కీర్తనల గ్రంథము 82 : 1 (ERVTE)
*ಸ್ತುತಿಗೀತೆ. * *ರಚನೆಗಾರ: ಆಸಾಫ. *ದೇವಾದಿದೇವನು ತನ್ನ ಸಭೆಯಲ್ಲಿ[* ದೇವಾದಿದೇವನು ತನ್ನ ಸಭೆಯಲ್ಲಿ ಇಲ್ಲಿ ಇದರರ್ಥ, ಇಸ್ರೇಲ್ ನಾಯಕರುಗಳ ಸಭೆಯಲ್ಲಿ ಎಂದಿರಬಹುದು. ಅನೇಕಸಲ, ನಾಯಕರನ್ನು ಮತ್ತು ರಾಜರುಗಳನ್ನು ದೇವರುಗಳೆಂದು ಕರೆಯಲಾಗಿದೆ. ] ನಿಂತುಕೊಂಡು ದೇವರುಗಳಿಗೆ ನ್ಯಾಯತೀರ್ಪು ನೀಡುವನು.
కీర్తనల గ్రంథము 82 : 2 (ERVTE)
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ? ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”
కీర్తనల గ్రంథము 82 : 3 (ERVTE)
“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ. ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
కీర్తనల గ్రంథము 82 : 4 (ERVTE)
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ. ಅವರನ್ನು ದುಷ್ಟರಿಂದ ರಕ್ಷಿಸಿರಿ.
కీర్తనల గ్రంథము 82 : 5 (ERVTE)
“ಅವರಿಗೆ ಏನೂ ಗೊತ್ತಿಲ್ಲ. ಅವರಿಗೆ ಏನೂ ಅರ್ಥವಾಗುವುದಿಲ್ಲ! ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು. ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
కీర్తనల గ్రంథము 82 : 6 (ERVTE)
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ: “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
కీర్తనల గ్రంథము 82 : 7 (ERVTE)
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ. ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”
కీర్తనల గ్రంథము 82 : 8 (ERVTE)
ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು! ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!

1 2 3 4 5 6 7 8