దినవృత్తాంతములు రెండవ గ్రంథము 3 : 1 (ERVTE)
{#1ಸೊಲೊಮೋನನು ದೇವಾಲಯವನ್ನು ಕಟ್ಟಿದನು } ಜೆರುಸಲೇಮಿನಲ್ಲಿರುವ ಮೋರೀಯಾ ಬೆಟ್ಟದ ಮೇಲೆ ಸೊಲೊಮೋನನು ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದನು. ಅದೇ ಸ್ಥಳದಲ್ಲಿ ಸೊಲೊಮೋನನ ತಂದೆಯಾದ ದಾವೀದನಿಗೆ ಯೆಹೋವನು ದರ್ಶನ ಕೊಟ್ಟಿದ್ದನು. ಅದು ಯೆಬೂಸಿಯನಾದ ಒರ್ನಾನನ ಕಣವಾಗಿತ್ತು. ಆಲಯವನ್ನು ಕಟ್ಟಲು ದಾವೀದನು ಆ ಸ್ಥಳವನ್ನು ತಯಾರು ಮಾಡಿದ್ದನು.
దినవృత్తాంతములు రెండవ గ్రంథము 3 : 2 (ERVTE)
ಸೊಲೊಮೋನನು ತನ್ನ ರಾಜ್ಯಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ದೇವಾಲಯದ ಕೆಲಸವನ್ನು ಪ್ರಾರಂಭಿಸಿದನು.
దినవృత్తాంతములు రెండవ గ్రంథము 3 : 3 (ERVTE)
ದೇವಾಲಯದ ಅಸ್ತಿವಾರದ ಉದ್ದಳತೆಯು ಹೀಗಿತ್ತು: ಉದ್ದ ಅರವತ್ತು ಮೊಳ, ಅಗಲ ಇಪ್ಪತ್ತು ಮೊಳ. ದೇವಾಲಯದ ಅಳತೆಗಾಗಿ ಸೊಲೊಮೋನನು ಹಳೆಯ ಮೊಳದ ಅಳತೆಯನ್ನು ಉಪಯೋಗಿಸಿದನು.
దినవృత్తాంతములు రెండవ గ్రంథము 3 : 4 (ERVTE)
ದೇವಾಲಯದ ಮುಂದುಗಡೆಯಿದ್ದ ಮಂಟಪವು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಎತ್ತರವಿತ್ತು. ಮಂಟಪದ ಒಳಮೈಯನ್ನು ಸೊಲೊಮೋನನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು.
దినవృత్తాంతములు రెండవ గ్రంథము 3 : 5 (ERVTE)
ದೊಡ್ಡ ಕೋಣೆಯ ಗೋಡೆಗೆ ಸೊಲೊಮೋನನು ತುರಾಯಿ ಮರದ ಹಲಗೆಗಳಿಂದ ಹೊದಿಸಿ ಅದರ ಮೇಲೆ ಬಂಗಾರದ ತಗಡನ್ನು ಹೊದಿಸಿದನು. ಅದರಲ್ಲಿ ಖರ್ಜೂರ ಮರಗಳೂ ಸರಪಣಿಗಳೂ ಬಂಗಾರದಿಂದ ಮಾಡಲ್ಪಟ್ಟು ಜೋಡಿಸಲ್ಪಟ್ಟಿದ್ದವು.
దినవృత్తాంతములు రెండవ గ్రంథము 3 : 6 (ERVTE)
ದೇವಾಲಯವನ್ನು ಬೆಲೆಯುಳ್ಳ ರತ್ನಗಳಿಂದ ಅಲಂಕರಿಸಿದನು. ಸೊಲೊಮೋನನು ಪರ್ವಯಿಮ್ ದೇಶದ ಬಂಗಾರವನ್ನು ಉಪಯೋಗಿಸಿದನು.
దినవృత్తాంతములు రెండవ గ్రంథము 3 : 7 (ERVTE)
ದೇವಾಲಯದ ಗೋಡೆಯ ಒಳಭಾಗವನ್ನು ಸೊಲೊಮೋನನು ಬಂಗಾರದಿಂದ ಹೊದಿಸಿದನು ಮತ್ತು ಆಲಯದ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರವನ್ನು ಕೆತ್ತಿಸಿದನು.
దినవృత్తాంతములు రెండవ గ్రంథము 3 : 8 (ERVTE)
ಸೊಲೊಮೋನನು ಮಹಾಪವಿತ್ರ ಸ್ಥಳವನ್ನು ತಯಾರಿಸಿದನು. ಅದು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಅಗಲವಿತ್ತು. ದೇವಾಲಯದ ಅಗಲದಷ್ಟೇ ಅದು ಅಗಲವಿತ್ತು. ಅದರ ಗೋಡೆಗಳನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. ಆ ಬಂಗಾರವು ಇಪ್ಪತ್ತಮೂರು ಟನ್ ತೂಕವಿತ್ತು.
దినవృత్తాంతములు రెండవ గ్రంథము 3 : 9 (ERVTE)
ಬಂಗಾರದ ಮೊಳೆಗಳ ತೂಕ ಅರ್ಧ ಕಿಲೋಗ್ರಾಂ. ಸೊಲೊಮೋನನು ಮೇಲುಪ್ಪರಿಗೆಯ ಕೋಣೆಗಳನ್ನೂ ಬಂಗಾರದಿಂದ ಹೊದಿಸಿದನು.
దినవృత్తాంతములు రెండవ గ్రంథము 3 : 10 (ERVTE)
ಸೊಲೊಮೋನನು ಮಹಾಪವಿತ್ರ ಸ್ಥಾನದೊಳಗೆ ಇಡುವದಕ್ಕಾಗಿ ಎರಡು ಕೆರೂಬಿಗಳನ್ನು ಮಾಡಿಸಿ ಅವುಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.
దినవృత్తాంతములు రెండవ గ్రంథము 3 : 11 (ERVTE)
ಕೆರೂಬಿಗಳ ಒಂದೊಂದು ರೆಕ್ಕೆಯು ಐದೈದು ಮೊಳ ಉದ್ದವಿದ್ದವು. ರೆಕ್ಕೆಗಳ ಒಟ್ಟು ಉದ್ದ ಇಪ್ಪತ್ತು ಮೊಳ. ಕೆರೂಬಿಯ ಒಂದು ರೆಕ್ಕೆಯು ಗೋಡೆಗೆ ತಾಗಿತ್ತು; ಅದರ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯನ್ನು ತಾಗಿತ್ತು.
దినవృత్తాంతములు రెండవ గ్రంథము 3 : 12 (ERVTE)
ಅಂತೆಯೇ ಎರಡನೆಯ ಕೆರೂಬಿಯ ಇನ್ನೊಂದು ರೆಕ್ಕೆಯು ಮತ್ತೊಂದು ಗೋಡೆಗೆ ತಾಗಿತ್ತು.
దినవృత్తాంతములు రెండవ గ్రంథము 3 : 13 (ERVTE)
ಹೀಗೆ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಸ್ಥಳವನ್ನು ಆವರಿಸಿಕೊಂಡಿದ್ದವು. ಅವು ಪವಿತ್ರಸ್ಥಳದ ಕಡೆಗೆ ಮುಖಮಾಡಿಕೊಂಡು ನಿಂತಿದ್ದವು.
దినవృత్తాంతములు రెండవ గ్రంథము 3 : 14 (ERVTE)
దినవృత్తాంతములు రెండవ గ్రంథము 3 : 15 (ERVTE)
ಸೊಲೊಮೋನನು ದೇವಾಲಯಕ್ಕೆ ನೀಲ, ಧೂಮ್ರ ಮತ್ತು ಕೆಂಪು ಬಟ್ಟೆ ಮತ್ತು ಬೆಲೆಬಾಳುವ ನಾರುಬಟ್ಟೆಗಳಿಂದ ಪರದೆಗಳನ್ನು ತಯಾರಿಸಿ ಅದರ ಮೇಲೆ ಕೆರೂಬಿಯರ ಚಿತ್ರವನ್ನು ಕಸೂತಿ ಮಾಡಿಸಿದನು. ಸೊಲೊಮೋನನು ದೇವಾಲಯದ ಎದುರಿನಲ್ಲಿ ಮೂವತ್ತೈದು ಮೊಳ ಎತ್ತರದ ಎರಡು ಕಂಬಗಳನ್ನು ನಿಲ್ಲಿಸಿದನು. ಅದರ ಮೇಲಿನ ಭಾಗ ಐದು ಮೊಳ ಎತ್ತರವಿತ್ತು.
దినవృత్తాంతములు రెండవ గ్రంథము 3 : 16 (ERVTE)
ಅವನು ಕೊರಳಿನ ಸರಗಳನ್ನು ಮಾಡಿಸಿ ಅವುಗಳನ್ನು ಕಂಬಗಳ ಮೇಲ್ಭಾಗದಲ್ಲಿ ಸಿಕ್ಕಿಸಿದನು. ಅವನು ನೂರು ದಾಳಿಂಬೆ ಹಣ್ಣುಗಳನ್ನು ಮಾಡಿಸಿ ತೂಗುಹಾಕಿದನು.
దినవృత్తాంతములు రెండవ గ్రంథము 3 : 17 (ERVTE)
ಈ ಕಂಬಗಳನ್ನು ದೇವಾಲಯದ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ ಯಾಕೀನ್ ಎಂತಲೂ ಎಡಗಡೆಯ ಕಂಬಕ್ಕೆ ಬೋವಜ್ ಎಂತಲೂ ಹೆಸರಿಟ್ಟನು.
❮
❯
1
2
3
4
5
6
7
8
9
10
11
12
13
14
15
16
17