కీర్తనల గ్రంథము 24 : 1 (ERVTE)
*ರಚನೆಗಾರ: ದಾವೀದ. *ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನವೇ. ಲೋಕವೂ ಅದರ ನಿವಾಸಿಗಳೂ ಆತನವೇ.
కీర్తనల గ్రంథము 24 : 2 (ERVTE)
ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ. ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.
కీర్తనల గ్రంథము 24 : 3 (ERVTE)
ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು? ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
కీర్తనల గ్రంథము 24 : 4 (ERVTE)
ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ ಶುದ್ಧ ಹೃದಯವುಳ್ಳವರೂ ನನ್ನ ಹೆಸರಿನಲ್ಲಿ[* ನನ್ನ ಹೆಸರು ಅಕ್ಷರಶಃ, “ನನ್ನ ಪ್ರಾಣ.” ] ಮೋಸ ಪ್ರಮಾಣ ಮಾಡದವರೂ ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.
కీర్తనల గ్రంథము 24 : 5 (ERVTE)
ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು; ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
కీర్తనల గ్రంథము 24 : 6 (ERVTE)
ಆತನನ್ನು ಅನುಸರಿಸುವವರು ಇಂಥವರೇ. ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.
కీర్తనల గ్రంథము 24 : 7 (ERVTE)
ಹೆಬ್ಬಾಗಿಲುಗಳೇ, ಉನ್ನತವಾಗಿರಿ! ಪುರಾತನ ದ್ವಾರಗಳೇ, ತೆರದುಕೊಂಡಿರಿ. ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
కీర్తనల గ్రంథము 24 : 8 (ERVTE)
ಮಹಿಮಾಸ್ವರೂಪನಾದ ಈ ರಾಜನು ಯಾರು? ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ ಯೆಹೋವನೇ ಆತನು.
కీర్తనల గ్రంథము 24 : 9 (ERVTE)
ಹೆಬ್ಬಾಗಿಲುಗಳೇ, ಉನ್ನತವಾಗಿರಿ! ಪುರಾತನ ದ್ವಾರಗಳೇ, ತೆರೆದುಕೊಂಡಿರಿ. ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
కీర్తనల గ్రంథము 24 : 10 (ERVTE)
ಮಹಿಮಾಸ್ವರೂಪನಾದ ಈ ರಾಜನು ಯಾರು? ಸೇನಾಧೀಶ್ವರನಾದ ಯೆಹೋವನೇ ಆ ರಾಜನು. ಮಹಿಮಾಸ್ವರೂಪನಾದ ರಾಜನು ಆತನೇ.

1 2 3 4 5 6 7 8 9 10