కీర్తనల గ్రంథము 26 : 1 (ERVTE)
*ರಚನೆಗಾರ: ದಾವೀದ. *ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು. ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
కీర్తనల గ్రంథము 26 : 2 (ERVTE)
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ. ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
కీర్తనల గ్రంథము 26 : 3 (ERVTE)
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ. ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
కీర్తనల గ్రంథము 26 : 4 (ERVTE)
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ. ನಾನು ಕಪಟಿಗಳ ಜೊತೆ ಸೇರುವವನಲ್ಲ.
కీర్తనల గ్రంథము 26 : 5 (ERVTE)
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ. ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.
కీర్తనల గ్రంథము 26 : 6 (ERVTE)
ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[* ಯಜ್ಞವೇದಿಕೆ ಈ ಕೀರ್ತನೆಗಾರನು ಯಾಜಕನೂ ಲೇವಿಯನೂ ಆಗಿದ್ದಿರಬೇಕೆಂದು ಇದು ಸೂಚಿಸುತ್ತದೆ. ಜನರನ್ನು ಸಭೆ ಸೇರಿಸುವುದರಲ್ಲಿ ಇವನು ಕಾರ್ಯನಿರತನಾಗಿದ್ದಿರಬಹದು. (ವಚನ 12) ಯಾಜಕರು ಮತ್ತು ಲೇವಿಯರು ಮಾತ್ರ ಸೇವೆಮಾಡಬಹುದಾದ ದೇವಾಲಯದ ಸ್ಥಳದಲ್ಲಿ ಇವನು ಸೇವೆ ಮಾಡುತ್ತಿದ್ದಿರಬಹುದು. ವಚನದ ಈ ಭಾಗವನ್ನು “ನಾನು ಯಜ್ಞವೇದಿಕೆಯ ಸುತ್ತಲೂ ಜನರನ್ನು ಸೇರಿಸಲು ಸಾಧ್ಯವಾಗುವಂತೆ” ಎಂದು ಸಹ ಅನುವಾದಿಸಬಹುದು. ಈ ರೀತಿ ಅನುವಾದ ಮಾಡಿದರೆ, ಈ ಕೀರ್ತನೆಗಾರನು ತನ್ನನ್ನು ಶುದ್ಧೀಕರಿಸಿಕೊಳ್ಳುತ್ತಿದ್ದದ್ದು ಕೇವಲ ಆರಾಧಕನಾಗಿಯೇ ಹೊರತು ಯಾಜಕನಾಗಲ್ಲ ಎಂಬ ಅರ್ಥವನ್ನು ಕೊಡುತ್ತದೆ. ] ಸುತ್ತಲೂ ನಡೆಯಲು ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
కీర్తనల గ్రంథము 26 : 7 (ERVTE)
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು. ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
కీర్తనల గ్రంథము 26 : 8 (ERVTE)
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ ನನಗೆ ಎಷ್ಟೋ ಪ್ರಿಯವಾಗಿದೆ.
కీర్తనల గ్రంథము 26 : 9 (ERVTE)
ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ. ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
కీర్తనల గ్రంథము 26 : 10 (ERVTE)
ಅವರು ಜನರನ್ನು ವಂಚಿಸುವರು; ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
కీర్తనల గ్రంథము 26 : 11 (ERVTE)
ನಾನಾದರೋ ನಿರಪರಾಧಿ. ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
కీర్తనల గ్రంథము 26 : 12 (ERVTE)
ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ. ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.
❮
❯
1
2
3
4
5
6
7
8
9
10
11
12