దినవృత్తాంతములు రెండవ గ్రంథము 11 : 1 (ERVTE)
ರೆಹಬ್ಬಾಮನು ಜೆರುಸಲೇಮಿಗೆ ಬಂದು ಯೆಹೂದ ಮತ್ತು ಬೆನ್ಯಾಮೀನ್ ಕುಲದ ಒಂದು ಲಕ್ಷ ಎಂಭತ್ತುಸಾವಿರ ಮಂದಿ ನುರಿತ ಸೈನಿಕರನ್ನು ಒಟ್ಟು ಸೇರಿಸಿದನು. ಇಸ್ರೇಲರೊಂದಿಗೆ ಯುದ್ಧಮಾಡಿ ಅವರ ರಾಜ್ಯವನ್ನು ಮತ್ತೆ ಪಡೆದುಕೊಳ್ಳಬೇಕೆಂಬುದೇ ಅವನ ಉದ್ದೇಶವಾಗಿತ್ತು.
దినవృత్తాంతములు రెండవ గ్రంథము 11 : 2 (ERVTE)
ಆದರೆ ಯೆಹೋವನ ಮನುಷ್ಯನಾದ ಶೆಮಾಯನಿಗೆ ಯೆಹೋವನ ಸಂದೇಶವು ಬಂತು,
దినవృత్తాంతములు రెండవ గ్రంథము 11 : 3 (ERVTE)
“ಶೆಮಾಯನೇ, ನೀನು ಹೋಗಿ ಯೆಹೂದದ ರಾಜನಾದ ರೆಹಬ್ಬಾಮನೊಡನೆ ಮಾತನಾಡು. ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲಿ ವಾಸವಾಗಿರುವ ಎಲ್ಲಾ ಇಸ್ರೇಲರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು:
దినవృత్తాంతములు రెండవ గ్రంథము 11 : 4 (ERVTE)
ಯೆಹೋವನು ಹೀಗೆನ್ನುತ್ತಾನೆ: ನಿಮ್ಮ ಸಹೋದರರೊಂದಿಗೆ ನೀವು ಯುದ್ಧಮಾಡಬಾರದು. ಪ್ರತಿಯೊಬ್ಬರು ತಮ್ಮ ಮನೆಗಳಿಗೆ ಹಿಂತಿರುಗಲಿ. ಯಾಕೆಂದರೆ ಇದನ್ನು ನಾನೇ ಮಾಡಿದ್ದೇನೆ.” ರೆಹಬ್ಬಾಮನೂ ಅವನೊಂದಿಗಿದ್ದ ಸೈನಿಕರೂ ಯೆಹೋವನ ಸಂದೇಶವನ್ನು ಕೇಳಿ ಹಿಂತಿರುಗಿದರು. ಅವರು ಯಾರೊಬ್ಬಾಮನೊಂದಿಗೆ ಯುದ್ಧಮಾಡಲಿಲ್ಲ.
దినవృత్తాంతములు రెండవ గ్రంథము 11 : 5 (ERVTE)
{#1ಯೆಹೂದವನ್ನು ರೆಹಬ್ಬಾಮನು ಬಲಗೊಳಿಸಿದ್ದು } ರೆಹಬ್ಬಾಮನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಯುದ್ಧದಲ್ಲಿ ರಕ್ಷಿಸಿಕೊಳ್ಳಲು ಅವನು ಯೆಹೂದದಲ್ಲಿ ಭದ್ರವಾದ ಪಟ್ಟಣಗಳನ್ನು ಕಟ್ಟಿದನು.
దినవృత్తాంతములు రెండవ గ్రంథము 11 : 6 (ERVTE)
ಬೆತ್ಲೆಹೇಮ್, ಏತಾಮ್, ತೆಕೋವ,
దినవృత్తాంతములు రెండవ గ్రంథము 11 : 7 (ERVTE)
ಬೇತ್ಚೂರ್, ಸೋಕೋ, ಅದುಲ್ಲಾಮ್,
దినవృత్తాంతములు రెండవ గ్రంథము 11 : 8 (ERVTE)
ಗತ್, ಮಾರೇಷ, ಜೀಫ್,
దినవృత్తాంతములు రెండవ గ్రంథము 11 : 9 (ERVTE)
ಅದೋರೈಮ್, ಲಾಕೀಷ್, ಅಜೇಕ.
దినవృత్తాంతములు రెండవ గ్రంథము 11 : 10 (ERVTE)
ಚೊರ್ಗ, ಅಯ್ಯಾಲೋನ್ ಮತ್ತು ಹೆಬ್ರೋನ್ ಎಂಬ ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತದ ಪಟ್ಟಣಗಳನ್ನು ದುರಸ್ತಿಪಡಿಸಿ ಭದ್ರಪಡಿಸಲಾಯಿತು.
దినవృత్తాంతములు రెండవ గ్రంథము 11 : 11 (ERVTE)
ರೆಹಬ್ಬಾಮನು ಈ ಪಟ್ಟಣಗಳಿಗೆ ಅಧಿಪತಿಗಳನ್ನು ನೇಮಿಸಿದನು; ಆಹಾರಸಾಮಾಗ್ರಿ, ಎಣ್ಣೆ, ದ್ರಾಕ್ಷಾರಸ ಮುಂತಾದವುಗಳನ್ನು ಸಂಗ್ರಹಿಸಿಟ್ಟನು.
దినవృత్తాంతములు రెండవ గ్రంథము 11 : 12 (ERVTE)
ಪ್ರತಿಯೊಂದು ಪಟ್ಟಣದಲ್ಲಿಯೂ ಈಟಿಗಳನ್ನು ಮತ್ತು ಗುರಾಣಿಗಳನ್ನು ಸಂಗ್ರಹಿಸಿಟ್ಟನು; ಹೀಗೆ ಈ ಎಲ್ಲಾ ಪಟ್ಟಣಗಳನ್ನು ಭದ್ರಪಡಿಸಿದನು. ರೆಹಬ್ಬಾಮನು ಯೆಹೂದದ ಮತ್ತು ಬೆನ್ಯಾಮೀನನ ಜನರನ್ನು ಮತ್ತು ಪಟ್ಟಣಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡನು.
దినవృత్తాంతములు రెండవ గ్రంథము 11 : 13 (ERVTE)
ಇಸ್ರೇಲ್ ಪ್ರಾಂತ್ಯದಲ್ಲಿದ್ದ ಯಾಜಕರೂ ಲೇವಿಯರೂ ರೆಹಬ್ಬಾಮನನ್ನು ಸೇರಿಕೊಂಡರು.
దినవృత్తాంతములు రెండవ గ్రంథము 11 : 14 (ERVTE)
ಲೇವಿಯರು ತಮಗಿದ್ದ ಗೊಮಾಳಗಳನ್ನೂ ಹೊಲಗದ್ದೆಗಳನ್ನೂ ಬಿಟ್ಟು ಯೆಹೂದಕ್ಕೂ ಮತ್ತು ಜೆರುಸಲೇಮಿಗೂ ಬಂದರು. ಯಾಜಕರಾಗಿ ಸೇವೆಮಾಡಲು ಯಾರೊಬ್ಬಾಮನು ಮತ್ತು ಅವನ ಮಕ್ಕಳು ಲೇವಿಯರಿಗೆ ಅನುಮತಿ ಕೊಡಲಿಲ್ಲವಾದ್ದರಿಂದ ಲೇವಿಯರು ಹೀಗೆ ಮಾಡಿದರು.
దినవృత్తాంతములు రెండవ గ్రంథము 11 : 15 (ERVTE)
ಯಾರೊಬ್ಬಾಮನು ತನಗೆ ಬೇಕಾದ ಯಾಜಕರನ್ನು ಆರಿಸಿ ತಾನು ಮಾಡಿಸಿದ ಬಸವನ ಮತ್ತು ಆಡುಗಳ ಪ್ರತಿಮೆಗಳನ್ನು ಉನ್ನತಸ್ಥಳಗಳಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲು ನೇಮಿಸಿದನು.
దినవృత్తాంతములు రెండవ గ్రంథము 11 : 16 (ERVTE)
ಲೇವಿಯರು ಇಸ್ರೇಲನ್ನು ಬಿಟ್ಟುಬಂದ ಬಳಿಕ ಇಸ್ರೇಲರಲ್ಲಿ ದೇವರಾದ ಯೆಹೋವನಿಗೆ ನಂಬಿಗಸ್ತರಾಗಿ ಸೇವಿಸುವವರು ಜೆರುಸಲೇಮ್ ನಗರಕ್ಕೆ ಬಂದು ದೇವರಿಗೆ ಯಜ್ಞಗಳನ್ನು ಅರ್ಪಿಸಿ ಆರಾಧಿಸಿದರು.
దినవృత్తాంతములు రెండవ గ్రంథము 11 : 17 (ERVTE)
ಅವರೆಲ್ಲ ಯೆಹೂದ ರಾಜ್ಯವನ್ನು ಬಲಗೊಳಿಸಿದರು ಮತ್ತು ಸೊಲೊಮೋನನ ಮಗನಾದ ರೆಹಬ್ಬಾಮನೊಂದಿಗೆ ಮೂರು ವರ್ಷವಿದ್ದರು. ಯಾಕೆಂದರೆ ಅವರು ಈ ವರ್ಷಗಳಲ್ಲಿ ದಾವೀದನಂತೆ ಮತ್ತು ಸೊಲೊಮೋನನಂತೆ ದೇವರ ಮಾರ್ಗದಲ್ಲಿ ನಡೆಯುತ್ತಿದ್ದರು.
దినవృత్తాంతములు రెండవ గ్రంథము 11 : 18 (ERVTE)
{#1ರೆಹಬ್ಬಾಮನ ಕುಟುಂಬ } ರೆಹಬ್ಬಾಮನು ಯೆರೀಮೋತನ ಮಗಳಾದ ಮಹ್ಲತ್ ಎಂಬಾಕೆಯನ್ನು ಮದುವೆಯಾದನು. ಆಕೆಯ ತಾಯಿಯ ಹೆಸರು ಅಬೀಹೈಲ್. ಯೆರೀಮೋತನು ದಾವೀದನ ಮಗನಾಗಿದ್ದನು. ಅಬೀಹೈಲಳು ಇಷಯನ ಮಗನಾದ ಎಲೀಯಾಬನ ಮಗಳು.
దినవృత్తాంతములు రెండవ గ్రంథము 11 : 19 (ERVTE)
ರೆಹಬ್ಬಾಮನಿಂದ ಮಹ್ಲತಳು ಈ ಮೂರು ಗಂಡುಮಕ್ಕಳನ್ನು ಪಡೆದಳು: ಯೆಗೂಷ್, ಶೆಮರ್ಯ ಮತ್ತು ಜಾಹಮ್.
దినవృత్తాంతములు రెండవ గ్రంథము 11 : 20 (ERVTE)
ಆಮೇಲೆ ರೆಹಬ್ಬಾಮನು ಅಬ್ಷಾಲೋಮನ ಮಗಳಾದ ಮಾಕಳನ್ನು ಮದುವೆಯಾದನು. ಆಕೆಯು ಅವನಿಂದ ಅಬೀಯ, ಅತ್ತ್ಯೆ, ಜೀಜ ಮತ್ತು ಶೆಲೋಮೀತ್ ಎಂಬ ಮಕ್ಕಳನ್ನು ಹೆತ್ತಳು.
దినవృత్తాంతములు రెండవ గ్రంథము 11 : 21 (ERVTE)
ರೆಹಬ್ಬಾಮನು ತನ್ನ ಬೇರೆ ಪತ್ನಿಯರಿಗಿಂತಲೂ ಉಪಪತ್ನಿಯರಿಗಿಂತಲೂ ಮಾಕಳನ್ನು ಹೆಚ್ಚಾಗಿ ಪ್ರೀತಿಸಿದನು. ಮಾಕಳು ಅಬ್ಷಾಲೋಮನ ಮೊಮ್ಮಗಳಾಗಿದ್ದಳು. ರೆಹಬ್ಬಾಮನಿಗೆ ಹದಿನೆಂಟು ಮಂದಿ ಪತ್ನಿಯರೂ ಅರವತ್ತು ಮಂದಿ ಉಪಪತ್ನಿಯರೂ ಇದ್ದರು. ಅವನಿಗೆ ಇಪ್ಪತ್ತೆಂಟು ಗಂಡುಮಕ್ಕಳೂ ಅರವತ್ತು ಹೆಣ್ಣುಮಕ್ಕಳೂ ಇದ್ದರು.
దినవృత్తాంతములు రెండవ గ్రంథము 11 : 22 (ERVTE)
ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅವನ ಸಹೋದರರೊಳಗಿಂದ ನಾಯಕನನ್ನಾಗಿ ಆರಿಸಿದನು. ರೆಹಬ್ಬಾಮನು ಅವನನ್ನು ಅರಸನನ್ನಾಗಿ ಮಾಡಬೇಕೆಂಬುದೇ ಅವನ ಉದ್ದೇಶವಾಗಿತ್ತು.
దినవృత్తాంతములు రెండవ గ్రంథము 11 : 23 (ERVTE)
ರೆಹಬ್ಬಾಮನು ವಿವೇಕದಿಂದ ತನ್ನ ಗಂಡುಮಕ್ಕಳನ್ನು ಯೆಹೂದ ಮತ್ತು ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಗಳುಳ್ಳ ಪಟ್ಟಣಗಳಲ್ಲಿರಿಸಿ ಅವರಿಗೆ ಬೇಕಾದಷ್ಟು ಆಹಾರವನ್ನು ಸರಬರಾಜು ಮಾಡಿಸಿದನು. ಅವರಿಗೆ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಒದಗಿಸಿಕೊಟ್ಟನು.

1 2 3 4 5 6 7 8 9 10 11 12 13 14 15 16 17 18 19 20 21 22 23