సామెతలు 26 : 1 (ERVTE)
{#1ಮೂಢರ ಬಗ್ಗೆ ಜ್ಞಾನದ ನುಡಿಗಳು }
సామెతలు 26 : 2 (ERVTE)
ಮೂಢನನ್ನು ಗೌರವಿಸುವುದು ಸರಿಯಲ್ಲ. ಅದು ಬೇಸಿಗೆಕಾಲದಲ್ಲಿ ಬೀಳುವ ಹಿಮದಂತೆಯೂ ಸುಗ್ಗೀಕಾಲದಲ್ಲಿ ಬೀಳುವ ಮಳೆಯಂತೆಯೂ ಇದೆ.
సామెతలు 26 : 3 (ERVTE)
ಅಯೋಗ್ಯವಾದ ಶಾಪ ನಿರಪರಾಧಿಗೆ ತಟ್ಟುವುದಿಲ್ಲ. ಆ ಶಾಪದ ಮಾತುಗಳು ಹಾರಿಹೋಗಿ ಎಂದೂ ಕೆಳಗಿಳಿಯದ ಪಕ್ಷಿಗಳಂತಿವೆ.
సామెతలు 26 : 4 (ERVTE)
ಕುದುರೆಗೆ ಚಬುಕಬೇಕು. ಹೇಸರಕತ್ತೆಗೆ ಕಡಿವಾಣಬೇಕು. ಮೂಢನಿಗೆ ಹೊಡೆತಬೇಕು.
సామెతలు 26 : 5 (ERVTE)
ಮೂಢನಿಗೆ ಅವನ ಮೂರ್ಖತನದ ಮಟ್ಟದಲ್ಲಿ ಉತ್ತರ ಕೊಡಬೇಡ; ಇಲ್ಲವಾದರೆ ನೀನೂ ಅವನಂತಾಗುವೆ.
సామెతలు 26 : 6 (ERVTE)
ಮೂಢನಿಗೆ ಅವನ ಮೂಢತನದ ಮಟ್ಟದಲ್ಲಿ ಉತ್ತರಿಸು; ಇಲ್ಲವಾದರೆ ಅವನು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಳ್ಳುವನು.
సామెతలు 26 : 7 (ERVTE)
ನಿನ್ನ ಸಂದೇಶವನ್ನು ಮೂಢನ ಮೂಲಕ ಎಂದಿಗೂ ಕಳುಹಿಸಿಕೊಡಬೇಡ. ಅದು ನಿನ್ನ ಸ್ವಂತ ಕಾಲನ್ನೇ ಕತ್ತರಿಸಿಕೊಂಡಂತಿರುವುದು; ನೀನೇ ಕೇಡಿಗಾಗಿ ಕೇಳಿಕೊಂಡಂತಾಗುವುದು.
సామెతలు 26 : 8 (ERVTE)
ಮೂಢನು ಜ್ಞಾನದ ಮಾತನ್ನು ಹೇಳಲು ಮಾಡುವ ಪ್ರಯತ್ನವು, ಕುಂಟನು ನಡೆಯಲು ಮಾಡುವ ಪ್ರಯತ್ನದಂತಿದೆ.
సామెతలు 26 : 9 (ERVTE)
ಮೂಢನಿಗೆ ತೋರುವ ಗೌರವ, ಕವಣೆಯಲ್ಲಿರುವ ಕಲ್ಲಿನಷ್ಟೇ ಕೆಟ್ಟದ್ದು.
సామెతలు 26 : 10 (ERVTE)
ಮೂಢನು ಜ್ಞಾನೋಕ್ತಿಯನ್ನು ಬಳಸಲು ಮಾಡುವ ಪ್ರಯತ್ನವು ಕುಡುಕನೊಬ್ಬನು ಮುಳ್ಳುಕೊಂಬೆಯೊಂದನ್ನು ತನ್ನ ಕೈಯಲ್ಲಿ ಝಳಪಿಸುವಂತಿರುವುದು.
సామెతలు 26 : 11 (ERVTE)
ಮೂಢನನ್ನಾಗಲಿ ಕುಡುಕನನ್ನಾಗಲಿ ಕೂಲಿಗೆ ನೇಮಿಸಿಕೊಳ್ಳುವವನು ಹಾದುಹೋಗುವವರಿಗೆಲ್ಲ ಗಾಯ ಮಾಡುವ ಬಿಲ್ಲುಗಾರನಂತಿರುವನು.
సామెతలు 26 : 12 (ERVTE)
ನಾಯಿ ತಾನು ಕಕ್ಕಿದ್ದನ್ನೇ ನೆಕ್ಕಲು ಹಿಂತಿರುಗುವಂತೆ ಮೂಢನು ತನ್ನ ಮೂಢತನವನ್ನು ಪದೇಪದೇ ಮಾಡುವನು.
సామెతలు 26 : 13 (ERVTE)
ಅಜ್ಞಾನಿಯು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಂಡರೆ ಅವನು ಮೂಢನಿಗಿಂತಲೂ ಕೀಳಾದವನು.
సామెతలు 26 : 14 (ERVTE)
“ನಾನು ನನ್ನ ಮನೆಯಿಂದ ಹೊರಗೆ ಹೋಗಲಾರೆ. ಬೀದಿಯಲ್ಲಿ ಸಿಂಹವಿದೆ” ಎನ್ನುತ್ತಾನೆ ಸೋಮಾರಿ.
సామెతలు 26 : 15 (ERVTE)
ಬಾಗಿಲು ತಿರುಗುಣಿಯ ಮೇಲೆ ಸುತ್ತುವಂತೆ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುವನು.
సామెతలు 26 : 16 (ERVTE)
ಸೋಮಾರಿಯು ತಟ್ಟೆಯಲ್ಲಿರುವ ಊಟವನ್ನು ತಿನ್ನುವುದಕ್ಕೂ ಬಹು ಆಯಾಸಪಡುವನು.
సామెతలు 26 : 17 (ERVTE)
ತಮ್ಮ ಆಲೋಚನೆಗಳಿಗೆ ಒಳ್ಳೆಯ ಕಾರಣಗಳನ್ನು ಕೊಡುವ ಏಳು ಜನರಿಗಿಂತಲೂ ತಾನು ಜ್ಞಾನಿಯೆಂದು ಸೋಮಾರಿಯು ಭಾವಿಸುವನು.
సామెతలు 26 : 18 (ERVTE)
ಬೇರೆಯವರ ವಾಗ್ವಾದದಲ್ಲಿ ಮಧ್ಯೆ ಪ್ರವೇಶಿಸಲು ಮಾಡುವ ಪ್ರಯತ್ನ ಹಾದಿಯಲ್ಲಿ ಹೋಗುತ್ತಿರುವ ನಾಯಿಯ ಕಿವಿಗಳನ್ನು ಹಿಡಿದುಕೊಳ್ಳುವಷ್ಟೇ ಅಪಾಯಕರ.
సామెతలు 26 : 19 (ERVTE)
(18-19)ಮತ್ತೊಬ್ಬನನ್ನು ಮೋಸಗೊಳಿಸಿ ತಾನು ಕೇವಲ ತಮಾಷೆಮಾಡಿದ್ದಾಗಿ ಹೇಳುವವನು ಉರಿಯುವ ಬಾಣಗಳನ್ನು ಆಕಾಶದ ಕಡೆಗೆ ಎಸೆದು ಬೇರೊಬ್ಬನನ್ನು ಆಕಸ್ಮಿಕವಾಗಿ ಕೊಲ್ಲುವ ಹುಚ್ಚನಂತಿರುವನು.
సామెతలు 26 : 20 (ERVTE)
సామెతలు 26 : 21 (ERVTE)
ಸೌದೆ ಇಲ್ಲದಿದ್ದರೆ ಬೆಂಕಿಯು ಆರಿಹೋಗುವುದು. ಅಂತೆಯೇ ಹುರುಳಿಲ್ಲದ ವಾಗ್ವಾದ ನಿಂತುಹೋಗುವುದು.
సామెతలు 26 : 22 (ERVTE)
ಕೆಂಡದಿಂದ ಕಲ್ಲಿದ್ದಲು ಉರಿಯುತ್ತದೆ; ಸೌದೆಯಿಂದ ಬೆಂಕಿ ಉರಿಯುತ್ತದೆ; ಅಂತೆಯೇ ಜಗಳಗಂಟರು ವಾಗ್ವಾದವನ್ನು ಮುಂದುವರಿಸುವರು.
సామెతలు 26 : 23 (ERVTE)
ಹರಟೆಮಾತು ಜನರಿಗೆ ಪ್ರಿಯ. ಅವರಿಗೆ ಅದು ಒಳ್ಳೆಯ ಆಹಾರವನ್ನು ತಿಂದಂತಿರುವುದು. ಕೆಟ್ಟ ಆಲೋಚನೆಯನ್ನು ಅಡಗಿಸಿಡುವ ಕನಿಕರದ ಮಾತುಗಳು ಕಡಿಮೆ ಬೆಲೆಯ ಮಡಿಕೆಯ ಮೇಲಿನ ಬೆಳ್ಳಿಯ ಲೇಪನದಂತಿವೆ.
సామెతలు 26 : 24 (ERVTE)
ಕೆಡುಕನು ತಾನು ಹೇಳುವ ಸಂಗತಿಗಳ ಮೂಲಕ ತನ್ನನ್ನು ಒಳ್ಳೆಯವನನ್ನಾಗಿ ತೋರಿಸಿಕೊಳ್ಳುವನು. ಆದರೆ ಅವನು ತನ್ನ ಕೆಟ್ಟ ಆಲೋಚನೆಗಳನ್ನು ತನ್ನ ಹೃದಯದಲ್ಲಿ ಅಡಗಿಸಿಕೊಳ್ಳುವನು.
సామెతలు 26 : 25 (ERVTE)
ಅವನು ಹೇಳುವ ಸಂಗತಿಗಳು ಒಳ್ಳೆಯದಾಗಿ ಕಂಡರೂ ಅವನನ್ನು ನಂಬಬೇಡಿ. ಅವನ ಹೃದಯವು ಕೆಟ್ಟ ಆಲೋಚನೆಗಳಿಂದ ತುಂಬಿದೆ.
సామెతలు 26 : 26 (ERVTE)
ದ್ವೇಷವು ತನ್ನನ್ನು ಮೋಸದಿಂದ ಮರೆಮಾಡಿಕೊಳ್ಳುತ್ತದೆ. ಆದರೆ ಅವನು ಕೀಳಾದವನು; ಕೊನೆಯಲ್ಲಿ, ಅವನ ಕೆಟ್ಟಕಾರ್ಯಗಳನ್ನು ಜನರೆಲ್ಲರೂ ನೋಡುವರು.
సామెతలు 26 : 27 (ERVTE)
సామెతలు 26 : 28 (ERVTE)
ಮತ್ತೊಬ್ಬನಿಗೆ ಬಲೆಹಾಕುವವನು ತನಗೇ ಬಲೆಹಾಕಿಕೊಳ್ಳುವನು. ಮತ್ತೊಬ್ಬನ ಮೇಲೆ ಬಂಡೆ ಉರುಳಿಸಲು ಪ್ರಯತ್ನಿಸುವವನು ಅದರಿಂದಲೇ ಜಜ್ಜಲ್ಪಡುವನು. ಸುಳ್ಳುಗಾರನು ತಾನು ಕೇಡುಮಾಡಲಿರುವ ಜನರನ್ನು ದ್ವೇಷಿಸುವನು. ಕಪಟದ ಸಂಗತಿಗಳನ್ನು ಹೇಳುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28