హొషేయ 5 : 1 (ERVTE)
{#1ಇಸ್ರೇಲ್ ಮತ್ತು ಯೆಹೂದವು ಪಾಪದಲ್ಲಿ ಬೀಳಲು ಅವರ ನಾಯಕರೇ ಕಾರಣ } “ಯಾಜಕರೇ, ಇಸ್ರೇಲ್ ಜನಾಂಗವೇ, ಅರಸನ ಪರಿವಾರದವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ. ಯಾಕೆಂದರೆ ನಿಮಗೆ ನ್ಯಾಯತೀರ್ಪು ಬಂದಿದೆ. “ಮಿಚ್ಪದಲ್ಲಿ ನೀವು ಉರುಲಿನಂತೆ ಇದ್ದಿರಿ. ತಾಬೋರಿನಲ್ಲಿ ನೆಲದ ಮೇಲೆ ಹರಡಿಸಿದ್ದ ಬಲೆಯಂತೆ ಇದ್ದಿರಿ.
హొషేయ 5 : 2 (ERVTE)
ನೀವು ಅನೇಕಾನೇಕ ಕೆಟ್ಟ ಸಂಗತಿಗಳನ್ನು ಮಾಡಿದ್ದೀರಿ. ಆದ್ದರಿಂದ ನಿಮ್ಮೆಲ್ಲರನ್ನು ನಾನು ಶಿಕ್ಷಿಸುತ್ತೇನೆ.
హొషేయ 5 : 3 (ERVTE)
ಎಫ್ರಾಯೀಮೇ, ನನಗೆ ಗೊತ್ತುಂಟು. ಇಸ್ರೇಲ್ ಮಾಡಿದ ವಿಷಯಗಳೆಲ್ಲವನ್ನು ನಾನು ಬಲ್ಲೆನು. ಎಫ್ರಾಯೀಮೇ, ನೀನು ಈಗಲೂ ಸೂಳೆಯಂತೆ ವರ್ತಿಸುತ್ತಿರುವಿ. ತನ್ನ ಪಾಪಗಳಿಂದ ಇಸ್ರೇಲ್ ಮಲಿನವಾಗಿದೆ.
హొషేయ 5 : 4 (ERVTE)
ಇಸ್ರೇಲಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆ ದುಷ್ಕೃತ್ಯಗಳು ಅವರನ್ನು ತಮ್ಮ ದೇವರ ಬಳಿಗೆ ಹಿಂತಿರುಗಿ ಬಾರದಂತೆ ಮಾಡುತ್ತಿವೆ. ಅವರು ಯಾವಾಗಲೂ ಇತರ ದೇವರುಗಳ ಹಿಂದೆ ಹೇಗೆ ಹೋಗೋಣ ಎಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಅವರಿಗೆ ಯೆಹೋವನ ಪರಿಚಯವಿಲ್ಲ.
హొషేయ 5 : 5 (ERVTE)
ಇಸ್ರೇಲಿನ ಹೆಮ್ಮೆಯು ಅವರಿಗೆ ವಿರುದ್ಧವಾಗಿ ಸಾಕ್ಷಿನೀಡುತ್ತದೆ. ಇಸ್ರೇಲ್ ಮತ್ತು ಎಫ್ರಾಯೀಮ್ ತಮ್ಮ ಪಾಪಗಳಿಂದಲೇ ಮುಗ್ಗರಿಸುವರು. ಯೆಹೂದವೂ ಅವರೊಂದಿಗೆಯೇ ಮುಗ್ಗರಿಸುವದು.
హొషేయ 5 : 6 (ERVTE)
“ಜನರ ನಾಯಕರು ಯೆಹೋವನನ್ನು ಹುಡುಕಾಡುವರು. ಅವರು ತಮ್ಮ ಕುರಿದನಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವರು. ಆದರೆ ಅವರು ಯೆಹೋವನನ್ನು ಕಂಡುಕೊಳ್ಳುವದಿಲ್ಲ. ಯಾಕೆಂದರೆ ಆತನು ಅವರನ್ನು ಬಿಟ್ಟುಹೋಗಿರುತ್ತಾನೆ.
హొషేయ 5 : 7 (ERVTE)
ಅವರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವರ ಮಕ್ಕಳು ಅನ್ಯರಿಗೆ ಹುಟ್ಟಿದ್ದಾರೆ. ಆದ್ದರಿಂದ ಈಗ ಆತನು ಅವರನ್ನೂ ಅವರ ದೇಶವನ್ನೂ ತಿರುಗಿ ನಾಶಮಾಡುವನು.”
హొషేయ 5 : 8 (ERVTE)
{#1ಇಸ್ರೇಲಿನ ನಾಶನದ ಪ್ರವಾದನೆ } “ಗಿಬ್ಯದಲ್ಲಿ ಕೊಂಬನ್ನೂದು, ರಾಮದಲ್ಲಿ ತುತ್ತೂರಿಯನ್ನೂದು. ಬೇತಾವೆನಿನಲ್ಲಿ ಎಚ್ಚರಿಕೆಯನ್ನು ನೀಡು. ಬೆನ್ಯಾಮೀನನೇ, ವೈರಿಯು ನಿನ್ನ ಹಿಂದೆಯೇ ಇದ್ದಾನೆ.
హొషేయ 5 : 9 (ERVTE)
ಶಿಕ್ಷೆಯು ವಿಧಿಸಲ್ಪಡುವಾಗ ಎಫ್ರಾಯೀಮ್ ಬರಿದಾಗುವದು. ಇದು ಖಂಡಿತವಾಗಿಯೂ ನೆರವೇರುವದೆಂದು ಯೆಹೋವನಾದ ನಾನು ಇಸ್ರೇಲ್ ಕುಟುಂಬಗಳಿಗೆ ತಿಳಿಸುತ್ತಿದ್ದೇನೆ.
హొషేయ 5 : 10 (ERVTE)
ಯೆಹೂದದ ನಾಯಕರು ಪರರ ಆಸ್ತಿಯನ್ನು ದೋಚುವ ಕಳ್ಳರಂತಿದ್ದಾರೆ. ಯೆಹೋವನಾದ ನಾನು ಅವರ ಮೇಲೆ ನನ್ನ ಕೋಪವನ್ನು ನೀರಿನಂತೆ ಸುರಿಸುವೆನು.
హొషేయ 5 : 11 (ERVTE)
ಎಫ್ರಾಯೀಮ್ ಶಿಕ್ಷಿಸಲ್ಪಡುವನು. ಅವನು ದ್ರಾಕ್ಷಿಹಣ್ಣಿನಂತೆ ನಜ್ಜುಗುಜ್ಜಾಗುವನು. ಕಾರಣವೇನೆಂದರೆ, ಅವನು ಹೊಲಸನ್ನು ಹಿಂಬಾಲಿಸಲು ತೀರ್ಮಾನಿಸಿದ್ದಾನೆ.
హొషేయ 5 : 12 (ERVTE)
ನಾನು ಎಫ್ರಾಯೀಮನನ್ನು ನಾಶಮಾಡುವೆನು, ನುಸಿಯು ಬಟ್ಟೆಯನ್ನು ನಾಶಮಾಡುವ ರೀತಿಯಲ್ಲಿ, ಮರದ ತುಂಡನ್ನು ಗೆದ್ದಲು ನಾಶಮಾಡುವಂತೆ ಯೆಹೂದವನ್ನು ನಾಶಮಾಡುವೆನು.
హొషేయ 5 : 13 (ERVTE)
ಎಫ್ರಾಯೀಮು ತನ್ನ ವ್ಯಾಧಿಯನ್ನು ನೋಡಿದನು. ಯೆಹೂದವು ತನ್ನ ಗಾಯಗಳನ್ನು ನೋಡಿದನು. ಆಮೇಲೆ ಸಹಾಯಕ್ಕಾಗಿ ಅಶ್ಶೂರ್ಯರ ಬಳಿಗೆ ಹೋದರು. ಆ ಮಹಾ ಅರಸನ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಆದರೆ ಆ ಅರಸನು ನಿಮ್ಮನ್ನು ಗುಣಮಾಡನು. ನಿಮ್ಮ ಗಾಯಗಳನ್ನು ಗುಣಮಾಡಲು ಸಾಧ್ಯವಿಲ್ಲ.
హొషేయ 5 : 14 (ERVTE)
ಯಾಕೆಂದರೆ ನಾನು ಎಫ್ರಾಯೀಮನಿಗೆ ಸಿಂಹದಂತಿರುವೆನು. ಯೆಹೂದ ಜನಾಂಗದವರಿಗೆ ನಾನು ಪ್ರಾಯದ ಸಿಂಹದಂತಿರುವೆನು. ಹೌದು, ಯೆಹೋವನಾದ ನಾನು ಅವರನ್ನು ಹರಿದು ಚೂರುಚೂರಾಗಿ ಮಾಡುವೆನು. ನಾನು ಅವರನ್ನು ಎತ್ತಿಕೊಂಡು ಹೋಗುವೆನು. ಯಾರೂ ಅವರನ್ನು ನನ್ನಿಂದ ರಕ್ಷಿಸಲಾರರು.
హొషేయ 5 : 15 (ERVTE)
ಜನರು ತಮ್ಮ ದೋಷವನ್ನು ಒಪ್ಪಿಕೊಳ್ಳುವ ತನಕ ನಾನು ನನ್ನ ಸ್ಥಳಕ್ಕೆ ಹಿಂತಿರುಗಿ ಹೋಗುವೆನು, ಅವರು ನನ್ನನ್ನು ಹುಡುಕುವರು. ಹೌದು, ತಮ್ಮ ಸಂಕಟದಲ್ಲಿ ನನ್ನನ್ನು ಹುಡುಕಲು ಅತಿಯಾಗಿ ಪ್ರಯತ್ನಿಸುವರು.”

1 2 3 4 5 6 7 8 9 10 11 12 13 14 15