ಆ ಸ್ವರವು, “ನರಪುತ್ರನೇ, ಎದ್ದೇಳು ನಾನು ನಿನ್ನೊಂದಿಗೆ ಮಾತನಾಡುತ್ತೇನೆ” ಎಂದಿತು. ಆತನು ನನ್ನೊಂದಿಗೆ ಮಾತನಾಡುತ್ತಿರಲು, ಆತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಆತನು ನನ್ನೊಂದಿಗೆ ಮಾತಾಡುವುದು ನನಗೆ ಕೇಳಿಸಿತು.
యెహెజ్కేలు 2 : 3 (ERVTE)
ಆತನು ನನ್ನೊಂದಿಗೆ, “ನರಪುತ್ರನೇ, ಇಸ್ರೇಲ್ ಜನಾಂಗದವರೊಡನೆ ಮಾತನಾಡಲು ನಿನ್ನನ್ನು ಕಳುಹಿಸುತ್ತಿದ್ದೇನೆ. ಅವರು ಎಷ್ಟೋಬಾರಿ ನನಗೆ ವಿರುದ್ಧವಾಗಿ ಎದ್ದರು. ಅವರ ಪೂರ್ವಿಕರೂ ನನಗೆ ವಿರುದ್ಧವಾಗಿ ಎದ್ದಿದ್ದರು. ನನಗೆ ವಿರುದ್ಧವಾಗಿ ಎಷ್ಟೋವೇಳೆ ಪಾಪ ಮಾಡಿದರು. ಈಗಲೂ ಅವರು ಪಾಪ ಮಾಡುತ್ತಲೇ ಇದ್ದಾರೆ.
యెహెజ్కేలు 2 : 4 (ERVTE)
ಆ ಜನರೊಂದಿಗೆ ಮಾತನಾಡಲು ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ. ಅವರು ಬಹಳವಾಗಿ ಪ್ರತಿಭಟಿಸುವವರೂ ಮೊಂಡರೂ ಆಗಿದ್ದಾರೆ. ಆದರೆ ನೀನು ಅವರೊಂದಿಗೆ ಮಾತಾಡಿ, ‘ನಮ್ಮ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ’ ಎಂದು ಹೇಳಬೇಕು.
యెహెజ్కేలు 2 : 5 (ERVTE)
ಜನರು ನಿನ್ನ ಮಾತನ್ನು ಕೇಳಬಹುದು ಅಥವಾ ಕೇಳದಿರಬಹುದು: ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ನನ್ನ ಮುಂದೆ ಪಾಪಮಾಡುವುದನ್ನು ನಿಲ್ಲಿಸಲಿಲ್ಲ. ಅವರು ಯಾವಾಗಲೂ ನನ್ನ ವಿರುದ್ಧ ದಂಗೆ ಏಳುವರು. ಆದ್ದರಿಂದ ನಾನು ತಿಳಿಸಿದ್ದನ್ನೆ ನೀನು ಹೇಳಬೇಕು. ಆಗ ಅವರು ತಮ್ಮ ಮಧ್ಯೆ ಒಬ್ಬ ಪ್ರವಾದಿ ಇದ್ದಾನೆಂದು ಗ್ರಹಿಸಿಕೊಳ್ಳುವರು.
యెహెజ్కేలు 2 : 6 (ERVTE)
“ನರಪುತ್ರನೇ, ಆ ಜನರು ನಿನ್ನನ್ನು ವಿರೋಧಿಸಿದರೂ ನೀನು ಅವರಿಗೆ ಭಯಪಡಬೇಡ ಮತ್ತು ಅವರು ಹೇಳುವ ಮಾತುಗಳಿಗೆ ನೀನು ಹೆದರಬೇಡ. ಮುಳ್ಳುಗಳೂ ಮುಳ್ಳುಪೊದೆಗಳೂ ನಿನಗೆ ಒತ್ತುವಂತೆಯೂ ನೀನು ಚೇಳುಗಳ ಮೇಲೆ ಕುಳಿತುಕೊಂಡಿರುವಂತೆಯೂ ಅದು ಇರುವದು. ಆದರೆ ಅವರಾಡುವ ಮಾತುಗಳಿಗೆ ಭಯಪಡಬೇಡ. ಅವರು ದಂಗೆಕೋರರು.
యెహెజ్కేలు 2 : 7 (ERVTE)
ಅವರು ಕೇಳಲಿ, ಕೇಳದಿರಲಿ, ನಾನು ಹೇಳುವದನ್ನು ಅವರಿಗೆ ತಿಳಿಸು; ಯಾಕೆಂದರೆ ಅವರು ದಂಗೆಕೋರರು.
యెహెజ్కేలు 2 : 8 (ERVTE)
యెహెజ్కేలు 2 : 9 (ERVTE)
“ನರಪುತ್ರನೇ, ನಾನು ಹೇಳುವದನ್ನು ನೀನು ಸರಿಯಾಗಿ ಕೇಳಬೇಕು. ದಂಗೆಕೋರರಾದ ಆ ಜನರಂತೆ ನೀನೂ ನನಗೆ ವಿರುದ್ಧವಾಗಿರಬೇಡ. ನಾನು ನಿನಗೆ ಕೊಡಲಿರುವುದನ್ನು ನಿನ್ನ ಬಾಯಿತೆರೆದು ತಿನ್ನು.” ಆಗ ನಾನು ಒಂದು ಕೈ ನನ್ನ ಬಳಿಗೆ ಬರುವದನ್ನು ಕಂಡೆನು. ಆ ಕೈ ಒಂದು ಸುರುಳಿಯನ್ನು ಹಿಡುಕೊಂಡಿತ್ತು.
యెహెజ్కేలు 2 : 10 (ERVTE)
ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದಾಗ ಅದರ ಮುಂಭಾಗದಲ್ಲಿಯೂ ಹಿಂಭಾಗದಲ್ಲಿಯೂ ಮಾತುಗಳು ಬರೆಯಲ್ಪಟ್ಟಿದ್ದವು. ನಾನಾ ತರದ ಪ್ರಲಾಪಗಳು, ನರಳಾಟಗಳು ಮತ್ತು ಗೋಳಾಟಗಳು ಬರೆಯಲ್ಪಟ್ಟಿದ್ದವು.