దినవృత్తాంతములు మొదటి గ్రంథము 6 : 1 (ERVTE)
{#1ಲೇವಿಯ ಸಂತತಿಯವರು } ಲೇವಿಯ ಗಂಡುಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
దినవృత్తాంతములు మొదటి గ్రంథము 6 : 2 (ERVTE)
ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
దినవృత్తాంతములు మొదటి గ్రంథము 6 : 3 (ERVTE)
ಅಮ್ರಾಮನ ಮಕ್ಕಳು: ಆರೋನ, ಮೋಶೆ ಮತ್ತು ಮಿರ್ಯಾಮಳು. ಆರೋನನ ಮಕ್ಕಳು: ನಾದ್ವಾ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್.
దినవృత్తాంతములు మొదటి గ్రంథము 6 : 4 (ERVTE)
ಎಲ್ಲಾಜಾರನ ಮಗನು ಫೀನೆಹಾಸ. ಫೀನೆಹಾಸನ ಮಗನು ಅಬೀಷೂವ.
దినవృత్తాంతములు మొదటి గ్రంథము 6 : 5 (ERVTE)
ಅಬೀಷೂವನ ಮಗನು ಬುಕ್ಕೀ; ಬುಕ್ಕೀಯ ಮಗನು ಉಜ್ಜೀ.
దినవృత్తాంతములు మొదటి గ్రంథము 6 : 6 (ERVTE)
ಉಜ್ಜೀಯ ಮಗನು ಜೆರಹ್ಯ. ಜೆರಹ್ಯನ ಮಗನು ಮೆರಾಯೋತ್.
దినవృత్తాంతములు మొదటి గ్రంథము 6 : 7 (ERVTE)
ಮೆರಾಯೋತನ ಮಗನು ಅಮರ್ಯ. ಅಮರ್ಯನ ಮಗನು ಅಹೀಟೂಬ.
దినవృత్తాంతములు మొదటి గ్రంథము 6 : 8 (ERVTE)
ಅಹೀಟೂಬನ ಮಗ ಚಾದೋಕ. ಚಾದೋಕನ ಮಗ ಅಹೀಮಾಚ.
దినవృత్తాంతములు మొదటి గ్రంథము 6 : 9 (ERVTE)
ಅಹೀಮಾಚನು ಅಜರ್ಯನ ತಂದೆ; ಅಜರ್ಯನ ಮಗನು ಯೋಹಾನಾನ.
దినవృత్తాంతములు మొదటి గ్రంథము 6 : 10 (ERVTE)
ಯೋಹಾನಾನನ ಮಗನು ಅಜರ್ಯ. (ಸೊಲೊಮೋನನು ಜೆರುಸಲೇಮಿನಲ್ಲಿ ಕಟ್ಟಿದ ದೇವಾಲಯದಲ್ಲಿ ಅಜರ್ಯನು ಮಹಾಯಾಜಕನಾಗಿದ್ದನು.)
దినవృత్తాంతములు మొదటి గ్రంథము 6 : 11 (ERVTE)
ಅಜರ್ಯನ ಮಗನು ಅಮರ್ಯ. ಅಮರ್ಯನು ಅಹೀಟೂಬನ ತಂದೆ.
దినవృత్తాంతములు మొదటి గ్రంథము 6 : 12 (ERVTE)
ಅಹೀಟೂಬನು ಚಾದೋಕನ ತಂದೆ. ಚಾದೋಕನು ಶಲ್ಲೂಮನ ತಂದೆ.
దినవృత్తాంతములు మొదటి గ్రంథము 6 : 13 (ERVTE)
ಶಲ್ಲೂಮನು ಹಿಲ್ಕೀಯನ ತಂದೆ. ಹಿಲ್ಕೀಯನು ಅಜರ್ಯನ ತಂದೆ.
దినవృత్తాంతములు మొదటి గ్రంథము 6 : 14 (ERVTE)
ಅಜರ್ಯನು ಸೆರಾಯನ ತಂದೆ. ಸೆರಾಯನು ಯೆಹೋಚಾದಾಕನ ತಂದೆ.
దినవృత్తాంతములు మొదటి గ్రంథము 6 : 15 (ERVTE)
ಯೆಹೂದ ಮತ್ತು ಜೆರುಸಲೇಮಿನ ಜನರು ಸೆರೆ ಒಯ್ಯಲ್ಪಟ್ಟಾಗ ಯೆಹೋಚಾದಾಕನೂ ಅವರೊಂದಿಗೆ ಪರದೇಶಕ್ಕೆ ಹೋಗಬೇಕಾಯಿತು. ಯೆಹೋವನು ಯೆಹೂದ್ಯರನ್ನು ಮತ್ತು ಜೆರುಸಲೇಮಿನವರನ್ನು ಪರದೇಶಕ್ಕೆ ಸೆರೆಯಾಳುಗಳಾಗಿ ಒಯ್ಯಲು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು.
దినవృత్తాంతములు మొదటి గ్రంథము 6 : 16 (ERVTE)
{#1ಲೇವಿಯ ಇತರ ಸಂತತಿಯವರು } ಲೇವಿಯ ಗಂಡುಮಕ್ಕಳು: ಗೇರ್ಷೋಮ್, ಕೆಹಾತ್ ಮತ್ತು ಮೆರಾರೀ.
దినవృత్తాంతములు మొదటి గ్రంథము 6 : 17 (ERVTE)
ಗೇರ್ಷೋಮನ ಗಂಡುಮಕ್ಕಳು: ಲಿಬ್ನೀ ಮತ್ತು ಶಿಮ್ಮೀ.
దినవృత్తాంతములు మొదటి గ్రంథము 6 : 18 (ERVTE)
ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
దినవృత్తాంతములు మొదటి గ్రంథము 6 : 19 (ERVTE)
ಮೆರಾರಿಯ ಗಂಡುಮಕ್ಕಳು: ಮಹ್ಲೀ ಮತ್ತು ಮುಷೀ. ಇತರ ಲೇವಿ ಕುಲದ ಕುಟುಂಬಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ತಂದೆಗಳ ಹೆಸರನ್ನು ಮೊದಲು ತಿಳಿಸಿ, ಅವರ ಗಂಡುಮಕ್ಕಳ ಹೆಸರನ್ನು ನಂತರ ತಿಳಿಸಲಾಗಿದೆ.
దినవృత్తాంతములు మొదటి గ్రంథము 6 : 20 (ERVTE)
ಗೇರ್ಷೋಮನ ಸಂತತಿಯವರು: ಲಿಬ್ನೀಯು ಗೇರ್ಷೋಮನ ಮಗನು. ಲಿಬ್ನೀಯ ಮಗ ಯಹತ್; ಯಹತನ ಮಗ ಜಿಮ್ಮ.
దినవృత్తాంతములు మొదటి గ్రంథము 6 : 21 (ERVTE)
ಜಿಮ್ಮನ ಮಗನು ಯೋವಾಹ. ಯೋವಾಹನ ಮಗ ಇದ್ದೋ. ಜೆರಹನು ಇದ್ದೋವಿನ ಮಗನು. ಜೆರಹನ ಮಗನು ಯೆವತ್ರೈ.
దినవృత్తాంతములు మొదటి గ్రంథము 6 : 22 (ERVTE)
ಕೆಹಾತನ ಸಂತತಿಯವರು: ಕೆಹಾತನ ಮಗ ಅಮ್ಮೀನಾದ್ವಾ್. ಅಮ್ಮೀನಾದ್ವಾನ ಮಗ ಕೋರಹ. ಕೋರಹನ ಮಗನು ಅಸ್ಸೀರ್.
దినవృత్తాంతములు మొదటి గ్రంథము 6 : 23 (ERVTE)
ಅಸ್ಸೀರನ ಮಗನು ಎಲ್ಕಾನ. ಎಲ್ಕಾನನ ಮಗನು ಎಬ್ಯಾಸಾಫ್. ಎಬ್ಯಾಸಾಫನ ಮಗನು ಅಸ್ಸೀರ್.
దినవృత్తాంతములు మొదటి గ్రంథము 6 : 24 (ERVTE)
ಅಸ್ಸೀರನ ಮಗನು ತಹತ. ಊರೀಯೇಲ್ ತಹತನ ಮಗನು. ಉಜ್ಜೀಯನು ಊರೀಯೇಲನ ಮಗನು. ಸೌಲನು ಉಜ್ಜೀಯನ ಮಗನು.
దినవృత్తాంతములు మొదటి గ్రంథము 6 : 25 (ERVTE)
ಎಲ್ಕಾನನ ಗಂಡುಮಕ್ಕಳು: ಅಮಾಸೈ ಮತ್ತು ಅಹೀಮೋತ್.
దినవృత్తాంతములు మొదటి గ్రంథము 6 : 26 (ERVTE)
ಚೋಫೈ ಎಲ್ಕಾನನ ಮಗನು. ನಹತನು ಚೋಫೈಯ ಮಗನು.
దినవృత్తాంతములు మొదటి గ్రంథము 6 : 27 (ERVTE)
ನಹತನ ಮಗ ಎಲೀಯಾಬ್. ಯೆರೋಹಾಮನು ಎಲೀಯಾಬನ ಮಗನು. ಯೆರೋಹಾಮನ ಮಗನು ಎಲ್ಕಾನ. ಸಮುವೇಲನು ಎಲ್ಕಾನನ ಮಗನು.
దినవృత్తాంతములు మొదటి గ్రంథము 6 : 28 (ERVTE)
ಸಮುವೇಲನ ಗಂಡುಮಕ್ಕಳು: ಯೋವೇಲ್ ಮತ್ತು ಅಬೀಯ.
దినవృత్తాంతములు మొదటి గ్రంథము 6 : 29 (ERVTE)
ಮೆರಾರೀಯ ಗಂಡುಮಕ್ಕಳು: ಮೆರಾರೀಯ ಮಗ ಮಹ್ಲೀ; ಮಹ್ಲೀಯ ಮಗನು ಲಿಬ್ನೀ. ಲಬ್ನೀಯ ಮಗ ಶಿಮ್ಮೀ; ಶಿಮ್ಮೀಯನ ಮಗ ಉಜ್ಜ;
దినవృత్తాంతములు మొదటి గ్రంథము 6 : 30 (ERVTE)
ಉಜ್ಜನ ಮಗ ಶಿಮ್ಮಾ; ಶಿಮ್ಮಾನ ಮಗ ಹಗ್ಗೀಯ. ಹಗ್ಗೀಯನ ಮಗ ಅಸಾಯ.
దినవృత్తాంతములు మొదటి గ్రంథము 6 : 31 (ERVTE)
{#1ದೇವಾಲಯದ ಗಾಯಕರು } ದೇವದರ್ಶನಗುಡಾರದ ಮಹಾಪವಿತ್ರಸ್ಥಳದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಟ್ಟ ಬಳಿಕ ಅರಸನಾದ ದಾವೀದನು ಗಾಯಕರನ್ನು ಆರಿಸಿದನು.
దినవృత్తాంతములు మొదటి గ్రంథము 6 : 32 (ERVTE)
ಪವಿತ್ರ ಗುಡಾರದಲ್ಲಿ ಹಾಡುವುದೇ ಇವರ ದೇವರ ಸೇವೆಯಾಗಿತ್ತು. ಸೊಲೊಮೋನನು ಜೆರುಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ತನಕ ಇವರು ಗುಡಾರದಲ್ಲಿ ತಮಗೆ ಹೇಳಿರುವ ಪ್ರಕಾರವೇ ಸೇವೆಮಾಡಿದರು.
దినవృత్తాంతములు మొదటి గ్రంథము 6 : 33 (ERVTE)
ಗಾಯನದ ಮೂಲಕ ಸೇವೆಮಾಡಿದ ತಂದೆಗಳ ಮತ್ತು ಅವರ ಗಂಡುಮಕ್ಕಳ ಪಟ್ಟಿ; ಕೆಹಾತ್ಯನ ಸಂತತಿಯವರಿಂದ ಗಾಯಕನಾದ ಹೇಮಾನ. ಇವನು ಯೋವೇಲನ ಮಗ. ಯೋವೇಲನು ಸಮುವೇಲನ ಮಗ.
దినవృత్తాంతములు మొదటి గ్రంథము 6 : 34 (ERVTE)
ಸಮುವೇಲನು ಎಲ್ಕಾನನ ಮಗ. ಎಲ್ಕಾನನು ಯೆರೋಹಾಮನ ಮಗ. ಯೆರೋಹಾಮನು ಎಲೀಯೇಲನ ಮಗ. ಎಲೀಯೇಲನು ತೋಹನ ಮಗ.
దినవృత్తాంతములు మొదటి గ్రంథము 6 : 35 (ERVTE)
ತೋಹನು ಚೂಫನ ಮಗ. ಚೂಫನು ಎಲ್ಕಾನನ ಮಗ. ಎಲ್ಕಾನನು ಮಹತನ ಮಗ. ಮಹತನು ಅಮಾಸೈಯ ಮಗ.
దినవృత్తాంతములు మొదటి గ్రంథము 6 : 36 (ERVTE)
ಅಮಾಸೈಯು ಎಲ್ಕಾನನ ಮಗ. ಎಲ್ಕಾನನು ಯೋವೇಲನ ಮಗ. ಯೋವೇಲನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ.
దినవృత్తాంతములు మొదటి గ్రంథము 6 : 37 (ERVTE)
ಚೆಫನ್ಯನು ತಹತನ ಮಗ. ತಹತನು ಅಸೀರನ ಮಗ. ಅಸೀರನು ಎಬ್ಯಾಸಾಫನ ಮಗ. ಎಬ್ಯಾಸಾಫನು ಕೋರಹನ ಮಗ.
దినవృత్తాంతములు మొదటి గ్రంథము 6 : 38 (ERVTE)
ಕೋರಹನು ಇಚ್ಹಾರನ ಮಗ. ಇಚ್ಹಾರನು ಕೆಹಾತನ ಮಗ. ಕೆಹಾತನು ಲೇವಿಯ ಮಗ. ಲೇವಿಯು ಇಸ್ರೇಲನ ಮಗ.
దినవృత్తాంతములు మొదటి గ్రంథము 6 : 39 (ERVTE)
ಹೇಮಾನನ ಸಂಬಂಧಿಯ ಹೆಸರು ಆಸಾಫ್. ಇವನು ಹೇಮಾನನ ಬಲಗಡೆಯಲ್ಲಿದ್ದುಕೊಂಡು ಸೇವೆಮಾಡಿದನು. ಆಸಾಫನು ಬೆರೆಕ್ಯನ ಮಗನು. ಬೆರೆಕ್ಯನು ಶಿಮ್ಮನ ಮಗ.
దినవృత్తాంతములు మొదటి గ్రంథము 6 : 40 (ERVTE)
ಶಿಮ್ಮನು ಮೀಕಾಯೇಲನ ಮಗ. ಮೀಕಾಯೇಲನು ಬಾಸೇಯನ ಮಗ. ಬಾಸೇಯನು ಮಲ್ಕೀಯನ ಮಗ.
దినవృత్తాంతములు మొదటి గ్రంథము 6 : 41 (ERVTE)
ಮಲ್ಕೀಯನು ಎತ್ನಿಯ ಮಗ. ಎತ್ನಿಯು ಜೆರಹನ ಮಗ. ಜೆರಹನು ಆದಾಯನ ಮಗ.
దినవృత్తాంతములు మొదటి గ్రంథము 6 : 42 (ERVTE)
ಆದಾಯನು ಏತಾನನ ಮಗ. ಏತಾನನು ಜಿಮ್ಮನ ಮಗ. ಜಿಮ್ಮನು ಶಿಮ್ಮಿಯ ಮಗ.
దినవృత్తాంతములు మొదటి గ్రంథము 6 : 43 (ERVTE)
ಶಿಮ್ಮಿಯು ಯಹತನ ಮಗ. ಯಹತನು ಗೇರ್ಷೋಮನ ಮಗ. ಗೇರ್ಷೋಮನು ಲೇವಿಯ ಮಗ.
దినవృత్తాంతములు మొదటి గ్రంథము 6 : 44 (ERVTE)
ಮೆರಾರೀಯ ಸಂತತಿಯವರು ಹೇಮಾನ ಮತ್ತು ಅಸಾಫನ ಸಂಬಂಧಿಕರು. ಇವರು ಹೇಮಾನನ ಎಡಗಡೆಯಲ್ಲಿ ನಿಂತು ಹಾಡುವ ಗಾಯಕರು. ಏತಾನನು ಕೀಷೀಯ ಮಗ. ಕೀಷೀಯು ಅಬ್ದೀಯ ಮಗ. ಅಬ್ದೀಯ ಮಲ್ಲೂಕನ ಮಗ.
దినవృత్తాంతములు మొదటి గ్రంథము 6 : 45 (ERVTE)
ಮಲ್ಲೂಕನು ಹಷಬ್ಯನ ಮಗ. ಹಷಬ್ಯನು ಅಮಚ್ಯನ ಮಗ. ಅಮಚ್ಯನು ಹಿಲ್ಕೀಯನ ಮಗ.
దినవృత్తాంతములు మొదటి గ్రంథము 6 : 46 (ERVTE)
ಹಿಲ್ಕೀಯನು ಅಮ್ಚೀಯನ ಮಗ. ಅಮ್ಚೀಯನು ಬಾನೀಯನ ಮಗ. ಬಾನೀಯನು ಶೆಮೆರನ ಮಗ.
దినవృత్తాంతములు మొదటి గ్రంథము 6 : 47 (ERVTE)
ಶೆಮೆರನು ಮಹ್ಲೀಯನ ಮಗ. ಮಹ್ಲೀಯನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ. ಮೆರಾರಿಯು ಲೇವಿಯ ಮಗ.
దినవృత్తాంతములు మొదటి గ్రంథము 6 : 48 (ERVTE)
ಹೇಮಾನ್ ಮತ್ತು ಆಸಾಫನ ಸಹೋದರರು ಲೇವಿಕುಲದವರು. ಲೇವಿಕುಲದವರನ್ನು ಲೇವಿಯರೆಂದು ಕರೆಯುತ್ತಾರೆ. ಲೇವಿಯರು ಪವಿತ್ರಗುಡಾರದ ಸೇವೆಯನ್ನು ಮಾಡಲು ಆರಿಸಲ್ಪಟ್ಟವರು. ಪವಿತ್ರ ಗುಡಾರವು ದೇವರ ನಿವಾಸವಾಗಿತ್ತು.
దినవృత్తాంతములు మొదటి గ్రంథము 6 : 49 (ERVTE)
ಆದರೆ ಸರ್ವಾಂಗಹೋಮ ಅರ್ಪಿಸುವ ಯಜ್ಞವೇದಿಕೆಯ ಮೇಲೆ ಮತ್ತು ಧೂಪಾರ್ಪಣೆಯ ಯಜ್ಞವೇದಿಕೆಯ ಮೇಲೆ ಧೂಪವರ್ಪಿಸಲು ಆರೋನನ ಸಂತತಿಯವರನ್ನು ಮಾತ್ರ ಆರಿಸಿಕೊಳ್ಳಲಾಗಿತ್ತು. ದೇವರ ನಿವಾಸದ ಮಹಾಪವಿತ್ರ ಸ್ಥಳದಲ್ಲಿ ಆರೋನನ ಸಂತತಿಯವರೇ ಎಲ್ಲಾ ಕೆಲಸಕಾರ್ಯಗಳನ್ನು ಮಾಡುತ್ತಿದ್ದರು. ಅಲ್ಲದೆ ಇಸ್ರೇಲ್ ಜನರನ್ನು ಶುದ್ಧೀಕರಿಸಲು ಶುದ್ಧೀಕರಣ ಆಚಾರವನ್ನು ಅವರೇ ಮಾಡುತ್ತಿದ್ದರು. ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅವರು ಅನುಸರಿಸುತ್ತಿದ್ದರು.
దినవృత్తాంతములు మొదటి గ్రంథము 6 : 50 (ERVTE)
{#1ಆರೋನನ ಸಂತತಿಯವರು } ಇವರು ಆರೋನನ ಗಂಡುಮಕ್ಕಳು: ಎಲ್ಲಾಜಾರನು ಆರೋನನ ಮಗ. ಫೀನೆಹಾಸನು ಎಲ್ಲಾಜಾರನ ಮಗ. ಅಬೀಷೂವನು ಫೀನೆಹಾಸನ ಮಗ.
దినవృత్తాంతములు మొదటి గ్రంథము 6 : 51 (ERVTE)
ಬುಕ್ಕೀಯು ಅಬೀಷೂವನ ಮಗ. ಉಜ್ಜೀಯು ಬುಕ್ಕೀಯ ಮಗ. ಉಜ್ಜೀಯ ಮಗನು ಜೆರಹ್ಯಾಹ.
దినవృత్తాంతములు మొదటి గ్రంథము 6 : 52 (ERVTE)
ಮೆರಾಯೋತನು ಜೆರಹ್ಯಾಹನ ಮಗ. ಅಮರ್ಯನು ಮೆರಾಯೋತನ ಮಗ. ಅಹೀಟೂಬನು ಅಮರ್ಯನ ಮಗ.
దినవృత్తాంతములు మొదటి గ్రంథము 6 : 53 (ERVTE)
ಚಾದೋಕ್ ಅಹೀಟೂಬನ ಮಗ, ಅಹಿಮಾಚನು ಚಾದೋಕನ ಮಗ.
దినవృత్తాంతములు మొదటి గ్రంథము 6 : 54 (ERVTE)
{#1ಲೇವಿಯ ಕುಟುಂಬದವರಿಗೆ ಮನೆಗಳು } ಈ ಸ್ಥಳಗಳಲ್ಲಿ ಆರೋನನ ಸಂತತಿಯವರು ವಾಸಿಸಿದರು. ಅವರು ತಮಗೆ ಕೊಟ್ಟಿದ್ದ ಪ್ರದೇಶದಲ್ಲಿ ಪಾಳೆಯಗಳಲ್ಲಿ ವಾಸಮಾಡಿದರು. ಲೇವಿಯರಿಗೆ ಕೊಟ್ಟಿರುವ ಪ್ರಾಂತ್ಯದ ಮೊದಲನೆಯ ಪಾಲು ಕೆಹಾತ್ಯರಿಗೆ ಕೊಡಲ್ಪಟ್ಟಿತು.
దినవృత్తాంతములు మొదటి గ్రంథము 6 : 55 (ERVTE)
ಅವರಿಗೆ ಹೆಬ್ರೋನ್ ಪಟ್ಟಣವೂ ಅದರ ಸುತ್ತಮುತ್ತಲೂ ಇದ್ದ ಹುಲ್ಲುಗಾವಲುಗಳು ಕೊಡಲ್ಪಟ್ಟವು. ಇದು ಯೆಹೂದ ಪ್ರಾಂತ್ಯದ ಸ್ಥಳವಾಗಿದೆ.
దినవృత్తాంతములు మొదటి గ్రంథము 6 : 56 (ERVTE)
ಹೆಬ್ರೋನ್ ಪಟ್ಟಣದ ಸುತ್ತಮುತ್ತಲಿದ್ದ ಊರುಗಳನ್ನು ಮತ್ತು ಹೊಲಗಳನ್ನು ಯೆಫುನ್ನೆಯ ಮಗನಾದ ಕಾಲೇಬನಿಗೆ ಕೊಡಲಾಯಿತು.
దినవృత్తాంతములు మొదటి గ్రంథము 6 : 57 (ERVTE)
ಆರೋನನ ಸಂತತಿಯವರಿಗೆ ಹೆಬ್ರೋನ್ ಪಟ್ಟಣವನ್ನೇ ಕೊಟ್ಟರು. ಹೆಬ್ರೋನು ಆಶ್ರಯಪಟ್ಟಣಗಳಲ್ಲಿ ಒಂದಾಗಿತ್ತು. ಅವರಿಗೆ ಬೇರೆ ನಗರಗಳೂ ಕೊಡಲ್ಪಟ್ಟವು: ಲಿಬ್ನ, ಯತ್ತೀರ್, ಎಷ್ಟೆಮೋವ, ಹೀಲ್ಲೇನ್, ದೆಬೀರ್,
దినవృత్తాంతములు మొదటి గ్రంథము 6 : 58 (ERVTE)
(58-59)ಆಷಾನ್, ಜುತ್ತ ಮತ್ತು ಬೇತ್ಷೆಮೆಷ್. ಅವರಿಗೆ ಈ ಎಲ್ಲಾ ಪಟ್ಟಣಗಳೂ ಅವುಗಳ ಸುತ್ತಮುತ್ತಲಿದ್ದ ಹೊಲಗಳೂ ಕೊಡಲ್ಪಟ್ಟವು.
దినవృత్తాంతములు మొదటి గ్రంథము 6 : 59 (ERVTE)
దినవృత్తాంతములు మొదటి గ్రంథము 6 : 60 (ERVTE)
ಬೆನ್ಯಾಮೀನ್ ಕುಲದ ಪ್ರಾಂತ್ಯದಿಂದ ಗಿಬೆಯೋನ್, ಗೆಬಾ, ಅಲೆಮೆತ್ ಮತ್ತು ಅನಾತೋತ್ ಪಟ್ಟಣಗಳೂ ಅದರ ಸುತ್ತಮುತ್ತಲಿದ್ದ ಹೊಲಗಳೂ ಅವರಿಗೆ ದೊರೆತವು.
దినవృత్తాంతములు మొదటి గ్రంథము 6 : 61 (ERVTE)
ಒಟ್ಟು ಹದಿಮೂರು ಪಟ್ಟಣಗಳನ್ನು ಕೆಹಾತ್ಯನ ಕುಲದವರಿಗೆ ಕೊಡಲ್ಪಟ್ಟಿತು.
దినవృత్తాంతములు మొదటి గ్రంథము 6 : 62 (ERVTE)
ಉಳಿದ ಕೆಹಾತ್ಯನ ಸಂತತಿಯವರಿಗೆ ಮನಸ್ಸೆಯ ಅರ್ಧಕುಲದಿಂದ ಹತ್ತು ಪಟ್ಟಣಗಳು ದೊರಕಿದವು.
దినవృత్తాంతములు మొదటి గ్రంథము 6 : 63 (ERVTE)
ಗೇರ್ಷೋಮ್ಯನ ಸಂತತಿಯವರಿಗೆ ಹದಿಮೂರು ಪಟ್ಟಣಗಳು ದೊರಕಿದವು. ಇವು ಇಸ್ಸಾಕಾರ್, ಆಶೇರ್, ನಫ್ತಾಲಿ ಮತ್ತು ಬಾಷಾನ್ ಪ್ರದೇಶದಲ್ಲಿ ವಾಸವಾಗಿದ್ದ ಅರ್ಧ ಮನಸ್ಸೆ ಕುಲದವರಿಂದ ಆ ಪಟ್ಟಣಗಳು ದೊರೆತವು.
దినవృత్తాంతములు మొదటి గ్రంథము 6 : 64 (ERVTE)
ಮೆರಾರೀ ಸಂತತಿಯವರಿಗೆ ಹನ್ನೆರಡು ಪಟ್ಟಣಗಳು ದೊರೆತವು. ಇವು ರೂಬೇನ್, ಗಾದ್, ಜೆಬುಲೂನ್ ಕುಲದವರ ಸ್ವಾಸ್ತ್ಯದಿಂದ ದೊರೆತವು. ಅವರು ಇದಕ್ಕಾಗಿ ಚೀಟುಹಾಕಿದರು. ಹೀಗೆ ಇಸ್ರೇಲರು ತಮಗೆ ದೊರಕಿದ ಪ್ರದೇಶದಲ್ಲಿ ಲೇವಿಯರಿಗೆ ಪಟ್ಟಣಗಳನ್ನೂ ಹೊಲಗಳನ್ನೂ ಕೊಟ್ಟರು.
దినవృత్తాంతములు మొదటి గ్రంథము 6 : 65 (ERVTE)
ಅವೆಲ್ಲಾ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲದವರಿಂದ ದೊರಕಿತು. ಯೆಹೂದ ಪಟ್ಟಣಗಳು ಲೇವಿಕುಲದ ಯಾವ ಕುಟುಂಬಗಳಿಗೆ ಸಿಗಬೇಕು ಎಂಬುದನ್ನು ಚೀಟುಹಾಕುವುದರ ಮೂಲಕ ಗೊತ್ತುಪಡಿಸಿಕೊಂಡರು.
దినవృత్తాంతములు మొదటి గ్రంథము 6 : 66 (ERVTE)
ಎಫ್ರಾಯೀಮ್ ಕುಲದವರು ಕೆಹಾತ್ಯನ ಕುಲದವರಿಗೆ ತಮ್ಮ ಪಾಲಿಗೆ ಬಂದಿದ್ದ ಕೆಲವು ಪಟ್ಟಣಗಳನ್ನು ಬಿಟ್ಟುಕೊಟ್ಟರು. ಈ ಪಟ್ಟಣಗಳನ್ನು ಚೀಟುಹಾಕುವುದರ ಮೂಲಕ ನಿರ್ಧರಿಸಲಾಯಿತು.
దినవృత్తాంతములు మొదటి గ్రంథము 6 : 67 (ERVTE)
ಅವರಿಗೆ ಶೆಕೆಮನ್ನು ಕೊಡಲಾಯಿತು. ಶೆಕೆಮ್ ಆಶ್ರಯನಗರವಾಗಿತ್ತು. ಇದಲ್ಲದೆ ಗೆಜೆರ್,
దినవృత్తాంతములు మొదటి గ్రంథము 6 : 68 (ERVTE)
దినవృత్తాంతములు మొదటి గ్రంథము 6 : 69 (ERVTE)
ಅಯ್ಯಾಲೋನ್ ಮತ್ತು ಗತ್ರಿಮ್ಮೋನ್ ಪಟ್ಟಣಗಳೂ ಅವುಗಳ ಸುತ್ತಮುತ್ತಲಿದ್ದ ಹೊಲಗಳೂ ಅವರಿಗೆ ದೊರಕಿದವು. ಇವು ಎಫ್ರಾಯೀಮ್ಯರ ಬೆಟ್ಟಪ್ರದೇಶದಲ್ಲಿ ಇವೆ.
దినవృత్తాంతములు మొదటి గ్రంథము 6 : 70 (ERVTE)
ಮನಸ್ಸೆಯ ಅರ್ಧಕುಲದವರು ಆನೇರ್ ಮತ್ತು ಬಿಳ್ಳಾಮ್ ಎಂಬ ನಗರಗಳನ್ನು ಕೆಹಾತ್ ಸಂತಾನದ ಉಳಿದವರಿಗೂ ಕೊಟ್ಟರು. ಅವುಗಳೊಡನೆ ಹೊಲಗಳೂ ಅವರಿಗೆ ದೊರಕಿದವು.
దినవృత్తాంతములు మొదటి గ్రంథము 6 : 71 (ERVTE)
{#1ಇನ್ನಿತರ ಲೇವಿಯರಿಗೆ ಮನೆಗಳು ದೊರಕಿದ್ದು }
దినవృత్తాంతములు మొదటి గ్రంథము 6 : 72 (ERVTE)
ಗೇರ್ಷೋಮ್ ಕುಟುಂಬದವರಿಗೆ ಮನಸ್ಸೆಯ ಅರ್ಧಕುಲದವರಿಂದ ಬಾಷಾನಿನಲ್ಲಿರುವ ಗೋಲಾನ್ ಮತ್ತು ಅಷ್ಟಾರೋಟ್ ಎಂಬ ಪಟ್ಟಣಗಳೂ ಅದಕ್ಕೆ ಸೇರಿದ ಹೊಲಗಳೂ ದೊರೆತವು.
దినవృత్తాంతములు మొదటి గ్రంథము 6 : 73 (ERVTE)
(72-73)ಗೇರ್ಷೋಮ್ ಕುಟುಂಬದವರಿಗೆ ಇಸ್ಸಾಕಾರ್ ಕುಲದವರಿಂದ ಕೆದೆಷ್, ದ್ವಾೆರತ್, ರಾಮೋತ್ ಮತ್ತು ಆನೇಮ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
దినవృత్తాంతములు మొదటి గ్రంథము 6 : 74 (ERVTE)
దినవృత్తాంతములు మొదటి గ్రంథము 6 : 75 (ERVTE)
(74-75)ಇದಲ್ಲದೆ ಗೇರ್ಷೋಮ್ ಕುಟುಂಬದವರಿಗೆ ಅಶೇರ್ ಕುಲದವರಿಂದ ಮಾಷಾಲ್, ಅಬ್ದೋನ್, ಹೂಕೋಕ್ ಮತ್ತು ರೆಹೋಬ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
దినవృత్తాంతములు మొదటి గ్రంథము 6 : 76 (ERVTE)
దినవృత్తాంతములు మొదటి గ్రంథము 6 : 77 (ERVTE)
ಗೇರ್ಷೋಮ್ ಕುಟುಂಬದವರಿಗೆ ಗಲಿಲಾಯ ಪ್ರಾಂತ್ಯದ ಕಾದೇಶಿನಲ್ಲಿದ್ದ ಪಟ್ಟಣಗಳೂ ಹಮ್ಮೋನ್ ಮತ್ತು ಕಿರ್ಯಾತಯಿಮ್ ಎಂಬ ಪಟ್ಟಣಗಳೂ ಮತ್ತು ಅವುಗಳ ಸಮೀಪದಲ್ಲಿದ್ದ ಹೊಲಗಳೂ ನಫ್ತಾಲಿ ಕುಲದವರಿಂದ ದೊರಕಿದವು.
దినవృత్తాంతములు మొదటి గ్రంథము 6 : 78 (ERVTE)
ಉಳಿದ ಲೇವಿಯರೆಂದರೆ, ಮೆರಾರೀಕುಲಕ್ಕೆ ಸೇರಿದವರು. ಅವರಿಗೆ ಜೆಬುಲೂನ್ ಕುಲದವರಿಂದ ರಿಮ್ಮೋನೋ ಮತ್ತು ತಾಬೋರ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರೆತವು.
దినవృత్తాంతములు మొదటి గ్రంథము 6 : 79 (ERVTE)
(78-79)ಮೆರಾರೀ ಸಂತತಿಯವರು ಮರುಭೂಮಿಯಲ್ಲಿದ್ದ ಬೆಚೆರ್, ಯಹಚ, ಕೆದೇಮೋತ್ ಮತ್ತು ಮೇಫಾತ್ ಎಂಬ ಊರುಗಳನ್ನೂ ಅವುಗಳ ಸಮೀಪದಲ್ಲಿದ್ದ ಹೊಲಗಳನ್ನೂ ರೂಬೇನ್ ಕುಲದವರಿಂದ ಪಡೆದುಕೊಂಡರು. ರೂಬೇನ್ ಕುಲದವರು ಜೆರಿಕೊ ಪಟ್ಟಣಕ್ಕೆ ಎದುರಾಗಿದ್ದ ಜೋರ್ಡನ್ ನದಿಯ ಪೂರ್ವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು.
దినవృత్తాంతములు మొదటి గ్రంథము 6 : 80 (ERVTE)
దినవృత్తాంతములు మొదటి గ్రంథము 6 : 81 (ERVTE)
(80-81)ಮೆರಾರೀ ಸಂತಾನದವರಿಗೆ ಗಾದ್ ಸಂತತಿಯವರ ಪ್ರದೇಶದಿಂದ ಗಿಲ್ಯಾದಿನ ರಾಮೋತ್, ಮಹನಯಿಮ್, ಹೆಷ್ಬೋನ್ ಮತ್ತು ಯಗ್ಜೇರ್ ಪಟ್ಟಣಗಳೂ ಅದರ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
❮
❯