కీర్తనల గ్రంథము 70 : 1 (ERVTE)
*ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ. *ದೇವರೇ, ನನ್ನನ್ನು ರಕ್ಷಿಸು! ದೇವರೇ, ಬೇಗನೆ ನನಗೆ ಸಹಾಯಮಾಡು!
కీర్తనల గ్రంథము 70 : 2 (ERVTE)
ನನ್ನನ್ನು ಕೊಲ್ಲಲು ಪ್ರಯತ್ನಿಸುವವರು ನಿರಾಶೆಗೊಂಡು ಅಪಮಾನ ಹೊಂದಲಿ. ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
కీర్తనల గ్రంథము 70 : 3 (ERVTE)
ನನ್ನನ್ನು ಗೇಲಿಮಾಡುವವರು ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
కీర్తనల గ్రంథము 70 : 4 (ERVTE)
ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ. ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.
కీర్తనల గ్రంథము 70 : 5 (ERVTE)
ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ! ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು! ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ. ಯೆಹೋವನೇ ತಡಮಾಡಬೇಡ!
❮
❯