యెషయా గ్రంథము 23 : 1 (ERVTE)
{#1ಲೆಬನೋನಿಗೆ ದೇವರ ಸಂದೇಶ } [PS]ತೂರಿನ ವಿಷಯವಾಗಿ ದುಃಖಕರವಾದ ಸಂದೇಶ: [PE][PBR] [QS]“ತಾರ್ಷೀಷಿನ ಹಡಗುಗಳೇ, ದುಃಖಿಸಿರಿ! [QE][QS2]ನಿಮ್ಮ ರೇವು ಕೆಡವಲ್ಪಟ್ಟಿದೆ.” [QE][QS2]ಕಿತ್ತಿಮಿನಿಂದ ಹೊರಟ ಹಡಗುಗಳಿಗೆ ಈ ವಾರ್ತೆಯು ತಲುಪಿತು. [QE][PBR]
యెషయా గ్రంథము 23 : 2 (ERVTE)
[QS]ಸಮುದ್ರ ತೀರದಲ್ಲಿ ವಾಸಿಸುವ ಜನರೇ, ನೀವು ಸ್ತಬ್ಧರಾಗಿದ್ದು ದುಃಖಿಸಿರಿ. [QE][QS2]ತೂರು “ಚೀದೋನಿನ ವ್ಯಾಪಾರಿ” ಆಗಿತ್ತು. ಆ ನಗರವು ವರ್ತಕರನ್ನು ಸಮುದ್ರದಾಚೆ ಕಳುಹಿಸಿತು. [QE][QS2]ಆ ಜನರು ನಿನ್ನನ್ನು ಐಶ್ವರ್ಯಗಳಿಂದ ತುಂಬಿಸಿದರು. [QE]
యెషయా గ్రంథము 23 : 3 (ERVTE)
[QS]ಅವರು ಸಮುದ್ರ ಪ್ರಯಾಣ ಮಾಡುತ್ತಾ ಧಾನ್ಯಕ್ಕಾಗಿ ಹುಡುಕುತ್ತಿದ್ದಾರೆ. [QE][QS2]ತೂರಿನ ಜನರು ನೈಲ್ ನದಿಯ ಬದಿಗಳಲ್ಲಿ ಬೆಳೆಸುವ ಧಾನ್ಯವನ್ನು ಕೊಂಡುಕೊಂಡು [QE][QS2]ಇತರ ದೇಶಗಳಿಗೆ ಮಾರುವರು. [QE][PBR]
యెషయా గ్రంథము 23 : 4 (ERVTE)
[QS]ಚೀದೋನೇ, ನೀನು ತುಂಬಾ ದುಃಖದಿಂದಿರಬೇಕು. [QE][QS2]ಯಾಕೆಂದರೆ ಸಮುದ್ರವೂ ಸಮುದ್ರದ ಕೋಟೆಯೂ ಹೇಳುವುದೇನೆಂದರೆ, [QE][QS]“ನನಗೆ ಮಕ್ಕಳಿಲ್ಲ, ನಾನು ಪ್ರಸವವೇದನೆ ಅನುಭವಿಸಲಿಲ್ಲ. [QE][QS2]ನಾನು ಮಕ್ಕಳನ್ನು ಹೆರಲಿಲ್ಲ. [QE][QS2]ನಾನು ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಬೆಳೆಸಲಿಲ್ಲ.” [QE][PBR]
యెషయా గ్రంథము 23 : 5 (ERVTE)
[QS]ತೂರಿನ ವಿಷಯವಾದ ವಾರ್ತೆಯನ್ನು ಈಜಿಪ್ಟ್ ಕೇಳಿಸಿಕೊಳ್ಳುವದು. [QE][QS2]ಆ ವರ್ತಮಾನವು ಈಜಿಪ್ಟನ್ನು ದುಃಖದಲ್ಲಿ ಮುಳುಗಿಸುವದು. [QE]
యెషయా గ్రంథము 23 : 6 (ERVTE)
[QS]ಹಡಗುಗಳೇ, ನೀವು ತಾರ್ಷೀಷಿಗೆ ಹಿಂದಿರುಗಿರಿ! [QE][QS2]ಸಮುದ್ರ ತೀರದಲ್ಲಿ ವಾಸಿಸುವವರಾದ ನೀವು ದುಃಖಿಸಬೇಕು! [QE]
యెషయా గ్రంథము 23 : 7 (ERVTE)
[QS]ಹಿಂದಿನ ಕಾಲದಲ್ಲಿ ನೀವು ತೂರ್ ನಗರದಲ್ಲಿ ಉಲ್ಲಾಸಿಸಿದಿರಿ. [QE][QS2]ಪ್ರಾರಂಭದಿಂದಲೇ ಆ ನಗರವು ಅಭಿವೃದ್ಧಿಹೊಂದುತ್ತಿತ್ತು. ಆ ನಗರದ ಜನರು ಬಹುದೂರ ಪ್ರಯಾಣಮಾಡಿ ನೆಲೆಸಿರುವರು. [QE]
యెషయా గ్రంథము 23 : 8 (ERVTE)
[QS]ತೂರ್ ಪಟ್ಟಣವು ಅನೇಕ ಗಣ್ಯವ್ಯಕ್ತಿಗಳನ್ನು ಕೊಟ್ಟಿರುತ್ತದೆ. [QE][QS2]ಅಲ್ಲಿಯ ವರ್ತಕರಿಗೆ ಪ್ರಪಂಚದ ಎಲ್ಲಾ ಕಡೆಯೂ ಗೌರವವಿದೆ. [QE][QS2]ಆದ್ದರಿಂದ ಇಂಥ ತೂರ್ ವಿರುದ್ಧ ಯೋಜನೆ ಮಾಡಿದವರಾರು? [QE]
యెషయా గ్రంథము 23 : 9 (ERVTE)
[QS]ಸರ್ವಶಕ್ತನಾದ ಯೆಹೋವನೇ. [QE][QS2]ಅದು ಪ್ರಾಮುಖ್ಯವಾಗದಂತೆ ಆತನೇ ತೀರ್ಮಾನಿಸಿದ್ದಾನೆ. [QE][QS2]ಆತನು ಗೌರವಿಸಲ್ಪಡುವ ಜನರನ್ನು ಅವಮಾನಪಡಿಸಬೇಕೆಂತಲೂ ಮಾಡಿದ್ದಾನೆ. [QE]
యెషయా గ్రంథము 23 : 10 (ERVTE)
[QS]ತಾರ್ಷೀಷಿನ ಹಡಗಿನವರೇ, ನೀವು ಊರಿಗೆ ಹಿಂತಿರುಗಿರಿ. [QE][QS2]ಸಮುದ್ರವನ್ನು ಸಣ್ಣ ನದಿಯೋ ಎಂಬಂತೆ ದಾಟಿರಿ. [QE][QS2]ಯಾರೂ ನಿಮ್ಮನ್ನು ನಿಲ್ಲಿಸಲಾರರು. [QE]
యెషయా గ్రంథము 23 : 11 (ERVTE)
[QS]ಯೆಹೋವನು ಸಮುದ್ರದ ಮೇಲೆ ತನ್ನ ಕೈಯನ್ನು ಚಾಚಿದ್ದಾನೆ. [QE][QS2]ಆತನು ತೂರಿಗೆ ವಿರುದ್ಧವಾಗಿ ಯುದ್ಧಮಾಡಲು ರಾಜ್ಯಗಳನ್ನು ಒಟ್ಟುಗೂಡಿಸುತ್ತಾನೆ. [QE][QS2]ಯೆಹೋವನು ಕಾನಾನಿಗೆ ತೂರಿನ ಆಶ್ರಯಸ್ಥಳಗಳನ್ನು ನಾಶಮಾಡಲು ಆಜ್ಞಾಪಿಸುತ್ತಾನೆ. [QE]
యెషయా గ్రంథము 23 : 12 (ERVTE)
[QS]ಯೆಹೋವನು ಹೇಳುವುದೇನೆಂದರೆ, “ಚೀದೋನ್ ಕುಮಾರಿಯೇ, ನೀನು ನಾಶವಾಗುವೆ; [QE][QS2]ಎಂದಿಗೂ ನೀನು ಹರ್ಷಿಸುವದಿಲ್ಲ. [QE][QS]ತೂರಿನ ಜನರು, ‘ನಮಗೆ ಸೈಪ್ರಸ್‌ನವರು ಸಹಾಯ ಮಾಡುತ್ತಾರೆ’ ಎಂದು ಹೇಳುತ್ತಾರೆ. [QE][QS2]ಆದರೆ ನೀನು ಸಮುದ್ರ ಮಾರ್ಗವಾಗಿ ಸೈಪ್ರಸ್‌ಗೆ ಹೋದರೆ ಅಲ್ಲಿ ನಿನಗೆ ವಿಶ್ರಮಿಸಲು ಸ್ಥಳ ದೊರಕುವದಿಲ್ಲ.” [QE]
యెషయా గ్రంథము 23 : 13 (ERVTE)
[QS]ಆಗ ತೂರಿನ ಜನರು ಹೀಗೆನ್ನುವರು: “ಬಾಬಿಲೋನಿನವರು ನಮಗೆ ಸಹಾಯಮಾಡುವರು.” ಆದರೆ ಕಸ್ದೀಯರ ದೇಶವನ್ನು ನೋಡಿ. [QE][QS2]ಬಾಬಿಲೋನ್ ಈಗ ದೇಶವಲ್ಲ. [QE][QS]ಬಾಬಿಲೋನನ್ನು ಅಶ್ಶೂರವು ವಶಪಡಿಸಿಕೊಂಡು ಅದರ ಸುತ್ತಲೂ ಕಾವಲು ಬುರುಜುಗಳನ್ನು ಕಟ್ಟಿಸಿದೆ. [QE][QS2]ಅಲ್ಲಿದ್ದ ಸುಂದರ ಮನೆಗಳಿಂದ ಸೈನಿಕರು ಎಲ್ಲವನ್ನು ದೋಚಿರುತ್ತಾರೆ. [QE][QS]ಅಶ್ಶೂರ ಬಾಬಿಲೋನನ್ನು ಕಾಡುಪ್ರಾಣಿಗಳ ವಾಸಸ್ಥಳವನ್ನಾಗಿ ಮಾಡಿದೆ. [QE][QS2]ಅವರು ಬಾಬಿಲೋನನ್ನು ಪಾಳುಬಿದ್ದ ಅವಶೇಷವನ್ನಾಗಿ ಮಾಡಿದ್ದಾರೆ. [QE]
యెషయా గ్రంథము 23 : 14 (ERVTE)
[QS]ಆದ್ದರಿಂದ ತಾರ್ಷೀಷಿನ ಹಡಗುಗಳವರೇ, ದುಃಖಿಸಿರಿ! [QE][QS2]ನಿಮ್ಮ ಆಶ್ರಯದ ರೇವು ನಾಶವಾಗಿದೆ. [QE][PBR]
యెషయా గ్రంథము 23 : 15 (ERVTE)
[PS]ಎಪ್ಪತ್ತು ವರ್ಷಗಳ ತನಕ ಜನರಿಗೆ ತೂರಿನ ಜ್ಞಾಪಕವಿರುವದಿಲ್ಲ. ಇದು ಒಬ್ಬ ಅರಸನು ಆಳುವ ಕಾಲ. ಎಪ್ಪತ್ತು ವರ್ಷಗಳ ತರುವಾಯ ತೂರ್ ಈ ಹಾಡಿನಲ್ಲಿರುವ ವೇಶ್ಯೆಯಂತಿರುವದು: [PE][PBR]
యెషయా గ్రంథము 23 : 16 (ERVTE)
[QS]“ಪುರುಷರು ಮರೆತಿರುವ ವೇಶ್ಯೆಯೇ, [QE][QS2]ನಿನ್ನ ಕಿನ್ನರಿಯನ್ನು ತೆಗೆದುಕೊಂಡು ಊರೊಳಗೆ ಹೋಗಿ ನಿನ್ನ ಹಾಡನ್ನು ನುಡಿಸು, [QE][QS]ಮತ್ತೆಮತ್ತೆ ಹಾಡು. [QE][QS2]ಆಗ ಯಾರಾದರೂ ನಿನ್ನನ್ನು ನೆನಪುಮಾಡಿಕೊಳ್ಳಬಹುದೇನೋ.” [QE][PBR]
యెషయా గ్రంథము 23 : 17 (ERVTE)
[PS]ಎಪ್ಪತ್ತು ವರ್ಷಗಳ ನಂತರ ಯೆಹೋವನು ತೂರಿನ ಕುರಿತು ಮತ್ತೆ ಆಲೋಚಿಸಿ ತೀರ್ಮಾನಿಸುವನು. ತೂರಿನಲ್ಲಿ ವ್ಯಾಪಾರವು ಮತ್ತೆ ಪ್ರಾರಂಭವಾಗುವದು. ಅದು ಲೋಕದ ಎಲ್ಲಾ ರಾಜ್ಯಗಳಿಗೆ ವೇಶ್ಯೆಯಂತಿದೆ.
యెషయా గ్రంథము 23 : 18 (ERVTE)
ಆದರೆ ಆಕೆ ತಾನು ಗಳಿಸಿದ ಹಣವನ್ನು ತನ್ನಲ್ಲಿ ಇಟ್ಟುಕೊಳ್ಳುವದಿಲ್ಲ. ತೂರ್ ತನ್ನ ವ್ಯಾಪಾರದಲ್ಲಿ ಗಳಿಸಿದ ಲಾಭವನ್ನು ಯೆಹೋವನಿಗಾಗಿ ಶೇಖರಿಸಿಟ್ಟಿದ್ದಾಳೆ. ಯೆಹೋವನನ್ನು ಸೇವಿಸುವವರಿಗೆ ಆ ಲಾಭವನ್ನು ಮೀಸಲಾಗಿಟ್ಟಿದ್ದಾಳೆ. ಹೀಗೆ ಯೆಹೋವನ ಸೇವಕರು ಹೊಟ್ಟೆತುಂಬ ಊಟಮಾಡುವರು, ಒಳ್ಳೆಯ ಬಟ್ಟೆ ಧರಿಸಿಕೊಳ್ಳುವರು. [PE]
❮
❯