కీర్తనల గ్రంథము 45 : 1 (ERVTE)
*ರಚನೆಗಾರರು: ಕೋರಹೀಯರು. *ಒಂದು ದಿವ್ಯ ವಿಷಯವನ್ನು ಹೇಳಲು ನನ್ನ ಹೃದಯವು ತವಕಪಡುತ್ತದೆ; ನನ್ನ ರಾಜನನ್ನು ಕುರಿತು ಸುಂದರವಾದ ಗೀತೆಯೊಂದನ್ನು ರಚಿಸುವೆ. ನನ್ನ ನಾಲಿಗೆಯು ಕವಿಯ ಲೇಖನಿಯಂತೆ ಸಿದ್ಧವಾಗಿದೆ.
కీర్తనల గ్రంథము 45 : 2 (ERVTE)
ನೀನು ಎಲ್ಲರಿಗಿಂತಲೂ ಅತಿಸುಂದರನಾಗಿರುವೆ. ನಿನ್ನ ಮಾತುಗಳು ಮನೋಹರವಾಗಿವೆ. ದೇವರ ಆಶೀರ್ವಾದವು ನಿನ್ನ ಮೇಲೆ ಸದಾಕಾಲವಿರುವುದು.
కీర్తనల గ్రంథము 45 : 3 (ERVTE)
ನಿನ್ನ ಖಡ್ಗವನ್ನು ಕಟ್ಟಿಕೊ. ನಿನ್ನ ಮಹಿಮಾವಸ್ತ್ರವನ್ನು ಧರಿಸಿಕೊ.
కీర్తనల గ్రంథము 45 : 4 (ERVTE)
ನೀನು ವೈಭವಯುತವಾಗಿ ಕಾಣುತ್ತಿರುವೆ! ಒಳ್ಳೆಯದಕ್ಕಾಗಿಯೂ ನ್ಯಾಯಕ್ಕಾಗಿಯೂ ಹೋರಾಡಿ ಗೆಲ್ಲು. ಶಕ್ತಿಯುತವಾದ ನಿನ್ನ ಬಲತೋಳಿನಿಂದ ಮಹತ್ಕಾರ್ಯಗಳನ್ನು ಮಾಡು.
కీర్తనల గ్రంథము 45 : 5 (ERVTE)
ನಿನ್ನ ಬಾಣಗಳು ತೀಕ್ಷ್ಣವಾಗಿವೆ. ಅವು ನಿನ್ನ ಶತ್ರುಗಳ ಎದೆಗೆ ನಾಟಿಕೊಳ್ಳುತ್ತವೆ; ಶತ್ರುಗಳು ನಿನ್ನ ಕಣ್ಣೆದುರಿನಲ್ಲೇ ನೆಲಕ್ಕುರುಳುವರು.
కీర్తనల గ్రంథము 45 : 6 (ERVTE)
ದೇವರೇ,[* ದೇವರೇ ದೇವರನ್ನು ರಾಜನಂತೆ ವರ್ಣಿಸಿರುವ ಹಾಡು ಎಂಬ ಅರ್ಥವನ್ನು ಇದು ಕೊಡಬಹುದು, ಅಥವಾ ಇಲ್ಲಿ ಲೇಖಕನು “ದೇವರು” ಎಂಬ ಪದವನ್ನು ರಾಜನಿಗೆ ಶಿರೋನಾಮೆಯಾಗಿ ಉಪಯೋಗಿಸಿರಬಹದು. ] ನಿನ್ನ ಸಿಂಹಾಸನವು ಶಾಶ್ವತವಾದದ್ದು. ಒಳ್ಳೆಯತನವು ನಿನ್ನ ರಾಜದಂಡವಾಗಿದೆ.
కీర్తనల గ్రంథము 45 : 7 (ERVTE)
ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ. ಆದ್ದರಿಂದ ನಿನ್ನ ದೇವರಾಗಿರುವಾತನು ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ.[† ನಿನ್ನ ಸ್ನೇಹಿತರಿಗೆ … ಆರಿಸಿಕೊಂಡಿದ್ದಾನೆ ಅಕ್ಷರಶಃ, “ನಿನ್ನ ಮೇಲೆ ಮತ್ತು ನಿನ್ನ ಸ್ನೇಹಿತರ ಮೇಲೆ ಆನಂದ ತೈಲವನ್ನು ಸುರಿದಿದ್ದಾನೆ.” ರಾಜರನ್ನು, ಯಾಜಕರನ್ನು, ಮತ್ತು ಪ್ರವಾದಿಗಳನ್ನು ಅಭಿಷೇಕಿಸುವದಕ್ಕಾಗಿ ವಿಶೇಷವಾದ ಈ ತೈಲವನ್ನು ದೇವಾಲಯದಲ್ಲಿ ಇಟ್ಟಿರುತ್ತಿದ್ದರು. ]
కీర్తనల గ్రంథము 45 : 8 (ERVTE)
ನಿನ್ನ ಬಟ್ಟೆಗಳು ಪರಿಮಳದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ. ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು.
కీర్తనల గ్రంథము 45 : 9 (ERVTE)
ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ, ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು.
కీర్తనల గ్రంథము 45 : 10 (ERVTE)
ರಾಣಿಯೇ, ನನಗೆ ಕಿವಿಗೊಡು. ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ. ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
కీర్తనల గ్రంథము 45 : 11 (ERVTE)
ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು. ಅವನು ನಿನಗೆ ಹೊಸ ಯಜಮಾನನಾಗಿರುವನು. ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[‡ ಗೌರವಿಸಬೇಕು ಅಕ್ಷರಶಃ “ಅವನಿಗೆ ತಲೆಬಾಗಬೇಕು.” ]
కీర్తనల గ్రంథము 45 : 12 (ERVTE)
ತೂರ್ ಪಟ್ಟಣದ ಶ್ರೀಮಂತರು ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.
కీర్తనల గ్రంథము 45 : 13 (ERVTE)
ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು; ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
కీర్తనల గ్రంథము 45 : 14 (ERVTE)
ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
కీర్తనల గ్రంథము 45 : 15 (ERVTE)
ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.
కీర్తనల గ్రంథము 45 : 16 (ERVTE)
ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು; ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
కీర్తనల గ్రంథము 45 : 17 (ERVTE)
ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು; ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.
❮
❯
1
2
3
4
5
6
7
8
9
10
11
12
13
14
15
16
17