యెహెజ్కేలు 41 : 1 (ERVTE)
{#1ಆಲಯದ ಪವಿತ್ರಸ್ಥಳ } ಆಮೇಲೆ ಅವನು ನನ್ನನ್ನು ಪವಿತ್ರಸ್ಥಳಕ್ಕೆ ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿರುವ ಗೋಡೆಯನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಆರು ಮೊಳ ದಪ್ಪವಾಗಿದ್ದವು.
యెహెజ్కేలు 41 : 2 (ERVTE)
ಅದರ ಬಾಗಿಲು ಹತ್ತು ಮೊಳ ಅಗಲವಾಗಿದ್ದು ಅದರ ಎರಡು ಬದಿಯೂ ಐದೈದು ಮೊಳವಿದ್ದವು. ಅವನು ಆ ಕೋಣೆಯ ಅಳತೆ ತೆಗೆದನು. ಅದು ನಲವತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಿತ್ತು.
యెహెజ్కేలు 41 : 3 (ERVTE)
{#1ಆಲಯದ ಮಹಾ ಪವಿತ್ರಸ್ಥಳ } ಆಮೇಲೆ ಅವನು ಕೊನೆಯ ಕೋಣೆಗೆ ಪ್ರವೇಶಿಸಿದನು. ಅದರ ಬಾಗಿಲಿನ ಇಕ್ಕೆಡೆಗಳಲ್ಲಿರುವ ಗೋಡೆಗಳನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಎರಡು ಮೊಳ ದಪ್ಪವಾಗಿದ್ದು ಏಳು ಮೊಳ ಅಗಲವಾಗಿದ್ದವು. ದ್ವಾರವು ಆರು ಮೊಳ ಅಗಲವಾಗಿತ್ತು.
యెహెజ్కేలు 41 : 4 (ERVTE)
ಆಮೇಲೆ ಆ ಪುರುಷನು ಕೋಣೆಯ ಉದ್ದವನ್ನು ಅಳತೆ ಮಾಡಿದನು. ಅದು ಇಪ್ಪತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಾಗಿತ್ತು. “ಇದು ಮಹಾ ಪವಿತ್ರಸ್ಥಳ” ಎಂದು ಅವನು ನನಗೆ ತಿಳಿಸಿದನು.
యెహెజ్కేలు 41 : 5 (ERVTE)
{#1ಆಲಯದ ಸುತ್ತಲಿದ್ದ ಇತರ ಕೋಣೆಗಳು } ಆಮೇಲೆ ಆ ಮನುಷ್ಯನು ಆಲಯದ ಗೋಡೆಯನ್ನು ಅಳತೆ ಮಾಡಿದನು. ಅದು ಆರು ಮೊಳ ದಪ್ಪವಾಗಿತ್ತು. ಆಲಯದ ಸುತ್ತಲೂ ಕೋಣೆಗಳಿದ್ದವು. ಅವು ನಾಲ್ಕು ಮೊಳ ಅಗಲವಾಗಿದ್ದವು.
యెహెజ్కేలు 41 : 6 (ERVTE)
ಆ ಕೋಣೆಗಳು ಒಂದರ ಮೇಲೊಂದು ಮೂರು ಅಂತಸ್ತಿನಲ್ಲಿದ್ದವು. ಪ್ರತಿ ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು. ಆಲಯದ ಗೋಡೆಯು ಮೆಟ್ಟಿಲು ಮೆಟ್ಟಿಲುಗಳಾಗಿ ಕಟ್ಟಲ್ಪಟ್ಟಿತ್ತು. ಪಕ್ಕದ ಕೋಣೆಗಳು ಈ ಮೆಟ್ಟಿಲುಗಳ ಮೇಲೆ ಆಧಾರಗೊಂಡಿದ್ದವು. ಅವು ಆಲಯದ ಗೋಡೆಯನ್ನು ಆಧಾರ ಮಾಡಿಕೊಂಡಿರಲಿಲ್ಲ.
యెహెజ్కేలు 41 : 7 (ERVTE)
ಪ್ರತಿ ಅಂತಸ್ತು ಅದರ ಕೆಳಗಿನ ಅಂತಸ್ತಿಗಿಂತ ಅಗಲವಾಗಿದ್ದವು. ಆಲಯದ ಸುತ್ತ ಇದ್ದ ಕೋಣೆಗಳ ಗೋಡೆಗಳು ಮೇಲಕ್ಕೆ ಹೋದಂತೆ ಕಿರಿದಾಗಿದ್ದವು. ಹೀಗೆ ಕೊನೆ ಅಂತಸ್ತಿನ ಕೋಣೆಗಳು ಕೆಳಗಣ ಕೋಣೆಗಳಿಗಿಂತ ಹೆಚ್ಚು ಅಗಲವಾಗಿದ್ದವು. ಮಧ್ಯ ಅಂತಸ್ತಿನ ಮೂಲಕ ಒಂದು ನಿಚ್ಚಣಿಕೆಯು ಕೆಳಗಿನ ಅಂತಸ್ತಿನಿಂದ ಕೊನೆಯ ಅಂತಸ್ತಿನವರೆಗೆ ಹೋಗಿತ್ತು.
యెహెజ్కేలు 41 : 8 (ERVTE)
ಆಲಯದ ಸುತ್ತಲೂ ಒಂದು ಜಗಲಿ ಇರುವದನ್ನು ನಾನು ಕಂಡೆನು. ಇದು ಪಕ್ಕದ ಕೋಣೆಗಳಿಗೆ ಅಸ್ತಿವಾರವಾಗಿತ್ತು. ಇದು ಒಂದು ಅಳತೆ ಕೋಲಿನಷ್ಟು ಎತ್ತರವಾಗಿತ್ತು.
యెహెజ్కేలు 41 : 9 (ERVTE)
ಆ ಕೋಣೆಗಳ ಹೊರಗಿನ ಗೋಡೆಯು ಐದು ಮೊಳ ದಪ್ಪವಾಗಿತ್ತು. ಆಲಯದ ಉದ್ದಕ್ಕೂ ಇದ್ದ ಆ ಕೋಣೆಗಳಿಗೂ
యెహెజ్కేలు 41 : 10 (ERVTE)
ಯಾಜಕರ ಕೋಣೆಗಳಿಗೂ ನಡುವೆ ಆಲಯದ ಸುತ್ತಲೂ ಇಪ್ಪತ್ತು ಮೊಳ ಅಂತರವಿತ್ತು.
యెహెజ్కేలు 41 : 11 (ERVTE)
ಆ ಕೋಣೆಗಳ ಬಾಗಿಲುಗಳು ಜಗಲಿಯ ಕಡೆಗೆ ಮುಖಮಾಡಿದ್ದವು. ಅವಕ್ಕೆ ಒಂದು ಬಾಗಿಲು ಉತ್ತರದ ಕಡೆಯಿಂದಲೂ ಇನ್ನೊಂದು ಬಾಗಿಲು ದಕ್ಷಿಣದ ಕಡೆಯಿಂದಲೂ ಇದ್ದವು. ಆ ಎತ್ತರದ ಜಗಲಿಯು ಸುತ್ತಲೂ ಐದು ಮೊಳ ಅಗಲವಿತ್ತು.
యెహెజ్కేలు 41 : 12 (ERVTE)
ಆಲಯದ ಪಶ್ಚಿಮ ಭಾಗದ ಕಿರಿದಾದ ಸ್ಥಳದಲ್ಲಿ ಒಂದು ಕಟ್ಟಡವಿತ್ತು. ಇದು ಎಪ್ಪತ್ತು ಮೊಳ ಅಗಲವಾಗಿದ್ದು ತೊಂಭತ್ತು ಮೊಳ ಉದ್ದವಾಗಿತ್ತು. ಅದರ ಸುತ್ತಲಿನ ಗೋಡೆಯು ಐದು ಮೊಳ ದಪ್ಪವಾಗಿತ್ತು.
యెహెజ్కేలు 41 : 13 (ERVTE)
ನಂತರ ಅವನು ಆಲಯದ ಅಳತೆ ತೆಗೆದನು. ಆಲಯವು ನೂರು ಮೊಳ ಉದ್ದವಾಗಿತ್ತು. ನಿಯಮಿತದ ಸ್ಥಳ, ಅದರ ಕಟ್ಟಡ ಮತ್ತು ಗೋಡೆಯ ಸಹಿತ ನೂರು ಮೊಳ ಉದ್ದವಾಗಿತ್ತು.
యెహెజ్కేలు 41 : 14 (ERVTE)
ಪೂರ್ವದಿಕ್ಕಿನಲ್ಲಿದ್ದ ನಿಯಮಿತದ ಸ್ಥಳವೂ ನೂರು ಮೊಳ ಉದ್ದವಿತ್ತು.
యెహెజ్కేలు 41 : 15 (ERVTE)
ಆಲಯದ ಹಿಂಭಾಗದಲ್ಲಿದ್ದ ನಿಯಮಿತದ ಸ್ಥಳದಲ್ಲಿ ಕಟ್ಟಿದ್ದ ಕಟ್ಟಡದ ಉದ್ದವನ್ನು ಅವನು ಲೆಕ್ಕ ಮಾಡಿದನು. ಅದು ಗೋಡೆಯಿಂದ ಗೋಡೆಗೆ ನೂರು ಮೊಳವಿತ್ತು. ಪವಿತ್ರಸ್ಥಳ, ಮಹಾ ಪವಿತ್ರಸ್ಥಳ ಮತ್ತು ಒಳಗಿನ ಪ್ರಾಕಾರಕ್ಕೆ ಮುಖಮಾಡಿದ್ದ ಕೈಸಾಲೆಯ
యెహెజ్కేలు 41 : 16 (ERVTE)
ಗೋಡೆಗಳಿಗೆ ಮರದ ಹಲಗೆಗಳು ಹೊದಿಸಲ್ಪಟ್ಟಿದ್ದವು. ಎಲ್ಲಾ ಕಿಟಕಿ ಬಾಗಿಲುಗಳಿಗೆ ಮರದ ಹೊದಿಕೆಯಿತ್ತು. ದ್ವಾರದ ಪಕ್ಕದಲ್ಲಿ ಆಲಯದ ಗೋಡೆಗೆ ನೆಲದಿಂದ ಹಿಡಿದು ಕಿಟಕಿಯ ತನಕ ಮರದ ಹಲಗೆಯ ಹೊದಿಕೆ ಇತ್ತು.
యెహెజ్కేలు 41 : 17 (ERVTE)
ಬಾಗಿಲಿನ ಮೇಲೆಯೂ ಒಳಗಿನ ಮತ್ತು ಹೊರಗಿನ ಕೋಣೆಗಳ ಗೋಡೆಗಳಲ್ಲಿ
యెహెజ్కేలు 41 : 18 (ERVTE)
ಕೆರೂಬಿದೂತರ ಮತ್ತು ಖರ್ಜೂರ ವೃಕ್ಷಗಳ ಚಿತ್ರ ಬಿಡಿಸಲ್ಪಟ್ಟಿತ್ತು. ಎರಡು ಕೆರೂಬಿದೂತರ ನಡುವೆ ಒಂದು ಖರ್ಜೂರ ವೃಕ್ಷವಿತ್ತು. ಪ್ರತಿ ಕೆರೂಬಿದೂತರಿಗೆ ಎರಡು ಮುಖಗಳಿದ್ದವು.
యెహెజ్కేలు 41 : 19 (ERVTE)
ಒಂದು ಮುಖ ಮನುಷ್ಯನ ಮುಖದಂತಿದ್ದು ಖರ್ಜೂರ ವೃಕ್ಷವನ್ನು ದಿಟ್ಟಿಸುತ್ತಿತ್ತು. ಇನ್ನೊಂದು ಮುಖವು ಸಿಂಹದ ಮುಖದಂತಿದ್ದು ಆಚೆ ಪಕ್ಕದ ಖರ್ಜೂರ ವೃಕ್ಷವನ್ನು ನೋಡುವಂತಿತ್ತು. ಆಲಯದ ಸುತ್ತಲೂ ಈ ರೀತಿಯ ಕೆತ್ತನೆ ಕೆಲಸವಿತ್ತು.
యెహెజ్కేలు 41 : 20 (ERVTE)
ಪವಿತ್ರಸ್ಥಳದ ಗೋಡೆಗಳಲ್ಲಿ ನೆಲದಿಂದ ಬಾಗಿಲವರೆಗೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಕೆತ್ತನೆ ಕೆಲಸವನ್ನು ಮಾಡಿದ್ದರು.
యెహెజ్కేలు 41 : 21 (ERVTE)
ಪವಿತ್ರಸ್ಥಳದ ಇಕ್ಕೆಡೆಗಳಲ್ಲಿದ್ದ ಗೋಡೆಗಳು ಚೌಕವಾಗಿದ್ದವು. ಮಹಾ ಪವಿತ್ರಸ್ಥಳದೆದುರು ಮರದಿಂದ ತಯಾರಿಸಿದ ವೇದಿಕೆಯಂತೆ ಕಾಣುತ್ತಿದ್ದ
యెహెజ్కేలు 41 : 22 (ERVTE)
ಒಂದು ವಸ್ತು ಇತ್ತು. ಅದು ಮೂರು ಮೊಳ ಎತ್ತರ, ಎರಡು ಮೊಳ ಉದ್ದವಿತ್ತು. ಅದರ ಮೂಲೆಗಳು, ಅದರ ಚೌಕಟ್ಟು ಮತ್ತು ಬದಿಗಳೆಲ್ಲಾ ಮರದಿಂದ ಮಾಡಿದ್ದವುಗಳಾಗಿದ್ದವು. “ಈ ಮೇಜು ಯೆಹೋವನ ಸನ್ನಿಧಾನದಲ್ಲಿದೆ” ಎಂದು ಆ ಮನುಷ್ಯನು ನನಗೆ ಹೇಳಿದನು.
యెహెజ్కేలు 41 : 23 (ERVTE)
ಪವಿತ್ರಸ್ಥಳ ಮತ್ತು ಮಹಾ ಪವಿತ್ರಸ್ಥಳಗಳಿಗೆ ಎರಡೆರಡು ಬಾಗಿಲುಗಳಿದ್ದವು.
యెహెజ్కేలు 41 : 24 (ERVTE)
ಒಂದೊಂದು ಬಾಗಿಲಿಗೆ ಎರಡೆರಡು ಚಿಕ್ಕ ಬಾಗಿಲುಗಳು ಅಂದರೆ ಎರಡೆರಡು ಮಡಚುವ ಬಾಗಿಲುಗಳಿದ್ದವು.
యెహెజ్కేలు 41 : 25 (ERVTE)
ಅವುಗಳ ಮೇಲೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಚಿತ್ರಗಳನ್ನು ಕೆತ್ತಲಾಗಿತ್ತು. ಗೋಡೆಗಳಲ್ಲಿ ಹೇಗೆ ಕೆತ್ತಲ್ಪಟ್ಟಿತ್ತೋ ಅದೇ ರೀತಿಯಲ್ಲಿ, ಕೈಸಾಲೆಯ ಮುಂದೆ ಒಂದು ಮರದಿಂದ ಮಾಡಿದ ಸೂರು ಇತ್ತು.
యెహెజ్కేలు 41 : 26 (ERVTE)
ಇದಕ್ಕೆ ತೆರೆಯಲಾಗದ ಕಿಟಕಿಗಳಿದ್ದವು. ಇದರ ಗೋಡೆಗಳಲ್ಲಿಯೂ ಗೋಡೆಯ ಮೇಲಿದ್ದ ಸೂರು ಮತ್ತು ಆಲಯದ ಸುತ್ತಲಿದ್ದ ಕೋಣೆಯ ಗೋಡೆಗಳಲ್ಲಿಯೂ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26