సామెతలు 17 : 1 (ERVTE)
సామెతలు 17 : 2 (ERVTE)
ಜಗಳದ ಮನೆಯಲ್ಲಿ ಮೃಷ್ಠಾನ್ನ ತಿನ್ನುವುದಕ್ಕಿಂತಲೂ ಸಮಾಧಾನದ ಮನೆಯಲ್ಲಿ ಒಣರೊಟ್ಟಿಯನ್ನು ತಿನ್ನುವುದೇ ಮೇಲು.
సామెతలు 17 : 3 (ERVTE)
ಜ್ಞಾನಿಯಾದ ಸೇವಕನು ತನ್ನ ಯಜಮಾನನ ಅಯೋಗ್ಯ ಮಗನನ್ನೇ ತನ್ನ ಹತೋಟಿಯಲ್ಲಿಟ್ಟುಕೊಳ್ಳುವನು; ಅವನ ಸಹೋದರರೊಂದಿಗೂ ಆಸ್ತಿಯಲ್ಲಿ ಪಾಲು ಹೊಂದುವನು.
సామెతలు 17 : 4 (ERVTE)
ಜನರು ಬೆಳ್ಳಿಬಂಗಾರವನ್ನು ಬೆಂಕಿಗೆ ಹಾಕಿ ಶುದ್ಧಮಾಡುವರು. ಆದರೆ ಮನುಷ್ಯರ ಹೃದಯಗಳನ್ನು ಶುದ್ಧಮಾಡುವವನು ಯೆಹೋವನೇ.
సామెతలు 17 : 5 (ERVTE)
ಕೆಟ್ಟಮಾತುಗಳಿಗೆ ಕಿವಿಗೊಡುವವನು ಕೆಡುಕನಿಗೆ ಸಮಾನ. ಚಾಡಿಗೆ ಕಿವಿಗೊಡುವವನು ಸುಳ್ಳುಗಾರನಿಗೆ ಸಮಾನ.
సామెతలు 17 : 6 (ERVTE)
ಬಡವನನ್ನು ಗೇಲಿಮಾಡಿದರೆ ಅವನನ್ನು ನಿರ್ಮಿಸಿದ ದೇವರಿಗೇ ಅವಮಾನಮಾಡಿದಂತಾಗುವುದು. ಬೇರೊಬ್ಬನ ದುರಾವಸ್ಥೆಯಲ್ಲಿ ಸಂತೋಷಪಡುವವರಿಗೆ ದಂಡನೆಯು ಖಂಡಿತ.
సామెతలు 17 : 7 (ERVTE)
ಮೊಮ್ಮಕ್ಕಳು ವೃದ್ಧರಿಗೆ ಸಂತೋಷ. ಮಕ್ಕಳಿಗೆ ತಮ್ಮ ತಂದೆತಾಯಿಗಳ ಬಗ್ಗೆ ಹೆಮ್ಮೆ.
సామెతలు 17 : 8 (ERVTE)
ವಾಕ್ಚಾತುರ್ಯವು ಮೂಢನಿಗೆ ವಿರುದ್ಧ; ಸುಳ್ಳು ಮಾತು ಗಣ್ಯನಿಗೆ ಇನ್ನೂ ವಿರುದ್ಧ.
సామెతలు 17 : 9 (ERVTE)
ಲಂಚವು ಅದೃಷ್ಟ ಎಂದು ಭಾವಿಸಿಕೊಳ್ಳುವವರಿಗೆ, ಅವರು ಹೋದಲ್ಲೆಲ್ಲಾ ಅದೇ ಕಾರ್ಯಸಾಧಕದಂತೆ ಕಾಣುತ್ತದೆ.
సామెతలు 17 : 10 (ERVTE)
ನಿನಗೆ ತಪ್ಪು ಮಾಡಿದವನನ್ನು ನೀನು ಕ್ಷಮಿಸಿದರೆ ನೀನು ಸ್ನೇಹಿತನಾಗುವಿ. ಆದರೆ ನೀನು ಆ ವಿಷಯವನ್ನು ಬೇರೆಯವರಿಗೆ ಮತ್ತೆ ಹೇಳಿದರೆ ನಿಮ್ಮ ಗೆಳೆತನವು ಒಡೆದು ಹೋಗುವುದು.
సామెతలు 17 : 11 (ERVTE)
ಮೂಢನಿಗೆ ಮನವರಿಕೆ ಮಾಡಲು ನೂರು ಏಟುಗಳು ಬೇಕಾದರೂ ಜ್ಞಾನಿಗೆ ಒಂದೇ ಗದರಿಕೆಯು ಸಾಕು.
సామెతలు 17 : 12 (ERVTE)
ದುಷ್ಟನಿಗೆ ದೇವರ ವಿರುದ್ಧ ದಂಗೆ ಏಳುವುದಕ್ಕೆ ಇಷ್ಟ. ಕೊನೆಯಲ್ಲಿ ದೇವರು ತನ್ನ ದೂತನನ್ನು ಕಳುಹಿಸಿ ಅವನನ್ನು ದಂಡಿಸುವನು.
సామెతలు 17 : 13 (ERVTE)
ಮೂಢಕಾರ್ಯಗಳಲ್ಲಿ ನಿರತನಾಗಿರುವ ಮೂಢನನ್ನು ಭೇಟಿಯಾಗುವುದಕ್ಕಿಂತ ತನ್ನ ಮರಿಗಳನ್ನು ಕಳೆದುಕೊಂಡು ಕೋಪದಿಂದಿರುವ ತಾಯಿಕರಡಿಗೆ ಎದುರಾಗುವುದೇ ಮೇಲು.
సామెతలు 17 : 14 (ERVTE)
ನಿನಗೆ ಉಪಕಾರ ಮಾಡುವವರಿಗೆ ಅಪಕಾರ ಮಾಡಬೇಡ. ಇಲ್ಲವಾದರೆ ನಿನ್ನ ಜೀವಮಾನವೆಲ್ಲಾ ಕಷ್ಟಪಡುವೆ.
సామెతలు 17 : 15 (ERVTE)
ವಾದವು ಜಲಾಶಯದ ಕಟ್ಟೆಯಲ್ಲಿ ಮಾಡುವ ತೂತಿಗೆ ಸಮಾನ. ಅದು ಹೆಚ್ಚೆಚ್ಚು ದೊಡ್ಡದಾಗುವುದಕ್ಕಿಂತ ಮೊದಲೇ ನಿಲ್ಲಿಸು.
సామెతలు 17 : 16 (ERVTE)
ನಿರಪರಾಧಿಗಾಗುವ ದಂಡನೆಯೂ ಅಪರಾಧಿಗಾಗುವ ಬಿಡುಗಡೆಯೂ ಯೆಹೋವನಿಗೆ ಅಸಹ್ಯ.
సామెతలు 17 : 17 (ERVTE)
ಮೂಢನಲ್ಲಿ ಹಣವಿದ್ದರೂ ಪ್ರಯೋಜನವಿಲ್ಲ. ಯಾಕೆಂದರೆ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಅವನ ಹಣ ನಿಷ್ಪ್ರಯೋಜಕ.
సామెతలు 17 : 18 (ERVTE)
ಸ್ನೇಹಿತನು ಯಾವಾಗಲೂ ಪ್ರೀತಿಸುವನು. ಕಷ್ಟದ ಸಮಯಗಳಲ್ಲಿ ಸಹೋದರನು ಸಹಾಯಮಾಡುವನು.
సామెతలు 17 : 19 (ERVTE)
ಮೂಢನು ಬೇರೊಬ್ಬನ ಸಾಲಕ್ಕೆ ಜಾಮೀನುಗಾರನಾಗುವನು.
సామెతలు 17 : 20 (ERVTE)
ಜಗಳದಲ್ಲಿ ಸಂತೋಷಿಸುವವನು ಪಾಪದಲ್ಲಿಯೂ ಸಂತೋಷಿಸುವನು. ಜಂಬಕೊಚ್ಚಿಕೊಳ್ಳುವುದು ಕೇಡನ್ನು ಕರೆಯುವುದಕ್ಕೆ ಸಮಾನ.
సామెతలు 17 : 21 (ERVTE)
ಕೆಡುಕನಿಗೆ ಲಾಭವೆಂದೂ ಆಗದು. ಸುಳ್ಳುಗಾರನಿಗೆ ತೊಂದರೆಯೇ ಗತಿ.
సామెతలు 17 : 22 (ERVTE)
ಮೂಢಮಗನನ್ನು ಪಡೆದಿರುವ ತಂದೆಗೆ ಬಹು ವ್ಯಥೆ. ಅವನ ತಂದೆಯು ಸಂತೋಷದಿಂದರಲಾರನು
సామెతలు 17 : 23 (ERVTE)
ಸಂತೋಷವು ಒಳ್ಳೆಯ ಔಷಧಿಯಂತಿದೆ. ಆದರೆ ದುಃಖವು ಕಾಯಿಲೆಯಂತಿದೆ.
సామెతలు 17 : 24 (ERVTE)
ದುಷ್ಟನು ನ್ಯಾಯ ದೊರೆಯದಂತೆ ಮಾಡಲು ಗುಟ್ಟಾಗಿ ಲಂಚ ತೆಗೆದುಕೊಳ್ಳುವನು.
సామెతలు 17 : 25 (ERVTE)
ವಿವೇಕಿಯು ಜ್ಞಾನದ ಮೇಲೆ ಮನಸ್ಸಿಡುತ್ತಾನೆ. ಆದರೆ ಮೂಢನು ಬಹುದೂರದ ಸ್ಥಳಗಳ ಬಗ್ಗೆ ಕನಸು ಕಾಣುತ್ತಲೇ ಇರುವನು.
సామెతలు 17 : 26 (ERVTE)
ಮೂಢಮಗನಿಂದ ತಂದೆಗೆ ದುಃಖ; ಹೆತ್ತತಾಯಿಗೆ ವ್ಯಥೆ.
సామెతలు 17 : 27 (ERVTE)
ನಿರಪರಾಧಿಯನ್ನು ಶಿಕ್ಷಿಸುವುದು ತಪ್ಪು. ನ್ಯಾಯವಂತರಾದ ನಾಯಕರಿಗೆ ಹೊಡೆಯುವುದು ತಪ್ಪು.
సామెతలు 17 : 28 (ERVTE)
ಜ್ಞಾನಿಯು ಎಚ್ಚರಿಕೆಯಿಂದ ಮಾತಾಡುವನು. ವಿವೇಕಿಯು ಬೇಗನೆ ಕೋಪಗೊಳ್ಳುವುದಿಲ್ಲ. ಮೌನವಾಗಿದ್ದರೆ ಮೂಢನು ಸಹ ಜ್ಞಾನಿಯಂತೆ ಕಾಣುವನು; ಮಾತಾಡದಿದ್ದರೆ ವಿವೇಕಿಯಂತೆ ಕಾಣುವನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28