లేవీయకాండము 7 : 1 (ERVTE)
{#1ದೋಷಪರಿಹಾರಕ ಯಜ್ಞಗಳು } “ದೋಷಪರಿಹಾರಕ ಯಜ್ಞದ ನಿಯಮಗಳು: ಅದು ಪವಿತ್ರವಾದದ್ದು.
లేవీయకాండము 7 : 2 (ERVTE)
ಯಾಜಕನು ಸರ್ವಾಂಗಹೋಮ ಸಮರ್ಪಣೆಗಳ ಪಶುವನ್ನು ವಧಿಸುವ ಸ್ಥಳದಲ್ಲಿಯೇ ದೋಷಪರಿಹಾರಕ ಪಶುವನ್ನು ವಧಿಸಬೇಕು. ಬಳಿಕ ಯಾಜಕನು ದೋಷಪರಿಹಾರಕ ಯಜ್ಞದ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಬೇಕು.
లేవీయకాండము 7 : 3 (ERVTE)
“ಯಾಜಕನು ದೋಷಪರಿಹಾರಕ ಯಜ್ಞಪಶುವಿನ ಕೊಬ್ಬನ್ನೆಲ್ಲಾ ಅರ್ಪಿಸಬೇಕು. ಅವನು ಬಾಲದ ಕೊಬ್ಬನ್ನು ಮತ್ತು ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೆಲ್ಲಾ ಸಮರ್ಪಿಸಬೇಕು.
లేవీయకాండము 7 : 4 (ERVTE)
ಯಾಜಕನು ಅದರ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಅರ್ಪಿಸಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನು ಅರ್ಪಿಸಬೇಕು.
లేవీయకాండము 7 : 5 (ERVTE)
ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮ ಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಹೋಮವಾಗಿರುವುದು. ಅದು ದೋಷಪರಿಹಾರಕ ಯಜ್ಞವಾಗಿದೆ.
లేవీయకాండము 7 : 6 (ERVTE)
“ಯಾಜಕನಾಗಿರುವ ಪ್ರತಿಯೊಬ್ಬನು ದೋಷಪರಿಹಾರಕ ಯಜ್ಞಮಾಂಸವನ್ನು ತಿನ್ನಬಹುದು. ಅದು ಬಹು ಪವಿತ್ರವಾಗಿರುವುದರಿಂದ ಅದನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕು.
లేవీయకాండము 7 : 7 (ERVTE)
ಷಪರಿಹಾರಕ ಯಜ್ಞವು ಪಾಪಪರಿಹಾರಕ ಯಜ್ಞದಂತಿದೆ. ಒಂದೇ ರೀತಿಯ ನಿಯಮಗಳು ಈ ಎರಡು ಸಮರ್ಪಣೆಗಳಿಗೆ ಅನ್ವಯಿಸುತ್ತವೆ. ಯಜ್ಞ ಸಮರ್ಪಿಸುವ ಯಾಜಕನು ಆಹಾರಕ್ಕಾಗಿ ಅದರ ಮಾಂಸವನ್ನು ಪಡೆಯುವನು.
లేవీయకాండము 7 : 8 (ERVTE)
ಯಜ್ಞಮಾಡುವ ಯಾಜಕನು ಸರ್ವಾಂಗಹೋಮ ಪಶುವಿನ ಚರ್ಮವನ್ನು ಪಡೆಯಬಹುದು.
లేవీయకాండము 7 : 9 (ERVTE)
ಪ್ರತಿ ಧಾನ್ಯಸಮರ್ಪಣೆಯು ಅದನ್ನು ಅರ್ಪಿಸುವ ಯಾಜಕನಿಗೆ ಸೇರುತ್ತದೆ. ಒಲೆಯಲ್ಲಾಗಲಿ ಕಬ್ಬಿಣದ ಹಂಚಿನಲ್ಲಾಗಲಿ ಬಾಂಡ್ಲೆಯಲ್ಲಾಗಲಿ ಬೇಯಿಸಿದ ಧಾನ್ಯಸಮರ್ಪಣೆಗಳನ್ನು ಯಾಜಕನು ಪಡೆಯುವನು.
లేవీయకాండము 7 : 10 (ERVTE)
ಧಾನ್ಯಸಮರ್ಪಣೆಗಳು ಆರೋನನ ಪುತ್ರರಿಗೆ ಸೇರುವವು. ಅದು ಒಣಗಿದ್ದರೂ ಎಣ್ಣೆಯಿಂದ ಬೆರೆತಿದ್ದರೂ ಅವರಿಗೆ ಸೇರುವವು. ಯಾಜಕರಾದ ಆರೋನನ ಪುತ್ರರೆಲ್ಲರೂ ಈ ಆಹಾರವನ್ನು ಹಂಚಿಕೊಳ್ಳುವರು.
లేవీయకాండము 7 : 11 (ERVTE)
{#1ಸಮಾಧಾನಯಜ್ಞ ಕಟ್ಟಳೆಗಳು } “ಸಮಾಧಾನಯಜ್ಞದ ಕಟ್ಟಳೆಗಳು ಇಂತಿವೆ: ಯಾರಾದರೂ ಯೆಹೋವನಿಗೆ ಕೃತಜ್ಞತೆಯಿಂದ ಸಮಾಧಾನಯಜ್ಞಗಳನ್ನು ಅರ್ಪಿಸಬೇಕೆಂದಿದ್ದರೆ,
లేవీయకాండము 7 : 12 (ERVTE)
ಅವನು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯನ್ನೂ ಎಣ್ಣೆ ಹೊಯಿದು ಮಾಡಿದ ಕಡುಬುಗಳನ್ನೂ ಎಣ್ಣೆಬೆರೆಸಿದ ಹೋಳಿಗೆಗಳನ್ನೂ ತರಬೇಕು.
లేవీయకాండము 7 : 13 (ERVTE)
ಅವನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಅರ್ಪಿಸುವ ಯಜ್ಞವೇ ಸಮಾಧಾನಯಜ್ಞವಾಗಿದೆ. ಈ ಯಜ್ಞದೊಡನೆ ಅವನು ಹುಳಿಯಿರುವ ರೊಟ್ಟಿಗಳ ನೈವೇದ್ಯವನ್ನು ಅರ್ಪಿಸಬೇಕು.
లేవీయకాండము 7 : 14 (ERVTE)
ಸಮರ್ಪಿಸಲ್ಪಟ್ಟ ಪ್ರತಿಯೊಂದು ಪದಾರ್ಥಗಳಲ್ಲೂ ಒಂದೊಂದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಸಮಾಧಾನಯಜ್ಞದ ರಕ್ತವನ್ನು ಚಿಮಿಕಿಸುವ ಯಾಜಕನಿಗೆ ಇದು ಸಲ್ಲತಕ್ಕದ್ದು.
లేవీయకాండము 7 : 15 (ERVTE)
ಸಮಾಧಾನಯಜ್ಞದ ಮಾಂಸವನ್ನು ಅದು ಸಮರ್ಪಣೆಯಾದ ದಿನದಲ್ಲಿಯೇ ತಿನ್ನಬೇಕು. ಒಬ್ಬನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಈ ಕಾಣಿಕೆಯನ್ನು ಅರ್ಪಿಸುತ್ತಾನೆ. ಅದರ ಮಾಂಸದಲ್ಲಿ ಮರುದಿನದ ಮುಂಜಾನೆಯವರೆಗೆ ಏನೂ ಉಳಿಸಬಾರದು.
లేవీయకాండము 7 : 16 (ERVTE)
“ಯಾವನಾದರೂ ಸ್ವಇಚ್ಛೆಯ ಕಾಣಿಕೆಗಾಗಲಿ ಹರಕೆಯನ್ನು ಸಲ್ಲಿಸುವುದಕ್ಕಾಗಲಿ ಸಮಾಧಾನಯಜ್ಞ ಅರ್ಪಿಸಬಹುದು ಅಥವಾ ಆ ವ್ಯಕ್ತಿ ದೇವರಿಗೆ ಕಾಣಿಕೆಯನ್ನು ಅರ್ಪಿಸಿದರೆ, ಅವನು ಅದರ ಯಜ್ಞಮಾಂಸವನ್ನು ಸಮರ್ಪಿಸಿದ ದಿನದಲ್ಲಿಯೇ ತಿನ್ನಬೇಕು. ಉಳಿದದ್ದನ್ನು ಮರುದಿನ ತಿನ್ನಬೇಕು.
లేవీయకాండము 7 : 17 (ERVTE)
ಆದರೆ ಈ ಯಜ್ಞಪಶುವು ಮೂರನೆಯ ದಿನದವರೆಗೆ ಉಳಿದರೆ, ಅದನ್ನು ಬೆಂಕಿಯಲ್ಲಿ ಸುಡಬೇಕು.
లేవీయకాండము 7 : 18 (ERVTE)
ಒಬ್ಬನು ತನ್ನ ಸಮಾಧಾನಯಜ್ಞದಲ್ಲಿ ಉಳಿದದ್ದನ್ನು ಮೂರನೆಯ ದಿನದಲ್ಲಿ ತಿಂದರೆ, ಯೆಹೋವನು ಅವನ ವಿಷಯದಲ್ಲಿ ಸಂತೋಷಗೊಳ್ಳುವುದಿಲ್ಲ. ಯೆಹೋವನು ಆ ಯಜ್ಞವನ್ನು ಅವನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಯಜ್ಞವು ಅಸಹ್ಯವಸ್ತುವಾಗುವುದು. ಆ ಮಾಂಸವನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸುವನು.
లేవీయకాండము 7 : 19 (ERVTE)
“ಮಾತ್ರವಲ್ಲದೆ ಜನರು ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ತಿನ್ನಬಾರದು. ಅವರು ಈ ಮಾಂಸವನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಶುದ್ಧನಾಗಿರುವ ಪ್ರತಿಯೊಬ್ಬನು ಸಮಾಧಾನ ಸಮರ್ಪಣೆಯ ಮಾಂಸವನ್ನು ತಿನ್ನಬಹುದು.
లేవీయకాండము 7 : 20 (ERVTE)
ಆದರೆ ಒಬ್ಬನು ಅಶುದ್ಧನಾಗಿದ್ದು ಯೆಹೋವನಿಗೆ ಸೇರಿದ ಸಮಾಧಾನ ಸಮರ್ಪಣೆಗಳ ಮಾಂಸವನ್ನು ತಿಂದರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.
లేవీయకాండము 7 : 21 (ERVTE)
లేవీయకాండము 7 : 22 (ERVTE)
“ಒಬ್ಬನಿಗೆ ಮನುಷ್ಯದೇಹದಿಂದ ಆಗಿರುವ ಅಶುದ್ಧ ವಸ್ತು, ಅಶುದ್ಧ ಮೃಗ, ನಿಷಿದ್ಧ ವಸ್ತು ಇವುಗಳಲ್ಲಿ ಯಾವುದಾದರೂ ಸ್ಪರ್ಶವಾಗಿದ್ದರೆ ಅವನು ಅಶುದ್ಧನಾಗಿದ್ದಾನೆ. ಅವನು ಯೆಹೋವನಿಗೆ ಸೇರಿದ ಸಮಾಧಾನಯಜ್ಞಗಳ ಮಾಂಸವನ್ನು ತಿಂದರೆ, ಅವನನ್ನು ಕುಲದಿಂದ ತೆಗೆದುಹಾಕಬೇಕು.” ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
లేవీయకాండము 7 : 23 (ERVTE)
“ಇಸ್ರೇಲರಿಗೆ ಹೀಗೆ ಹೇಳು: ನೀವು ದನಗಳ, ಕುರಿಗಳ ಅಥವಾ ಹೋತಗಳ ಕೊಬ್ಬನ್ನು ತಿನ್ನಬಾರದು.
లేవీయకాండము 7 : 24 (ERVTE)
ನೀವು ತನ್ನಷ್ಟಕ್ಕೆ ತಾನೇ ಸತ್ತ ಪ್ರಾಣಿಯ ಅಥವಾ ಬೇರೆ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಹುದು. ಆದರೆ ನೀವು ಅದನ್ನು ಎಂದಿಗೂ ತಿನ್ನಬಾರದು.
లేవీయకాండము 7 : 25 (ERVTE)
ಯಾವನಾದರೂ ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾದ ಪಶುವಿನ ಕೊಬ್ಬನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಬೇಕು.
లేవీయకాండము 7 : 26 (ERVTE)
“ನೀವು ಎಲ್ಲಿಯೇ ವಾಸಿಸಿದರೂ, ಯಾವುದೇ ಪಕ್ಷಿಯ ಅಥವಾ ಯಾವುದೇ ಪ್ರಾಣಿಯ ರಕ್ತವನ್ನು ನೀವು ಎಂದಿಗೂ ತಿನ್ನಬಾರದು.
లేవీయకాండము 7 : 27 (ERVTE)
ಯಾವನಾದರೂ ರಕ್ತವನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಲ್ಪಡಬೇಕು.”
లేవీయకాండము 7 : 28 (ERVTE)
{#1ನೈವೇದ್ಯಸಮರ್ಪಣೆಯ ನಿಯಮಗಳು } ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
లేవీయకాండము 7 : 29 (ERVTE)
“ಇಸ್ರೇಲರಿಗೆ ಹೇಳು. ಒಬ್ಬನು ಯೆಹೋವನಿಗೆ ಸಮಾಧಾನಯಜ್ಞಕ್ಕಾಗಿ ಪಶುವನ್ನು ತಂದರೆ, ಯೆಹೋವನಿಗೆ ಸಲ್ಲತಕ್ಕ ಭಾಗವನ್ನು ಆತನಿಗೆ ಕೊಡಬೇಕು.
లేవీయకాండము 7 : 30 (ERVTE)
ಕಾಣಿಕೆಯ ಆ ಭಾಗವು ಅಗ್ನಿಯಲ್ಲಿ ಹೋಮಮಾಡಬೇಕು. ಅವನು ಕಾಣಿಕೆಯನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಗೆ ಹೋಗಬೇಕು. ಅವನು ಆ ಪಶುವಿನ ಕೊಬ್ಬನ್ನೂ ಎದೆಯ ಭಾಗವನ್ನೂ ಯಾಜಕನ ಬಳಿಗೆ ತರಬೇಕು. ಯೆಹೋವನ ಸನ್ನಿಧಿಯಲ್ಲಿ ಎದೆಯ ಭಾಗವು ನಿವಾಳಿಸಲ್ಪಡಬೇಕು. ಇದು ನೈವೇದ್ಯ ಸಮರ್ಪಣೆಯಾಗಿರುವುದು.
లేవీయకాండము 7 : 31 (ERVTE)
ಬಳಿಕ ಯಾಜಕನು ವೇದಿಕೆಯ ಮೇಲೆ ಕೊಬ್ಬನ್ನು ಹೋಮಮಾಡಬೇಕು. ಆದರೆ ಪಶುವಿನ ಎದೆಯ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರುವವು.
లేవీయకాండము 7 : 32 (ERVTE)
ನೀವು ಸಮಾಧಾನಯಜ್ಞದ ಪಶುವಿನ ಬಲತೊಡೆಯನ್ನು ಸಹ ಯಾಜಕನಿಗೆ ಕೊಡಬೇಕು.
లేవీయకాండము 7 : 33 (ERVTE)
ಪಶುವಿನ ಬಲ ತೊಡೆಯ ಭಾಗವು ಸಮಾಧಾನಯಜ್ಞದಲ್ಲಿ ರಕ್ತವನ್ನು ಮತ್ತು ಕೊಬ್ಬನ್ನು ಸಮರ್ಪಿಸುವ ಯಾಜಕನಿಗೆ ಸೇರುತ್ತವೆ.
లేవీయకాండము 7 : 34 (ERVTE)
ನೈವೇದ್ಯರೂಪವಾಗಿ ನಿವಾಳಿಸುವ ಸಮರ್ಪಣೆಯಲ್ಲಿ ಪಶುವಿನ ಎದೆಯ ಭಾಗವನ್ನು ಮತ್ತು ಸಮಾಧಾನಯಜ್ಞಗಳಲ್ಲಿ ಪಶುವಿನ ಬಲ ತೊಡೆಯನ್ನು ಯೆಹೋವನಾದ ನಾನು ಇಸ್ರೇಲರಿಂದ ತೆಗೆದುಕೊಂಡು ಆರೋನನಿಗೂ ಅವನ ಪುತ್ರರಿಗೂ ಕೊಡುತ್ತಿದ್ದೇನೆ. ಇಸ್ರೇಲರು ಈ ನಿಯಮಕ್ಕೆ ಎಂದೆಂದಿಗೂ ವಿಧೇಯರಾಗಬೇಕು.”
లేవీయకాండము 7 : 35 (ERVTE)
ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳಲ್ಲಿ ಇವೇ ಆರೋನನಿಗೂ ಅವನ ಪುತ್ರರಿಗೂ ಕೊಡಲ್ಪಟ್ಟ ಭಾಗಗಳಾಗಿವೆ. ಆರೋನನೂ ಅವನ ಪುತ್ರರೂ ಯೆಹೋವನ ಯಾಜಕರಾಗಿ[* ಯಾಜಕರಾಗಿ ಹೀಬ್ರೂವಿನಲ್ಲಿ ಇದರರ್ಥ ಬಹುಶಃ, “ಆತನು ಅವರನ್ನು ಯೆಹೋವನಿಗೆ ಯಾಜಕರಾಗಿ ಸೇವೆಮಾಡಲು ನೇಮಿಸುವಾಗ” ಎಂದಿರಬಹುದು. ] ಸೇವೆ ಮಾಡುವಾಗಲೆಲ್ಲಾ ಯಜ್ಞಗಳಲ್ಲಿ ಆ ಪಾಲನ್ನು ಪಡೆಯುವರು.
లేవీయకాండము 7 : 36 (ERVTE)
ಯೆಹೋವನು ಯಾಜಕರನ್ನು ಅಭಿಷೇಕಿಸಿದ ಸಮಯದಲ್ಲಿ ಆತನು ಯಾಜಕರಿಗೆ ಆ ಭಾಗಗಳನ್ನು ಕೊಡಬೇಕೆಂಬುದಾಗಿ ಇಸ್ರೇಲರಿಗೆ ಆಜ್ಞಾಪಿಸಿದನು. ಜನರು ಯಾಜಕರಿಗೆ ಆ ಭಾಗಗಳನ್ನು ಎಂದೆಂದಿಗೂ ಕೊಡಬೇಕು.
లేవీయకాండము 7 : 37 (ERVTE)
ಅವುಗಳೇ ಸರ್ವಾಂಗಹೋಮಗಳ, ಧಾನ್ಯಸಮರ್ಪಣೆಗಳ, ಪಾಪಪರಿಹಾರಕ ಯಜ್ಞಗಳ, ದೋಷಪರಿಹಾರಕ ಯಜ್ಞಗಳ, ಸಮಾಧಾನಯಜ್ಞಗಳ ಮತ್ತು ಯಾಜಕರನ್ನು ಪ್ರತಿಷ್ಠಿಸುವ ನಿಯಮಗಳಾಗಿವೆ.
లేవీయకాండము 7 : 38 (ERVTE)
ಯೆಹೋವನು ಮೋಶೆಗೆ ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಕೊಟ್ಟನು. ಇಸ್ರೇಲರು ಯೆಹೋವನಿಗೆ ತಮ್ಮ ಯಜ್ಞಗಳನ್ನು ಅರ್ಪಿಸಬೇಕೆಂದು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸಿದ ದಿನದಲ್ಲಿ ಯೆಹೋವನು ಆ ನಿಯಮಗಳನ್ನು ಕೊಟ್ಟನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38