సమూయేలు రెండవ గ్రంథము 3 : 1 (ERVTE)
{#1ಇಸ್ರೇಲರ ಮತ್ತು ಯೆಹೂದದವರ ಮಧ್ಯೆ ನಡೆದ ಯುದ್ಧ }
సమూయేలు రెండవ గ్రంథము 3 : 2 (ERVTE)
ಸೌಲನ ವಂಶದವರ ಮತ್ತು ದಾವೀದನ ವಂಶದವರ ಮಧ್ಯೆ ಬಹಳ ಕಾಲದವರೆಗೆ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಲೇ ಇದ್ದನು. ಸೌಲನ ವಂಶವು ದುರ್ಬಲಗೊಳ್ಳುತ್ತಲೇ ಇದ್ದಿತು. {#1ದಾವೀದನಿಗೆ ಹೆಬ್ರೋನಿನಲ್ಲಿ ಹುಟ್ಟಿದ ಗಂಡುಮಕ್ಕಳು } ದಾವೀದನಿಗೆ ಹೆಬ್ರೋನಿನಲ್ಲಿ ಆರು ಮಂದಿ ಗಂಡುಮಕ್ಕಳು ಹುಟ್ಟಿದರು. ಅಮ್ನೋನನು ಮೊದಲನೆಯ ಮಗ. ಇಜ್ರೇಲಿನವಳಾದ ಅಹೀನೋವಮಳು ಅಮ್ನೋನನ ತಾಯಿ.
సమూయేలు రెండవ గ్రంథము 3 : 3 (ERVTE)
ಕಿಲಾಬನು ಎರಡನೆಯ ಮಗ. ಕರ್ಮೆಲ್ಯನಾದ ನಾಬಾಲನ ವಿಧವೆಯಾದ ಅಬೀಗೈಲಳು ಕಿಲಾಬನ ತಾಯಿ. ಅಬ್ಷಾಲೋಮನು ಮೂರನೆಯ ಮಗ. ಗೆಷೂರಿನ ರಾಜ ತಲ್ಮೈನ ಮಗಳಾದ ಮಾಕಳು ಅಬ್ಷಾಲೋಮನ ತಾಯಿ.
సమూయేలు రెండవ గ్రంథము 3 : 4 (ERVTE)
ಅದೋನೀಯನು ನಾಲ್ಕನೆಯ ಮಗ. ಹಗ್ಗೀತಳು ಅದೋನೀಯನ ತಾಯಿ. ಶೆಫಟ್ಯನು ಐದನೆಯ ಮಗ. ಅಬೀಟಲಳು ಶೆಫಟ್ಯನ ತಾಯಿ.
సమూయేలు రెండవ గ్రంథము 3 : 5 (ERVTE)
ಇತ್ರಾಮನು ಆರನೆಯ ಮಗ. ದಾವೀದನ ಹೆಂಡತಿಯಾದ ಎಗ್ಲಳು ಇತ್ರಾಮನ ತಾಯಿ. ದಾವೀದನಿಗೆ ಹೆಬ್ರೋನಿನಲ್ಲಿ ಆರುಮಂದಿ ಗಂಡುಮಕ್ಕಳಿದ್ದರು.
సమూయేలు రెండవ గ్రంథము 3 : 6 (ERVTE)
{#1ಅಬ್ನೇರನು ದಾವೀದನ ಜೊತೆ ಸೇರಲು ತೀರ್ಮಾನಿಸಿದನು } ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧವು ನಡೆಯುತ್ತಿದ್ದಾಗ ಸೌಲನ ಸೈನ್ಯದಲ್ಲಿ ಅಬ್ನೇರನೇ ಬಲಶಾಲಿಯಾದನು.
సమూయేలు రెండవ గ్రంథము 3 : 7 (ERVTE)
ಸೌಲನಿಗೆ ರಿಚ್ಪಳೆಂಬ ಹೆಸರಿನ ದಾಸಿಯಿದ್ದಳು. ಅವಳು ಅವನಿಗೆ ಹೆಂಡತಿಯಂತೆ ಇದ್ದಳು. ರಿಚ್ಪಳು ಅಯಾಹನ ಮಗಳು. ಈಷ್ಬೋಶೆತನು ಅಬ್ನೇರನಿಗೆ, “ನನ್ನ ತಂದೆಯ ಸೇವಕಿಯೊಡನೆ ಲೈಂಗಿಕ ಸಂಬಂಧವನ್ನು ಏಕೆ ಮಾಡುತ್ತಿರುವೆ?” ಎಂದು ಕೇಳಿದನು.
సమూయేలు రెండవ గ్రంథము 3 : 8 (ERVTE)
ಈಷ್ಬೋಶೆತನ ಮಾತುಗಳಿಂದ ಅಬ್ನೇರನು ಬಹಳ ಕೋಪಗೊಂಡನು. ಅಬ್ನೇರನು, “ನಾನು ಸೌಲನಿಗೂ ಅವನ ವಂಶದವರಿಗೂ ನಂಬಿಗಸ್ತನಾಗಿದ್ದೆನು. ನಾನು ನಿನ್ನನ್ನು ದಾವೀದನಿಗೆ ಒಪ್ಪಿಸಲಿಲ್ಲ ಹಾಗೂ ಅವನಿಂದ ನೀನು ಸೋಲುವಂತೆ ಮಾಡಲಿಲ್ಲ. ನಾನು ಯೆಹೂದಕ್ಕಾಗಿ ಕೆಲಸ ಮಾಡುವ ದ್ರೋಹಿಯಲ್ಲ. ಆದರೆ ಈಗ ನಾನು ಇಂತಹ ಕೆಟ್ಟ ಕೆಲಸವನ್ನು ಮಾಡಿದೆನೆಂದು ಹೇಳುತ್ತಿರುವೆ.
సమూయేలు రెండవ గ్రంథము 3 : 9 (ERVTE)
(9-10)ಯೆಹೋವನು ಹೇಳಿರುವ ಸಂಗತಿಗಳು ನಿಜವಾಗಿಯೂ ಸಂಭವಿಸುತ್ತವೆ ಎಂದು ನಾನು ಪ್ರಮಾಣ ಮಾಡುತ್ತೇನೆ. ಸೌಲನ ವಂಶದವರಿಂದ ರಾಜ್ಯಾಧಿಕಾರವನ್ನು ಕಿತ್ತುಕೊಂಡು ದಾವೀದನಿಗೆ ಕೊಡುವುದಾಗಿ ಯೆಹೋವನು ಹೇಳಿದ್ದಾನೆ. ಯೆಹೋವನು ಇಸ್ರೇಲಿಗೂ ಯೆಹೂದಕ್ಕೂ ದಾವೀದನನ್ನು ರಾಜನನ್ನಾಗಿ ಮಾಡುತ್ತಾನೆ. ಅವನು ದಾನಿನಿಂದ ಬೇರ್ಷೆಬದವರೆಗೆ[* ದಾನಿನಿಂದ ಬೇರ್ಷೆಬದವರೆಗೆ ಇಸ್ರೇಲಿನ ಜನರನ್ನೆಲ್ಲ ಎಂದರ್ಥ. ದಾನ್ ಪಟ್ಟಣವು ಉತ್ತರದ ಕೊನೆಯಲ್ಲಿದ್ದರೆ ಬೇರ್ಷೆಬವು ದಕ್ಷಿಣಕ್ಕಿದೆ. ] ಆಳುತ್ತಾನೆ. ಈ ಸಂಗತಿಗಳು ನೆರವೇರುವುದಕ್ಕೆ ನಾನು ಸಹಾಯ ಮಾಡದಿದ್ದರೆ ದೇವರು ನನಗೆ ಕೆಟ್ಟದ್ದನ್ನು ಮಾಡಲಿ” ಎಂದು ಹೇಳಿದನು.
సమూయేలు రెండవ గ్రంథము 3 : 10 (ERVTE)
సమూయేలు రెండవ గ్రంథము 3 : 11 (ERVTE)
ಈಷ್ಬೋಶೆತನು ಅಬ್ನೇರನಿಗೆ ಏನನ್ನೂ ಹೇಳಿಲಿಲ್ಲ. ಈಷ್ಬೋಶೆತನು ಅವನಿಗೆ ಬಹಳ ಭಯಪಟ್ಟನು.
సమూయేలు రెండవ గ్రంథము 3 : 12 (ERVTE)
సమూయేలు రెండవ గ్రంథము 3 : 13 (ERVTE)
ಅಬ್ನೇರನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ಈ ದೇಶವನ್ನು ಯಾರು ಆಳಬೇಕೆಂಬದು ನಿನ್ನ ಅಭಿಪ್ರಾಯ? ನನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡರೆ, ಇಸ್ರೇಲಿನ ಜನರೆಲ್ಲರನ್ನು ನೀನು ಆಳುವಂತೆ ಮಾಡಲು ನಾನು ಸಹಾಯ ಮಾಡುತ್ತೇನೆ” ಎಂದು ಹೇಳಿದನು.
సమూయేలు రెండవ గ్రంథము 3 : 14 (ERVTE)
ಅದಕ್ಕೆ ದಾವೀದನು, “ಒಳ್ಳೆಯದು! ನಾನು ನಿನ್ನೊಡನೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆದರೆ ನೀನು ನನಗಾಗಿ ಒಂದು ಕೆಲಸ ಮಾಡಬೇಕು. ಸೌಲನ ಮಗಳಾದ ಮೀಕಲಳನ್ನು ನನ್ನ ಬಳಿಗೆ ಕರೆತರುವ ತನಕ ನಾನು ನಿನ್ನನ್ನು ಸಂಧಿಸುವುದಿಲ್ಲ” ಎಂದು ಹೇಳಿದನು.
సమూయేలు రెండవ గ్రంథము 3 : 15 (ERVTE)
ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಹೆಂಡತಿಯಾದ ಮೀಕಲಳನ್ನು ನನ್ನ ಬಳಿಗೆ ಕಳುಹಿಸು. ಅವಳನ್ನು ನನಗೆ ಕೊಡುವುದಾಗಿ ಮಾತುಕತೆಯಾಗಿತ್ತು. ಅವಳನ್ನು ಪಡೆಯಲು ನಾನು ನೂರು ಜನ ಫಿಲಿಷ್ಟಿಯರನ್ನು ಕೊಂದಿದ್ದೇನೆ”[† ನಾನು … ಕೊಂದಿದ್ದೇನೆ ಅಕ್ಷರಶಃ, “ನಾನು ಅವಳಿಗಾಗಿ ನೂರು ಜನ ಫಿಲಿಷ್ಟಿಯರ ಮುಂದೊಗಲುಗಳನ್ನು ಸಲ್ಲಿಸಿದ್ದೇನೆ” ಎಂದು. ] ಎಂದು ಹೇಳಿದನು. ಆಗ ಈಷ್ಬೋಶೆತನು, ಲಯಿಷನ ಮಗನಾದ ಪಲ್ಟೀಯೇಲನ ಬಳಿಯಿಂದ ಮೀಕಲಳನ್ನು ಕರೆತರುವಂತೆ ತನ್ನ ಜನರಿಗೆ ಹೇಳಿದನು.
సమూయేలు రెండవ గ్రంథము 3 : 16 (ERVTE)
ಮೀಕಲಳ ಗಂಡನಾದ ಪಲ್ಟೀಯೇಲನೂ ಅವಳ ಜೊತೆಗೆ ಬಂದನು. ಮೀಕಲಳ ಜೊತೆಯಲ್ಲಿ ಬಹುರೀಮಿಗೆ ಬರುವಾಗ ಪಲ್ಟೀಯೇಲನು ಆಳುತ್ತಿದ್ದನು. ಆದರೆ ಅಬ್ನೇರನು, “ನಿನ್ನ ಮನೆಗೆ ಹಿಂದಿರುಗಿ ಹೋಗು” ಎಂದು ಪಲ್ಟೀಯೇಲನಿಗೆ ಹೇಳಿದನು. ಆದ್ದರಿಂದ ಪಲ್ಟೀಯೇಲನು ಮನೆಗೆ ಹಿಂದಿರುಗಿದನು.
సమూయేలు రెండవ గ్రంథము 3 : 17 (ERVTE)
ಅಬ್ನೇರನು ಇಸ್ರೇಲಿನ ನಾಯಕರಿಗೆ ಸಂದೇಶವೊಂದನ್ನು ಕಳುಹಿಸಿ, “ದಾವೀದನನ್ನು ನಿಮ್ಮ ರಾಜನನ್ನಾಗಿ ಮಾಡಲು ನೀವು ಕಾಯುತ್ತಿದ್ದೀರಿ.
సమూయేలు రెండవ గ్రంథము 3 : 18 (ERVTE)
ಅದನ್ನು ಈಗಲೇ ಮಾಡಿರಿ! ಯೆಹೋವನು ದಾವೀದನ ಬಗ್ಗೆ ಮಾತಾಡುತ್ತಾ, ‘ನನ್ನ ಜನರಾದ ಇಸ್ರೇಲರನ್ನು ಫಿಲಿಷ್ಟಿಯರಿಂದಲೂ ಬೇರೆಲ್ಲಾ ಶತ್ರುಗಳಿಂದಲೂ ನನ್ನ ಸೇವಕನಾದ ದಾವೀದನ ಮೂಲಕ ಸಂರಕ್ಷಿಸುತ್ತೇನೆ’ ” ಎಂದು ಹೇಳಿದ್ದಾನೆ.
సమూయేలు రెండవ గ్రంథము 3 : 19 (ERVTE)
సమూయేలు రెండవ గ్రంథము 3 : 20 (ERVTE)
ಅಬ್ನೇರನು ಹೆಬ್ರೋನಿನಲ್ಲಿ ದಾವೀದನಿಗೆ ಈ ಮಾತುಗಳನ್ನು ಹೇಳಿದನು. ಬೆನ್ಯಾಮೀನ್ ವಂಶದವರಿಗೂ ಅವನು ಈ ಮಾತುಗಳನ್ನು ಹೇಳಿದನು. ಅಬ್ನೇರನ ಮಾತುಗಳು ಬೆನ್ಯಾಮೀನ್ ವಂಶದವರಿಗೆ ಮತ್ತು ಇಸ್ರೇಲಿನ ಜನರಿಗೆಲ್ಲರಿಗೂ ಒಳ್ಳೆಯ ಮಾತುಗಳೆಂದು ಕಂಡುಬಂದವು.
సమూయేలు రెండవ గ్రంథము 3 : 21 (ERVTE)
ನಂತರ ಅಬ್ನೇರನು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದನು. ಅಬ್ನೇರನು ಇಪ್ಪತ್ತು ಜನರನ್ನು ತನ್ನ ಸಂಗಡ ಕರೆದು ತಂದನು. ಅಬ್ನೇರನಿಗೂ ಅವನ ಸಂಗಡಿಗರಿಗೂ ದಾವೀದನು ಔತಣಕೂಟವನ್ನು ಏರ್ಪಡಿಸಿದ್ದನು.
సమూయేలు రెండవ గ్రంథము 3 : 22 (ERVTE)
ಅಬ್ನೇರನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ನಾನು ಹೋಗಿ ಎಲ್ಲಾ ಇಸ್ರೇಲರನ್ನೂ ನಿನ್ನ ಬಳಿಗೆ ಕರೆತರುತ್ತೇನೆ; ನಂತರ ಅವರು ನಿನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ನೀನು ನಿನ್ನ ಇಷ್ಟದಂತೆ ಸಮಸ್ತ ಇಸ್ರೇಲನ್ನು ಆಳಬಹುದು” ಎಂದು ಹೇಳಿದನು. ದಾವೀದನು ಅಬ್ನೇರನನ್ನು ಕಳುಹಿಸಿದನು. ಅಬ್ನೇರನು ಸಮಾಧಾನದಿಂದ ಹೋದನು. {#1ಅಬ್ನೇರನ ಮರಣ } ಯೋವಾಬನೂ ದಾವೀದನ ಅಧಿಕಾರಿಗಳೂ ಯುದ್ಧರಂಗದಿಂದ ಹಿಂದಿರುಗಿದರು. ಶತ್ರುಗಳಿಂದ ವಶಪಡಿಸಿಕೊಂಡ ಅನೇಕ ಬೆಲೆಬಾಳುವ ವಸ್ತುಗಳು ಅವರ ಹತ್ತಿರವಿದ್ದವು. ದಾವೀದನು ಅಬ್ನೇರನನ್ನು ಆಗಲೇ ಸಮಾಧಾನದಿಂದ ಕಳುಹಿಸಿಕೊಟ್ಟಿದ್ದರಿಂದ ಯೋವಾಬನು ಬಂದಾಗ ಅವನು ಹೆಬ್ರೋನಿನಲ್ಲಿರಲಿಲ್ಲ.
సమూయేలు రెండవ గ్రంథము 3 : 23 (ERVTE)
ಯೋವಾಬನು ತನ್ನ ಎಲ್ಲಾ ಸೈನ್ಯದೊಂದಿಗೆ ಹೆಬ್ರೋನಿಗೆ ಬಂದನು. ಸೈನಿಕರು ಯೋವಾಬನಿಗೆ, “ನೇರನ ಮಗನಾದ ಅಬ್ನೇರನು ರಾಜನಾದ ದಾವೀದನ ಹತ್ತಿರಕ್ಕೆ ಬಂದಿದ್ದನು. ದಾವೀದನು ಅಬ್ನೇರನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು” ಎಂದು ಹೇಳಿದರು.
సమూయేలు రెండవ గ్రంథము 3 : 24 (ERVTE)
ಯೋವಾಬನು ರಾಜನ ಬಳಿಗೆ ಬಂದು, “ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದರೂ ಅವನನ್ನು ದಂಡಿಸದೆ ಯಾಕೆ ಕಳುಹಿಸಿಬಿಟ್ಟೆ?
సమూయేలు రెండవ గ్రంథము 3 : 25 (ERVTE)
ಅಬ್ನೇರನು ನೇರನ ಮಗನೆಂಬುದು ನಿನಗೆ ತಿಳಿದಿದೆ. ಅವನು ನಿನ್ನನ್ನು ವಂಚಿಸಲು ಬಂದಿದ್ದನು. ನೀನು ಮಾಡುತ್ತಿರುವುದನ್ನೆಲ್ಲಾ ತಿಳಿದುಕೊಳ್ಳಲು ಅವನು ಬಂದಿದ್ದನು” ಎಂದು ಹೇಳಿದನು.
సమూయేలు రెండవ గ్రంథము 3 : 26 (ERVTE)
ಯೋವಾಬನು ದಾವೀದನನ್ನು ಬಿಟ್ಟು, ಅಬ್ನೇರನನ್ನು ಸಿರಾ ಬಾವಿಯ ಬಳಿಯಿಂದ ಕರೆತರಲು ದೂತರನ್ನು ಕಳುಹಿಸಿದನು. ಅಬ್ನೇರನನ್ನು ದೂತರು ಹಿಂದಕ್ಕೆ ಕರೆತಂದರು. ಈ ಸಂಗತಿಯು ದಾವೀದನಿಗೆ ತಿಳಿದಿರಲಿಲ್ಲ.
సమూయేలు రెండవ గ్రంథము 3 : 27 (ERVTE)
ಅಬ್ನೇರನು ಹೆಬ್ರೋನಿಗೆ ಬಂದಾಗ, ಯೋವಾಬನು ಅವನ ಜೊತೆಯಲ್ಲಿ ಪ್ರತ್ಯೇಕವಾಗಿ ಮಾತನಾಡುವುದಕ್ಕಾಗಿ ಊರಬಾಗಿಲಿನ ಒಂದು ಪಕ್ಕಕ್ಕೆ ಕರೆದುಕೊಂಡು ಹೋದನು. ಆದರೆ ಯೋವಾಬನು ಅಬ್ನೇರನ ಹೊಟ್ಟೆಗೆ ತಿವಿದಿದ್ದರಿಂದ ಅವನು ಸತ್ತನು. ಹಿಂದೆ, ಅಬ್ನೇರನು ಯೋವಾಬನ ಸೋದರನಾದ ಅಸಾಹೇಲನನ್ನು ಕೊಂದಿದ್ದನು. ಆದ್ದರಿಂದ ಯೋವಾಬನು ಅಬ್ನೇರನನ್ನು ಕೊಂದನು.
సమూయేలు రెండవ గ్రంథము 3 : 28 (ERVTE)
{#1ದಾವೀದನು ಅಬ್ನೇರನಿಗಾಗಿ ಗೋಳಾಡಿದನು } ತರುವಾಯ ದಾವೀದನಿಗೆ ಸುದ್ದಿಯು ತಿಳಿಯಿತು. ದಾವೀದನು, “ನನ್ನ ರಾಜ್ಯವಾಗಲಿ ನಾನಾಗಲಿ ನೇರನ ಮಗನಾದ ಅಬ್ನೇರನ ಸಾವಿಗೆ ಕಾರಣರಲ್ಲ. ಯೆಹೋವನಿಗೆ ಇದು ತಿಳಿದಿದೆ.
సమూయేలు రెండవ గ్రంథము 3 : 29 (ERVTE)
ಯೋವಾಬನು ಮತ್ತು ಅವನ ವಂಶದವರು ಇದಕ್ಕೆ ಜವಾಬ್ದಾರರು. ಅವನ ವಂಶದವರನ್ನು ಇದಕ್ಕಾಗಿ ದೂಷಿಸಬೇಕು. ಯೋವಾಬನ ವಂಶಕ್ಕೆ ಅನೇಕ ಕಷ್ಟಗಳು ಬರಲಿ. ಅವನ ವಂಶದವರಲ್ಲಿ ಕುಷ್ಠರೋಗಿಗಳು, ಊರುಗೋಲು ಬಳಸುವವರು. ಕತ್ತಿಯಿಂದ ಸಾಯುವವರು, ಭಿಕ್ಷೆ ಬೇಡುವವರು ಇದ್ದೇ ಇರಲಿ” ಎಂದು ಹೇಳಿದನು.
సమూయేలు రెండవ గ్రంథము 3 : 30 (ERVTE)
సమూయేలు రెండవ గ్రంథము 3 : 31 (ERVTE)
ಅಸಾಹೇಲನನ್ನು ಗಿಬ್ಯೋನ್ ಯುದ್ಧದಲ್ಲಿ ಅಬ್ನೇರನು ಕೊಂದುಹಾಕಿದನು. ಆದ್ದರಿಂದ ಅಸಾಹೇಲನ ಸಹೋದರರಾದ ಯೋವಾಬ ಮತ್ತು ಅಬೀಷೈ ಅಬ್ನೇರನನ್ನು ಕೊಂದರು.
సమూయేలు రెండవ గ్రంథము 3 : 32 (ERVTE)
(31-32)ದಾವೀದನು ಯೋವಾಬನಿಗೆ ಮತ್ತು ಅವನ ಜೊತೆಯಲ್ಲಿದ್ದ ಜನರಿಗೆಲ್ಲ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು ಮತ್ತು ಶೋಕಸೂಚಕ ವಸ್ತ್ರಗಳನ್ನು ಧರಿಸಿಕೊಂಡು ಅಬ್ನೇರನಿಗಾಗಿ ಶೋಕಿಸಿ” ಎಂದು ಹೇಳಿದನು. ರಾಜನಾದ ದಾವೀದನೂ ಶವಸಂಸ್ಕಾರಕ್ಕೆ ಹೋದನು. ಅವರು ಅಬ್ನೇರನನ್ನು ಹೆಬ್ರೋನಿನಲ್ಲಿ ಸಮಾಧಿ ಮಾಡಿದರು. ಅಬ್ನೇರನ ಸಮಾಧಿಯ ಹತ್ತಿರ ರಾಜನಾದ ದಾವೀದನೂ ಇತರ ಜನರೂ ಗೋಳಾಡಿದರು.
సమూయేలు రెండవ గ్రంథము 3 : 33 (ERVTE)
ರಾಜನಾದ ದಾವೀದನು ಅಬ್ನೇರನಿಗಾಗಿ ಈ ಶೋಕಗೀತೆಯನ್ನು ಹಾಡಿದನು: “ಅಬ್ನೇರನು ಮೂರ್ಖ ಅಪರಾಧಿಯಂತೆ ಸತ್ತನೇ?
సమూయేలు రెండవ గ్రంథము 3 : 34 (ERVTE)
ಅಬ್ನೇರನೇ, ನಿನ್ನ ಕೈಗಳನ್ನು ಹಗ್ಗದಿಂದ ಬಿಗಿದಿರಲಿಲ್ಲ. ನಿನ್ನ ಪಾದಗಳಿಗೆ ಸಂಕೋಲೆಯನ್ನು ತೊಡಿಸಿರಲಿಲ್ಲ. ದುಷ್ಟಜನರೆದುರು ನೀನು ಬಿದ್ದೆಯಲ್ಲ, ನೀನು ಬಿದ್ದು ಸತ್ತೆಯಲ್ಲ.” ಆಗ ಜನರೆಲ್ಲರೂ ಅಬ್ನೇರನಿಗಾಗಿ ಮತ್ತೆ ಗೋಳಾಡಿದರು.
సమూయేలు రెండవ గ్రంథము 3 : 35 (ERVTE)
ಅಂದು ಹೊತ್ತು ಇಳಿಯುವ ಮೊದಲೇ ಜನರು ದಾವೀದನಿಗೆ ಊಟ ಮಾಡುವಂತೆ ಒತ್ತಾಯಿಸಿದರು. ಆದರೆ ದಾವೀದನು, “ಸೂರ್ಯನು ಮುಳುಗುವುದಕ್ಕೆ ಮುಂಚಿತವಾಗಿ ನಾನು ರೊಟ್ಟಿಯನ್ನಾಗಲಿ ಇತರ ಆಹಾರವನ್ನಾಗಲಿ ತಿಂದರೆ, ದೇವರು ನನ್ನನ್ನು ದಂಡಿಸಲಿ ಅಥವಾ ನನಗೆ ಕೇಡು ಬರಮಾಡಲಿ” ಎಂದು ಪ್ರತಿಜ್ಞೆ ಮಾಡಿದನು.
సమూయేలు రెండవ గ్రంథము 3 : 36 (ERVTE)
ಇದನ್ನು ಕೇಳಿದ ಜನರೆಲ್ಲರೂ ರಾಜನಾದ ದಾವೀದನ ಈ ಕಾರ್ಯವನ್ನು ಮೆಚ್ಚಿಕೊಂಡರು.
సమూయేలు రెండవ గ్రంథము 3 : 37 (ERVTE)
ನೇರನ ಮಗನಾದ ಅಬ್ನೇರನನ್ನು ಕೊಲ್ಲಲು ರಾಜನಾದ ದಾವೀದನು ಆಜ್ಞಾಪಿಸಿರಲಿಲ್ಲವೆಂದು ಯೆಹೂದ್ಯರು ಮತ್ತು ಇಸ್ರೇಲಿನ ಜನರೆಲ್ಲರೂ ಅಂದು ಅರ್ಥಮಾಡಿಕೊಂಡರು.
సమూయేలు రెండవ గ్రంథము 3 : 38 (ERVTE)
ರಾಜನಾದ ದಾವೀದನು ತನ್ನ ಸೇವಕರಿಗೆ, “ಇಸ್ರೇಲಿನಲ್ಲಿ ಇಂದು ಮಹಾಪುರುಷನಾದ ನಾಯಕನೊಬ್ಬನು ಸತ್ತನೆಂಬುದು ನಿಮಗೆಲ್ಲ ತಿಳಿದಿದೆ.
సమూయేలు రెండవ గ్రంథము 3 : 39 (ERVTE)
ನಾನು ರಾಜನಾಗಿದ್ದರೂ ಏನೂ ಮಾಡಲಾರದ ಸ್ಥಿತಿಯಲ್ಲಿದ್ದೇನೆ. ಚೆರೂಯಳ ಗಂಡುಮಕ್ಕಳಾದ ಇವರು ನನಗೆ ಬಹಳ ಕೇಡನ್ನು ಮಾಡಿದರು. ಯೆಹೋವನು ಈ ಜನರಿಗೆ ತಕ್ಕ ದಂಡನೆಯನ್ನು ನೀಡಲಿ” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39