ద్వితీయోపదేశకాండమ 33 : 1 (ERVTE)
{#1ಮೋಶೆ ಇಸ್ರೇಲರನ್ನು ಆಶೀರ್ವದಿಸಿದ್ದು } ದೇವರ ಮನುಷ್ಯನಾದ ಮೋಶೆಯು ತಾನು ಸಾಯುವ ಮೊದಲು ಇಸ್ರೇಲರನ್ನು ಆಶೀರ್ವದಿಸಿದನು.
ద్వితీయోపదేశకాండమ 33 : 2 (ERVTE)
ಮೋಶೆಯು ಹೇಳಿದ್ದೇನೆಂದರೆ: “ಸೇಯೀರ್‌ನಲ್ಲಿ ಮುಂಜಾನೆಯ ಬೆಳಕು ಪ್ರಕಾಶಿಸುವಂತೆ ಪಾರಾನ್ ಬೆಟ್ಟಗಳ ಮೇಲಿನಿಂದ ಬೆಳಕು ಪ್ರಕಾಶಿಸುವಂತೆ ಯೆಹೋವನು ಸೀನಾಯಿ ಬೆಟ್ಟದಿಂದ ಬಂದನು. ಆತನು ಹತ್ತು ಸಾವಿರ ಪರಿಶುದ್ಧರೊಂದಿಗೆ ಬಂದನು. ಆತನ ಬಲಶಾಲಿಗಳಾದ ಸೈನಿಕರು ಆತನೊಂದಿಗಿದ್ದರು.
ద్వితీయోపదేశకాండమ 33 : 3 (ERVTE)
ಹೌದು, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಪವಿತ್ರ ಜನರೆಲ್ಲರೂ ಆತನ ಕೈಗಳಲ್ಲಿರುವರು. ಆತನ ಕಾಲ ಬಳಿಯಲ್ಲಿ ಕುಳಿತುಕೊಂಡು ಬೋಧನೆಯನ್ನು ಕೇಳುವರು.
ద్వితీయోపదేశకాండమ 33 : 4 (ERVTE)
ಮೋಶೆಯು ಧರ್ಮಶಾಸ್ತ್ರವನ್ನು ಯಾಕೋಬನ ವಂಶದವರಿಗೆ ಕೊಟ್ಟನು.
ద్వితీయోపదేశకాండమ 33 : 5 (ERVTE)
ಆಗ ಇಸ್ರೇಲಿನ ಜನರು ತಮ್ಮ ನಾಯಕರೊಂದಿಗೆ ಒಟ್ಟಾಗಿ ಸೇರಿದರು. ಯೆಹೋವನು ತಾನೇ ಯೆಶುರೂನಿನಲ್ಲಿ[* ಯೆಶುರೂನ ಇಸ್ರೇಲಿನ ಮತ್ತೊಂದು ಹೆಸರು. ಇದರರ್ಥ: “ಒಳ್ಳೆಯ” ಅಥವಾ “ಯಥಾರ್ಥ.” ] ಅರಸನಾದನು.
ద్వితీయోపదేశకాండమ 33 : 6 (ERVTE)
{#1ರೂಬೇನನಿಗೆ ಆಶೀರ್ವಾದ } “ರೂಬೇನನು ನಾಶವಾಗದೆ ಉಳಿಯಲಿ, ಆದರೆ ಅವನ ಕುಲದವರಲ್ಲಿ ಕೆಲವೇ ಮಂದಿ ಇರುವರು.”
ద్వితీయోపదేశకాండమ 33 : 7 (ERVTE)
{#1ಯೆಹೂದನಿಗೆ ಆಶೀರ್ವಾದ } ಯೆಹೂದನ ವಿಷಯವಾಗಿ ಮೋಶೆ ಹೇಳಿದ ಮಾತುಗಳು: “ಯೆಹೋವನೇ, ಯೆಹೂದದ ನಾಯಕನು ಸಹಾಯಕ್ಕಾಗಿ ಮೊರೆಯಿಡುವಾಗ ಅದನ್ನು ಆಲಿಸಿ ಅವನ ಜನರ ಬಳಿಗೆ ಕರೆದುಕೊಂಡು ಬಂದು ಅವರೊಂದಿಗೆ ಸೇರಿಸು. ಅವನನ್ನು ಬಲಗೊಳಿಸಿ ಶತ್ರುಗಳೊಂದಿಗೆ ಯುದ್ಧಮಾಡಲು ಸಹಾಯಿಸು.”
ద్వితీయోపదేశకాండమ 33 : 8 (ERVTE)
{#1ಲೇವಿಯರಿಗೆ ಆಶೀರ್ವಾದ } ಲೇವಿಯ ವಿಷಯವಾಗಿ ಮೋಶೆ ಹೇಳಿದ ಮಾತುಗಳು: “ಲೇವಿಯು ನಿನ್ನ ನಿಜವಾದ ಹಿಂಬಾಲಕ. ಅವನು ಊರೀಮ್‌ತುಮ್ಮೀಮ್ ಇಟ್ಟುಕೊಂಡಿರುವನು. ಮಸ್ಸಾದಲ್ಲಿ ಲೇವಿಯರನ್ನು ನೀನು ಪರೀಕ್ಷಿಸಿದೆ. ಮೆರೀಬ ಬುಗ್ಗೆಯ ಬಳಿ ಅವರು ನಿನ್ನವರೆಂದು ನಿನಗೆ ಖಚಿತವಾಯಿತು.
ద్వితీయోపదేశకాండమ 33 : 9 (ERVTE)
ಯೆಹೋವನೇ, ಅವರು ನಿನಗಾಗಿ ಚಿಂತಿಸಿದರು; ಸ್ವಂತ ಸಂಸಾರಕ್ಕಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದರು; ಅವರು ನಿನಗಾಗಿ ತಮ್ಮ ತಂದೆತಾಯಿಗಳನ್ನು ನಿರ್ಲಕ್ಷಿಸಿದರು; ಒಡಹುಟ್ಟಿದವರನ್ನೂ ಗುರುತಿಸಲಿಲ್ಲ. ಅವರು ತಮ್ಮ ಮಕ್ಕಳಿಗೆ ಪ್ರಾಮುಖ್ಯತೆಯನ್ನು ಕೊಡಲಿಲ್ಲ; ಅವರು ನಿನ್ನ ಕಟ್ಟಳೆಗಳನ್ನು ಅನುಸರಿಸಿ ಒಡಂಬಡಿಕೆಯನ್ನು ಕಾಪಾಡಿದರು.
ద్వితీయోపదేశకాండమ 33 : 10 (ERVTE)
ಅವರು ಯಾಕೋಬ ವಂಶದವರಿಗೆ ನಿನ್ನ ವಿಧಿನಿಯಮಗಳನ್ನು ಕಲಿಸುವರು; ನಿನ್ನ ಕಟ್ಟಳೆಗಳನ್ನು ಇಸ್ರೇಲರಿಗೆ ಬೋಧಿಸುವರು. ಅವರು ನಿನ್ನ ಸನ್ನಿಧಾನದಲ್ಲಿ ಧೂಪಹಾಕುವರು. ಬಲಿಪೀಠದಲ್ಲಿ ನಿನಗೆ ಯಜ್ಞಾರ್ಪಣೆ ಮಾಡುವರು.
ద్వితీయోపదేశకాండమ 33 : 11 (ERVTE)
“ಯೆಹೋವನೇ, ಲೇವಿಯರಿಗೆ ಇರುವಂಥದನ್ನು ಆಶೀರ್ವದಿಸು; ಅವರು ಮಾಡಿದ್ದೆಲ್ಲಾ ನಿನಗೆ ಮೆಚ್ಚಿಕೆಯಾಗಲಿ. ಅವರ ಮೇಲೆ ಬೀಳುವವರನ್ನು ನಾಶಮಾಡು, ಅವರ ವೈರಿಗಳನ್ನು ಸೋಲಿಸು; ಅವರು ಮತ್ತೆ ಲೇವಿಯರ ಮೇಲೆ ಬೀಳದಂತೆ ಮಾಡು.”
ద్వితీయోపదేశకాండమ 33 : 12 (ERVTE)
{#1ಬೆನ್ಯಾಮೀನನಿಗೆ ಆಶೀರ್ವಾದ } ಬೆನ್ಯಾಮೀನನ ವಿಷಯವಾಗಿ ಮೋಶೆಯು ಹೇಳಿದ್ದೇನೆಂದರೆ: “ಯೆಹೋವನು ಬೆನ್ಯಾಮೀನನನ್ನು ಪ್ರೀತಿಸುತ್ತಾನೆ. ಬೆನ್ಯಾಮೀನನು ಆತನ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುತ್ತಾನೆ. ಯೆಹೋವನು ಅವನನ್ನು ಯಾವಾಗಲೂ ಸಂರಕ್ಷಿಸುತ್ತಾನೆ. ಅವನ ಪ್ರಾಂತ್ಯದಲ್ಲಿ ಯೆಹೋವನು ವಾಸಿಸುವನು.”
ద్వితీయోపదేశకాండమ 33 : 13 (ERVTE)
{#1ಯೋಸೇಫನಿಗೆ ಆಶೀರ್ವಾದ } ಯೋಸೇಫನ ಪ್ರಾಂತ್ಯವನ್ನು ಯೆಹೋವನು ಆಶೀರ್ವದಿಸಲಿ: “ಯೆಹೋವನೇ, ಅವರಿಗೆ ಆಕಾಶದಿಂದ ಮಳೆ ಸುರಿಸು, ನೆಲದಿಂದ ಬುಗ್ಗೆಯು ಹೊರಬರಲಿ;
ద్వితీయోపదేశకాండమ 33 : 14 (ERVTE)
ಸೂರ್ಯನು ಅವರಿಗೆ ಒಳ್ಳೆಯ ಫಲಗಳನ್ನು ಕೊಡಲಿ; ಪ್ರತಿ ತಿಂಗಳು ಒಳ್ಳೆಯ ಫಲಗಳನ್ನು ಕೊಡಲಿ.
ద్వితీయోపదేశకాండమ 33 : 15 (ERVTE)
ಬೆಟ್ಟಗುಡ್ಡಗಳು ಉತ್ತಮವಾದ ಫಲಗಳನ್ನು ಫಲಿಸಲಿ.
ద్వితీయోపదేశకాండమ 33 : 16 (ERVTE)
ಭೂಮಿಯು ಒಳ್ಳೆಯದನ್ನು ಯೋಸೇಫನಿಗೆ ಕೊಡಲಿ. ಯೋಸೇಫನು ತನ್ನ ಸಹೋದರರಿಂದ ಬೇರ್ಪಡಿಸಿಕೊಂಡಿರುವನು. ಆದ್ದರಿಂದ ಉರಿಯುವ ಪೊದೆಯಲ್ಲಿರುವ ಯೆಹೋವನು ಉತ್ತಮವಾದವುಗಳನ್ನು ಯೋಸೇಫನಿಗೆ ಕೊಡಲಿ.
ద్వితీయోపదేశకాండమ 33 : 17 (ERVTE)
ಯೋಸೇಫನು ಬಲಶಾಲಿಯಾದ ಗೂಳಿಯಂತಿದ್ದಾನೆ. ಅವನ ಇಬ್ಬರು ಮಕ್ಕಳು ಗೂಳಿಯ ಕೊಂಬುಗಳಂತೆ ಬೇರೆಯವರನ್ನು ದೂಡಿ ಲೋಕದ ಅಂಚಿಗೆ ತಳ್ಳಿಬಿಡುತ್ತಾರೆ. ಮನಸ್ಸೆಯೊಂದಿಗೆ ಸಾವಿರಗಟ್ಟಲೆ ಜನರಿದ್ದಾರೆ. ಎಫ್ರಾಯೀಮನೊಂದಿಗೆ ಹತ್ತು ಸಾವಿರಗಟ್ಟಲೆ ಜನರಿದ್ದಾರೆ.”
ద్వితీయోపదేశకాండమ 33 : 18 (ERVTE)
{#1ಜೆಬುಲೂನನಿಗೆ ಮತ್ತು ಇಸ್ಸಾಕಾರನಿಗೆ ಆಶೀರ್ವಾದಗಳು } ಮೋಶೆಯು ಜೆಬುಲೂನ್ ವಿಷಯವಾಗಿ ಹೇಳಿದ್ದೇನೆಂದರೆ: “ಜೆಬುಲೂನನೇ, ನೀನು ಹೊರಗೆ ಹೋಗುವಾಗ ಸಂತೋಷವಾಗಿರು. ಇಸ್ಸಾಕಾರನೇ, ನೀನು ನಿನ್ನ ಗುಡಾರದೊಳಗಿರುವಾಗ ಸಂತೋಷದಿಂದಿರು.
ద్వితీయోపదేశకాండమ 33 : 19 (ERVTE)
ಅವರು ತಮ್ಮ ಪರ್ವತಗಳಿಗೆ ಜನರನ್ನು ಕರೆಯುವರು. ಅಲ್ಲಿ ಅವರು ಉತ್ತಮ ಯಜ್ಞವನ್ನು ಅರ್ಪಿಸುವರು. ಸಮುದ್ರದಿಂದ ಐಶ್ವರ್ಯವನ್ನು ತೆಗೆಯುವರು. ಸಮುದ್ರ ದಡದಿಂದ ನಿಕ್ಷೇಪವನ್ನೆತ್ತುವರು.”
ద్వితీయోపదేశకాండమ 33 : 20 (ERVTE)
{#1ಗಾದನಿಗೆ ಆಶೀರ್ವಾದಗಳು } ಗಾದನಿಗೆ ಮೋಶೆಯು ಹೇಳಿದ್ದೇನೆಂದರೆ: “ಗಾದನಿಗೆ ವಿಸ್ತಾರವಾದ ಪ್ರಾಂತ್ಯವನ್ನು ಕೊಟ್ಟ ದೇವರಿಗೆ ಸ್ತೋತ್ರ. ಗಾದನು ಸಿಂಹದಂತಿರುವನು; ಹೊಂಚುಹಾಕುತ್ತಾ ಕಾಯುತ್ತಾ ಇರುವನು. ಫಕ್ಕನೆ ಪ್ರಾಣಿಯ ಮೇಲೆ ಹಾರಿ ಅದನ್ನು ಸೀಳಿಬಿಡುವನು.
ద్వితీయోపదేశకాండమ 33 : 21 (ERVTE)
ಅದರ ಒಳ್ಳೆಯ ಭಾಗವನ್ನು ತನಗೆ ಆರಿಸಿಕೊಳ್ಳುವನು. ರಾಜನ ಭಾಗವನ್ನು ತಾನಿಟ್ಟುಕೊಳ್ಳುವನು. ಜನರ ನಾಯಕರು ಆತನ ಬಳಿಗೆ ಬರುವರು. ಯೆಹೋವನು ಒಳ್ಳೆಯದೆಂದು ಹೇಳುವ ಕಾರ್ಯಗಳನ್ನು ಮಾಡುವನು. ಇಸ್ರೇಲ್ ಜನರಿಗೆ ಸರಿಯಾದ ಕಾರ್ಯವನ್ನೇ ಮಾಡುವನು.”
ద్వితీయోపదేశకాండమ 33 : 22 (ERVTE)
{#1ದಾನನಿಗೆ ಆಶೀರ್ವಾದಗಳು } ಮೋಶೆಯು ದಾನನ ವಿಷಯವಾಗಿ ಹೀಗೆ ಹೇಳಿದನು: “ದಾನನು ಪ್ರಾಯದಸಿಂಹದ ಮರಿ; ಅವನು ಬಾಷಾನಿನಿಂದ ನೆಗೆಯುವನು.”
ద్వితీయోపదేశకాండమ 33 : 23 (ERVTE)
{#1ನಫ್ತಾಲಿಗೆ ಆಶೀರ್ವಾದಗಳು } ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ ಮಾತುಗಳು: “ನಫ್ತಾಲಿಯೇ, ನಿನಗೆ ಉತ್ತಮವಾದ ವಸ್ತುಗಳು ಅಧಿಕವಾಗಿ ದೊರೆಯುತ್ತವೆ. ಯೆಹೋವನು ನಿನ್ನನ್ನು ನಿಜವಾಗಿಯೂ ಆಶೀರ್ವದಿಸುವನು. ಗಲಿಲಾಯದ ಬಳಿಯಲ್ಲಿರುವ ಪ್ರಾಂತ್ಯವು ನಿನಗೆ ದೊರಕುವದು.”
ద్వితీయోపదేశకాండమ 33 : 24 (ERVTE)
{#1ಆಶೇರನಿಗೆ ಆಶೀರ್ವಾದ } ಆಶೇರನ ವಿಷಯವಾಗಿ ಮೋಶೆಯ ಮಾತುಗಳು: “ಮಕ್ಕಳಲ್ಲಿ, ಆಶೇರನೇ ಹೆಚ್ಚಾಗಿ ಆಶೀರ್ವದಿಸಲ್ಪಟ್ಟವನು. ಅವನ ಅಣ್ಣತಮ್ಮಂದಿರೊಳಗೆ ಅವನೇ ಅಚ್ಚುಮೆಚ್ಚಿನವನಾಗಲಿ. ಎಣ್ಣೆಯಲ್ಲಿ ಅವನು ತನ್ನ ಕಾಲುಗಳನ್ನು ತೊಳೆಯಲಿ.
ద్వితీయోపదేశకాండమ 33 : 25 (ERVTE)
ನಿನ್ನ ಬಾಗಿಲುಗಳಲ್ಲಿ ಬೀಗವಿರುವುದು. ಅವು ಕಬ್ಬಿಣದಿಂದಲೂ ಹಿತ್ತಾಳೆಯಿಂದಲೂ ಮಾಡಲ್ಪಟ್ಟಿವೆ. ನಿನ್ನ ಜೀವಮಾನ ಕಾಲವೆಲ್ಲಾ ನೀನು ಬಲಶಾಲಿಯಾಗಿರುವೆ.”
ద్వితీయోపదేశకాండమ 33 : 26 (ERVTE)
{#1ಮೋಶೆಯು ದೇವರನ್ನು ಸ್ತುತಿಸುವುದು } “ಯೆಶುರೂನೇ, ನಮ್ಮ ದೇವರ ಹಾಗೆ ಬೇರೆ ದೇವರುಗಳಿಲ್ಲ. ಆತನು ಮೋಡಗಳ ಮೇಲೆ ಮಹಿಮಾರೂಢನಾಗಿ ಸವಾರಿ ಮಾಡುತ್ತಾ ಆಕಾಶದಿಂದ ನಿನಗೆ ಸಹಾಯಕ್ಕೆ ಬರುವನು.
ద్వితీయోపదేశకాండమ 33 : 27 (ERVTE)
ಆತನು ನಿರಂತರಕ್ಕೂ ಜೀವಿಸುವವನಾಗಿದ್ದಾನೆ. ಆತನೇ ನಿಮ್ಮ ಆಶ್ರಯಸ್ಥಾನ. ಆತನ ಸಾಮರ್ಥ್ಯ ಸದಾಕಾಲವಿರುವುದು. ಆತನು ನಿಮ್ಮನ್ನು ಸಂರಕ್ಷಿಸಿ ಕಾಪಾಡುವನು; ನಿಮ್ಮ ದೇಶವನ್ನು ಬಿಟ್ಟುಹೋಗಲು ಜನರನ್ನು ದೂಡುವನು; ‘ವೈರಿಗಳನ್ನು ನಾಶಮಾಡಿರಿ’ ಎಂದು ಹೇಳುವನು.
ద్వితీయోపదేశకాండమ 33 : 28 (ERVTE)
ಇಸ್ರೇಲ್ ಸುರಕ್ಷಿತವಾಗಿ ಜೀವಿಸುವುದು. ಯಾಕೋಬನ ಬಾವಿ ಅವರ ವಶದಲ್ಲಿದೆ. ಧಾನ್ಯದ ಮತ್ತು ದ್ರಾಕ್ಷಾರಸದ ದೇಶವು ಅವರಿಗೆ ದೊರಕುತ್ತದೆ. ಆ ದೇಶಕ್ಕೆ ಅಧಿಕವಾಗಿ ಮಳೆ ಸುರಿಯುವುದು.
ద్వితీయోపదేశకాండమ 33 : 29 (ERVTE)
ಇಸ್ರೇಲೇ, ನೀವು ಆಶೀರ್ವದಿಸಲ್ಪಟ್ಟವರು. ನಿಮ್ಮ ದೇಶದ ಹಾಗೆ ಯಾವ ದೇಶವೂ ಇರದು. ಯೆಹೋವನು ನಿಮ್ಮನ್ನು ರಕ್ಷಿಸಿದನು. ಆತನು ನಿಮ್ಮನ್ನು ಕಾಪಾಡುವ ಬಲವಾದ ಗುರಾಣಿ. ಆತನು ನಿಮಗೆ ಶಕ್ತಿಯುತವಾದ ಖಡ್ಗ. ವೈರಿಗಳು ನಿಮಗೆ ಭಯಪಡುವರು. ನೀವು ಅವರ ಪವಿತ್ರ ಸ್ಥಳವನ್ನು ತುಳಿದುಬಿಡುವಿರಿ!”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29