯನದು.
దినవృత్తాంతములు మొదటి గ్రంథము 24 : 11 (ERVTE)
ಒಂಭತ್ತನೆಯ ವರ್ಗ ಯೆಷೂವನದು. ಹತ್ತನೆಯ ವರ್ಗ ಶೆಕನ್ಯನದು.
దినవృత్తాంతములు మొదటి గ్రంథము 24 : 12 (ERVTE)
ಹನ್ನೊಂದನೆಯ ವರ್ಗ ಎಲ್ಯಾಷೀಬನದು. ಹನ್ನೆರಡನೆಯ ವರ್ಗ ಯಾಕೀಮನದು.
దినవృత్తాంతములు మొదటి గ్రంథము 24 : 13 (ERVTE)
ಹದಿಮೂರನೆಯ ವರ್ಗ ಹುಪ್ಪನದು. ಹದಿನಾಲ್ಕನೆಯ ವರ್ಗ ಎಷೆಬಾಬನದು.
దినవృత్తాంతములు మొదటి గ్రంథము 24 : 14 (ERVTE)
ಹದಿನೈದನೆಯ ವರ್ಗ ಬಿಲ್ಗನದು. ಹದಿನಾರನೆಯ ವರ್ಗ ಇಮ್ಮೇರನದು.
దినవృత్తాంతములు మొదటి గ్రంథము 24 : 15 (ERVTE)
ಹದಿನೇಳನೆಯ ವರ್ಗ ಹೇಜೀರನದು. ಹದಿನೆಂಟನೆಯ ವರ್ಗ ಹಪ್ಪಿಚ್ಚೇಚನದು.
దినవృత్తాంతములు మొదటి గ్రంథము 24 : 16 (ERVTE)
ಹತ್ತೊಂಭತ್ತನೆಯ ವರ್ಗ ಪೆತಹ್ಯನದು. ಇಪ್ಪತ್ತನೆಯ ವರ್ಗ ಯೆಹೆಜ್ಕೇಲನದು.
దినవృత్తాంతములు మొదటి గ్రంథము 24 : 17 (ERVTE)
ಇಪ್ಪತ್ತೊಂದನೆಯ ವರ್ಗ ಯಾಕೀನನದು. ಇಪ್ಪತ್ತೆರಡನೆಯ ವರ್ಗ ಗಾಮೂಲನದು.
దినవృత్తాంతములు మొదటి గ్రంథము 24 : 18 (ERVTE)
ಇಪ್ಪತ್ತಮೂರನೆಯ ವರ್ಗ ದೆಲಾಯನದು. ಇಪ್ಪತ್ತನಾಲ್ಕನೆಯ ವರ್ಗ ಮಾಜ್ಯನದು.
దినవృత్తాంతములు మొదటి గ్రంథము 24 : 19 (ERVTE)
దినవృత్తాంతములు మొదటి గ్రంథము 24 : 20 (ERVTE)
ಈ ವರ್ಗದವರನ್ನು ಕ್ರಮವಾಗಿ ದೇವಾಲಯದಲ್ಲಿ ಸೇವೆಮಾಡಲು ಆರಿಸಲಾಯಿತು. ಇವರು ಆರೋನನ ಆರಾಧನಾ ಪದ್ದತಿಯನ್ನು ಅನುಸರಿಸಿದರು. ಇಸ್ರೇಲರ ದೇವರಾದ ಯೆಹೋವನು ಆರಾಧನಾ ಕ್ರಮಗಳನ್ನು ಆರೋನನಿಗೆ ತಿಳಿಸಿದ್ದನು. {#1ಇತರ ಲೇವಿಯರು } ಲೇವಿಕುಲದ ಇತರ ಸಂತತಿಯವರು: ಅಮ್ರಾಮನ ಸಂತತಿಯ ಶೂಬಾಯೇಲ. ಶೂಬಾಯೇಲನ ಸಂತತಿಯ ಯೆಹ್ದೆಯಾಹ.
దినవృత్తాంతములు మొదటి గ్రంథము 24 : 21 (ERVTE)
ರೆಹಬ್ಯನ ಸಂತತಿಯ ಇಷ್ಷೀಯ. (ಇಷ್ಷೀಯನು ಚೊಚ್ಚಲಮಗನು.)
దినవృత్తాంతములు మొదటి గ్రంథము 24 : 22 (ERVTE)
ಇಚ್ಹಾರನ ಸಂತತಿಯ ಶೆಲೋಮೋತ್. ಶೆಲೋಮೋತನ ಕುಟುಂಬದ ಯಹತ.
దినవృత్తాంతములు మొదటి గ్రంథము 24 : 23 (ERVTE)
ಹೆಬ್ರೋನನ ಗಂಡುಮಕ್ಕಳು: ಮೊದಲನೆಯವನು ಯೆರೀಯ; ಎರಡನೆಯ ಮಗ ಅಮರ್ಯ; ಮೂರನೆಯ ಮಗ ಯಹಜೀಯೇಲನು; ನಾಲ್ಕನೆಯ ಮಗ ಯೆಕಮ್ಮಾಮ.
దినవృత్తాంతములు మొదటి గ్రంథము 24 : 24 (ERVTE)
ಉಜ್ಜೀಯೇಲನ ಮಗನು ಮೀಕ. ಮೀಕನ ಮಗ ಶಾಮೀರ್.
దినవృత్తాంతములు మొదటి గ్రంథము 24 : 25 (ERVTE)
ಇಷ್ಷೀಯನು ಮೀಕನ ಸೋದರ. ಇಷ್ಷೀಯನ ಮಗ ಜೆಕರ್ಯ.
దినవృత్తాంతములు మొదటి గ్రంథము 24 : 26 (ERVTE)
ಮೆರಾರೀಯ ಸಂತತಿಯ ಮಹ್ಲೀ, ಮೂಷೀ ಮತ್ತು ಯಾಜ್ಯ.
దినవృత్తాంతములు మొదటి గ్రంథము 24 : 27 (ERVTE)
ಯಾಜ್ಯನ ಗಂಡುಮಕ್ಕಳಾದ ಬೆನೋ, ಶೋಹಮ್, ಜಕ್ಕೂರ್ ಮತ್ತು ಇಬ್ರೀ.
దినవృత్తాంతములు మొదటి గ్రంథము 24 : 28 (ERVTE)
ಮಹ್ಲೀಯ ಮಗ ಎಲ್ಲಾಜಾರ್. ಎಲ್ಲಾಜಾರನಿಗೆ ಗಂಡುಮಕ್ಕಳಿರಲಿಲ್ಲ.
దినవృత్తాంతములు మొదటి గ్రంథము 24 : 29 (ERVTE)
ಕೀಷನ ಮಗನಾದ ಯೆರಹ್ಮೇಲ.
దినవృత్తాంతములు మొదటి గ్రంథము 24 : 30 (ERVTE)
ಮೂಷೀಯ ಗಂಡುಮಕ್ಕಳಾದ ಮಹ್ಲೀ, ಏದೆರ್ ಮತ್ತು ಯೆರೀಮೋತ್. ಇವರೆಲ್ಲರು ಲೇವಿಕುಲದವರ ನಾಯಕರುಗಳು. ಇವರನ್ನು ಆಯಾ ಗೋತ್ರಗಳಿಗನುಸಾರವಾಗಿ ಪಟ್ಟಿ ಮಾಡಲಾಯಿತು.
దినవృత్తాంతములు మొదటి గ్రంథము 24 : 31 (ERVTE)
ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೀಟುಹಾಕಿ ಆರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೇ ಚೀಟುಹಾಕಿ ವಿಶಿಷ್ಟ ಕಾರ್ಯಗಳಿಗಾಗಿ ಇವರನ್ನು ಆರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಚಾದೋಕನ, ಅಹೀಮೆಲೆಕನ ಮತ್ತು ಲೇವಿಕುಲದ ನಾಯಕರ ಎದುರಿಗೆ ಚೀಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬಗಳೆನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31