లేవీయకాండము 13 : 1 (ERVTE)
{#1ಚರ್ಮರೋಗಗಳ ಕುರಿತು ನಿಯಮಗಳು } ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ:
లేవీయకాండము 13 : 2 (ERVTE)
“ಒಬ್ಬ ಮನುಷ್ಯನ ಮೇಲೆ ಊತವಾಗಲಿ ಗುಳ್ಳೆಯಾಗಲಿ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಮಚ್ಚೆಯು ಕುಷ್ಠರೋಗದಂತೆ ಕಂಡುಬಂದರೆ, ಅವನನ್ನು ಯಾಜಕನಾದ ಆರೋನನ ಬಳಿಗೆ ಅಥವಾ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು.
లేవీయకాండము 13 : 3 (ERVTE)
ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ನೋಡಬೇಕು. ಮಚ್ಚೆಯಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಮಚ್ಚೆಯು ಅವನ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಪರೀಕ್ಷಿಸಿದ ನಂತರ ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು.
లేవీయకాండము 13 : 4 (ERVTE)
“ಕೆಲವು ಬಾರಿ ಒಬ್ಬ ವ್ಯಕ್ತಿಯ ಚರ್ಮದ ಮೇಲೆ ಬಿಳಿ ಮಚ್ಚೆ ಇರುತ್ತದೆ. ಆದರೆ ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿರದಿದ್ದರೆ ಮತ್ತು ಅದರ ರೋಮ ಬೆಳ್ಳಗಾಗಿಲ್ಲದಿದ್ದರೆ ಯಾಜಕನು ಅವನನ್ನು ಬೇರೆ ಜನರಿಂದ ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.
లేవీయకాండము 13 : 5 (ERVTE)
ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸಬೇಕು. ಮಚ್ಚೆಯು ಬದಲಾಗದೆ ಚರ್ಮದ ಮೇಲೆ ಹರಡಲಿಲ್ಲವೆಂದು ಯಾಜಕನು ಕಂಡರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳವರೆಗೆ ಇತರ ಜನರಿಂದ ಪ್ರತ್ಯೇಕಿಸಬೇಕು.
లేవీయకాండము 13 : 6 (ERVTE)
ಏಳು ದಿನಗಳ ನಂತರ ಯಾಜಕನು ಮತ್ತೆ ಅವನನ್ನು ನೋಡಬೇಕು. ಮಚ್ಚೆಯು ಮೊಬ್ಬಾಗಿ ಚರ್ಮದಲ್ಲಿ ಹರಡದೆ ಇದ್ದರೆ, ಆಗ ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು. ಯಾಕೆಂದರೆ ಮಚ್ಚೆಯು ಕೇವಲ ಗುಳ್ಳೆಯಾಗಿದೆ. ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಒಗೆದುಕೊಂಡು ತಿರುಗಿ ಶುದ್ಧನಾಗುವನು.
లేవీయకాండము 13 : 7 (ERVTE)
“ಆದರೆ ಆ ವ್ಯಕ್ತಿಯ ಗುಳ್ಳೆಯು ಚರ್ಮದ ಮೇಲೆ ಹೆಚ್ಚಾಗಿ ಹರಡಿದರೆ, ಆ ವ್ಯಕ್ತಿಯು ಯಾಜಕನ ಬಳಿಗೆ ಮತ್ತೆ ಬರಬೇಕು.
లేవీయకాండము 13 : 8 (ERVTE)
ಯಾಜಕನು ಪರೀಕ್ಷಿಸಿದಾಗ ಗುಳ್ಳೆಯು ಚರ್ಮದ ಮೇಲೆ ಹರಡಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
లేవీయకాండము 13 : 9 (ERVTE)
“ಒಬ್ಬನಿಗೆ ಕುಷ್ಠವಿದ್ದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
లేవీయకాండము 13 : 10 (ERVTE)
ಯಾಜಕನು ಆ ವ್ಯಕ್ತಿಯನ್ನು ನೋಡಬೇಕು. ಚರ್ಮದ ಮೇಲೆ ಬೆಳ್ಳಗಾದ ಊತವಿದ್ದರೆ, ರೋಮವು ಬೆಳ್ಳಗಾಗಿದ್ದರೆ ಮತ್ತು ಚರ್ಮವು ಊತದಿಂದ ಹಸಿಯಾಗಿ ಕಂಡರೆ,
లేవీయకాండము 13 : 11 (ERVTE)
ಅದು ಬಹಳ ಕಾಲದಿಂದ ಅವನ ಚರ್ಮದಲ್ಲಿರುವ ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಯಾಜಕನು ಅವನನ್ನು ಪರೀಕ್ಷಿಸುವುದಕ್ಕಾಗಿ ಸ್ವಲ್ಪ ಸಮಯದವರೆಗೆ ಜನರಿಂದ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ಆ ವ್ಯಕ್ತಿಯು ಈಗಾಗಲೇ ಅಶುದ್ಧನಾಗಿದ್ದಾನೆ.
లేవీయకాండము 13 : 12 (ERVTE)
“ಕೆಲವು ಬಾರಿ ಚರ್ಮರೋಗವು ಒಬ್ಬನ ಮೈಯೆಲ್ಲಾ ಹರಡಿಕೊಳ್ಳುವುದು. ಚರ್ಮರೋಗವು ಅವನನ್ನು ತಲೆಯಿಂದ ಅಂಗಾಲಿನವರೆಗೂ ಮುಚ್ಚಿಕೊಳ್ಳುವುದು. ಯಾಜಕನು ಆ ವ್ಯಕ್ತಿಯ ಇಡೀ ದೇಹವನ್ನು ನೋಡಬೇಕು.
లేవీయకాండము 13 : 13 (ERVTE)
ಚರ್ಮರೋಗವು ಇಡೀ ದೇಹವನ್ನು ವ್ಯಾಪಿಸಿ ಆ ವ್ಯಕ್ತಿಯ ಚರ್ಮವು ಬಿಳಿ ಬಣ್ಣಕ್ಕೆ ತಿರುಗಿರುವುದನ್ನು ಯಾಜಕನು ಕಂಡರೆ, ಆ ವ್ಯಕ್ತಿಯು ಶುದ್ಧನೆಂದು ಯಾಜಕನು ಪ್ರಕಟಿಸಬೇಕು.
లేవీయకాండము 13 : 14 (ERVTE)
ಆದರೆ ಆ ವ್ಯಕ್ತಿಯ ಚರ್ಮವು ಹಸಿಯಾಗಿದ್ದರೆ, ಆ ವ್ಯಕ್ತಿಯು ಶುದ್ಧನಲ್ಲ.
లేవీయకాండము 13 : 15 (ERVTE)
ಯಾಜಕನು ಹಸಿಯಾದ ಚರ್ಮವನ್ನು ನೋಡಿದಾಗ, ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಹಸಿಯಾದ ಚರ್ಮವು ಶುದ್ಧವಲ್ಲ. ಅದು ಕುಷ್ಠರೋಗವಾಗಿದೆ.
లేవీయకాండము 13 : 16 (ERVTE)
“ಹಸಿಯಾದ ಚರ್ಮವು ಬದಲಾಗಿ ಬಿಳಿಯಾದರೆ, ಆಗ ಆ ವ್ಯಕ್ತಿ ಯಾಜಕನ ಬಳಿಗೆ ಬರಬೇಕು.
లేవీయకాండము 13 : 17 (ERVTE)
ಯಾಜಕನು ಅವನನ್ನು ಪರೀಕ್ಷಿಸಬೇಕು. ಮಚ್ಚೆಯು ಬೆಳ್ಳಗಾಗಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಆ ವ್ಯಕ್ತಿಯು ಶುದ್ಧನಾಗಿದ್ದಾನೆ.
లేవీయకాండము 13 : 18 (ERVTE)
“ಒಬ್ಬನ ಚರ್ಮದ ಮೇಲೆ ಹುಣ್ಣು ಎದ್ದಿದ್ದು ವಾಸಿಯಾಗಿದ್ದಿರಬಹುದು.
లేవీయకాండము 13 : 19 (ERVTE)
ಆದರೆ ಹುಣ್ಣಿದ್ದ ಜಾಗದಲ್ಲಿ ಬೆಳ್ಳಗಾದ ಊತವಿದ್ದರೆ ಅಥವಾ ಕೆಂಪುಬಿಳುಪು ಮಿಶ್ರವಾದ ಹೊಳೆಯುವ ಮಚ್ಚೆಯಿದ್ದರೆ, ಚರ್ಮದ ಈ ಭಾಗವನ್ನು ಯಾಜಕನಿಗೆ ತೋರಿಸಬೇಕು.
లేవీయకాండము 13 : 20 (ERVTE)
ಯಾಜಕನು ಅದನ್ನು ಪರೀಕ್ಷಿಸಬೇಕು. ಅದು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರ ಮೇಲಿರುವ ರೋಮವು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಆ ಕಲೆಯು ಕುಷ್ಠದ ಸೋಂಕಾಗಿದೆ. ಹುಣ್ಣಿನಿಂದ ಕುಷ್ಠ ಬಂದಿದೆ.
లేవీయకాండము 13 : 21 (ERVTE)
ಆದರೆ ಯಾಜಕನು ಮಚ್ಚೆಯನ್ನು ನೋಡಿದಾಗ ಅದರಲ್ಲಿ ಬಿಳಿರೋಮಗಳು ಇಲ್ಲದಿದ್ದರೆ, ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.
లేవీయకాండము 13 : 22 (ERVTE)
ಮಚ್ಚೆಯು ಚರ್ಮದಲ್ಲಿ ಹರಡಿದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಸೋಂಕುರೋಗವಾಗಿದೆ.
లేవీయకాండము 13 : 23 (ERVTE)
ಆದರೆ ಹೊಳೆಯುವ ಮಚ್ಚೆಯು ತನ್ನ ಸ್ಥಳದಲ್ಲಿಯೇ ಇದ್ದು ಹರಡದಿದ್ದರೆ, ಆಗ ಅದು ಕೇವಲ ಹುಣ್ಣಿನ ಮಚ್ಚೆಯಾಗಿದೆ. ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು.
లేవీయకాండము 13 : 24 (ERVTE)
(24-25)“ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದ ಸುಟ್ಟಗಾಯ ಉಂಟಾಗಬಹುದು. ಹಸಿಯಾದ ಚರ್ಮವು ಬೆಳ್ಳಗಾಗಿದ್ದರೆ, ಕೆಂಪುಬಿಳುಪು ಮಿಶ್ರವಾದ ಮಚ್ಚೆಯುಳ್ಳದ್ದಾಗಿದ್ದರೆ, ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಬಿಳಿ ಕಲೆ ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಆ ಕಲೆಯಲ್ಲಿನ ರೋಮವು ಬೆಳ್ಳಗಾಗಿದ್ದರೆ, ಅದು ಕುಷ್ಠರೋಗವಾಗಿದೆ. ಆ ಕುಷ್ಠವು ಸುಟ್ಟಗಾಯದಲ್ಲಿ ಹುಟ್ಟಿದ್ದಾಗಿದೆ. ಆಗ ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
లేవీయకాండము 13 : 25 (ERVTE)
లేవీయకాండము 13 : 26 (ERVTE)
ಆದರೆ ಯಾಜಕನು ಮಚ್ಚೆಯನ್ನು ನೋಡಲಾಗಿ ಹೊಳೆಯುವ ಮಚ್ಚೆಯಲ್ಲಿ ಬಿಳಿರೋಮವಿಲ್ಲದೆ ಮತ್ತು ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗುತ್ತಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
లేవీయకాండము 13 : 27 (ERVTE)
ಏಳನೆಯ ದಿನದಲ್ಲಿ ಯಾಜಕನು ಮತ್ತೆ ಆ ವ್ಯಕ್ತಿಯನ್ನು ಪರೀಕ್ಷಿಸಬೇಕು. ಮಚ್ಚೆಯು ಚರ್ಮದ ಮೇಲೆ ಹರಡಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
లేవీయకాండము 13 : 28 (ERVTE)
ಆದರೆ ಹೊಳೆಯುವ ಮಚ್ಚೆಯು ಚರ್ಮದ ಮೇಲೆ ಉಂಟಾದ ಊತವಾಗಿದೆ. ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಅದು ಕೇವಲ ಸುಟ್ಟಗಾಯದಿಂದ ಉಂಟಾದ ಮಚ್ಚೆಯಾಗಿದೆ.
లేవీయకాండము 13 : 29 (ERVTE)
“ಒಬ್ಬ ಗಂಡಸಿನ ಅಥವಾ ಹೆಂಗಸಿನ ತಲೆಯ ನೆತ್ತಿಯಲ್ಲಿ ಅಥವಾ ಗಡ್ಡದಲ್ಲಿ ಸೋಂಕು ತಗಲಿ ಕಲೆ ಉಂಟಾಗಬಹುದು.
లేవీయకాండము 13 : 30 (ERVTE)
ಯಾಜಕನು ಆ ಕಲೆಯನ್ನು ನೋಡಬೇಕು. ಸೋಂಕಿನ ಕಲೆಯು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರಲ್ಲಿರುವ ರೋಮವು ತೆಳ್ಳಗಾಗಿಯೂ ಹಳದಿಯಾಗಿಯೂ ಇದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ತಲೆಯ ಅಥವಾ ಗಡ್ಡದ ಕೆಟ್ಟ ಚರ್ಮರೋಗವಾಗಿದೆ.
లేవీయకాండము 13 : 31 (ERVTE)
ರೋಗವು ಚರ್ಮಕ್ಕಿಂತ ತಗ್ಗಾಗಿಲ್ಲವೆಂದು ಕಂಡುಬಂದರೂ ಅದರಲ್ಲಿ ಕಪ್ಪಾದ ಕೂದಲು ಇಲ್ಲದ್ದಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
లేవీయకాండము 13 : 32 (ERVTE)
ಏಳನೆಯ ದಿನದಲ್ಲಿ ಯಾಜಕನು ಸೋಂಕು ತಗಲಿದ ಜಾಗವನ್ನು ಪರೀಕ್ಷಿಸಬೇಕು. ರೋಗವು ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಕಡೆ ಹಳದಿಬಣ್ಣದ ಕೂದಲು ಬೆಳೆಯುತ್ತಿಲ್ಲವಾಗಿದ್ದರೆ ಮತ್ತು ರೋಗವು ಉಳಿದ ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ,
లేవీయకాండము 13 : 33 (ERVTE)
ಆಗ ಆ ವ್ಯಕ್ತಿಯು ಕ್ಷೌರ ಮಾಡಿಸಿಕೊಳ್ಳಬೇಕು. ಆದರೆ ಅವನು ರೋಗ ಇರುವ ಜಾಗದಲ್ಲಿ ಕ್ಷೌರ ಮಾಡಿಸಿಕೊಳ್ಳಬಾರದು. ಯಾಜಕನು ಆ ವ್ಯಕ್ತಿಯನ್ನು ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
లేవీయకాండము 13 : 34 (ERVTE)
ಏಳನೆಯ ದಿನದಲ್ಲಿ ಯಾಜಕನು ರೋಗವನ್ನು ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಳ್ಳದಿದ್ದರೆ ಮತ್ತು ಅದು ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ ಆಗ ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಶುದ್ಧನಾಗುವನು.
లేవీయకాండము 13 : 35 (ERVTE)
ಆದರೆ ಅವನು ಶುದ್ಧನಾದ ನಂತರ, ರೋಗವು ಚರ್ಮದ ಮೇಲೆ ಹರಡಿದರೆ,
లేవీయకాండము 13 : 36 (ERVTE)
ಯಾಜಕನು ಆ ವ್ಯಕ್ತಿಯನ್ನು ಮತ್ತೆ ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಂಡಿದ್ದರೆ, ಯಾಜಕನು ಹಳದಿ ಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ. ಅವನು ಅಶುದ್ಧನಾಗಿದ್ದಾನೆ.
లేవీయకాండము 13 : 37 (ERVTE)
ಆದರೆ ರೋಗವು ನಿಂತುಹೋಗಿ, ಕಪ್ಪಾದ ಕೂದಲು ಆ ಜಾಗದಲ್ಲಿ ಬೆಳೆಯುತ್ತಿದ್ದರೆ, ರೋಗವು ವಾಸಿಯಾಗಿದೆ ಎಂದರ್ಥ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ. ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು.
లేవీయకాండము 13 : 38 (ERVTE)
“ಒಬ್ಬ ಗಂಡಸಿನ ಅಥವಾ ಹೆಂಗಸಿನ ಚರ್ಮದ ಮೇಲೆ ಬಿಳಿ ಕಲೆಗಳು ಇದ್ದರೆ,
లేవీయకాండము 13 : 39 (ERVTE)
ಯಾಜಕನು ಆ ಕಲೆಗಳನ್ನು ಪರೀಕ್ಷಿಸಬೇಕು. ಆ ವ್ಯಕ್ತಿಯ ಚರ್ಮದ ಮೇಲಿರುವ ಕಲೆಗಳು ಬರೀ ಮೊಬ್ಬಾದ ಬಿಳೀ ಬಣ್ಣದವುಗಳಾಗಿದ್ದರೆ, ಆಗ ರೋಗವು ಕೇವಲ ಚರ್ಮದಲ್ಲಿ ಹುಟ್ಟಿದ ಚಿಬ್ಬಾಗಿದೆ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ.
లేవీయకాండము 13 : 40 (ERVTE)
“ಒಬ್ಬ ಮನುಷ್ಯನ ತಲೆಕೂದಲು ಉದುರಿಹೋಗುತ್ತಿದ್ದರೆ ಅವನು ಶುದ್ಧನಾಗಿದ್ದಾನೆ. ಅವನು ಬೋಳುತಲೆಯವನಷ್ಟೆ.
లేవీయకాండము 13 : 41 (ERVTE)
ಒಬ್ಬನ ತಲೆಯ ಪಾರ್ಶ್ವಗಳಿಂದ ಕೂದಲು ಉದುರಿಹೋಗುತ್ತಿದ್ದರೆ, ಅದು ಇನ್ನೊಂದು ರೀತಿಯ ಬೋಳುತಲೆಯಷ್ಟೆ.
లేవీయకాండము 13 : 42 (ERVTE)
ಆದರೆ ಅವನ ನೆತ್ತಿಯ ಮೇಲೆ ಕೆಂಪು ಬಿಳುಪು ಮಿಶ್ರಿತವಾದ ಸೋಂಕಿನ ಚಿಹ್ನೆ ಇದ್ದರೆ, ಅದು ಚರ್ಮರೋಗವಾಗಿದೆ.
లేవీయకాండము 13 : 43 (ERVTE)
ಯಾಜಕನು ಆ ವ್ಯಕ್ತಿಯನ್ನು ಪರೀಕ್ಷಿಸಬೇಕು. ಸೋಂಕಿನಿಂದ ಉಂಟಾದ ಊತ ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿ ಕುಷ್ಠದಂತೆ ತೋರಿದರೆ,
లేవీయకాండము 13 : 44 (ERVTE)
ಆಗ ಆ ವ್ಯಕ್ತಿಯ ತಲೆಯಲ್ಲಿ ಕುಷ್ಠರೋಗವಿದೆ. ಅವನು ಅಶುದ್ಧನಾಗಿದ್ದಾನೆ. ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು.
లేవీయకాండము 13 : 45 (ERVTE)
“ಒಬ್ಬನಿಗೆ ಕುಷ್ಠರೋಗವಿದ್ದರೆ, ಅವನು ಬೇರೆ ಜನರಿಗೆ ಎಚ್ಚರಿಕೆ ಕೊಡಬೇಕು. ‘ನಾನು ಅಶುದ್ಧನು, ಅಶುದ್ಧನು’ ಎಂದು ಅವನು ಕೂಗಿಕೊಳ್ಳಬೇಕು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ಹರಿದುಕೊಂಡಿರಬೇಕು; ತನ್ನ ಕೂದಲನ್ನು ಕೆದರಿಕೊಂಡಿರಬೇಕು; ತನ್ನ ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡಿರಬೇಕು.
లేవీయకాండము 13 : 46 (ERVTE)
ಆ ವ್ಯಕ್ತಿಯು ತನಗೆ ರೋಗವಿರುವ ಕಾಲವೆಲ್ಲಾ ಅಶುದ್ಧನಾಗಿರುವನು. ಆ ವ್ಯಕ್ತಿಯು ಅಶುದ್ಧನಾಗಿದ್ದಾನೆ. ಅವನು ಒಂಟಿಯಾಗಿ ವಾಸಿಸಬೇಕು. ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.
లేవీయకాండము 13 : 47 (ERVTE)
(47-48)“ಕೆಲವು ಬಟ್ಟೆಗಳಲ್ಲಿ ಬೂಷ್ಟು ಇರಬಹುದು. ಅದು ನಾರಿನ ಬಟ್ಟೆಯಾಗಲಿ ಉಣ್ಣೆ ಬಟ್ಟೆಯಾಗಲಿ ಆಗಿರಬಹುದು. ಅದು ಹೆಣೆದ ಅಥವಾ ಹೊಲಿದ ಬಟ್ಟೆಯಾಗಿರಬಹುದು. ಚರ್ಮದಿಂದ ಮಾಡಿದ ವಸ್ತುವಿನ ಮೇಲೂ ಬೂಷ್ಟು ಇರಬಹುದು.
లేవీయకాండము 13 : 48 (ERVTE)
లేవీయకాండము 13 : 49 (ERVTE)
ಹಸಿರು ಅಥವಾ ಕೆಂಪು ಬಣ್ಣದ ಬೂಷ್ಟು ಬಟ್ಟೆಯ, ಚರ್ಮದ, ನೇಯ್ದ ಮತ್ತು ಹೆಣೆದ ಸಾಮಗ್ರಿಗಳ ಮೇಲೆ ಇದ್ದರೆ, ಆಗ ಅದನ್ನು ಯಾಜಕನಿಗೆ ತೋರಿಸಬೇಕು.
లేవీయకాండము 13 : 50 (ERVTE)
ಯಾಜಕನು ಬೂಷ್ಟನ್ನು ನೋಡಬೇಕು. ಅವನು ಆ ವಸ್ತುವನ್ನು ಏಳು ದಿನಗಳವರೆಗೆ ಪ್ರತ್ಯೇಕವಾದ ಸ್ಥಳದಲ್ಲಿರಿಸಬೇಕು.
లేవీయకాండము 13 : 51 (ERVTE)
(51-52)ಏಳನೆಯ ದಿನದಲ್ಲಿ ಯಾಜಕನು ಬೂಷ್ಟನ್ನು ಪರೀಕ್ಷಿಸಬೇಕು. ಅದು ಚರ್ಮದ ಮೇಲಾಗಲಿ ಬಟ್ಟೆಯ ಮೇಲಾಗಲಿ ನೇಯ್ದ ಅಥವಾ ಹೆಣೆದ ಬಟ್ಟೆಯ ಮೇಲಾಗಲಿ ಇದ್ದರೆ ಅದನ್ನು ಪರೀಕ್ಷಿಸಬೇಕು. ಬೂಷ್ಟು ಹರಡಿದ್ದರೆ, ಆ ಬಟ್ಟೆ ಅಥವಾ ತೊಗಲು ಅಶುದ್ಧವಾಗಿದೆ. ಯಾಜಕನು ಅದನ್ನು ಸುಟ್ಟುಹಾಕಬೇಕು.
లేవీయకాండము 13 : 52 (ERVTE)
లేవీయకాండము 13 : 53 (ERVTE)
“ಬೂಷ್ಟು ಬಟ್ಟೆಯ ಮೇಲಾಗಲಿ ಚರ್ಮದ ಮೇಲಾಗಲಿ ನೇಯ್ದ ಅಥವಾ ಹೆಣೆದ ಬಟ್ಟೆಯ ಮೇಲಾಗಲಿ ಹರಡಿಲ್ಲವೆಂದು ಯಾಜಕನು ಕಂಡರೆ, ಅದನ್ನು ತೊಳೆಯಬೇಕು.
లేవీయకాండము 13 : 54 (ERVTE)
ಯಾಜಕನು ಆ ತೊಗಲನ್ನು ಅಥವಾ ಬಟ್ಟೆಯನ್ನು ತೊಳೆಯಲು ಜನರಿಗೆ ಅಪ್ಪಣೆಕೊಡಬೇಕು. ಬಳಿಕ ಯಾಜಕನು ಆ ಬಟ್ಟೆಯನ್ನು ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿರಿಸಬೇಕು.
లేవీయకాండము 13 : 55 (ERVTE)
ಆ ಸಮಯದನಂತರ ಯಾಜಕನು ಅದನ್ನು ತಿರುಗಿ ಪರೀಕ್ಷಿಸಬೇಕು. ಬೂಷ್ಟು ಇನ್ನೂ ಹಾಗೆಯೇ ಇರುವಂತೆ ಕಂಡರೆ, ಆಗ ಆ ವಸ್ತು ಅಶುದ್ಧವಾಗಿದೆ. ಅದು ಹರಡಲಿಲ್ಲವಾದರೂ ನೀವು ಬಟ್ಟೆಯನ್ನು ಅಥವಾ ತೊಗಲನ್ನು ಸುಟ್ಟುಹಾಕಬೇಕು.
లేవీయకాండము 13 : 56 (ERVTE)
“ಆದರೆ ಯಾಜಕನು ತೊಗಲನ್ನಾಗಲಿ ಬಟ್ಟೆಯನ್ನಾಗಲಿ ನೋಡಿದಾಗ, ತೊಳೆದನಂತರ ಬೂಷ್ಟು ಮೊಬ್ಬಾಗಿರುವುದನ್ನು ಕಂಡರೆ, ಆಗ ಯಾಜಕನು ಕಲೆ ಇರುವ ಆ ಬಟ್ಟೆಯ ಅಥವಾ ತೊಗಲಿನ ಭಾಗವನ್ನು ಕತ್ತರಿಸಿಹಾಕಬೇಕು. (ಅದು ನೇಯ್ದ ಬಟ್ಟೆಯಾಗಿದ್ದರೂ ಸರಿ, ಹೆಣೆದ ಬಟ್ಟೆಯಾಗಿದ್ದರೂ ಸರಿ.)
లేవీయకాండము 13 : 57 (ERVTE)
ಆದರೆ ಬೂಷ್ಟು ಆ ತೊಗಲಿನ ಮೇಲೆ ಅಥವಾ ಬಟ್ಟೆಯ ಮೇಲೆ ಮರಳಿ ಬಂದರೆ, ಆಗ ಆ ಬೂಷ್ಟು ಹರಡುತ್ತಿದೆ ಎಂದರ್ಥ. ಆ ತೊಗಲನ್ನು ಅಥವಾ ಆ ಬಟ್ಟೆಯನ್ನು ಸುಟ್ಟುಹಾಕಬೇಕು.
లేవీయకాండము 13 : 58 (ERVTE)
ಆದರೆ, ತೊಳೆದ ನಂತರ ಬೂಷ್ಟು ತಿರುಗಿ ಬಾರದಿದ್ದರೆ, ಆ ತೊಗಲು ಅಥವಾ ಬಟ್ಟೆ ಶುದ್ಧವಾಗಿದೆ. ಅದು ಹೆಣೆದ ಅಥವಾ ಹೊಲಿದ ಬಟ್ಟೆಯಾಗಿದ್ದರೂ ಶುದ್ಧವಾಗಿದೆ.”
లేవీయకాండము 13 : 59 (ERVTE)
ಚರ್ಮದ ವಸ್ತುಗಳ ಮೇಲಾಗಲಿ ಬಟ್ಟೆಯ ಮೇಲಾಗಲಿ (ಅದು ಉಣ್ಣೆಯದ್ದಾಗಿರಲಿ ನಾರಿನದ್ದಾಗಿರಲಿ ನೇಯ್ದದ್ದಾಗಿರಲಿ ಅಥವಾ ಹೆಣೆದದ್ದಾಗಿರಲಿ) ಕಂಡು ಬರುವ ಬೂಷ್ಟಿನ ವಿಷಯದಲ್ಲಿ ಅನುಸರಿಸಬೇಕಾದ ನಿಯಮಗಳು ಇವೇ. ಶುದ್ಧವಾದವುಗಳೋ ಅಶುದ್ಧವಾದವುಗಳೋ ಎಂದು ನಿರ್ಧಾರ ಮಾಡಲು ಇದೇ ನಿಯಮಗಳನ್ನು ಅನುಸರಿಸಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59