యిర్మీయా 51 : 1 (ERVTE)
[QS]ಯೆಹೋವನು ಹೀಗೆನ್ನುತ್ತಾನೆ: [QE][QS]“ನಾನು ಭಯಂಕರವಾದ ಬಿರುಗಾಳಿ ಬೀಸುವಂತೆ ಮಾಡುವೆನು. [QE][QS2]ಅದು ಬಾಬಿಲೋನಿನ ಮೇಲೂ ಬಾಬಿಲೋನಿನ ಜನರ ಮೇಲೂ ಬೀಸುವಂತೆ ಮಾಡುವೆನು. [QE]
యిర్మీయా 51 : 2 (ERVTE)
[QS]ಬಾಬಿಲೋನನ್ನು ತೂರುವದಕ್ಕಾಗಿ ನಾನು ವಿದೇಶಿಯರನ್ನು ಕಳಿಸುವೆನು. [QE][QS2]ಅವರು ಬಾಬಿಲೋನನ್ನು ತೂರುವರು. [QE][QS]ಆ ಜನರು ಬಾಬಿಲೋನನ್ನು ಬರಿದುಗೊಳಿಸುವರು. [QE][QS2]ಸೈನಿಕರು ನಗರವನ್ನು ಮುತ್ತುವರು; ಅಪಾರ ವಿನಾಶ ಸಂಭವಿಸುವದು. [QE]
యిర్మీయా 51 : 3 (ERVTE)
[QS]ಬಾಬಿಲೋನಿನ ಸೈನಿಕರು ತಮ್ಮ ಬಿಲ್ಲುಬಾಣಗಳನ್ನು ಉಪಯೋಗಿಸಲಾರರು. [QE][QS2]ಅವರು ತಮ್ಮ ಕವಚಗಳನ್ನು ಧರಿಸಲಾರರು. [QE][QS]ಬಾಬಿಲೋನಿನ ಯೋಧರಿಗೆ ಮರುಕ ತೋರಿಸಬೇಡಿ. [QE][QS2]ಅದರ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿರಿ. [QE]
యిర్మీయా 51 : 4 (ERVTE)
[QS]ಕಸ್ದೀಯರ ಪ್ರದೇಶದಲ್ಲಿಯೇ ಬಾಬಿಲೋನಿನ ಸೈನಿಕರನ್ನು ಕೊಲ್ಲಲಾಗುವುದು. [QE][QS2]ಬಾಬಿಲೋನಿನ ಬೀದಿಗಳಲ್ಲಿಯೇ ಅವರು ಗಾಯಗೊಳ್ಳುವರು.” [QE][PBR]
యిర్మీయా 51 : 5 (ERVTE)
[QS]ಸರ್ವಶಕ್ತನಾದ ಯೆಹೋವನು ಇಸ್ರೇಲನ್ನು ಮತ್ತು ಯೆಹೂದವನ್ನು ವಿಧವೆಯಾಗಿ ಮಾಡಿಲ್ಲ. [QE][QS2]ಆತನು ಅವರ ಕೈಬಿಟ್ಟಿಲ್ಲ.ಅವರು ಇಸ್ರೇಲಿನ ಪರಿಶುದ್ಧನನ್ನು ತೊರೆದು ಅಪರಾಧ ಮಾಡಿದರು. [QE][QS]ಅವರು ಆತನನ್ನು ತ್ಯಜಿಸಿದರು. [QE][QS2]ಆದರೆ ಆತನು ಅವರನ್ನು ತ್ಯಜಿಸಲಿಲ್ಲ. [QE][PBR]
యిర్మీయా 51 : 6 (ERVTE)
[QS]ಬಾಬಿಲೋನಿನಿಂದ ದೂರ ಓಡಿಹೋಗಿರಿ. [QE][QS2]ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಓಡಿಹೋಗಿರಿ. [QE][QS2]ಇಲ್ಲವಾದರೆ ಬಾಬಿಲೋನಿನ ಪಾಪದಿಂದ ನೀವೂ ಮರಣಕ್ಕೆ ಗುರಿಯಾಗುವಿರಿ. [QE][QS]ಅವರು ಮಾಡಿದ ದುಷ್ಕೃತ್ಯಗಳಿಗಾಗಿ ದೇವರು ಬಾಬಿಲೋನಿನ ಜನರನ್ನು ಶಿಕ್ಷಿಸುವ ಕಾಲವಿದು. [QE][QS2]ಅದು ತಕ್ಕ ಶಿಕ್ಷೆಯನ್ನು ಪಡೆಯುವುದು. [QE]
యిర్మీయా 51 : 7 (ERVTE)
[QS]ಬಾಬಿಲೋನ್ ಯೆಹೋವನ ಕೈಯಲ್ಲಿನ ಬಂಗಾರದ ಪಾತ್ರೆಯಂತಿತ್ತು. [QE][QS2]ಲೋಕವೆಲ್ಲವೂ ಮದ್ಯಪಾನ ಮಾಡುವಂತೆ ಬಾಬಿಲೋನ್ ಮಾಡಿತು. [QE][QS]ಜನಾಂಗಗಳು ಬಾಬಿಲೋನಿನ ದ್ರಾಕ್ಷಾರಸವನ್ನು [QE][QS2]ಕುಡಿದು ಹುಚ್ಚಾದವು. [QE]
యిర్మీయా 51 : 8 (ERVTE)
[QS]ಬಾಬಿಲೋನ್ ಬೀಳುವುದು; ಬೇಗನೆ ಮುರಿದುಹೋಗುವುದು. [QE][QS2]ಅದರ ಸಲುವಾಗಿ ಗೋಳಾಡಿರಿ. [QE][QS]ಅದರ ನೋವಿಗಾಗಿ ಔಷಧಿಯನ್ನು ತೆಗೆದುಕೊಂಡು ಬನ್ನಿ, [QE][QS2]ಒಂದುವೇಳೆ ಅದು ಗುಣಹೊಂದಬಹುದು. [QE][PBR]
యిర్మీయా 51 : 9 (ERVTE)
[QS]ನಾವು ಬಾಬಿಲೋನನ್ನು ವಾಸಿಮಾಡುವ ಪ್ರಯತ್ನ ಮಾಡಿದೆವು. [QE][QS2]ಆದರೆ ಅದನ್ನು ವಾಸಿಮಾಡಲು ಆಗುವದಿಲ್ಲ. [QE][QS]ಆದ್ದರಿಂದ ಅದನ್ನು ಬಿಟ್ಟುಬಿಡೋಣ. [QE][QS2]ನಾವು ನಮ್ಮನಮ್ಮ ದೇಶಗಳಿಗೆ ಹೋಗೋಣ. [QE][QS]ಪರಲೋಕದ ದೇವರು ಬಾಬಿಲೋನಿಗೆ ವಿಧಿಸಬೇಕಾದ ಶಿಕ್ಷೆಯನ್ನು ನಿರ್ಧರಿಸುವನು. [QE][QS2]ಬಾಬಿಲೋನಿಗೆ ಏನಾಗಬೇಕೆಂಬುದನ್ನು ಆತನು ನಿರ್ಧರಿಸುವನು. [QE]
యిర్మీయా 51 : 10 (ERVTE)
[QS]ನಮ್ಮ ಬಗ್ಗೆಯೂ ಯೆಹೋವನು ನಿರ್ಧಾರ ಕೈಗೊಂಡಿದ್ದಾನೆ. [QE][QS2]ಬನ್ನಿ, ಅದರ ಬಗ್ಗೆ ನಾವು ಚೀಯೋನಿನಲ್ಲಿ ಹೇಳೋಣ. [QE][QS]ನಮ್ಮ ದೇವರಾದ ಯೆಹೋವನು ಮಾಡಿದ್ದನ್ನು ನಾವು ಹೇಳೋಣ. [QE][PBR]
యిర్మీయా 51 : 11 (ERVTE)
[QS]ನಿಮ್ಮ ಬಾಣಗಳನ್ನು ಮಸೆಯಿರಿ. [QE][QS2]ನಿಮ್ಮ ಕವಚಗಳನ್ನು ಧರಿಸಿರಿ. [QE][QS]ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ. [QE][QS2]ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ. [QE][QS2]ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ. [QE][QS]ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು. [QE][QS2]ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು. [QE]
యిర్మీయా 51 : 12 (ERVTE)
[QS]ಬಾಬಿಲೋನಿನ ಕೋಟೆಗೋಡೆಯ ವಿರುದ್ಧ ಧ್ವಜವನ್ನು ಎತ್ತಿ ಹಾರಿಸಿರಿ. [QE][QS2]ಹೆಚ್ಚಿನ ಸಂಖ್ಯೆಯಲ್ಲಿ ಕಾವಲುಗಾರರನ್ನು ಕರೆದುತನ್ನಿರಿ. [QE][QS]ಯೋಧರನ್ನು ಅವರವರ ಸ್ಥಾನಗಳಲ್ಲಿ ನಿಲ್ಲಿಸಿರಿ. [QE][QS2]ಗುಪ್ತವಾಗಿ ಧಾಳಿ ಮಾಡುವುದಕ್ಕೆ ಸಿದ್ಧರಾಗಿರಿ. [QE][QS]ಯೆಹೋವನು ತನ್ನ ಯೋಜನೆಗಳಂತೆ ಕಾರ್ಯ ನೆರವೇರಿಸುವನು. [QE][QS2]ಯೆಹೋವನು ಬಾಬಿಲೋನಿನ ಜನರ ವಿರುದ್ಧ ಹೇಳಿರುವಂತೆಯೇ ಮಾಡುವನು. [QE]
యిర్మీయా 51 : 13 (ERVTE)
[QS]ಬಾಬಿಲೋನೇ, ನೀನು ಸಮೃದ್ಧವಾದ ನೀರಿನ ಹತ್ತಿರ ಇರುವೆ. [QE][QS2]ನೀನು ಸಂಪತ್ತಿನಿಂದ ಸಮೃದ್ಧವಾಗಿರುವೆ. [QE][QS]ಆದರೆ ಒಂದು ಜನಾಂಗವಾಗಿ ನೀನು ಬಹಳ ಕಾಲ ಮುಂದುವರೆಯಲಾರೆ. [QE][QS2]ನಿನ್ನ ವಿನಾಶ ಕಾಲ ಸಮೀಪಿಸಿದೆ. [QE]
యిర్మీయా 51 : 14 (ERVTE)
[QS]ಸರ್ವಶಕ್ತನಾದ ಯೆಹೋವನು ತನ್ನ ಮೇಲೆ ಆಣೆ ಇಟ್ಟುಕೊಂಡು ಹೀಗೆ ಹೇಳಿದ್ದಾನೆ: [QE][QS]“ಬಾಬಿಲೋನೇ, ನಾನು ಖಂಡಿತವಾಗಿ ನಿನ್ನನ್ನು ವೈರಿ ಸೈನಿಕರಿಂದ ತುಂಬಿಸಿಬಿಡುವೆನು. ಅವರು ಮಿಡತೆಗಳ ಸಮೂಹದಂತೆ ವ್ಯಾಪಿಸುವರು. [QE][QS2]ಆ ಸೈನಿಕರು ನಿನ್ನ ವಿರುದ್ಧ ಯುದ್ಧದಲ್ಲಿ ಜಯಗಳಿಸುವರು. [QE][QS2]ಅವರು ನಿನ್ನ ಮೇಲೆ ನಿಂತುಕೊಂಡು ಜಯಘೋಷ ಮಾಡುವರು.” [QE][PBR]
యిర్మీయా 51 : 15 (ERVTE)
[QS]ಯೆಹೋವನು ತನ್ನ ಅಪಾರ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದನು. [QE][QS2]ತನ್ನ ಜ್ಞಾನದಿಂದ ಈ ಲೋಕವನ್ನು ನಿರ್ಮಿಸಿದನು. [QE][QS2]ತನ್ನ ವಿವೇಕದಿಂದ ಆಕಾಶವನ್ನು ಹರಡಿದನು. [QE]
యిర్మీయా 51 : 16 (ERVTE)
[QS]ಆತನು ಗರ್ಜಿಸಿದಾಗ ಸಮುದ್ರದ ನೀರು ಭೋರ್ಗರೆಯುತ್ತದೆ. [QE][QS2]ಆತನು ಇಡೀ ಭೂಮಂಡಲದಿಂದ ಮೋಡಗಳು ಮೇಲೆ ಹೋಗುವಂತೆ ಮಾಡುತ್ತಾನೆ. [QE][QS]ಆತನು ಮಳೆಯ ಜೊತೆ ಮಿಂಚನ್ನು ಕಳುಹಿಸುತ್ತಾನೆ. [QE][QS2]ತನ್ನ ಭಂಡಾರದಿಂದ ಗಾಳಿಯನ್ನು ಹೊರಗೆ ಬಿಡುತ್ತಾನೆ. [QE]
యిర్మీయా 51 : 17 (ERVTE)
[QS]ಆದರೆ ಜನರು ಬುದ್ಧಿಹೀನರಾಗಿ [QE][QS2]ದೇವರ ಕಾರ್ಯವನ್ನು ತಿಳಿಯದವರಾಗಿದ್ದಾರೆ. [QE][QS]ಕುಶಲಕೆಲಸಗಾರರು ಸುಳ್ಳುದೇವರುಗಳ ಪ್ರತಿಮೆಗಳನ್ನು ಮಾಡುತ್ತಾರೆ. [QE][QS2]ಆ ಪ್ರತಿಮೆಗಳು ಕೇವಲ ಸುಳ್ಳುದೇವರುಗಳೇ. [QE][QS]ಆ ಕೆಲಸಗಾರರು ಎಷ್ಟು ಮೂರ್ಖರೆಂಬುದನ್ನು ಅವು ತೋರಿಸುತ್ತವೆ. [QE][QS2]ಆ ಪ್ರತಿಮೆಗಳು ಜೀವಂತವಾಗಿರುವದಿಲ್ಲ. [QE]
యిర్మీయా 51 : 18 (ERVTE)
[QS]ಆ ವಿಗ್ರಹಗಳು ನಿಷ್ಪ್ರಯೋಜಕವಾದವುಗಳೇ. [QE][QS2]ಆ ವಿಗ್ರಹಗಳನ್ನು ಮಾಡಿದವರು ಜನರೇ. ಅವುಗಳು ಕೇವಲ ಹಾಸ್ಯಾಸ್ಪದ ವಸ್ತುಗಳಲ್ಲದೆ ಮತ್ತೇನೂ ಅಲ್ಲ. [QE][QS]ಅವುಗಳ ಬಗ್ಗೆ ತೀರ್ಪುಕೊಡುವ ಕಾಲ ಬರುವದು; [QE][QS2]ಆ ವಿಗ್ರಹಗಳನ್ನು ನಾಶಮಾಡಲಾಗುವುದು. [QE]
యిర్మీయా 51 : 19 (ERVTE)
[QS]ಆದರೆ ಯಾಕೋಬ್ಯರ ಸಾಬಸ್ತ್ಯವಾದಾತನು ಆ ನಿಷ್ಪ್ರಯೋಜಕ ವಿಗ್ರಹಗಳಂತಲ್ಲ. [QE][QS2]ಜನರು ದೇವರನ್ನು ಸೃಷ್ಟಿಸಲಿಲ್ಲ. [QE][QS]ದೇವರು ತನ್ನ ಜನರನ್ನು ಸೃಷ್ಟಿಸಿದನು. [QE][QS2]ದೇವರು ಎಲ್ಲವನ್ನು ಸೃಷ್ಟಿಸಿದನು. [QE][QS]ಆತನ ಹೆಸರು ಸರ್ವಶಕ್ತನಾದ ಯೆಹೋವನು. [QE][PBR]
యిర్మీయా 51 : 20 (ERVTE)
[QS]ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನೇ, ನೀನು ನನ್ನ ಗದೆ. [QE][QS2]ಜನಾಂಗಗಳನ್ನು ಜಜ್ಜಿಹಾಕಲೂ [QE][QS2]ರಾಜ್ಯಗಳನ್ನು ಧ್ವಂಸ ಮಾಡಲೂ ನಾನು ನಿನ್ನನ್ನು ಬಳಸುತ್ತೇನೆ. [QE]
యిర్మీయా 51 : 21 (ERVTE)
[QS]ಕುದುರೆಗಳನ್ನೂ ಅದರ ಸವಾರರನ್ನೂ ಜಜ್ಜಿಹಾಕಲು ನಾನು ನಿನ್ನನ್ನು ಬಳಸುತ್ತೇನೆ. [QE][QS2]ರಥಗಳನ್ನೂ ಸಾರಥಿಗಳನ್ನೂ ಪುಡಿಪುಡಿ ಮಾಡಲು ನಾನು ನಿನ್ನನ್ನು ಬಳಸುತ್ತೇನೆ. [QE]
యిర్మీయా 51 : 22 (ERVTE)
[QS]ಗಂಡಸರನ್ನೂ ಹೆಂಗಸರನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ. [QE][QS2]ವೃದ್ಧರನ್ನೂ ತರುಣರನ್ನೂ ನಾಶಪಡಿಸಲು ನಾನು ನಿನ್ನನ್ನು ಬಳಸುತ್ತೇನೆ. [QE][QS2]ತರುಣರನ್ನೂ ತರುಣಿಯರನ್ನೂ ಧ್ವಂಸ ಮಾಡಲು ನಾನು ನಿನ್ನನ್ನು ಬಳಸುತ್ತೇನೆ. [QE]
యిర్మీయా 51 : 23 (ERVTE)
[QS]ಕುರುಬರನ್ನೂ ಕುರಿಹಿಂಡನ್ನೂ ನಾಶಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ. [QE][QS2]ರೈತರನ್ನೂ ಮತ್ತು ಹಸುಗಳನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ. [QE][QS2]ಅಧಿಪತಿಗಳನ್ನೂ ಪ್ರಮುಖ ಅಧಿಕಾರಿಗಳನ್ನೂ ನುಚ್ಚುನೂರು ಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ. [QE]
యిర్మీయా 51 : 24 (ERVTE)
[QS]ಆದರೆ ನಾನು ಬಾಬಿಲೋನಿಗೆ ಮುಯ್ಯಿತೀರಿಸುವೆನು. ನಾನು ಬಾಬಿಲೋನಿನ ಎಲ್ಲಾ ಜನರಿಗೆ ಮುಯ್ಯಿತೀರಿಸುವೆನು. ಅವರು ಚೀಯೋನಿಗೆ ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಮುಯ್ಯಿತೀರಿಸುವೆನು. [QE][QS2]ಯೆಹೂದವೇ, ನಿನ್ನ ಎದುರಿನಲ್ಲಿಯೇ ಅವರಿಗೆ ಮುಯ್ಯಿತೀರಿಸುವೆನು.” [QE][QS]ಇದು ಯೆಹೋವನ ನುಡಿ. [QE][PBR]
యిర్మీయా 51 : 25 (ERVTE)
[QS]ಯೆಹೋವನು ಹೀಗೆನ್ನುತ್ತಾನೆ: [QE][QS]“ಬಾಬಿಲೋನೇ, ನೀನು ಇಡೀ ದೇಶವನ್ನು [QE][QS2]ನಾಶಪಡಿಸುವ ಜ್ವಾಲಾಮುಖಿಯಂತಿರುವೆ. [QE][QS]ಆದರೆ ನಾನು ನಿನಗೆ ವಿರುದ್ಧವಾಗಿ ತಿರುಗಿದ್ದೇನೆ. [QE][QS2]ನಾನು ನಿನ್ನನ್ನು ಸುಟ್ಟುಹೋದ ಪರ್ವತವನ್ನಾಗಿ ಮಾಡುವೆನು. [QE]
యిర్మీయా 51 : 26 (ERVTE)
[QS]ನಿಮ್ಮಿಂದ ಜನರಿಗೆ ಮೂಲೆಗಲ್ಲಾಗುವಷ್ಟು ದೊಡ್ಡ ಕಲ್ಲು ಸಹ ಸಿಗಲಾರದು. [QE][QS2]ಜನರು ತಮ್ಮ ಕಟ್ಟಡದ ಅಸ್ತಿವಾರಕ್ಕಾಗಿ ಒಂದು ಕಲ್ಲುಬಂಡೆಯನ್ನು ಬಾಬಿಲೋನಿನಿಂದ ತೆಗೆದುಕೊಂಡು ಹೋಗಲಾರರು. [QE][QS]ಏಕೆಂದರೆ ಶಾಶ್ವತವಾಗಿ ನಿಮ್ಮ ನಗರವು ಒಡೆದ ಕಲ್ಲುಗಳ ಗುಡ್ಡೆಯಾಗುವುದು.” [QE][QS2]ಯೆಹೋವನು ಹೀಗೆನ್ನುತ್ತಾನೆ: [QE][PBR]
యిర్మీయా 51 : 27 (ERVTE)
[QS]“ಎಲ್ಲಾ ದೇಶಗಳಲ್ಲಿ ಯುದ್ಧದ ಧ್ವಜವನ್ನು ಹಾರಿಸಿರಿ. [QE][QS2]ಎಲ್ಲಾ ರಾಷ್ಟ್ರಗಳಲ್ಲಿ ತುತ್ತೂರಿಗಳನ್ನು ಊದಿರಿ. [QE][QS]ಬಾಬಿಲೋನಿನ ವಿರುದ್ಧ ಹೋರಾಡಲು ಎಲ್ಲಾ ಜನಾಂಗಗಳನ್ನು ಸಿದ್ಧಗೊಳಿಸಿರಿ. [QE][QS2]ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಜ್ಯಗಳನ್ನು ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಕರೆಯಿರಿ. [QE][QS]ಸೈನ್ಯದ ಮುಂದಾಳಾಗಿರಲು ಒಬ್ಬ ಸೇನಾಧಿಪತಿಯನ್ನು ಆರಿಸಿರಿ. [QE][QS2]ಮಿಡತೆಯ ದಂಡಿನಂತೆ ಅಪಾರವಾಗಿರುವ ಅಶಬಬಲವನ್ನು ಕಳುಹಿಸಿರಿ. [QE]
యిర్మీయా 51 : 28 (ERVTE)
[QS]ಅದರ ವಿರುದ್ಧ ಯುದ್ಧಕ್ಕಾಗಿ ಜನಾಂಗಗಳನ್ನು ಸಿದ್ಧಮಾಡಿರಿ. [QE][QS2]ಮೇದ್ಯರ ರಾಜರನ್ನು ಸಿದ್ಧಮಾಡಿರಿ. [QE][QS]ಅವರ ಅಧಿಪತಿಗಳನ್ನು ಮತ್ತು ಎಲ್ಲಾ ಮುಖ್ಯ ಅಧಿಕಾರಿಗಳನ್ನು ಸಿದ್ಧಗೊಳಿಸಿರಿ. [QE][QS2]ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಅವರು ಆಳುವ ಎಲ್ಲಾ ದೇಶಗಳನ್ನು ಸನ್ನದ್ಧಗೊಳಿಸಿರಿ. [QE]
యిర్మీయా 51 : 29 (ERVTE)
[QS]ನೋವಿನಿಂದಲೋ ಎಂಬಂತೆ ಭೂಮಿಯು ನಡುಗುತ್ತದೆ ಮತ್ತು ಹೊರಳಾಡುತ್ತದೆ. [QE][QS2]ಯೆಹೋವನು ತಾನು ಯೋಚಿಸಿದಂತೆ ಬಾಬಿಲೋನಿಗೆ ಮಾಡಿದಾಗ ಅದು ನಡುಗುತ್ತದೆ. [QE][QS]ಬಾಬಿಲೋನನ್ನು ಯಾರೂ ವಾಸಮಾಡದ ಮರುಭೂಮಿಯನ್ನಾಗಿ [QE][QS2]ಮಾಡಬೇಕೆಂಬುದು ಯೆಹೋವನ ಯೋಜನೆ. [QE]
యిర్మీయా 51 : 30 (ERVTE)
[QS]ಬಾಬಿಲೋನಿನ ಸೈನಿಕರು ಕಾದಾಡುವದನ್ನು ನಿಲ್ಲಿಸಿದ್ದಾರೆ. [QE][QS2]ಅವರು ತಮ್ಮ ಕೋಟೆಗಳಲ್ಲಿದ್ದಾರೆ. [QE][QS]ಅವರ ಬಲ ನಷ್ಟವಾಗಿದೆ. [QE][QS2]ಅವರು ಭಯಪಟ್ಟ ಹೆಂಗಸಿನಂತಾಗಿದ್ದಾರೆ. [QE][QS]ಬಾಬಿಲೋನಿನ ಮನೆಗಳು ಉರಿಯುತ್ತಿವೆ. [QE][QS2]ಅದರ ಬಾಗಿಲಿನ ಅಗುಳಿಗಳು ಮುರಿದುಹೋಗಿವೆ. [QE]
యిర్మీయా 51 : 31 (ERVTE)
[QS]ಒಬ್ಬ ಸಂದೇಶಕನ ನಂತರ ಇನ್ನೊಬ್ಬ ಸಂದೇಶಕನು ಬರುವನು. [QE][QS2]ಸಂದೇಶಕರ ಮೇಲೆ ಸಂದೇಶಕರು ಬಂದು, [QE][QS]ಇಡೀ ನಗರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು [QE][QS2]ಅವರು ಬಾಬಿಲೋನಿನ ರಾಜನಿಗೆ ತಿಳಿಸುತ್ತಾರೆ. [QE]
యిర్మీయా 51 : 32 (ERVTE)
[QS]ಹಾಯ್ಗಡಗಳನ್ನು ವಶಪಡಿಸಿಕೊಂಡಿದ್ದಾರೆ; [QE][QS2]ಜವುಗು ನೆಲವು ಉರಿಯುತ್ತಿದೆ. [QE][QS2]ಬಾಬಿಲೋನಿನ ಎಲ್ಲಾ ಸೈನಿಕರು ಅಂಜಿಕೊಂಡಿದ್ದಾರೆ.” [QE][PBR]
యిర్మీయా 51 : 33 (ERVTE)
[QS]ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುವನು: [QE][QS]“ಬಾಬಿಲೋನಿನ ನಗರವು ಒಂದು ಕಣದಂತೆ ಇದೆ. [QE][QS2]ಸುಗ್ಗಿಕಾಲದಲ್ಲಿ ಜನರು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸುವದಕ್ಕಾಗಿ ಅದನ್ನು ಬಡಿಯುತ್ತಾರೆ. [QE][QS2]ಬಾಬಿಲೋನಿನ ಸುಗ್ಗಿಕಾಲ (ವಿನಾಶ ಕಾಲ) ಹತ್ತಿರವಾಗುತ್ತಲಿದೆ. [QE][PBR]
యిర్మీయా 51 : 34 (ERVTE)
[QS]“ಹಿಂದಿನ ಕಾಲದಲ್ಲಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮ್ಮನ್ನು ಹಾಳುಮಾಡಿದನು; [QE][QS2]ನಮ್ಮನ್ನು ಹಿಂಸಿಸಿದನು; [QE][QS]ನಮ್ಮ ಜನರನ್ನು ಸೆರೆ ಒಯ್ದನು. [QE][QS2]ಆಗ ನಾವು ಒಂದು ಬರಿದಾದ ಪಾತ್ರೆಯಂತಾದೆವು. [QE][QS]ಅವನು ನಮ್ಮ ಎಲ್ಲಾ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಹೋದನು. [QE][QS2]ತನಗೆ ತೃಪ್ತಿಯಾಗುವವರೆಗೆ ಎಲ್ಲವನ್ನು ತಿಂದು ತೇಗಿದ ರಾಕ್ಷಸನಂತಿದ್ದನು. [QE][QS]ಅವನು ನಮ್ಮೆಲ್ಲ ಉತ್ಕೃಷ್ಟ ವಸ್ತುಗಳನ್ನು [QE][QS2]ಕಿತ್ತುಕೊಂಡು ನಮ್ಮನ್ನು ದೂರ ಎಸೆದನು. [QE]
యిర్మీయా 51 : 35 (ERVTE)
[QS]ನಮ್ಮನ್ನು ನೋಯಿಸಲು ಬಾಬಿಲೋನ್ ಭಯಂಕರ ಕೆಲಸವನ್ನು ಮಾಡಿತು. [QE][QS2]ಈಗ ಬಾಬಿಲೋನಿಗೂ ಅಂಥಾ ಸ್ಥಿತಿ ಬರಲೆಂದು ನನ್ನ ಆಶೆ.” [QE][PBR] [QS]ಚೀಯೋನ್ ನಿವಾಸಿಗಳು ಹೀಗೆಂದರು: [QE][QS]“ಬಾಬಿಲೋನಿನ ಜನರು ನಮ್ಮ ಜನರನ್ನು ಕೊಲ್ಲುವ ಪಾಪವನ್ನು ಮಾಡಿದ್ದಾರೆ. [QE][QS2]ಈಗ ಅವರು ಮಾಡಿದ ದುಷ್ಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ” [QE][QS2]ಎಂದು ಜೆರುಸಲೇಮ್ ನಗರ ಹೇಳುವುದು. [QE]
యిర్మీయా 51 : 36 (ERVTE)
[QS]ಯೆಹೋವನು ಹೀಗೆನ್ನುವನು: [QE][QS]“ಯೆಹೂದವೇ, ನಾನು ನಿನ್ನನ್ನು ರಕ್ಷಿಸುವೆನು. [QE][QS2]ನಿಶ್ಚಿತವಾಗಿ ಬಾಬಿಲೋನಿಗೆ ಶಿಕ್ಷೆ ಆಗುವಂತೆ ನಾನು ನೋಡಿಕೊಳ್ಳುತ್ತೇನೆ. [QE][QS]ನಾನು ಬಾಬಿಲೋನಿನ ಸಮುದ್ರವನ್ನು ಒಣಗಿಸಿಬಿಡುವೆನು. [QE][QS2]ಅದರ ನೀರಿನ ಚಿಲುಮೆಗಳು ಬತ್ತುವಂತೆ ಮಾಡುತ್ತೇನೆ. [QE]
యిర్మీయా 51 : 37 (ERVTE)
[QS]ಬಾಬಿಲೋನು ನಾಶವಾದ ಕಟ್ಟಡಗಳ ಗುಡ್ಡೆಯಾಗುವುದು. [QE][QS2]ಬಾಬಿಲೋನು ಕಾಡುನಾಯಿಗಳ ನಿವಾಸವಾಗುವುದು. [QE][QS]ಜನರು ಕಲ್ಲುಬಂಡೆಗಳ ಗುಡ್ಡೆಯನ್ನು ನೋಡಿ ಆಶ್ಚರ್ಯಪಡುವರು. ಬಾಬಿಲೋನಿನ ಬಗ್ಗೆ ಜನರು ತಲೆಯಾಡಿಸುವರು. [QE][QS2]ಬಾಬಿಲೋನು ನಿರ್ಜನ ಪ್ರದೇಶವಾಗುವುದು. [QE][PBR]
యిర్మీయా 51 : 38 (ERVTE)
[QS]“ಬಾಬಿಲೋನಿನ ಜನರು ಗರ್ಜಿಸುವ ಪ್ರಾಯದ ಸಿಂಹಗಳಂತಿದ್ದಾರೆ. [QE][QS2]ಅವರು ಮರಿಸಿಂಹಗಳಂತೆ ಗುರುಗುಟ್ಟುವರು. [QE]
యిర్మీయా 51 : 39 (ERVTE)
[QS]ಆ ಜನರು ಬಲಶಾಲಿಗಳಾದ ಸಿಂಹಗಳಂತೆ ವರ್ತಿಸುತ್ತಿದ್ದಾರೆ. [QE][QS2]ನಾನು ಅವರಿಗೊಂದು ಔತಣವನ್ನೇರ್ಪಡಿಸುವೆನು. [QE][QS2]ಅವರಿಗೆ ಮತ್ತೇರುವಂತೆ ಕುಡಿಸುವೆನು. [QE][QS]ಅವರು ನಗುನಗುತ್ತಾ ಸಂತೋಷದಿಂದ ಕಾಲ ಕಳೆಯುವರು. [QE][QS2]ಆಮೇಲೆ ಅವರು ಶಾಶ್ವತವಾಗಿ ಮಲಗುವರು. [QE][QS2]ಅವರು ಮತ್ತೆ ಏಳಲಾರರು.” [QE][PBR] [QS]ಇದು ಯೆಹೋವನ ನುಡಿ. [QE]
యిర్మీయా 51 : 40 (ERVTE)
[QS]“ನಾನು ಬಾಬಿಲೋನಿನ ಜನರನ್ನು ವಧೆಗಾಗಿ ತೆಗೆದುಕೊಂಡು ಹೋಗುವೆನು. [QE][QS2]ಬಾಬಿಲೋನಿನ ಗತಿ ವಧೆಗಾಗಿ ತಂದ [QE][QS2]ಕುರಿ, ಟಗರು ಮತ್ತು ಹೋತಗಳಂತೆ ಆಗುವುದು. [QE][PBR]
యిర్మీయా 51 : 41 (ERVTE)
[QS]“ಶೇಷಕನು”[* ಶೇಷಕನು ಇದು ಬಾಬಿಲೋನಿಗೆ ಇದ್ದ ಗುಪ್ತ ಹೆಸರು. ] ಶತ್ರುಗಳ ವಶವಾಗುವನು. [QE][QS2]ಲೋಕದಲ್ಲಿಯೇ ಅತ್ಯುತ್ತಮವಾದ ಮತ್ತು ಹೆಮ್ಮೆಪಡುವ ದೇಶವು ವೈರಿಗಳ ಕೈವಶವಾಗುವುದು. [QE][QS]ಬೇರೆ ಜನಾಂಗದ ಜನರು ಬಾಬಿಲೋನಿನ ಕಡೆಗೆ ನೋಡಿದಾಗ [QE][QS2]ಅಲ್ಲಿನ ಸ್ಥಿತಿಗತಿಗಳನ್ನು ಕಂಡು ಭಯಪಡುವರು. [QE]
యిర్మీయా 51 : 42 (ERVTE)
[QS]ಸಮುದ್ರವು ಬಾಬಿಲೋನಿನ ಮೇಲೆ ನುಗ್ಗುವುದು. [QE][QS2]ಅದರ ಆರ್ಭಟಿಸುವ ತೆರೆಗಳು ಅದನ್ನು ಮುಚ್ಚಿಬಿಡುವವು. [QE]
యిర్మీయా 51 : 43 (ERVTE)
[QS]ಬಾಬಿಲೋನಿನ ಪಟ್ಟಣಗಳು ಬರಿದಾದ ಊರುಗಳಾಗುವವು. [QE][QS2]ಬಾಬಿಲೋನು ಮರುಭೂಮಿಯಾಗುವುದು. [QE][QS]ಅದು ನಿರ್ಜನವಾದ ನೆಲವಾಗುವುದು. [QE][QS2]ಜನರು ಬಾಬಿಲೋನಿನ ಮೂಲಕ ಪ್ರಯಾಣ ಮಾಡಲಾಗದು. [QE]
యిర్మీయా 51 : 44 (ERVTE)
[QS]ನಾನು ಬಾಬಿಲೋನಿನ ಬೇಲ್ ದೇವರನ್ನು ದಂಡಿಸುವೆನು. [QE][QS2]ಅವನು ನುಂಗಿದ ಜನರನ್ನು ಅವನು ಕಕ್ಕುವಂತೆ ಮಾಡುವೆನು. [QE][QS]ಬೇರೆ ಜನಾಂಗಗಳು ಬಾಬಿಲೋನಿಗೆ ಬರಲಾರವು. [QE][QS2]ಬಾಬಿಲೋನಿನ ಸುತ್ತಲಿನ ಗೋಡೆಯು ಬೀಳುವುದು. [QE]
యిర్మీయా 51 : 45 (ERVTE)
[QS]ನನ್ನ ಜನರೇ, ಬಾಬಿಲೋನ್ ನಗರದಿಂದ ಹೊರಗೆ ಬನ್ನಿ. [QE][QS2]ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲು ಓಡಿಹೋಗಿರಿ. [QE][QS2]ಯೆಹೋವನ ಭಯಂಕರ ಕೋಪದಿಂದ ತಪ್ಪಿಸಿಕೊಳ್ಳಲು ಓಡಿಹೋಗಿರಿ. [QE][PBR]
యిర్మీయా 51 : 46 (ERVTE)
[QS]“ನನ್ನ ಜನರೇ, ದುಃಖಿಸಬೇಡಿ, [QE][QS2]ಸುದ್ದಿಗಳು ಹಬ್ಬುತ್ತವೆ. ಆದರೆ ಹೆದರಬೇಡಿ. [QE][QS]ಒಂದು ಸುದ್ದಿ ಈ ವರ್ಷ ಬರುವುದು. [QE][QS2]ಮುಂದಿನ ವರ್ಷ ಮತ್ತೊಂದು ಸುದ್ದಿ ಬರಬಹುದು. [QE][QS]ದೇಶದಲ್ಲಿ ಭಯಂಕರವಾದ ಯುದ್ಧದ ಬಗ್ಗೆ ಸುದ್ದಿಗಳು ಕೇಳಿಬರುವವು. [QE][QS2]ರಾಜರುಗಳು ಬೇರೆ ರಾಜರುಗಳೊಂದಿಗೆ ಯುದ್ಧ ಮಾಡುತ್ತಿರುವ ವದಂತಿಗಳು ಕೇಳಿಬರುವವು. [QE]
యిర్మీయా 51 : 47 (ERVTE)
[QS]ನಾನು ಬಾಬಿಲೋನಿನ ಸುಳ್ಳುದೇವತೆಗಳನ್ನು ದಂಡಿಸುವ ಸಮಯ ಖಂಡಿತವಾಗಿ ಬರುವುದು. [QE][QS2]ಬಾಬಿಲೋನಿನ ಇಡೀ ಪ್ರದೇಶವು ನಾಚಿಕೆಪಡುವುದು. [QE][QS]ನಗರದ ಬೀದಿಗಳಲ್ಲಿ [QE][QS2]ಅನೇಕಾನೇಕ ಶವಗಳು ಬಿದ್ದಿರುವವು. [QE]
యిర్మీయా 51 : 48 (ERVTE)
[QS]ಆಗ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಸಮಸ್ತ ವಸ್ತುಗಳು [QE][QS2]ಬಾಬಿಲೋನಿನ ಬಗ್ಗೆ ಹರ್ಷಧ್ವನಿ ಮಾಡುವವು. [QE][QS]ಏಕೆಂದರೆ ಸೈನ್ಯವು ಉತ್ತರದಿಂದ ಬಂದಿತು, [QE][QS2]ಬಾಬಿಲೋನಿನ ವಿರುದ್ಧ ಯುದ್ಧಮಾಡಿತು” [QE][QS]ಇದು ಯೆಹೋವನ ನುಡಿ. [QE][PBR]
యిర్మీయా 51 : 49 (ERVTE)
[QS]“ಬಾಬಿಲೋನ್ ಇಸ್ರೇಲರನ್ನು ಕೊಂದಿತು. [QE][QS2]ಬಾಬಿಲೋನ್ ಭೂಮಂಡಲದ ಎಲ್ಲೆಡೆಯ ಜನರನ್ನು ಕೊಂದಿತು. [QE][QS2]ಅದಕ್ಕಾಗಿ ಬಾಬಿಲೋನ್ ಪತನವಾಗಲೇಬೇಕು. [QE]
యిర్మీయా 51 : 50 (ERVTE)
[QS]ನೀವು ಖಡ್ಗಗಳಿಂದ ತಪ್ಪಿಸಿಕೊಂಡಿರಿ. [QE][QS2]ನೀವು ಅವಸರ ಮಾಡಿ ಬಾಬಿಲೋನನ್ನು ಬಿಡಬೇಕು. [QE][QS2]ತಡೆಯಬೇಡಿ, [QE][QS]ನೀವು ಬಹಳ ದೂರಪ್ರದೇಶದಲ್ಲಿ ಇದ್ದೀರಿ. [QE][QS2]ಆದರೆ ನೀವು ಇರುವಲ್ಲಿಯೇ ಯೆಹೋವನನ್ನು ಸ್ಮರಿಸಿರಿ; ಜೆರುಸಲೇಮನ್ನೂ ಸ್ಮರಿಸಿಕೊಳ್ಳಿರಿ. [QE][PBR]
యిర్మీయా 51 : 51 (ERVTE)
[QS]“ಯೆಹೂದದ ಜನರಾದ ನಾವು ನಾಚಿಕೆಪಟ್ಟೆವು. [QE][QS2]ಜನರು ನಮ್ಮನ್ನು ಅಪಮಾನಗೊಳಿಸಿದ್ದರಿಂದ ನಾವು ನಾಚಿಕೆಪಟ್ಟಿದ್ದೇವೆ. [QE][QS]ಏಕೆಂದರೆ ಯೆಹೋವನ ಆಲಯದ [QE][QS2]ಪವಿತ್ರ ಸ್ಥಳಗಳಲ್ಲಿ ಅಪರಿಚಿತರು ಪ್ರವೇಶಗೈದಿದ್ದಾರೆ.” [QE][PBR]
యిర్మీయా 51 : 52 (ERVTE)
[QS]ಯೆಹೋವನು ಹೀಗೆನ್ನುವನು: “ಬಾಬಿಲೋನಿನ ವಿಗ್ರಹಗಳನ್ನು [QE][QS2]ನಾನು ದಂಡಿಸುವ ಕಾಲ ಬರುತ್ತಿದೆ. [QE][QS]ಆಗ ಆ ದೇಶದಲ್ಲೆಲ್ಲಾ ಗಾಯಗೊಂಡ ಜನರು [QE][QS2]ನೋವಿನಿಂದ ಗೋಳಾಡುವರು. [QE]
యిర్మీయా 51 : 53 (ERVTE)
[QS]ಬಾಬಿಲೋನ್ ನಗರವು ಗಗನ ಚುಂಬಿಯಾಗಿ ಬೆಳೆಯಬಹುದು. [QE][QS2]ಅದು ತನ್ನ ಕೋಟೆಗಳನ್ನು ಭದ್ರಪಡಿಸಿಕೊಳ್ಳಬಹುದು. [QE][QS]ಆದರೆ ಆ ನಗರದ ವಿರುದ್ಧ ಯುದ್ಧಮಾಡಲು ನಾನು ಜನರನ್ನು ಕಳುಹಿಸುತ್ತೇನೆ. [QE][QS2]ಆ ಜನರು ಅದನ್ನು ನಾಶಮಾಡುವರು.” [QE][QS]ಇದು ಯೆಹೋವನ ನುಡಿ. [QE][PBR]
యిర్మీయా 51 : 54 (ERVTE)
[QS]“ಬಾಬಿಲೋನಿನಲ್ಲಿ ಜನರು ರೋಧಿಸುವದನ್ನು ನಾವು ಕೇಳುವೆವು. [QE][QS2]ಬಾಬಿಲೋನ್ ಪ್ರದೇಶದಲ್ಲಿ ವಸ್ತುಗಳನ್ನು ನಾಶಮಾಡುವ ಜನರ ಧ್ವನಿಯನ್ನು ನಾವು ಕೇಳುವೆವು. [QE]
యిర్మీయా 51 : 55 (ERVTE)
[QS]ಯೆಹೋವನು ಬಾಬಿಲೋನನ್ನು ಬಹುಬೇಗನೆ ನಾಶಮಾಡುವನು. [QE][QS2]ಆ ನಗರದ ದೊಡ್ಡ ಧ್ವನಿಗಳು ಶಾಂತವಾಗುವಂತೆ ಆತನು ಮಾಡುವನು. [QE][QS]ವೈರಿಗಳು ಸಾಗರದ ತರಂಗಮಾಲೆಗಳಂತೆ ಗರ್ಜಿಸುತ್ತಾ ಬರುವರು. [QE][QS2]ಸುತ್ತಮುತ್ತಲಿನ ಜನರೆಲ್ಲರು ಆ ಗರ್ಜನೆಯನ್ನು ಕೇಳುವರು. [QE]
యిర్మీయా 51 : 56 (ERVTE)
[QS]ಸೈನ್ಯವು ಬಂದು ಬಾಬಿಲೋನನ್ನು ನಾಶಮಾಡುವುದು. [QE][QS2]ಬಾಬಿಲೋನಿನ ಸೈನಿಕರನ್ನು ವಶಪಡಿಸಿಕೊಳ್ಳಲಾಗುವುದು. ಅವರ ಬಿಲ್ಲುಗಳನ್ನು ಮುರಿಯಲಾಗುವುದು. [QE][QS]ಏಕೆಂದರೆ ಯೆಹೋವನು ಜನರನ್ನು ಅವರು ಮಾಡುವ ದುಷ್ಕೃತ್ಯಗಳಿಗಾಗಿ ಶಿಕ್ಷಿಸುತ್ತಾನೆ. [QE][QS2]ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಸಂಪೂರ್ಣವಾಗಿ ಕೊಡುತ್ತಾನೆ. [QE]
యిర్మీయా 51 : 57 (ERVTE)
[QS]ಬಾಬಿಲೋನಿನ ಮುಖ್ಯ ಅಧಿಕಾರಿಗಳಿಗೂ [QE][QS2]ಪಂಡಿತರಿಗೂ ದ್ರಾಕ್ಷಾರಸ ಕುಡಿಯುವಂತೆ ಮಾಡುತ್ತೇನೆ. [QE][QS]ಅಲ್ಲಿಯ ಅಧಿಪತಿಗಳಿಗೂ ಅಧಿಕಾರಿಗಳಿಗೂ ಸೈನಿಕರಿಗೂ ದ್ರಾಕ್ಷಾರಸ ಕುಡಿಸುತ್ತೇನೆ. [QE][QS2]ಆಮೇಲೆ ಅವರು ಶಾಶ್ವತವಾಗಿ ಮಲಗಿಬಿಡುತ್ತಾರೆ. [QE][QS2]ಅವರು ಎಚ್ಚರಗೊಳ್ಳುವುದೇ ಇಲ್ಲ.” [QE][QS]ಸರ್ವಶಕ್ತನಾದ ಯೆಹೋವನೆಂಬ [QE][QS2]ನಾಮಧೇಯದ ರಾಜಾಧಿರಾಜನ ನುಡಿಯಿದು. [QE][PBR]
యిర్మీయా 51 : 58 (ERVTE)
[QS]ಸರ್ವಶಕ್ತನಾದ ಯೆಹೋವನು ಹೀಗೆನ್ನುವನು: [QE][QS]“ಬಾಬಿಲೋನಿನ ಅಗಲವಾದ ಮತ್ತು ಸುಭದ್ರವಾದ ಗೋಡೆಯನ್ನು ಬೀಳಿಸಲಾಗುವುದು. [QE][QS2]ಅದರ ಎತ್ತರವಾದ ಬಾಗಿಲುಗಳನ್ನು ಸುಟ್ಟುಹಾಕಲಾಗುವುದು. [QE][QS]ಬಾಬಿಲೋನಿನ ಜನರು ನಗರವನ್ನು ರಕ್ಷಿಸಲು ಬಹಳ ಕಷ್ಟಪಡುವರು. [QE][QS2]ಆದರೆ ಅದು ನಿಷ್ಪ್ರಯೋಜಕವಾಗುವುದು. [QE][QS]ನಗರವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರು ತುಂಬಾ ಶ್ರಮವಹಿಸುವರು. [QE][QS2]ಆದರೆ ಅವರು ಕೇವಲ ಅಗಿಐಗೆ ಆಹುತಿಯಾಗುವರು.” [QE]
యిర్మీయా 51 : 59 (ERVTE)
{#1ಬಾಬಿಲೋನಿಗೆ ಯೆರೆಮೀಯನ ಸಂದೇಶ } [PS]ಯೆರೆಮೀಯನು ಸೆರಾಯ ಎಂಬ ಅಧಿಕಾರಿಯ ಕೈಗೆ ಕೊಟ್ಟ ಸಂದೇಶವಿದು. ಸೆರಾಯನು ಯೆಹೂದದ ನೇರೀಯನ ಮಗ. ನೇರೀಯನು ಮಹ್ಸೇಯನ ಮಗನು. ಸೆರಾಯನು ಯೆಹೂದದ ರಾಜನಾದ ಚಿದ್ಕೀಯನ ಜೊತೆಗೆ ಬಾಬಿಲೋನಿಗೆ ಹೋದನು. ಈ ಸಂಗತಿ ಯೆಹೂದದಲ್ಲಿ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ನಡೆದದ್ದು. ಆ ಸಮಯದಲ್ಲಿ ಯೆರೆಮೀಯನು ಸೆರಾಯನೆಂಬ ಅಧಿಕಾರಿಯ ಕೈಗೆ ಈ ಸಂದೇಶವನ್ನು ಕೊಟ್ಟನು.
యిర్మీయా 51 : 60 (ERVTE)
ಬಾಬಿಲೋನಿಗೆ ಉಂಟಾಗುವ ಎಲ್ಲಾ ಕೇಡನ್ನು ಯೆರೆಮೀಯನು ಒಂದು ಸುರಳಿಯಲ್ಲಿ ಬರೆದಿದ್ದನು. ಅವನು ಬಾಬಿಲೋನಿನ ಬಗ್ಗೆ ಈ ವಿಷಯಗಳನ್ನೆಲ್ಲ ಬರೆದಿದ್ದನು. [PE]
యిర్మీయా 51 : 61 (ERVTE)
[PS]ಯೆರೆಮೀಯನು ಸೆರಾಯನಿಗೆ ಹೀಗೆ ಹೇಳಿದನು: “ಸೆರಾಯನೇ, ಬಾಬಿಲೋನಿಗೆ ಹೋಗು. ಎಲ್ಲರಿಗೂ ಕೇಳಿಸುವಂತೆ ಈ ಸಂದೇಶವನ್ನು ಖಂಡಿತವಾಗಿ ಓದು.
యిర్మీయా 51 : 62 (ERVTE)
ಆಮೇಲೆ ಹೀಗೆ ಹೇಳು: ‘ಯೆಹೋವನೇ, ಬಾಬಿಲೋನ್ ನಗರವನ್ನು ನಾಶಮಾಡುವೆನೆಂದು ನೀನು ಹೇಳಿರುವೆ. ಪ್ರಾಣಿಗಳು ಅಥವಾ ಮನುಷ್ಯರು ಯಾರೂ ಇಲ್ಲಿ ವಾಸಮಾಡದಂತೆ, ಇದು ಎಂದೆಂದಿಗೂ ಹಾಳುಬಿದ್ದ ಸ್ಥಳವಾಗಿರುವಂತೆ ಇದನ್ನು ನಾಶಮಾಡುವದಾಗಿ ಹೇಳಿರುವೆ.’
యిర్మీయా 51 : 63 (ERVTE)
ಈ ಸುರುಳಿಯನ್ನು ಓದಿಮುಗಿಸಿದ ಮೇಲೆ ಅದಕ್ಕೊಂದು ಕಲ್ಲನ್ನು ಕಟ್ಟಿ ಆ ಕಾಗದದ ಸುರುಳಿಯನ್ನು ಯೂಫ್ರೇಟೀಸ್ ನದಿಯಲ್ಲಿ ಎಸೆದುಬಿಡು.
యిర్మీయా 51 : 64 (ERVTE)
ಆಮೇಲೆ ‘ಇದೇ ರೀತಿಯಲ್ಲಿ ಬಾಬಿಲೋನ್ ಕೂಡ ಮುಳುಗಿಹೋಗುವುದು. ಬಾಬಿಲೋನ್ ಎಂದಿಗೂ ಮೇಲಕ್ಕೆ ಏಳುವದಿಲ್ಲ. ಅಲ್ಲಿ ನಾನು ಬರಮಾಡುವ ಅನೇಕ ವಿಪತ್ತುಗಳಿಂದಾಗಿ ಬಾಬಿಲೋನ್ ಮುಳುಗಿಹೋಗುವುದು’ ” ಎಂದು ಹೇಳು. [PE][PS]ಯೆರೆಮೀಯನ ಸಂದೇಶ ಇಲ್ಲಿಗೆ ಮುಗಿಯುತ್ತದೆ. [PE]
❮
❯