యెహెజ్కేలు 17 : 1 (ERVTE)
{#1ಹದ್ದುಗಳು ಮತ್ತು ದಾಕ್ಷಾಲತೆಗಳು } ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ,
యెహెజ్కేలు 17 : 2 (ERVTE)
“ನರಪುತ್ರನೇ, ಈ ಕಥೆಯನ್ನು ಇಸ್ರೇಲ್ ಜನಾಂಗಕ್ಕೆ ಹೇಳು. ಇದರ ಅರ್ಥವೇನೆಂದು ಅವರನ್ನು ಕೇಳು.
యెహెజ్కేలు 17 : 3 (ERVTE)
ಅವರಿಗೆ ಹೀಗೆ ಹೇಳು, ದೇವರಾದ ಯೆಹೋವನು ಹೀಗೆನ್ನುತ್ತಾನೆ: “ ‘ಅಗಲವಾದ ರೆಕ್ಕೆಗಳುಳ್ಳ ದೊಡ್ಡ ಹದ್ದು (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರ್) ಲೆಬನೋನಿಗೆ ಬಂದಿತು. ಅದರ ರೆಕ್ಕೆಗಳು ಅನೇಕ ಚುಕ್ಕೆಗಳನ್ನು ಹೊಂದಿತ್ತು.
యెహెజ్కేలు 17 : 4 (ERVTE)
ಆ ಹದ್ದು ದೇವದಾರು ಮರದ (ಯೆಹೂದದ ರಾಜನಾದ ಯೆಹೋಯಾಖೀನ್) ಮೇಲ್ಭಾಗವನ್ನು ಮುರಿದುಬಿಟ್ಟಿತು. ಅದನ್ನು ವ್ಯಾಪಾರಿಗಳ ದೇಶಕ್ಕೆ ತಂದುಹಾಕಿತು.
యెహెజ్కేలు 17 : 5 (ERVTE)
ನಂತರ ಆ ಹದ್ದು ದೇಶದ ಬೀಜಗಳಲ್ಲಿ ಒಂದನ್ನು (ಹಿಜ್ಕೀಯ) ತೆಗೆದುಕೊಂಡು ಅದನ್ನು ಒಳ್ಳೆಯ ಮಣ್ಣಿನಲ್ಲಿ ಬಿತ್ತಿತು; ಸಮೃದ್ಧಿಕರವಾದ ನೀರಿನ ಸಮೀಪದಲ್ಲಿ ಬೆಳೆಯುವ ನೀರವಂಜಿಯಂತೆ ಅದನ್ನು ಬೆಳೆಯಿಸಿತು.
యెహెజ్కేలు 17 : 6 (ERVTE)
ಆ ಬೀಜವು ಚಿಗುರಿ, ಚಿಕ್ಕ ಜಾತಿಯ ದ್ರಾಕ್ಷಾಲತೆಯಂತೆ ನೆಲದ ಮೇಲೆ ಹಬ್ಬಿಕೊಂಡು, ತನ್ನ ಕೊಂಬೆಗಳನ್ನು ಗರುಡದ ಕಡೆಗೆ ಚಾಚಿಕೊಂಡು ತನ್ನ ಬೇರುಗಳನ್ನು ಬಿಟ್ಟಿತು: ಅಂತೆಯೇ ಅದು ಲತೆಯಾಗಿ ಕೊಂಬೆಗಳನ್ನು ಬೆಳೆಸಿ, ಎಲೆಗಳನ್ನು ಹೊರಡಿಸಿತು.
యెహెజ్కేలు 17 : 7 (ERVTE)
ಆಗ ಅಗಲ ರೆಕ್ಕೆಗಳಿದ್ದ ಇನ್ನೊಂದು ಹದ್ದು ದ್ರಾಕ್ಷಾಲತೆಯನ್ನು ನೋಡಿತು. ಈ ಹದ್ದಿಗೆ ತುಂಬಾ ಪುಕ್ಕಗಳಿದ್ದವು. ದ್ರಾಕ್ಷಾಲತೆಯು ತನ್ನ ಬೇರುಗಳನ್ನು ಹದ್ದಿನ ಕಡೆಗೆ ತಿರುಗಿಸಿತ್ತು. ಹದ್ದಿಗೆ ನೀರು ಹಾಯಿಸಲು ಸಾಧ್ಯವಾಗುವಂತೆ ಅದು ತನ್ನ ರೆಂಬೆಗಳನ್ನು ಹದ್ದಿನ ಕಡೆಗೆ ಚಾಚಿಕೊಂಡಿತ್ತು. ಅದು ತಾನು ನೆಡಲ್ಪಟ್ಟಿದ್ದ ಸ್ಥಳದಿಂದ ಬೇರೆ ಕಡೆಗೆ ತಿರುಗಿಕೊಂಡಿತು.
యెహెజ్కేలు 17 : 8 (ERVTE)
ಆ ದ್ರಾಕ್ಷಾಲತೆಯು ಸಮೃದ್ಧಿಕರವಾಗಿ ನೀರಿದ್ದ ಒಳ್ಳೆಯ ಭೂಮಿಯಲ್ಲಿ ನೆಡಲ್ಪಟ್ಟಿತ್ತು. ಕೊಂಬೆಗಳನ್ನು ಬೆಳೆಸಿ, ಹಣ್ಣುಗಳನ್ನು ಫಲಿಸಿ ಅಮೋಬವಾದ ದ್ರಾಕ್ಷಾಲತೆಯಾಗಬೇಕೆಂಬುದು ಅದರ ಬಯಕೆಯಾಗಿತ್ತು.’ ”
యెహెజ్కేలు 17 : 9 (ERVTE)
ನೀನು ಹೀಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ದ್ರಾಕ್ಷಾಲತೆಯು ಬಂದುಕಿ ಬೆಳೆಯುವುದೋ? ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಬೇರುಗಳನ್ನು ಎಳೆದುಹಾಕಿ, ಅದರ ದ್ರಾಕ್ಷಿಹಣ್ಣುಗಳನ್ನು ಕಿತ್ತುಹಾಕುವುದು. ಆಗ ಚಿಗುರುಗಳು ಬಾಡಿ ಒಣಗಿಹೋಗುವವು. ಆ ಸಸಿಯು ಬಲಹೀನವಾಗುವುದು. ಆಗ ಅದನ್ನು ಬೇರುಸಹಿತ ಕಿತ್ತುಹಾಕಲು ಮಹಾ ಬಲವಾಗಲಿ ಅಥವಾ ದೊಡ್ಡಸೈನ್ಯವಾಗಲಿ ಅಗತ್ಯವಿರುವದಿಲ್ಲ.
యెహెజ్కేలు 17 : 10 (ERVTE)
ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಬೆಳೆಯುವುದೋ? ಇಲ್ಲ! ಪೂರ್ವದ ಬಿಸಿಗಾಳಿಯು ಬೀಸುವದು, ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಬಾಡಿಹೋಗಿ ಸಾಯುವುದು.”
యెహెజ్కేలు 17 : 11 (ERVTE)
{#1ರಾಜ ಚಿದ್ಕೀಯನನ್ನು ದಂಡಿಸಿದ್ದು } ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ,
యెహెజ్కేలు 17 : 12 (ERVTE)
“ದಂಗೆಕೋರರಿಗೆ ಇದನ್ನು ಹೇಳು: ಈ ಸಂಗತಿಗಳ ಅರ್ಥವು ನಿಮಗೆ ಗೊತ್ತಿಲ್ಲವೇ? ಅವರಿಗೆ ಹೇಳು: ಮೊದಲಿನ ಗರುಡ ಪಕ್ಷಿ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು. ಅವನು ಜೆರುಸಲೇಮಿಗೆ ಬಂದು ಅದರ ರಾಜನನ್ನೂ ಅದರ ಹಿರಿಯರನ್ನೂ ಬಂಧಿಸಿ, ಅವರನ್ನು ತನ್ನ ರಾಜ್ಯವಾದ ಬಾಬಿಲೋನಿಗೆ ಕೊಂಡೊಯ್ದನು.
యెహెజ్కేలు 17 : 13 (ERVTE)
ಯೆಹೂದದ ರಾಜನನ್ನಾಗಿ ಮಾಡುವುದಾಗಿ ನೆಬೂಕದ್ನೆಚ್ಚರನು ರಾಜನ ಕುಟುಂಬದವರಲ್ಲೊಬ್ಬನೊಡನೆ ಒಪ್ಪಂದಮಾಡಿಕೊಂಡು ತನಗೆ (ನೆಬೂಕದ್ನೆಚ್ಚರನಿಗೆ) ಆಧಿನವಾಗಿರುವದಾಗಿ ಅವನಿಂದ (ರಾಜನ ಕುಟುಂಬದವನಿಂದ) ಪ್ರಮಾಣ ಮಾಡಿಸಿಕೊಂಡನು. ಅವನು ಯೆಹೂದದ ಬಲಿಷ್ಠರೆಲ್ಲರನ್ನು ಸಹ ಈ ಒಪ್ಪಂದದಲ್ಲಿ ಸೇರಿಸಿದನು.
యెహెజ్కేలు 17 : 14 (ERVTE)
ಯೆಹೂದ ರಾಜ್ಯವು ದೀನತೆಯಿಂದಿದ್ದು ದಂಗೆ ಏಳದೆ ತನ್ನ ಒಪ್ಪಂದಕ್ಕೆ ಶಾಶ್ವತವಾಗಿ ಬದ್ಧವಾಗಿರಬೇಕೆಂಬುದು ನೆಬೂಕದ್ನೆಚ್ಚರನ ಬಯಕೆಯಾಗಿತ್ತು.
యెహెజ్కేలు 17 : 15 (ERVTE)
ಆದರೆ ಈ ಹೊಸ ರಾಜನು ನೆಬೂಕದ್ನೆಚ್ಚರನಿಗೆ ತಿರುಗಿ ಬೀಳಲು ಪ್ರಯತ್ನಿಸಿದನು. ಅವನು ಈಜಿಪ್ಟಿಗೆ ದೂತರನ್ನು ಕಳುಹಿಸಿ ಸಹಾಯವನ್ನು ಕೇಳಿದನು. ಬಹಳ ಕುದುರೆಗಳನ್ನೂ ಸೈನಿಕರನ್ನೂ ಕೇಳಿದನು. ಯೆಹೂದದ ಹೊಸ ರಾಜನು ತನ್ನ ಪ್ರಯತ್ನದಲ್ಲಿ ಜಯಶಾಲಿಯಾಗುವನು ಎಂದು ಭಾವಿಸುವಿರೋ? ಈ ಹೊಸ ರಾಜನು ಒಪ್ಪಂದವನ್ನು ಮುರಿದು ಶಿಕ್ಷೆಯಿಂದ ಪಾರಾಗುವನೆಂದು ನೀವು ಭಾವಿಸುವಿರೋ?”
యెహెజ్కేలు 17 : 16 (ERVTE)
ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನ್ನ ಜೀವದಾಣೆ, ಈ ಹೊಸ ರಾಜನು ಬಾಬಿಲೋನಿನಲ್ಲಿ ಸಾಯುವನು. ಈ ಮನುಷ್ಯನನ್ನು ಯೆಹೂದದ ರಾಜನನ್ನಾಗಿ ಮಾಡಿದ ರಾಜ ನೆಬೂಕದ್ನೆಚ್ಚರನ ನಾಡಿನಲ್ಲಿ ಇವನು ಸಾಯುವನು. ಈ ಮನುಷ್ಯನು ಆ ರಾಜನೊಡನೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿ ಆ ರಾಜನೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದು ಹಾಕಿದನು.
యెహెజ్కేలు 17 : 17 (ERVTE)
ಈಜಿಪ್ಟಿನ ರಾಜನು ಯೆಹೂದದ ರಾಜನನ್ನು ರಕ್ಷಿಸಲು ಸಾಧ್ಯವಿಲ್ಲ. ಅವನು ಬಹಳ ಸೈನಿಕರನ್ನು ಕಳುಹಿಸಬಹುದು, ಆದರೆ ಈಜಿಪ್ಟಿನ ಶಕ್ತಿಯು ಯೆಹೂದವನ್ನು ರಕ್ಷಿಸಲಾರದು. ನೆಬೂಕದ್ನೆಚ್ಚರನ ಸೈನ್ಯವು ಕೆಸರಿನ ಇಳಿಜಾರುಗಳನ್ನೂ ತಡೆಗಟ್ಟುಗಳನ್ನೂ ಕಟ್ಟಿ ಪಟ್ಟಣವನ್ನು ವಶಪಡಿಸಿಕೊಳ್ಳುವುದು. ಎಷ್ಟೋ ಮಂದಿ ಸಾಯುವರು.
యెహెజ్కేలు 17 : 18 (ERVTE)
ಆದರೆ ಯೆಹೂದದ ರಾಜನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಯಾಕೆಂದರೆ ಅವನು ತನ್ನ ಪ್ರಮಾಣವನ್ನು ತಿರಸ್ಕರಿಸಿದನು ಮತ್ತು ತಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಹಾಕಿದನು.”
యెహెజ్కేలు 17 : 19 (ERVTE)
ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ಯೆಹೂದದ ರಾಜನನ್ನು ಶಿಕ್ಷಿಸುವೆನು. ಯಾಕೆಂದರೆ ಅವನು ನನ್ನ ಮುಂದೆ ಮಾಡಿದ ಪ್ರಮಾಣಕ್ಕೆ ಗಮನಕೊಡಲಿಲ್ಲ ಮತ್ತು ನಾನು ಸಾಕ್ಷಿಯಾಗಿದ್ದ ಒಪ್ಪಂದವನ್ನು ಅವನು ಮುರಿದುಹಾಕಿದನು.
యెహెజ్కేలు 17 : 20 (ERVTE)
ನಾನು ಅವನಿಗೆ ಉರುಲನ್ನೊಡ್ಡುವೆನು; ಅವನು ಅದರೊಳಗೆ ಸಿಕ್ಕಿಕೊಳ್ಳುವನು. ನಾನು ಅವನನ್ನು ಬಾಬಿಲೋನಿಗೆ ತಂದು ಅಲ್ಲಿ ಶಿಕ್ಷಿಸುವೆನು. ಯಾಕೆಂದರೆ ಅವನು ನನಗೆ ಅಪನಂಬಿಗಸ್ತನಾದನು.
యెహెజ్కేలు 17 : 21 (ERVTE)
ಅವನ ಸೈನ್ಯವನ್ನು ನಾಶಮಾಡುವೆನು. ಅವನಲ್ಲಿದ್ದ ಶೂರರನ್ನು ನಾಶಮಾಡುವೆನು. ಅಳಿದುಳಿದವರನ್ನು ಗಾಳಿ ಬೀಸುವ ಪ್ರತಿಯೊಂದು ದಿಕ್ಕಿನಲ್ಲಿಯೂ ಚದರಿಸಿಬಿಡುವೆನು. ಆಗ ಯೆಹೋವನಾದ ನಾನು ನಿಮಗೆ ಇದನ್ನು ಹೇಳಿದೆನೆಂದು ತಿಳಿಯುವುದು.”
యెహెజ్కేలు 17 : 22 (ERVTE)
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: “ನಾನು ಎತ್ತರವಾದ ದೇವದಾರು ಮರದಿಂದ ಒಂದು ಕೊಂಬೆಯನ್ನು ಕೀಳುವೆನು. ಆ ಮರದ ಮೇಲಿರುವ ಒಂದು ಸಣ್ಣ ಕೊಂಬೆಯನ್ನು ಕೀಳುವೆನು. ಅದನ್ನು ನಾನು ಎತ್ತರವಾದ ಪರ್ವತದಲ್ಲಿ ನೆಡುವೆನು.
యెహెజ్కేలు 17 : 23 (ERVTE)
ಸಬತಃ ನಾನೇ ಅದನ್ನು ಇಸ್ರೇಲಿನ ಉನ್ನತವಾದ ಪರ್ವತದ ಮೇಲೆ ನೆಡುವೆನು. ಅದು ಕೊಂಬೆಗಳನ್ನು ಬೆಳೆಸಿ, ಫಲವನ್ನು ಫಲಿಸಿ, ಅಮೋಬವಾದ ದೇವದಾರು ಮರವಾಗುವುದು; ಅದರ ಕೊಂಬೆಗಳ ಮೇಲೆ ಅನೇಕ ಬಗೆಯ ಪಕ್ಷಿಗಳು ವಾಸಿಸುವವು. ಅದರ ಕೊಂಬೆಯ ನೆರಳಿನಲ್ಲಿ ವಿವಿಧ ಬಗೆಯ ಪಕ್ಷಿಗಳು ವಾಸಿಸುವವು.
యెహెజ్కేలు 17 : 24 (ERVTE)
“ಆಗ ಬೇರೆ ಮರಗಳಿಗೆ, ನಾನು ದೊಡ್ಡ ಮರಗಳನ್ನು ನೆಲಕ್ಕೆ ಬೀಳಿಸುವೆನೆಂತಲೂ, ಚಿಕ್ಕ ಮರಗಳನ್ನು ಉದ್ದವಾಗಿ ಬೆಳೆಯುವಂತೆ ಮಾಡುತ್ತೇನೆಂತಲೂ ಗೊತ್ತಾಗುವದು. ಹಸಿರು ಮರಗಳು ಒಣಗಿಹೋಗುವಂತೆಯೂ ಒಣಗಿಹೋದ ಮರಗಳು ಹಸಿರಾಗಿ ಬೆಳೆಯುವಂತೆಯೂ ನಾನು ಮಾಡುತ್ತೇನೆ. ನಾನೇ ಯೆಹೋವನು. ಇದನ್ನು ನಾನೇ ಹೇಳಿದ್ದೇನೆ; ಮತ್ತು ನಾನೇ ಇದನ್ನು ನೆರವೇರಿಸುವೆನು.”

1 2 3 4 5 6 7 8 9 10 11 12 13 14 15 16 17 18 19 20 21 22 23 24