న్యాయాధిపతులు 19 : 1 (ERVTE)
{#1ಒಬ್ಬ ಲೇವಿ ಮತ್ತು ಅವನ ದಾಸಿ } ಆಗಿನ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿ ಒಬ್ಬ ಲೇವಿಯು ವಾಸಮಾಡುತ್ತಿದ್ದನು. ಆ ಮನುಷ್ಯನಿಗೆ ಒಬ್ಬ ಉಪಪತ್ನಿ ಇದ್ದಳು. ಅವಳು ಯೆಹೂದದ ಬೆತ್ಲೆಹೇಮಿನವಳಾಗಿದ್ದಳು.
న్యాయాధిపతులు 19 : 2 (ERVTE)
ಒಮ್ಮೆ ಅವಳಿಗೂ ಆ ಲೇವಿಗೂ ಜಗಳವಾಯಿತು. ಅವಳು ಅವನನ್ನು ಬಿಟ್ಟು ಯೆಹೂದದ ಬೆತ್ಲೆಹೇಮಿನಲ್ಲಿದ್ದ ತನ್ನ ತಂದೆಯ ಮನೆಗೆ ಹೋದಳು. ಅವಳು ಅಲ್ಲಿ ನಾಲ್ಕು ತಿಂಗಳು ಇದ್ದುಬಿಟ್ಟಳು.
న్యాయాధిపతులు 19 : 3 (ERVTE)
ಆಗ ಆಕೆಯ ಗಂಡನು ಅವಳ ಬಳಿಗೆ ಹೋದನು; ಅವಳೊಂದಿಗೆ ಪ್ರೀತಿಯಿಂದ ಮಾತನಾಡಿ ಅವಳನ್ನು ಕರೆದುಕೊಂಡು ಬರಬೇಕೆಂಬುದು ಅವನ ಆಲೋಚನೆಯಾಗಿತ್ತು. ಆದ್ದರಿಂದ ಅವನು ತನ್ನ ಸೇವಕನೊಡನೆ ಎರಡು ಕತ್ತೆಗಳನ್ನೂ ತೆಗೆದುಕೊಂಡು ಹೋದನು. ಆ ಲೇವಿಯನು ಆಕೆಯ ತಂದೆಯ ಮನೆಗೆ ಬಂದನು. ಅವಳ ತಂದೆಯು ಆ ಲೇವಿಯನನ್ನು ನೋಡಿ ಅವನನ್ನು ಸ್ವಾಗತಿಸಲು ಮನೆಯ ಹೊರಗೆ ಬಂದನು. ಅವಳ ತಂದೆಗೆ ಬಹಳ ಸಂತೋಷವಾಯಿತು.
న్యాయాధిపతులు 19 : 4 (ERVTE)
ಅವಳ ತಂದೆಯು ಆ ಲೇವಿಯನನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ, ಅಲ್ಲೇ ಇರುವಂತೆ ಕೇಳಿಕೊಂಡನು. ಆದ್ದರಿಂದ ಆ ಲೇವಿಯು ಅಲ್ಲಿ ಮೂರು ದಿನ ಇದ್ದನು. ಅವನು ಅನ್ನಪಾನಮಾಡಿ ಮಾವನ ಮನೆಯಲ್ಲಿ ಮಲಗುತ್ತಿದ್ದನು.
న్యాయాధిపతులు 19 : 5 (ERVTE)
ನಾಲ್ಕನೆಯ ದಿನ ಅವರು ಬೆಳಗಿನ ಜಾವ ಬೇಗ ಎದ್ದರು. ಆ ಲೇವಿಯು ಹೊರಡುವದಕ್ಕೆ ಸಿದ್ಧನಾಗುತ್ತಿದ್ದನು. ಆದರೆ ಮಾವನು ತನ್ನ ಅಳಿಯನಿಗೆ, “ಸ್ವಲ್ಪ ಊಟಮಾಡು; ಆಮೇಲೆ ಹೋಗುವಿಯಂತೆ” ಎಂದನು.
న్యాయాధిపతులు 19 : 6 (ERVTE)
ಆದ್ದರಿಂದ ಆ ಲೇವಿಯು ಮತ್ತು ಅವನ ಮಾವನು ಒಟ್ಟಿಗೆ ಅನ್ನಪಾನಗಳನ್ನು ತೆಗೆದುಕೊಂಡರು. ಬಳಿಕ ಆ ಸ್ತ್ರೀಯ ತಂದೆಯು, “ದಯವಿಟ್ಟು ಈ ರಾತ್ರಿ ಇದ್ದುಬಿಡು. ವಿಶ್ರಮಿಸಿಕೋ, ಸಂತೋಷಪಡು” ಎಂದನು.
న్యాయాధిపతులు 19 : 7 (ERVTE)
ಆದರೂ ಆ ಲೇವಿಯು ಹೊರಡುವುದಕ್ಕೆ ಎದ್ದನು. ಆದರೆ ಅವನ ಮಾವನು ಆ ರಾತ್ರಿಯೂ ಅಲ್ಲಿಯೇ ಇರುವಂತೆ ಒತ್ತಾಯ ಮಾಡಿದನು.
న్యాయాధిపతులు 19 : 8 (ERVTE)
ಐದನೆಯ ದಿನ ಆ ಲೇವಿಯು ಬೆಳಗಿನ ಜಾವ ಬೇಗ ಎದ್ದು ಹೊರಡಲು ಸಿದ್ಧನಾಗಿದ್ದನು. ಆದರೆ ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಮೊದಲು ಊಟಮಾಡು; ವಿಶ್ರಾಂತಿ ತೆಗೆದುಕೋ. ಈ ರಾತ್ರಿ ಇಲ್ಲಿಯೇ ಇರು” ಎಂದು ಕೇಳಿಕೊಂಡನು. ಅವರಿಬ್ಬರು ಮತ್ತೆ ಊಟ ಮಾಡಿದರು.
న్యాయాధిపతులు 19 : 9 (ERVTE)
న్యాయాధిపతులు 19 : 10 (ERVTE)
ಆಮೇಲೆ ಆ ಲೇವಿಯೂ ಅವನ ಉಪಪತ್ನಿಯೂ ಅವನ ಆಳೂ ಹೊರಡಲು ಎದ್ದರು. ಆದರೆ ಆ ಸ್ತ್ರೀಯ ತಂದೆಯು, “ಈಗ ಕತ್ತಲಾಗುತ್ತಾ ಬಂತು, ಹೊತ್ತು ಮುಳುಗುವುದರಲ್ಲಿದೆ. ಈ ರಾತ್ರಿ ಇಲ್ಲಿಯೇ ಸಂತೋಷದಿಂದ ಕಾಲ ಕಳೆಯಿರಿ. ನಾಳೆ ಬೆಳಿಗ್ಗೆ ನೀವು ಬೇಗನೆ ಎದ್ದು ಪ್ರಯಾಣಮಾಡಬಹುದು” ಎಂದನು. ಆದರೆ ಆ ಲೇವಿಯು ಇನ್ನೊಂದು ರಾತ್ರಿ ಅಲ್ಲಿ ಇರಲು ಇಷ್ಟಪಡಲಿಲ್ಲ. ಅವನು ತನ್ನ ಎರಡು ಕತ್ತೆಗಳನ್ನು ತೆಗೆದುಕೊಂಡು ಮತ್ತು ತನ್ನ ಉಪಪತ್ನಿಯನ್ನು ಕರೆದುಕೊಂಡು ಹೊರಟನು. ಅವನು ಜೆರುಸಲೇಮ್ ಎಂದು ಕರೆಯಲ್ಪಡುವ ಯೆಬೂಸ್ ನಗರದವರೆಗೆ ಪ್ರಯಾಣ ಮಾಡಿದನು.
న్యాయాధిపతులు 19 : 11 (ERVTE)
ಹೊತ್ತು ಮುಳುಗುವುದರಲ್ಲಿತ್ತು. ಅವರು ಯೆಬೂಸ್ ನಗರದ ಹತ್ತಿರ ಬಂದಿದ್ದರು. ಆಗ ಅವನ ಸೇವಕನು ತನ್ನ ಒಡೆಯನಾದ ಆ ಲೇವಿಯನಿಗೆ, “ಈ ಯೆಬೂಸಿಯರ ನಗರದಲ್ಲಿ ಇದ್ದು ಬಿಡೋಣ, ಈ ರಾತ್ರಿ ಇಲ್ಲಿಯೇ ಕಳೆಯೋಣ” ಎಂದನು.
న్యాయాధిపతులు 19 : 12 (ERVTE)
ಆದರೆ ಆ ಲೇವಿಯು, “ಬೇಡ, ನಾವು ಪರಿಚಯವಿಲ್ಲದವರ ನಗರದಲ್ಲಿ ಇರುವುದು ಬೇಡ. ಆ ಜನರು ಇಸ್ರೇಲರಲ್ಲ. ನಾವು ಗಿಬೆಯ ನಗರಕ್ಕೆ ಹೋಗೋಣ” ಎಂದನು.
న్యాయాధిపతులు 19 : 13 (ERVTE)
ಆ ಲೇವಿಯು ಮತ್ತೆ ತನ್ನ ಸೇವಕನಿಗೆ, “ಬಾ ಹೋಗೋಣ, ಗಿಬೆಯದಲ್ಲಾಗಲಿ ಅಥವಾ ರಾಮದಲ್ಲಾಗಲಿ ಈ ರಾತ್ರಿ ಇಳಿದುಕೊಳ್ಳುವ ಪ್ರಯತ್ನ ಮಾಡೋಣ” ಎಂದು ಹೇಳಿದನು.
న్యాయాధిపతులు 19 : 14 (ERVTE)
ಆ ಲೇವಿಯು ಮತ್ತು ಅವನ ಸಂಗಡ ಇದ್ದ ಜನರು ಪ್ರಯಾಣ ಮುಂದುವರಿಸಿದರು. ಅವರು ಗಿಬೆಯ ನಗರವನ್ನು ಪ್ರವೇಶ ಮಾಡಿದ ಸಮಯದಲ್ಲಿ ಸೂರ್ಯನು ಮುಳುಗುತ್ತಿದ್ದನು. ಗಿಬೆಯ ನಗರವು ಬೆನ್ಯಾಮೀನ್ಯರ ಪ್ರದೇಶದಲ್ಲಿದೆ.
న్యాయాధిపతులు 19 : 15 (ERVTE)
ಅವರು ಗಿಬೆಯದಲ್ಲಿ ತಮ್ಮ ಪ್ರಯಾಣವನ್ನು ನಿಲ್ಲಿಸಿದರು. ಅಂದು ರಾತ್ರಿ ಆ ನಗರದಲ್ಲಿ ಇರುವುದಕ್ಕೆ ನಿರ್ಧಾರ ಮಾಡಿದರು. ಅವರು ನಗರದ ಬೀದಿಯ ಮುಖ್ಯಸ್ಥಳಕ್ಕೆ ಬಂದು ಅಲ್ಲಿ ಕುಳಿತುಕೊಂಡರು. ಯಾರೂ ಅವರನ್ನು ಆ ರಾತ್ರಿ ತಮ್ಮ ಮನೆಯಲ್ಲಿ ಇರಲು ಕರೆಯಲಿಲ್ಲ.
న్యాయాధిపతులు 19 : 16 (ERVTE)
ಆ ಸಾಯಂಕಾಲ ಒಬ್ಬ ವೃದ್ಧನು ಹೊಲದಿಂದ ಮನೆಗೆ ಬರುತ್ತಿದ್ದನು. ಅವನು ಎಫ್ರಾಯೀಮ್ ಬೆಟ್ಟಪ್ರದೇಶದವನಾಗಿದ್ದು, ಈಗ ಗಿಬೆಯ ನಗರದಲ್ಲಿ ವಾಸಮಾಡುತ್ತಿದ್ದನು. (ಗಿಬೆಯದ ನಿವಾಸಿಗಳು ಬೆನ್ಯಾಮೀನ್ಯರಾಗಿದ್ದರು.)
న్యాయాధిపతులు 19 : 17 (ERVTE)
ಆ ವೃದ್ಧನು ಬೀದಿಯ ಮುಖ್ಯಸ್ಥಳದಲ್ಲಿ ಪ್ರಯಾಣಿಕನನ್ನು (ಲೇವಿಯನ್ನು) ನೋಡಿದನು. ಆ ವೃದ್ಧನು, “ನೀನು ಎಲ್ಲಿಗೆ ಹೋಗಬೇಕು? ಎಲ್ಲಿಂದ ಬಂದಿರುವೆ?” ಎಂದು ಅವನನ್ನು ಕೇಳಿದನು.
న్యాయాధిపతులు 19 : 18 (ERVTE)
ಅದಕ್ಕೆ ಲೇವಿಯು, “ನಾವು ಯೆಹೂದದ ಬೆತ್ಲೆಹೇಮಿನಿಂದ ಹೊರಟಿದ್ದೇವೆ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ಮನೆಗೆ ಹೋಗುತ್ತಿದ್ದೇವೆ. ಆದರೆ ಈ ರಾತ್ರಿ ಇಲ್ಲಿ ತಂಗಲು ಯಾರೂ ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸಲಿಲ್ಲ. ನಾನು ಯೆಹೂದದ ಬೆತ್ಲೆಹೇಮಿಗೆ ಹೋಗಿದ್ದೆ. ಈಗ ನಾನು ನಮ್ಮ ಮನೆಗೆ ಹೋಗುತ್ತಿದ್ದೇನೆ.
న్యాయాధిపతులు 19 : 19 (ERVTE)
ನಮ್ಮ ಕತ್ತೆಗಳಿಗೆ ಮೇವು ಮತ್ತು ಹುಲ್ಲು ಇವೆ. ನನಗೂ ಈ ಸ್ತ್ರೀಗೂ ನನ್ನ ಸೇವಕನಿಗೂ ರೊಟ್ಟಿ ಮತ್ತು ದ್ರಾಕ್ಷಾರಸ ಇವೆ. ನಮಗೆ ಏನೂ ಬೇಕಾಗಿಲ್ಲ” ಎಂದು ಉತ್ತರಕೊಟ್ಟನು.
న్యాయాధిపతులు 19 : 20 (ERVTE)
ಅದಕ್ಕೆ ಆ ವೃದ್ಧನು, “ನೀನು ನನ್ನ ಮನೆಗೆ ಬಂದು ಈ ರಾತ್ರಿ ಇಳಿದುಕೋ. ನಿನಗೆ ಬೇಕಾದುದನ್ನು ನಾನು ಕೊಡುವೆ. ನೀನು ಬೀದಿಯಲ್ಲಿ ಮಾತ್ರ ಇರಬೇಡ” ಎಂದು ಹೇಳಿದನು;
న్యాయాధిపతులు 19 : 21 (ERVTE)
ಬಳಿಕ ಆ ವೃದ್ಧನು ಆ ಲೇವಿಯನನ್ನು ಮತ್ತು ಅವನ ಸಂಗಡ ಇದ್ದ ಜನರನ್ನು ತನ್ನ ಮನೆಗೆ ಕರೆದುಕೊಂಡು ಹೋದನು; ಅವರ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡರು. ಆಮೇಲೆ ಅವರು ಅನ್ನಪಾನಗಳನ್ನು ತೆಗೆದುಕೊಂಡರು.
న్యాయాధిపతులు 19 : 22 (ERVTE)
న్యాయాధిపతులు 19 : 23 (ERVTE)
ಲೇವಿಯು ಮತ್ತು ಅವನ ಸಂಗಡಿಗರು ಸಂತೋಷದಿಂದ ಅಲ್ಲಿದ್ದಾಗ ಆ ನಗರದ ಕೆಲವು ಜನರು ಆ ಮನೆಗೆ ಮುತ್ತಿಗೆ ಹಾಕಿದರು. ಅವರು ಮಹಾ ನೀಚಜನರಾಗಿದ್ದರು. ಅವರು ಬಾಗಿಲು ತಟ್ಟತೊಡಗಿದರು. ಆ ಮನೆಯ ಯಜಮಾನನಾದ ವೃದ್ಧನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ. ನಾವು ಅವನೊಂದಿಗೆ ಸಂಭೋಗ ಮಾಡಬೇಕು”ಎಂದು ಕೂಗಾಡಿದರು. ಆ ವೃದ್ಧನು ಮನೆಯಿಂದ ಹೊರಗೆ ಬಂದು ಆ ನೀಚರ ಜೊತೆ ಮಾತನಾಡಿ, “ಬೇಡ, ನನ್ನ ಮಿತ್ರರೇ, ಅಂಥ ಪಾಪದ ಕೆಲಸವನ್ನು ಮಾಡಬೇಡಿ. ಆ ಮನುಷ್ಯ ನನ್ನ ಅತಿಥಿಯಾಗಿದ್ದಾನೆ. ಈ ಭಯಂಕರ ಪಾಪವನ್ನು ಮಾಡಬೇಡಿ.
న్యాయాధిపతులు 19 : 24 (ERVTE)
ಇಲ್ಲಿ ನೋಡಿರಿ, ನನ್ನ ಮಗಳಿದ್ದಾಳೆ. ಅವಳು ಯಾರೊಂದಿಗೂ ಈವರೆಗೆ ಸಂಭೋಗ ಮಾಡಿಲ್ಲ. ನಾನು ಅವಳನ್ನೂ ಅವನ ಉಪಪತ್ನಿಯನ್ನೂ ಹೊರಗೆ ಕರೆದುಕೊಂಡು ಬರುತ್ತೇನೆ. ನಿಮ್ಮ ಮನಸ್ಸಿಗೆ ಬಂದಂತೆ ಅವರನ್ನು ಬಳಸಿಕೊಳ್ಳಿ. ನೀವು ಅವರನ್ನು ಹಿಂಸಿಸಿದರೂ ಆ ಮನುಷ್ಯನ ವಿರೋಧವಾಗಿ ಅಂಥ ಭಯಂಕರ ಪಾಪವನ್ನು ಮಾಡಬೇಡಿ” ಎಂದು ಅವರನ್ನು ಬೇಡಿಕೊಂಡನು.
న్యాయాధిపతులు 19 : 25 (ERVTE)
ಆದರೆ ಆ ನೀಚರು ಆ ವೃದ್ಧನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆಗ ಆ ಲೇವಿಯು ತನ್ನ ಉಪಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿ ಆ ನೀಚರಿಗೆ ಒಪ್ಪಿಸಿದನು. ಆ ನೀಚರು ಅವಳನ್ನು ಪೀಡಿಸಿ ಇಡೀ ರಾತ್ರಿ ಅವಳನ್ನು ಸಂಭೋಗಿಸಿದರು. ಬೆಳಗಿನ ಜಾವ ಅವಳನ್ನು ಹೋಗಲು ಬಿಟ್ಟರು.
న్యాయాధిపతులు 19 : 26 (ERVTE)
ಬೆಳಗಿನ ಜಾವ ಅವಳು ತನ್ನ ಒಡೆಯನಿದ್ದ ಮನೆಗೆ ಬಂದಳು. ಅವಳು ಮನೆಯ ಮುಖ್ಯದ್ವಾರದಲ್ಲಿ ಬಿದ್ದುಬಿಟ್ಟಳು. ಬೆಳಗಾಗುವವರೆಗೂ ಅವಳು ಅಲ್ಲಿಯೇ ಬಿದ್ದಿದ್ದಳು.
న్యాయాధిపతులు 19 : 27 (ERVTE)
ಆ ಲೇವಿಯನು ಮರುದಿನ ಬೆಳಿಗ್ಗೆ ಬೇಗ ಎದ್ದನು. ಅವನು ತನ್ನ ಮನೆಗೆ ಹೋಗಬೇಕೆಂದಿದ್ದನು. ಆದ್ದರಿಂದ ಹೊರಗೆ ಹೋಗಲು ಬಾಗಿಲು ತೆರೆದನು. ಬಾಗಿಲ ಮುಂದೆ ಹೊಸ್ತಿಲದ ಮೇಲೆ ಕೈಚಾಚಿ ಬಿದ್ದಿದ್ದ ತನ್ನ ಉಪಪತ್ನಿಯನ್ನು ಕಂಡನು.
న్యాయాధిపతులు 19 : 28 (ERVTE)
ಆಗ ಲೇವಿಯು ಅವಳಿಗೆ, “ಏಳು, ಹೋಗೋಣ” ಎಂದು ಎಬ್ಬಿಸಿದನು. ಆದರೆ ಅವಳು ಉತ್ತರಕೊಡಲಿಲ್ಲ. ಅವಳು ಸತ್ತುಹೋಗಿದ್ದಳು. ಆ ಲೇವಿಯು, ಅವಳನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ಮನೆಗೆ ಹೋದನು.
న్యాయాధిపతులు 19 : 29 (ERVTE)
ಅವನು ಮನೆಗೆ ಬಂದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹನ್ನೆರಡು ಹೋಳಾಗಿ ಕತ್ತರಿಸಿದನು. ಆಮೇಲೆ ಅವನು ಆ ಸ್ತ್ರೀಯ ದೇಹದ ಹನ್ನೆರಡು ಹೋಳುಗಳನ್ನು ಇಸ್ರೇಲರು ವಾಸಮಾಡುವ ಎಲ್ಲ ಪ್ರದೇಶಗಳಿಗೆ ಕಳುಹಿಸಿಕೊಟ್ಟನು.
న్యాయాధిపతులు 19 : 30 (ERVTE)
ಇದನ್ನು ನೋಡಿದ ಪ್ರತಿಯೊಬ್ಬರು, “ಈ ಮುಂಚೆ ಇಸ್ರೇಲಿನಲ್ಲಿ ಇಂಥದ್ದು ಆಗಿಲ್ಲ. ನಾವು ಈಜಿಪ್ಟಿನಿಂದ ಹೊರಬಂದಾಗಿನಿಂದ ಇಂಥದನ್ನು ನೋಡಿಲ್ಲ. ಇದಕ್ಕೆ ತಕ್ಕಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ” ಎಂದು ಅಂದುಕೊಂಡರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30