ఆదికాండము 11 : 1 (ERVTE)
{#1ಪ್ರಪಂಚದ ವಿಭಜನೆ } ಜಲಪ್ರಳಯದ ನಂತರ ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು.
ఆదికాండము 11 : 2 (ERVTE)
ಜನರು ಪೂರ್ವದಿಕ್ಕಿನಿಂದ ಪ್ರಯಾಣಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿದುಕೊಂಡರು.
ఆదికాండము 11 : 3 (ERVTE)
ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, “ಬನ್ನಿ, ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ” ಎಂದು ನಿರ್ಧರಿಸಿದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
ఆదికాండము 11 : 4 (ERVTE)
ఆదికాండము 11 : 5 (ERVTE)
ಬಳಿಕ ಅವರು, “ನಾವು ನಮಗಾಗಿ ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ಧರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ” ಎಂದು ಮಾತಾಡಿಕೊಂಡರು. ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟುತ್ತಿರುವುದನ್ನು ಕಂಡು
ఆదికాండము 11 : 6 (ERVTE)
ಯೆಹೋವನು, “ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾದರೂ ಮಾಡಲು ಶಕ್ತರಾಗುವರು.
ఆదికాండము 11 : 7 (ERVTE)
ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿದನು.
ఆదికాండము 11 : 8 (ERVTE)
ಅಂತೆಯೇ ಯೆಹೋವನು ಜನರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ.
ఆదికాండము 11 : 9 (ERVTE)
ಯೆಹೋವನು ಇಡೀ ಲೋಕದ ಭಾಷೆಯನ್ನು ತಾರುಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾಯಿತು. ಹೀಗೆ ಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯಲ್ಲೆಲ್ಲಾ ಚದರಿಸಿಬಿಟ್ಟನು.
ఆదికాండము 11 : 10 (ERVTE)
{#1ಶೇಮನ ಕುಟುಂಬ ಚರಿತ್ರೆ } ಇದು ಶೇಮನ ಕುಟುಂಬ ಚರಿತ್ರೆ. ಜಲಪ್ರಳಯದ ಎರಡು ವರ್ಷಗಳ ನಂತರ ಶೇಮನು 100 ವರ್ಷದವನಾಗಿದ್ದಾಗ ಅರ್ಪಕ್ಷದ್ ಎಂಬ ಮಗನನ್ನು ಪಡೆದನು.
ఆదికాండము 11 : 11 (ERVTE)
ಆ ಬಳಿಕ ಶೇಮನು 500 ವರ್ಷ ಬದುಕಿದ್ದನು. ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 12 (ERVTE)
ಅರ್ಪಕ್ಷದನು 35 ವರ್ಷದವನಾಗಿದ್ದಾಗ ಶೆಲಹ ಎಂಬ ಮಗನನ್ನು ಪಡೆದನು.
ఆదికాండము 11 : 13 (ERVTE)
ಶೆಲಹನು ಜನಿಸಿದ ಮೇಲೆ ಅರ್ಪಕ್ಷದನು 403 ವರ್ಷ ಬದುಕಿದ್ದನು. ಆ ಅವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 14 (ERVTE)
ಶೆಲಹನು 30 ವರ್ಷದವನಾಗಿದ್ದಾಗ ಎಬರ ಎಂಬ ಮಗನನ್ನು ಪಡೆದನು.
ఆదికాండము 11 : 15 (ERVTE)
ಎಬರನು ಹುಟ್ಟಿದ ಮೇಲೆ ಶೆಲಹನು 403 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 16 (ERVTE)
ಎಬರನು 34 ವರ್ಷದವನಾಗಿದ್ದಾಗ ಪೆಲೆಗ ಎಂಬ ಮಗನನ್ನು ಪಡೆದನು.
ఆదికాండము 11 : 17 (ERVTE)
ಪೆಲೆಗನು ಹುಟ್ಟಿದ ಮೇಲೆ ಎಬರನು 430 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 18 (ERVTE)
ಪೆಲೆಗನು 30 ವರ್ಷದವನಾಗಿದ್ದಾಗ ರೆಗೂವ ಎಂಬ ಮಗನನ್ನು ಪಡೆದನು.
ఆదికాండము 11 : 19 (ERVTE)
ರೆಗೂವನು ಹುಟ್ಟಿದ ಮೇಲೆ ಪೆಲೆಗನು 209 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 20 (ERVTE)
ರೆಗೂವನು 32 ವರ್ಷದವನಾಗಿದ್ದಾಗ ಸೆರೂಗ ಎಂಬ ಮಗನನ್ನು ಪಡೆದನು.
ఆదికాండము 11 : 21 (ERVTE)
ಸೆರೂಗನು ಹುಟ್ಟಿದ ಮೇಲೆ ರೆಗೂವನು 207 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 22 (ERVTE)
ಸೆರೂಗನು 30 ವರ್ಷದವನಾಗಿದ್ದಾಗ ನಾಹೋರ ಎಂಬ ಮಗನನ್ನು ಪಡೆದನು.
ఆదికాండము 11 : 23 (ERVTE)
ನಾಹೋರನು ಹುಟ್ಟಿದ ಮೇಲೆ, ಸೆರೂಗನು 200 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 24 (ERVTE)
ನಾಹೋರನು 29 ವರ್ಷದವನಾಗಿದ್ದಾಗ ತೆರಹ ಎಂಬ ಮಗನನ್ನು ಪಡೆದನು.
ఆదికాండము 11 : 25 (ERVTE)
ತೆರಹನು ಹುಟ್ಟಿದ ಮೇಲೆ ನಾಹೋರನು 119 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
ఆదికాండము 11 : 26 (ERVTE)
ఆదికాండము 11 : 27 (ERVTE)
ತೆರಹನು 70 ವರ್ಷದವನಾಗಿದ್ದಾಗ ಅಬ್ರಾಮ, ನಾಹೋರ, ಹಾರಾನ ಎಂಬ ಗಂಡುಮಕ್ಕಳನ್ನು ಪಡೆದನು. {#1ತೆರಹನ ಕುಟುಂಬ ಚರಿತ್ರೆ } ಇದು ತೆರಹನ ಕುಟುಂಬ ಚರಿತ್ರೆ. ತೆರಹನು ಅಬ್ರಾಮ, ನಾಹೋರ ಮತ್ತು ಹಾರಾನ ಎಂಬವರ ತಂದೆ. ಹಾರಾನನು ಲೋಟನ ತಂದೆ.
ఆదికాండము 11 : 28 (ERVTE)
ಹಾರಾನನು ಬಾಬಿಲೋನಿನ ತನ್ನ ಸ್ವಂತ ಸ್ಥಳವಾದ ಊರ್ ಎಂಬಲ್ಲಿ ಸತ್ತುಹೋದನು. ಹಾರಾನನು ಸತ್ತಾಗ ಅವನ ತಂದೆ ಇನ್ನೂ ಜೀವಂತವಾಗಿದ್ದನು.
ఆదికాండము 11 : 29 (ERVTE)
ಅಬ್ರಾಮ ಮತ್ತು ನಾಹೋರ ಮದುವೆ ಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು. ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು. ಹಾರಾನನು ಮಿಲ್ಕಾ ಮತ್ತು ಇಸ್ಕ ಎಂಬವರ ತಂದೆ.
ఆదికాండము 11 : 30 (ERVTE)
ಸಾರಯಳಿಗೆ ಮಕ್ಕಳಿರಲಿಲ್ಲ, ಯಾಕೆಂದರೆ, ಆಕೆ ಬಂಜೆಯಾಗಿದ್ದಳು.
ఆదికాండము 11 : 31 (ERVTE)
ತೆರಹನು ತನ್ನ ಕುಟುಂಬವನ್ನು ಕರೆದುಕೊಂಡು ಬಾಬಿಲೋನಿನ ಊರ್ ಎಂಬ ಸ್ವಂತ ಸ್ಥಳದಿಂದ ಹೊರಟು ಕಾನಾನಿಗೆ ಪ್ರಯಾಣ ಮಾಡಿದನು. ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ ಮತ್ತು ತನಗೆ ಸೊಸೆಯೂ ಅಬ್ರಾಮನ ಹೆಂಡತಿಯೂ ಆಗಿರುವ ಸಾರಯಳನ್ನೂ ಕರೆದುಕೊಂಡು ಹಾರಾನ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸಲು ತೀರ್ಮಾನಿಸಿದನು.
ఆదికాండము 11 : 32 (ERVTE)
ತೆರಹನು ಇನ್ನೂರೈದು ವರ್ಷ ಬದುಕಿ ಹಾರಾನಿನಲ್ಲಿ ಸತ್ತುಹೋದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32