సంఖ్యాకాండము 28 : 1 (ERVTE)
{#1ದಿನನಿತ್ಯ ಸಲ್ಲಿಸತಕ್ಕ ಅರ್ಪಣೆಗಳು } ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
సంఖ్యాకాండము 28 : 2 (ERVTE)
“ನೀನು ಇಸ್ರೇಲರಿಗೆ ಈ ಆಜ್ಞೆಯನ್ನು ಕೊಡು. ನೀವು ಎಚ್ಚರಿಕೆಯಾಗಿದ್ದು ನೇಮಿತ ಕಾಲಗಳಲ್ಲಿ ನನಗೆ ಅರ್ಪಿಸತಕ್ಕ ಧಾನ್ಯಸಮರ್ಪಣೆಗಳನ್ನು ನನಗೆ ಸುಗಂಧ ಹೋಮಮಾಡಬೇಕು.
సంఖ్యాకాండము 28 : 3 (ERVTE)
ಅವರಿಗೆ ಹೀಗೆ ಹೇಳು: ನೀವು ಯೆಹೋವನಿಗೆ ಕೊಡಬೇಕಾಗಿರುವ ತ್ಯಾಗಮಯವಾದ ಕಾಣಿಕೆಗಳು ಇವುಗಳೇ: ದಿನನಿತ್ಯದ ಸರ್ವಾಂಗಹೋಮಕ್ಕಾಗಿ ಒಂದು ವರ್ಷ ವಯಸ್ಸಿನ ಎರಡು ಗಂಡುಕುರಿಗಳು.
సంఖ్యాకాండము 28 : 4 (ERVTE)
ನೀವು ಒಂದು ಕುರಿಮರಿಯನ್ನು ಹೊತ್ತಾರೆಯಲ್ಲಿಯೂ ಇನ್ನೊಂದನ್ನು ನಸುಸಂಜೆಯಲ್ಲಿಯೂ ಅರ್ಪಿಸಬೇಕು.
సంఖ్యాకాండము 28 : 5 (ERVTE)
ಹೊತ್ತಾರೆಯ ಸಮರ್ಪಣೆಯೊಂದಿಗೆ ನೀವು ಧಾನ್ಯಸಮರ್ಪಣೆಗಾಗಿ ಒಂದೂವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋಧಿಹಿಟ್ಟನ್ನೂ ಬೆರೆಸಿ ಸಮರ್ಪಿಸಬೇಕು.”
సంఖ్యాకాండము 28 : 6 (ERVTE)
(ಈ ಸರ್ವಾಂಗಹೋಮವನ್ನು ಸೀನಾಯಿ ಬೆಟ್ಟದ ಮೇಲೆ ಯೆಹೋವನಿಗೆ ತ್ಯಾಗಮಯವಾದ ಕಾಣಿಕೆಯಾಗಿಯೂ ಸುಗಂಧ ವಾಸನೆಯಾಗಿಯೂ ಕ್ರಮವಾಗಿ ಅರ್ಪಿಸಲಾಯಿತು.)
సంఖ్యాకాండము 28 : 7 (ERVTE)
“ಪ್ರತಿಯೊಂದು ಕುರಿಮರಿಯೊಂದಿಗೆ ಒಂದೂವರೆ ಸೇರು ದ್ರಾಕ್ಷಾರಸವನ್ನು ಪಾನದ್ರವ್ಯದ ಕಾಣಿಕೆಯಾಗಿ ಅರ್ಪಿಸಬೇಕು. ಯೆಹೋವನಿಗೆ ಪಾನದ್ರವ್ಯವಾಗಿ ಅರ್ಪಿಸತಕ್ಕ ದ್ರಾಕ್ಷಾರಸವನ್ನು ಪವಿತ್ರಸ್ಥಳದಲ್ಲಿ ಸುರಿಯಿರಿ.
సంఖ్యాకాండము 28 : 8 (ERVTE)
ನೀವು ಎರಡನೆ ಕುರಿಮರಿಯನ್ನು ನಸುಸಂಜೆಯಲ್ಲಿ ಅರ್ಪಿಸುವಾಗ, ಮುಂಜಾನೆಯಲ್ಲಿ ಅರ್ಪಿಸಿದಂತೆಯೇ ಅದರೊಡನೆ ಸಮರ್ಪಕವಾದ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಮಾಡಬೇಕು. ಇದು ಯೆಹೋವನಿಗೆ ತ್ಯಾಗಮಯವಾದ ಅರ್ಪಣೆಯಾಗಿದ್ದು ಸುಗಂಧ ವಾಸನೆಯನ್ನು ಉಂಟುಮಾಡುವುದು.
సంఖ్యాకాండము 28 : 9 (ERVTE)
{#1ಸಬ್ಬತ್ತಿನ ಸಮರ್ಪಣೆಗಳು }
సంఖ్యాకాండము 28 : 10 (ERVTE)
(9-10)“ಸಬ್ಬತ್‌ದಿನದಲ್ಲಿ ಎರಡು ಪೂರ್ಣಾಂಗವಾದ ಒಂದು ವರ್ಷದ ಗಂಡುಕುರಿಗಳನ್ನೂ ಧಾನ್ಯದ್ರವ್ಯಾರ್ಪಣೆಗಾಗಿ ಎಣ್ಣೆ ಬೆರೆಸಿದ ಆರು ಸೇರು ಗೋಧಿಹಿಟ್ಟನ್ನೂ ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು. ಕ್ರಮವಾಗಿ ಅರ್ಪಿಸತಕ್ಕ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪ್ರತಿಸಬ್ಬತ್ ದಿನ ಸರ್ವಾಂಗಹೋಮವನ್ನು ಅರ್ಪಿಸಬೇಕು. {#1ತಿಂಗಳ ಯಜ್ಞಗಳು }
సంఖ్యాకాండము 28 : 11 (ERVTE)
“ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ, ನೀವು ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಬೇಕು: ಎರಡು ಹೋರಿಗಳು, ಒಂದು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು.
సంఖ్యాకాండము 28 : 12 (ERVTE)
ಇವುಗಳೊಡನೆ ಧಾನ್ಯನೈವೇದ್ಯಕ್ಕಾಗಿ ನೀವು ಪ್ರತಿಯೊಂದು ಹೋರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಒಂಭತ್ತು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಪ್ರತಿಯೊಂದು ಟಗರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಆರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು.
సంఖ్యాకాండము 28 : 13 (ERVTE)
ಪ್ರತಿಯೊಂದು ಕುರಿಮರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಮೂರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಈ ಸರ್ವಾಂಗಹೋಮವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇದೆ.
సంఖ్యాకాండము 28 : 14 (ERVTE)
ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆಗಳನ್ನು ಮಾಡಬೇಕು. ಅವು ಯಾವುವೆಂದರೆ: ಒಂದು ಹೋರಿಯೊಡನೆ ಮೂರು ಸೇರು ದ್ರಾಕ್ಷಾರಸವನ್ನೂ ಟಗರಿನೊಡನೆ ಎರಡು ಸೇರು ದ್ರಾಕ್ಷಾರಸವನ್ನೂ ಕುರಿಮರಿಯೊಡನೆ ಒಂದೂವರೆ ಸೇರು ದ್ರಾಕ್ಷಾರಸವನ್ನೂ ಅರ್ಪಿಸಬೇಕು. ವರ್ಷದ ಪ್ರತಿತಿಂಗಳು ಅಮಾವಾಸ್ಯೆಯಲ್ಲಿ ಅರ್ಪಿಸತಕ್ಕ ಮಾಸಿಕ ಸರ್ವಾಂಗಹೋಮಗಳು ಇವುಗಳೇ.
సంఖ్యాకాండము 28 : 15 (ERVTE)
ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಯೆಹೋವನಿಗೆ ಅರ್ಪಿಸಬೇಕು.
సంఖ్యాకాండము 28 : 16 (ERVTE)
{#1ಪಸ್ಕಹಬ್ಬ } “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನಿಗೆ ಪಸ್ಕಹಬ್ಬದ ಯಜ್ಞವನ್ನು ಅರ್ಪಿಸಬೇಕು.
సంఖ్యాకాండము 28 : 17 (ERVTE)
ಹುಳಿಯಿಲ್ಲದ ರೊಟ್ಟಿಯ ಹಬ್ಬವು ಅದೇ ತಿಂಗಳಿನ ಹದಿನೈದನೆಯ ದಿನದಿಂದ ಪ್ರಾರಂಭವಾಗುವುದು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಯನ್ನೇ ಊಟಮಾಡಬೇಕು.
సంఖ్యాకాండము 28 : 18 (ERVTE)
ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಆ ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನು ಮಾಡಬಾರದು.
సంఖ్యాకాండము 28 : 19 (ERVTE)
ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡುಕುರಿಮರಿಗಳನ್ನು ಅರ್ಪಿಸಬೇಕು. ಈ ಪಶುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು.
సంఖ్యాకాండము 28 : 20 (ERVTE)
ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ತಂದುಕೊಡಬೇಕು; ಹೇಗೆಂದರೆ, ಒಂದು ಹೋರಿಗೆ ಒಂಭತ್ತು ಸೇರು ಗೋಧಿಹಿಟ್ಟು, ಒಂದು ಟಗರಿಗೆ ಆರು ಸೇರು ಗೋಧಿಹಿಟ್ಟು,
సంఖ్యాకాండము 28 : 21 (ERVTE)
ಏಳು ಕುರಿಮರಿಗಳಲ್ಲಿ ಪ್ರತಿಯೊಂದಕ್ಕೂ ಮೂರು ಸೇರು ಗೋಧಿಹಿಟ್ಟು.
సంఖ్యాకాండము 28 : 22 (ERVTE)
ಇದಲ್ಲದೆ ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
సంఖ్యాకాండము 28 : 23 (ERVTE)
ಕ್ರಮವಾಗಿ ಮುಂಜಾನೆ ಅರ್ಪಿಸುವ ಸರ್ವಾಂಗಹೋಮವಲ್ಲದೆ ಇವುಗಳನ್ನೂ ಅರ್ಪಿಸಬೇಕು.
సంఖ్యాకాండము 28 : 24 (ERVTE)
సంఖ్యాకాండము 28 : 25 (ERVTE)
“ಈ ಎಲ್ಲ ಅರ್ಪಣೆಗಳನ್ನು ಆ ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ಆಹಾರವಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ಅರ್ಪಿಸಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಇವುಗಳನ್ನೂ ಅರ್ಪಿಸಬೇಕು.
సంఖ్యాకాండము 28 : 26 (ERVTE)
“ಇದಲ್ಲದೆ ಏಳನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಪ್ರಯಾಸದ ಕೆಲಸವನ್ನು ಮಾಡಕೂಡದು. {#1ವಾರಗಳ ಹಬ್ಬ (ಪಂಚಾಶತ್ತಮ) } “ನಿಮ್ಮ ಪ್ರಥಮಫಲಗಳ ಹಬ್ಬದಲ್ಲಿ ಅಂದರೆ ವಾರಗಳ ಹಬ್ಬದಲ್ಲಿ ನೀವು ಹೊಸದಾಗಿ ಬೆಳೆದ ಗೋಧಿಯನ್ನು ಯೆಹೋವನಿಗೆ ಅರ್ಪಿಸುವಾಗ, ದೇವರನ್ನು ಆರಾಧಿಸಲು ನೀವು ಸಭೆ ಸೇರಬೇಕು. ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು.
సంఖ్యాకాండము 28 : 27 (ERVTE)
ಆ ದಿನದಲ್ಲಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನು ಯೆಹೋವನಿಗೆ ಸುಗಂಧ ವಾಸನೆಯಾಗಿರುವ ಸರ್ವಾಂಗಹೋಮವಾಗಿ ಅರ್ಪಿಸಬೇಕು.
సంఖ్యాకాండము 28 : 28 (ERVTE)
ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಪ್ರತಿಯೊಂದು ಹೋರಿಗೆ ಒಂಭತ್ತು ಸೇರು,
సంఖ్యాకాండము 28 : 29 (ERVTE)
ಟಗರಿಗೆ ಆರು ಸೇರು ಮತ್ತು ಪ್ರತಿಯೊಂದು ಕುರಿಗೆ ಮೂರು ಸೇರು ಈ ಮೇರೆಗೆ ಸಮರ್ಪಿಸಬೇಕು.
సంఖ్యాకాండము 28 : 30 (ERVTE)
ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನೂ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
సంఖ్యాకాండము 28 : 31 (ERVTE)
ಈ ಪಶುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆಗಳಲ್ಲದೆ ಈ ಯಜ್ಞಗಳನ್ನು ಮತ್ತು ಅವುಗಳೊಡನೆ ಪಾನದ್ರವ್ಯಾರ್ಪಣೆಗಳನ್ನು ಅರ್ಪಿಸಬೇಕು. ನೀವು ಸಮರ್ಪಿಸುವ ಪಶುಗಳಲ್ಲಿಯೂ ಅಥವಾ ಪಾನದ್ರವ್ಯಸಮರ್ಪಣೆಗಳಲ್ಲಿಯೂ ಯಾವ ದೋಷವೂ ಇರಬಾರದು.
❮
❯