కీర్తనల గ్రంథము 62 : 1 (ERVTE)
*ರಚನೆಗಾರ: ದಾವೀದ. *ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು. ಆತನಿಂದಲೇ ನನಗೆ ರಕ್ಷಣೆಯಾಗುವುದು.
కీర్తనల గ్రంథము 62 : 2 (ERVTE)
ಆತನು ನನಗೆ ಬಂಡೆಯೂ ರಕ್ಷಣೆಯೂ ಕೋಟೆಯೂ ಆಗಿದ್ದಾನೆ. ನಾನೆಂದಿಗೂ ಕದಲೆನು.
కీర్తనల గ్రంథము 62 : 3 (ERVTE)
ಇನ್ನೆಷ್ಟರವರೆಗೆ ನೀವು ನನ್ನ ಮೇಲೆ ಆಕ್ರಮಣ ಮಾಡುವಿರಿ? ನಾನು ಬಾಗಿದ ಗೋಡೆಯಂತೆಯೂ ಬೀಳಲಿರುವ ಪ್ರಾಕಾರದಂತೆಯೂ ಇದ್ದೇನೆ.
కీర్తనల గ్రంథము 62 : 4 (ERVTE)
ನನ್ನನ್ನು ಉನ್ನತಸ್ಥಾನದಿಂದ ಕೆಳಗಿಳಿಸಬೇಕೆಂದು ಅವರು ಕುತಂತ್ರ ಮಾಡುತ್ತಿದ್ದಾರೆ. ನನ್ನ ಕುರಿತು ಸುಳ್ಳಾಡುವುದು ಅವರಿಗೆ ಸಂತೋಷ. ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುವರು.
కీర్తనల గ్రంథము 62 : 5 (ERVTE)
ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆ ದೇವರಲ್ಲಿಯೇ.
కీర్తనల గ్రంథము 62 : 6 (ERVTE)
ಆತನೇ ನನಗೆ ಬಂಡೆಯೂ ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
కీర్తనల గ్రంథము 62 : 7 (ERVTE)
ನನ್ನ ರಕ್ಷಣೆಯೂ ಮಾನವೂ ದೇವರೇ. ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
కీర్తనల గ్రంథము 62 : 8 (ERVTE)
ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ. ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ. ಆತನೇ ನಮ್ಮ ಆಶ್ರಯಸ್ಥಾನ.
కీర్తనల గ్రంథము 62 : 9 (ERVTE)
ಸಾಮಾನ್ಯ ಜನರು ಕೇವಲ ಉಸಿರಷ್ಟೇ. ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ. ತೂಗಿನೋಡಿದರೆ ಅವರು ಕೇವಲ ಶೂನ್ಯ; ಉಸಿರಿಗಿಂತಲೂ ಹಗುರ.
కీర్తనల గ్రంథము 62 : 10 (ERVTE)
ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ. ಕದ್ದವಸ್ತುಗಳಲ್ಲಿ ಜಂಬಪಡಬೇಡಿ. ಐಶ್ವರ್ಯವು ಅಧಿಕವಾಗುತ್ತಿದ್ದರೂ ಅದರಲ್ಲಿ ಮನಸ್ಸಿಡಬೇಡಿ.
కీర్తనల గ్రంథము 62 : 11 (ERVTE)
“ಶಕ್ತಿಯೂ ದೇವರಿಂದಲೇ” ಎಂದು ದೇವರು ನುಡಿದಿದ್ದಾನೆ.
కీర్తనల గ్రంథము 62 : 12 (ERVTE)
ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ. ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.
❮
❯
1
2
3
4
5
6
7
8
9
10
11
12