కీర్తనల గ్రంథము 85 : 1 (ERVTE)
*ಸ್ತುತಿಗೀತೆ. ರಚನೆಗಾರರು: ಕೋರಹೀಯರು. *ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು. ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ. ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
కీర్తనల గ్రంథము 85 : 2 (ERVTE)
ನಿನ್ನ ಜನರ ದ್ರೋಹವನ್ನು ಕ್ಷಮಿಸು! ಅವರ ಪಾಪಗಳನ್ನು ಅಳಿಸಿಬಿಡು!
కీర్తనల గ్రంథము 85 : 3 (ERVTE)
ನಿನ್ನ ರೌದ್ರವನ್ನು ತೊರೆದುಬಿಡು. ಉಗ್ರ ಕೋಪದಿಂದಿರಬೇಡ.
కీర్తనల గ్రంథము 85 : 4 (ERVTE)
ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
కీర్తనల గ్రంథము 85 : 5 (ERVTE)
ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ? ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
కీర్తనల గ్రంథము 85 : 6 (ERVTE)
ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು! ನಿನ್ನ ಜನರನ್ನು ಸಂತೋಷಗೊಳಿಸು.
కీర్తనల గ్రంథము 85 : 7 (ERVTE)
ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು. ನಮ್ಮನ್ನು ರಕ್ಷಿಸು.
కీర్తనల గ్రంథము 85 : 8 (ERVTE)
ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು. ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು. ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
కీర్తనల గ్రంథము 85 : 9 (ERVTE)
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ. ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
కీర్తనల గ్రంథము 85 : 10 (ERVTE)
ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ. ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
కీర్తనల గ్రంథము 85 : 11 (ERVTE)
ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು. ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[* ನಿವಾಸಿ … ಒಳ್ಳೆಯವನಾಗಿರುವನು ಅಕ್ಷರಶಃ, “ನಿಷ್ಠತೆಯು ಭೂಮಿಯಿಂದ ಉದಯಿಸುವುದು ಮತ್ತು ಒಳ್ಳೆಯತನವು ಆಕಾಶದಿಂದ ಕೆಳಗೆ ದೃಷ್ಟಿಸುವುದು.” ]
కీర్తనల గ్రంథము 85 : 12 (ERVTE)
ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು. ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
కీర్తనల గ్రంథము 85 : 13 (ERVTE)
ನೀತಿಯು ಆತನ ಮುಂದೆ ಹೋಗುತ್ತಾ ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

1 2 3 4 5 6 7 8 9 10 11 12 13