యోవేలు 3 : 1 (ERVTE)
{#1ಯೆಹೂದದ ವೈರಿಗೆ ಯೆಹೋವನ ಶಿಕ್ಷೆಯ ವಾಗ್ದಾನ } “ಆ ಸಮಯದಲ್ಲಿ ನಾನು ಯೆಹೂದ ಮತ್ತು ಜೆರುಸಲೇಮನ್ನು ಸೆರೆಯಿಂದ ಹಿಂದಕ್ಕೆ ತರಿಸುವೆನು.
యోవేలు 3 : 2 (ERVTE)
ಮತ್ತು ಎಲ್ಲಾ ಜನಾಂಗಗಳನ್ನು ನಾನು ಒಟ್ಟುಗೂಡಿಸುವೆನು. ಆ ದೇಶಗಳನ್ನು ಯೆಹೋಷಾಫಾಟ್ ತಗ್ಗಿಗೆ[* ಯೆಹೋಷಾಫಾಟ್ ತಗ್ಗು ಈ ಹೆಸರಿನ ಅರ್ಥ “ಯೆಹೋವನು ನ್ಯಾಯತೀರಿಸುತ್ತಾನೆ.” ] ಕರೆತರುವೆನು. ಅಲ್ಲಿ ಅವರಿಗೆ ನ್ಯಾಯತೀರಿಸುವೆನು. ಆ ದೇಶಗಳವರು ನನ್ನ ಜನರಾದ ಇಸ್ರೇಲರನ್ನು ಚದರಿಸಿದ್ದರು. ಅವರನ್ನು ಪರದೇಶಗಳಲ್ಲಿ ವಾಸಿಸುವಂತೆ ಮಾಡಿದರು. ಆದ್ದರಿಂದ ಆ ದೇಶಗಳವರನ್ನು ನಾನು ಶಿಕ್ಷಿಸುವೆನು. ಆ ದೇಶದವರು ನನ್ನ ದೇಶವನ್ನು ವಿಭಜಿಸಿದರು.
యోవేలు 3 : 3 (ERVTE)
ನನ್ನ ಜನರಿಗಾಗಿ ಚೀಟು ಹಾಕಿದರು. ಅವರು ಹುಡುಗರನ್ನು ಮಾರಿ ಸೂಳೆಯನ್ನು ಕೊಂಡುಕೊಂಡರು; ಹುಡುಗಿಯರನ್ನು ಮಾರಿ ದ್ರಾಕ್ಷಾರಸವನ್ನು ಕೊಂಡುಕೊಂಡರು.
యోవేలు 3 : 4 (ERVTE)
“ತೂರೇ, ಸೀದೋನೇ, ಫಿಲಿಷ್ಟಿಯ ದೇಶಗಳೇ, ನೀವು ನನಗೆ ಎಷ್ಟರವರು? ನಾನು ಮಾಡಿದುದಕ್ಕೆ ನೀವು ನನ್ನನ್ನು ಶಿಕ್ಷಿಸುತ್ತೀರಾ? ನೀವು ಒಂದುವೇಳೆ ನನ್ನನ್ನು ಶಿಕ್ಷಿಸುತ್ತಿದ್ದೀರಿ ಎಂದು ನೆನಸಬಹುದು. ಆದರೆ ನಾನು ಬೇಗನೇ ನಿಮ್ಮನ್ನು ಶಿಕ್ಷಿಸುವೆನು.
యోవేలు 3 : 5 (ERVTE)
ನೀವು ನನ್ನ ಬೆಳ್ಳಿಬಂಗಾರವನ್ನು ಕದ್ದುಕೊಂಡು ಹೋದಿರಿ. ನನ್ನ ಅಮೂಲ್ಯವಾದ ಸಂಪತ್ತನ್ನು ಕೊಂಡು ಹೋಗಿ ನಿಮ್ಮ ಪೂಜಾಸ್ಥಳಗಳಲ್ಲಿ ಇಟ್ಟಿರಿ.
యోవేలు 3 : 6 (ERVTE)
“ನೀವು ಯೆಹೂದ ಮತ್ತು ಜೆರುಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿರಿ. ಆ ರೀತಿಯಾಗಿ ಅವರನ್ನು ಅವರ ದೇಶದಿಂದ ಬಹಳ ದೂರ ತೆಗೆದುಬಿಟ್ಟಿರಿ.
యోవేలు 3 : 7 (ERVTE)
ಆ ದೂರದ ಸ್ಥಳಗಳಿಗೆ ನನ್ನ ಜನರನ್ನು ಕಳುಹಿಸಿದಿರಿ, ಆದರೆ ನಾನು ಅವರನ್ನು ಹಿಂದೆ ತರುವೆನು. ಮತ್ತು ನೀವು ಮಾಡಿದ ಕೃತ್ಯಕ್ಕೆ ನಾನು ನಿಮ್ಮನ್ನು ಶಿಕ್ಷಿಸುವೆನು.
యోవేలు 3 : 8 (ERVTE)
ನಿಮ್ಮ ಗಂಡು ಹೆಣ್ಣುಮಕ್ಕಳನ್ನು ನಾನು ಯೆಹೂದದ ಜನರಿಗೆ ಮಾರುವೆನು. ಅವರು ಅವರನ್ನು ಬಹುದೂರದಲ್ಲಿ ಶೆಬದ ಜನರಿಗೆ ಮಾರಿಬಿಡುವರು.” ಇದು ಯೆಹೋವನ ನುಡಿ.
యోవేలు 3 : 9 (ERVTE)
{#1ಯುದ್ಧಕ್ಕೆ ತಯಾರಾಗು } ಜನಾಂಗದವರಿಗೆ ಇದನ್ನು ಪ್ರಕಟಿಸು: ಯುದ್ಧಕ್ಕೆ ತಯಾರಾಗಿರಿ! ಶೂರರನ್ನು ಎಚ್ಚರಿಸಿರಿ! ಯುದ್ಧ ವೀರರು ಹತ್ತಿರಕ್ಕೆ ಬರಲಿ; ಅವರು ಬರಲಿ!
యోవేలు 3 : 10 (ERVTE)
ನಿಮ್ಮ ನೇಗಿಲ ಗುಳಗಳನ್ನು ಕತ್ತಿಯನ್ನಾಗಿ ಮಾಡಿರಿ. ಕುಡುಗೋಲುಗಳಿಂದ ಬರ್ಜಿಯನ್ನು ಮಾಡಿರಿ. ನಿಮ್ಮ ಬಲಹೀನನಾದ ಸೈನಿಕನು, “ನಾನು ಬಲಶಾಲಿ” ಅನ್ನಲಿ.
యోవేలు 3 : 11 (ERVTE)
ಎಲ್ಲಾ ಜನಾಂಗದವರೇ, ತ್ವರೆಪಡಿರಿ. ಆ ಸ್ಥಳದಲ್ಲಿ ಒಟ್ಟುಸೇರಿರಿ. ಯೆಹೋವನೇ, ನಿನ್ನ ಬಲಶಾಲಿಯಾದ ಸೈನಿಕರನ್ನು ಬರಮಾಡು.
యోవేలు 3 : 12 (ERVTE)
ಜನಾಂಗಗಳೇ, ಎಚ್ಚರಗೊಳ್ಳಿರಿ! ಯೆಹೋಷಾಫಾಟ್ ತಗ್ಗಿಗೆ ಬನ್ನಿರಿ. ಸುತ್ತಲಿರುವ ಜನಾಂಗಗಳಿಗೆ ತೀರ್ಪುಕೊಡಲು ನಾನು ಅಲ್ಲಿ ಕುಳಿತುಕೊಳ್ಳುವೆನು.
యోవేలు 3 : 13 (ERVTE)
ಬೆಳೆಯು ಪಕ್ವವಾಗಿದೆ; ಕುಡುಗೋಲನ್ನು ತನ್ನಿರಿ. ಬನ್ನಿ, ದ್ರಾಕ್ಷಿಯನ್ನು ಆಲೆಯಲ್ಲಿ ತುಳಿಯಿರಿ, ಯಾಕೆಂದರೆ ಆಲೆಯು ತುಂಬಿಹೋಗಿದೆ. ಪಿಪಾಯಿಗಳು ತುಂಬಿತುಳುಕುತ್ತಿವೆ, ಯಾಕೆಂದರೆ ಅವರ ದುಷ್ಟತ್ವವು ವಿಪರೀತವಾಗಿದೆ!
యోవేలు 3 : 14 (ERVTE)
ತೀರ್ಮಾನದ ತಗ್ಗಿನಲ್ಲಿ ಅನೇಕರು ಸೇರಿದ್ದಾರೆ. ಯೆಹೋವನ ವಿಶೇಷ ದಿನವು ತೀರ್ಮಾನದ ತಗ್ಗಿನ ಹತ್ತಿರ ಬಂದಿದೆ.
యోవేలు 3 : 15 (ERVTE)
ಸೂರ್ಯಚಂದ್ರರು ಕತ್ತಲಾಗುವರು, ನಕ್ಷತ್ರಗಳು ಹೊಳೆಯುವುದಿಲ್ಲ.
యోవేలు 3 : 16 (ERVTE)
ಚೀಯೋನಿನಿಂದ ದೇವರಾದ ಯೆಹೋವನು ಆರ್ಭಟಿಸುವನು. ಜೆರುಸಲೇಮಿನಿಂದ ಆತನು ಗರ್ಜಿಸುವನು. ಆಗ ಭೂಮ್ಯಾಕಾಶಗಳು ನಡುಗುವವು. ಆದರೆ ಯೆಹೋವನ ಜನರಿಗೆ ಆತನೇ ಆಶ್ರಯ ಸ್ಥಳವಾಗುವನು. ಆತನು ಇಸ್ರೇಲರಿಗೆ ಸುರಕ್ಷಿತ ಸ್ಥಳವಾಗುವನು.
యోవేలు 3 : 17 (ERVTE)
“ಆಗ ನಾನು ನಿಮ್ಮ ದೇವರಾದ ಯೆಹೋವನು ಎಂದು ಅರಿತುಕೊಳ್ಳುವಿರಿ. ನಾನು ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ವಾಸಿಸುವೆನು. ಜೆರುಸಲೇಮ್ ಪರಿಶುದ್ಧವಾಗುವದು. ಪರದೇಶಿಗಳು ಇನ್ನು ಮುಂದೆ ಅದನ್ನು ದಾಟಿಹೋಗುವುದಿಲ್ಲ.
యోవేలు 3 : 18 (ERVTE)
{#1ಯೆಹೂದಕ್ಕೆ ಒಂದು ಹೊಸ ಜೀವಿತದ ವಾಗ್ದಾನ } “ಆ ದಿವಸ ಸಿಹಿ ದ್ರಾಕ್ಷಾರಸವು ಬೆಟ್ಟಗಳಿಂದ ಹರಿಯುವುದು. ಬೆಟ್ಟಗಳಲ್ಲಿ ಹಾಲು ಹರಿಯುವುದು. ಮತ್ತು ಯೆಹೂದದ ಬತ್ತಿದ ನದಿಗಳಲ್ಲಿ ನೀರು ತುಂಬಿ ಹರಿಯುವದು. ಯೆಹೋವನ ಆಲಯದಿಂದ ಬುಗ್ಗೆಯು ಹೊರಡುವದು. ಅಕಾಸಿಯ ಕಣಿವೆಗೆ ನೀರನ್ನು ಕೊಡುವದು.
యోవేలు 3 : 19 (ERVTE)
ಈಜಿಪ್ಟ್ ಬರಿದಾಗುವದು. ಎದೋಮು ಬೆಂಗಾಡಾಗುವದು. ಯಾಕೆಂದರೆ ಅವರು ಯೆಹೂದದ ಜನರೊಂದಿಗೆ ಕ್ರೂರ ರೀತಿಯಲ್ಲಿ ವರ್ತಿಸಿದರು. ಅವರ ದೇಶಗಳಲ್ಲಿ ನಿರಪರಾಧಿಗಳನ್ನು ಕೊಂದರು.
యోవేలు 3 : 20 (ERVTE)
ಆದರೆ ಯೆಹೂದದಲ್ಲಿ ಯಾವಾಗಲೂ ಜನರು ವಾಸಿಸುವರು. ಅನೇಕ ತಲೆಮಾರಿನವರೆಗೆ ಜನರು ಜೆರುಸಲೇಮಿನಲ್ಲಿ ವಾಸಿಸುವರು.
యోవేలు 3 : 21 (ERVTE)
ಆ ಜನರು ನನ್ನ ಜನರನ್ನು ಕೊಂದರು. ಆದ್ದರಿಂದ ನಾನು ನಿಜವಾಗಿಯೂ ಅವರನ್ನು ಶಿಕ್ಷಿಸುವೆನು.” ಯಾಕೆಂದರೆ ದೇವರಾದ ಯೆಹೋವನು ಚೀಯೋನಿನಲ್ಲಿ ವಾಸಿಸುವನು.
❮
❯
1
2
3
4
5
6
7
8
9
10
11
12
13
14
15
16
17
18
19
20
21