కీర్తనల గ్రంథము 49 : 1 (ERVTE)
*ರಚನೆಗಾರರು: ಕೋರಹೀಯರು. *ಸರ್ವಜನಾಂಗಗಳೇ, ಕೇಳಿರಿ, ಭೂನಿವಾಸಿಗಳೆಲ್ಲರೇ, ಆಲಿಸಿರಿ.
కీర్తనల గ్రంథము 49 : 2 (ERVTE)
ಸಾಮಾನ್ಯರೇ, ಅಧಿಪತಿಗಳೇ, ಬಡವರೇ, ಶ್ರೀಮಂತರೇ, ನೀವೆಲ್ಲರೂ ಒಂದಾಗಿ ಬಂದು ಕೇಳಿರಿ.
కీర్తనల గ్రంథము 49 : 3 (ERVTE)
ನಾನು ನಿಮಗೆ ಸುಜ್ಞಾನವನ್ನೂ ವಿವೇಕವನ್ನೂ ಬೋಧಿಸುವೆನು.
కీర్తనల గ్రంథము 49 : 4 (ERVTE)
ನಾನು ಅವುಗಳನ್ನು ಕಿವುಗೊಟ್ಟು ಕೇಳಿದ್ದೇನೆ. ನಾನು ಹಾರ್ಪ್ವಾದ್ಯವನ್ನು ನುಡಿಸುತ್ತಾ ಅವುಗಳನ್ನು ನಿಮಗಾಗಿ ಹಾಡುವೆನು.
కీర్తనల గ్రంథము 49 : 5 (ERVTE)
ಆಪತ್ತು ಬಂದಾಗ ನಾನೇಕೆ ಭಯಪಡಬೇಕು? ದುಷ್ಟರು ನನ್ನನ್ನು ಆವರಿಸಿ ಮೋಸದಿಂದ ಹಿಡಿಯಲು ಪ್ರಯತ್ನಿಸುವಾಗ ನಾನೇಕೆ ಭಯಪಡಬೇಕು?
కీర్తనల గ్రంథము 49 : 6 (ERVTE)
ತಮ್ಮ ಸ್ವಂತ ಬಲದಲ್ಲಿಯೂ ಐಶ್ವರ್ಯದಲ್ಲಿಯೂ ಭರವಸೆಯಿಟ್ಟಿದ್ದಾರೆ; ಅವರು ಬುದ್ಧಿಹೀನರಾಗಿದ್ದಾರೆ.
కీర్తనల గ్రంథము 49 : 7 (ERVTE)
ಯಾವ ಮಾನವ ಸ್ನೇಹಿತನೂ ನಿನ್ನನ್ನು ರಕ್ಷಿಸಲಾರನು. ಅಲ್ಲದೆ ದೇವರಿಗೆ ಈಡನ್ನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳಲಾರನು.
కీర్తనల గ్రంథము 49 : 8 (ERVTE)
ಸ್ವಂತ ಪ್ರಾಣವನ್ನು ಖರೀದಿಸಲು ಬೇಕಾಗುವಷ್ಟು ಹಣ ಯಾವನಿಗೂ ದೊರೆಯುವುದಿಲ್ಲ.
కీర్తనల గ్రంథము 49 : 9 (ERVTE)
ಸದಾಕಾಲ ಬದುಕುವ ಹಕ್ಕನ್ನು ಖರೀದಿಸಲು ಮತ್ತು ತನ್ನ ಸಮಾಧಿಯಲ್ಲಿ ತನ್ನ ಸ್ವಂತ ದೇಹ ಕೊಳೆಯದಂತೆ ಮಾಡಲು ಬೇಕಾಗುವಷ್ಟು ಹಣವನ್ನು ಯಾವನೂ ಪಡೆದುಕೊಳ್ಳಲಾರನು.
కీర్తనల గ్రంథము 49 : 10 (ERVTE)
ಬುದ್ಧಿಹೀನರೂ ಮೂಢರೂ ಸಾಯುವಂತೆ ಜ್ಞಾನಿಗಳೂ ಸಾಯುವರು. ಅವರು ಸತ್ತಾಗ ಅವರ ಆಸ್ತಿಯು ಬೇರೆಯವರ ಪಾಲಾಗುವುದು.
కీర్తనల గ్రంథము 49 : 11 (ERVTE)
ಸಮಾಧಿಯೇ ಅವರ ಶಾಶ್ವತವಾದ ಹೊಸ ಮನೆ. ಅವರೆಷ್ಟೇ ಭೂ ಆಸ್ತಿಯನ್ನು ಹೊಂದಿದ್ದರೂ ಅದರಿಂದೇನೂ ಪ್ರಯೋಜನವಿಲ್ಲ.
కీర్తనల గ్రంథము 49 : 12 (ERVTE)
ಜನರು ಐಶ್ವರ್ಯವಂತರಾಗಿದ್ದರೂ ಭೂಲೋಕದಲ್ಲಿ ಶಾಶ್ವತವಾಗಿ ಇರಲಾಗದು. ಎಲ್ಲರೂ ಪ್ರಾಣಿಗಳಂತೆಯೇ ಸಾಯುವರು.
కీర్తనల గ్రంథము 49 : 13 (ERVTE)
ತಮ್ಮ ಐಶ್ವರ್ಯವನ್ನು ಮೆಚ್ಚಿಕೊಂಡಿರುವ ಬುದ್ಧಿಹೀನರಿಗೆ ಇದೇ ಗತಿ.
కీర్తనల గ్రంథము 49 : 14 (ERVTE)
ಅವರು ಕುರಿಗಳಂತಿದ್ದಾರೆ. ಸಮಾಧಿಯೇ ಅವರ ಕೊಟ್ಟಿಗೆ. ಮರಣವೇ ಅವರ ಕುರುಬ. ಒಂದು ಮುಂಜಾನೆ, ಅವರ ದೇಹಗಳು ಅವರ ಮನೆಗಳಿಂದ ದೂರವಾಗಿ ಸಮಾಧಿಯಲ್ಲಿ ಕೊಳೆಯುತ್ತಿರಲು, ನೀತಿವಂತರು ಜಯಶಾಲಿಗಳಾಗಿರುವರು.
కీర్తనల గ్రంథము 49 : 15 (ERVTE)
ಆದರೆ ದೇವರು ಈಡುಕೊಟ್ಟು ನನ್ನ ಪ್ರಾಣವನ್ನು ರಕ್ಷಿಸುವನು. ಆತನು ನನ್ನನ್ನು ತನ್ನೊಂದಿಗಿರಲು ಕೊಂಡೊಯ್ಯುವಾಗ ನನ್ನನ್ನು ಸಮಾಧಿಯ ಬಲದಿಂದ ರಕ್ಷಿಸುವನು.
కీర్తనల గ్రంథము 49 : 16 (ERVTE)
ಜನರು ಐಶ್ವರ್ಯವಂತರಾಗಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ. ಜನರು ಭವ್ಯವಾದ ಮನೆಗಳಲ್ಲಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
కీర్తనల గ్రంథము 49 : 17 (ERVTE)
ಅವರು ಸಾಯುವಾಗ ತಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲಾರರು. ಅವರ ವೈಭವವು ಅವರೊಂದಿಗೆ ಹೋಗಲಾರದು.
కీర్తనల గ్రంథము 49 : 18 (ERVTE)
ಐಶ್ವರ್ಯವಂತನು ತನ್ನ ವಿಷಯದಲ್ಲಿ ಉಬ್ಬಿಕೊಂಡಿದ್ದರೂ ಜನರು ಅವನನ್ನು ಹೊಗಳುತ್ತಿದ್ದರೂ
కీర్తనల గ్రంథము 49 : 19 (ERVTE)
ಸತ್ತು ತನ್ನ ಪೂರ್ವಿಕರ ಬಳಿ ಸೇರುವ ಕಾಲ ಅವನಿಗೆ ಬಂದೇ ಬರುವುದು. ಅವನು ಹಗಲಿನ ಬೆಳಕನ್ನು ಮತ್ತೆಂದಿಗೂ ನೋಡಲಾರ.
కీర్తనల గ్రంథము 49 : 20 (ERVTE)
ಅರ್ಥಮಾಡಿಕೊಳ್ಳಲಾರದವನು ಎಷ್ಟೇ ಐಶ್ವರ್ಯವಂತನಾಗಿದ್ದರೂ ಪ್ರಾಣಿಗಳಂತೆಯೇ ನಾಶವಾಗುವನು.
❮
❯
1
2
3
4
5
6
7
8
9
10
11
12
13
14
15
16
17
18
19
20