కీర్తనల గ్రంథము 73 : 1 (ERVTE)
{(ಕೀರ್ತನೆಗಳು 73-89) }*ಸ್ತುತಿಗೀತೆ. ರಚನೆಗಾರ: ಆಸಾಫ. *ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ! ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
కీర్తనల గ్రంథము 73 : 2 (ERVTE)
ಆದರೆ ನನ್ನ ಕಾಲುಗಳು ಜಾರಿದವು; ನನ್ನ ಹೆಜ್ಜೆಗಳು ತಪ್ಪಿದವು.
కీర్తనల గ్రంథము 73 : 3 (ERVTE)
ದುಷ್ಟರ ಏಳಿಗೆಯನ್ನು ಕಂಡು ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
కీర్తనల గ్రంథము 73 : 4 (ERVTE)
ಅವರು ಆರೋಗ್ಯವಂತರಾಗಿದ್ದಾರೆ. ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.[* ಅವರು ಹೋರಾಡಬೇಕಿಲ್ಲ ಅಕ್ಷರಶಃ, “ಅವರ ಮರಣವು ನಿರ್ಬಾಧಕವಾಗಿದೆ.” ]
కీర్తనల గ్రంథము 73 : 5 (ERVTE)
ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ. ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
కీర్తనల గ్రంథము 73 : 6 (ERVTE)
ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ; ದ್ವೇಷವು ಅವರಿಗೆ ಉಡುಪಾಗಿದೆ.
కీర్తనల గ్రంథము 73 : 7 (ERVTE)
ಅವರ ಕಣ್ಣುಗಳು ಕೊಬ್ಬಿವೆ; ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
కీర్తనల గ్రంథము 73 : 8 (ERVTE)
ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು. ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
కీర్తనల గ్రంథము 73 : 9 (ERVTE)
ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ, ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
కీర్తనల గ్రంథము 73 : 10 (ERVTE)
ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು; ಅವರು ಹೇಳಿದಂತೆಯೇ ಮಾಡುವರು.
కీర్తనల గ్రంథము 73 : 11 (ERVTE)
“ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!” ಎಂದು ಆ ದುಷ್ಟರು ಹೇಳಿಕೊಳ್ಳುವರು.
కీర్తనల గ్రంథము 73 : 12 (ERVTE)
ಆ ಗರ್ವಿಷ್ಠರು ದುಷ್ಟರೇ ಸರಿ! ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
కీర్తనల గ్రంథము 73 : 13 (ERVTE)
ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ? ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
కీర్తనల గ్రంథము 73 : 14 (ERVTE)
ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ. ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.
కీర్తనల గ్రంథము 73 : 15 (ERVTE)
ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ. ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
కీర్తనల గ్రంథము 73 : 16 (ERVTE)
ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
కీర్తనల గ్రంథము 73 : 17 (ERVTE)
ಆದರೆ ನಿನ್ನ ಆಲಯಕ್ಕೆ ಹೋದಮೇಲೆ ನನಗೆ ಅರ್ಥವಾಯಿತು.
కీర్తనల గ్రంథము 73 : 18 (ERVTE)
ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ. ಅವರು ಸುಲಭವಾಗಿ ಬಿದ್ದು ನಾಶವಾಗುವರು.
కీర్తనల గ్రంథము 73 : 19 (ERVTE)
ಇದ್ದಕ್ಕಿದ್ದಂತೆ ಆಪತ್ತು ಬರುವುದು, ಆಗ ಆ ಗರ್ವಿಷ್ಠರು ನಾಶವಾಗುವರು. ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ; ಆಗ ಅವರು ಅಂತ್ಯಗೊಳ್ಳುವರು.
కీర్తనల గ్రంథము 73 : 20 (ERVTE)
ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು. ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ ನೀನು ಅವರನ್ನು ಮಾಯಗೊಳಿಸುವೆ.
కీర్తనల గ్రంథము 73 : 21 (ERVTE)
(21-22)ನಾನು ಬಹು ಮೂಢನಾಗಿದ್ದೆ. ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ. ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು! ನಾನು ಮೂಢ ಪಶುವಿನಂತೆ ವರ್ತಿಸಿದೆನು.
కీర్తనల గ్రంథము 73 : 22 (ERVTE)
కీర్తనల గ్రంథము 73 : 23 (ERVTE)
ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ. ನನ್ನ ಕೈಯನ್ನು ಹಿಡಿದುಕೊ.
కీర్తనల గ్రంథము 73 : 24 (ERVTE)
ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು. ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
కీర్తనల గ్రంథము 73 : 25 (ERVTE)
ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ? ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
కీర్తనల గ్రంథము 73 : 26 (ERVTE)
ನನ್ನ ಹೃದಯವೂ ದೇಹವೂ ನಾಶವಾಗುತ್ತವೆ; ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ ನನ್ನ ದೇವರೂ ಆಗಿರುವೆ.
కీర్తనల గ్రంథము 73 : 27 (ERVTE)
ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು. ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
కీర్తనల గ్రంథము 73 : 28 (ERVTE)
ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ. ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ. ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.
❮
❯