పరమగీతము 2 : 1 (ERVTE)
ನಾನು ಶಾರೋನಿನಲ್ಲಿರುವ ಗುಲಾಬಿ; ತಗ್ಗುಗಳಲ್ಲಿರುವ ತಾವರೆ.
పరమగీతము 2 : 2 (ERVTE)
{#1ಪ್ರಿಯಕರ } ನನ್ನ ಪ್ರಿಯೆ, ಮುಳ್ಳುಗಳ ನಡುವೆ ಇರುವ ತಾವರೆ ಹೂವಿನಂತೆ ನೀನು ಯುವತಿಯರಲ್ಲೆಲ್ಲಾ ಶ್ರೇಷ್ಠಳು.
పరమగీతము 2 : 3 (ERVTE)
{#1ಪ್ರಿಯತಮೆ } ನನ್ನ ಪ್ರಿಯನೇ, ಕಾಡುಮರಗಳ ನಡುವೆ ಇರುವ ಒಂದು ಸೇಬಿನ ಮರದಂತೆ ನೀನು ಯುವಕರಲ್ಲೆಲ್ಲಾ ಶ್ರೇಷ್ಠನು. {#1ಪ್ರಿಯತಮೆ ಸ್ತ್ರೀಯರಿಗೆ } ನಾನು ಅವನ ನೆರಳಲ್ಲಿ ಕುಳಿತುಕೊಂಡು ಸಂತೋಷಿಸಿದೆ; ಅವನ ಫಲವು ನನ್ನ ನಾಲಿಗೆಗೆ ಸಿಹಿಯಾಗಿತ್ತು.
పరమగీతము 2 : 4 (ERVTE)
ನನ್ನ ಪ್ರಿಯಕರನು ನನ್ನನ್ನು ದ್ರಾಕ್ಷಾರಸದ ಮನೆಗೆ ಕರೆದುಕೊಂಡು ಬಂದನು; ನನ್ನ ಕುರಿತು ಆತನಿಗಿದ್ದ ಉದ್ದೇಶ ಪ್ರೀತಿಯೇ.
పరమగీతము 2 : 5 (ERVTE)
ದ್ರಾಕ್ಷಿಯಿಂದ ನನ್ನನ್ನು ಉಪಚರಿಸಿರಿ; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸಿರಿ; ನಾನು ಅನುರಾಗದಿಂದ ಅಸ್ವಸ್ಥಳಾಗಿರುವೆ.
పరమగీతము 2 : 6 (ERVTE)
ನನ್ನ ಪ್ರಿಯನ ಎಡಗೈ ತಲೆದಿಂಬಾಗಿ ಅವನ ಬಲಗೈ ನನ್ನನ್ನು ತಬ್ಬಿಕೊಳ್ಳುವುದು!
పరమగీతము 2 : 7 (ERVTE)
ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ ನನಗೆ ಪ್ರಮಾಣ ಮಾಡಿರಿ.
పరమగీతము 2 : 8 (ERVTE)
{#1ಪ್ರಿಯತಮೆ } ಅಗೋ, ನನ್ನ ಪ್ರಿಯನ ಸ್ವರ! ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
పరమగీతము 2 : 9 (ERVTE)
ನನ್ನ ಪ್ರಿಯನು ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇದ್ದಾನೆ. ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ; ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ; ಕಿಟಕಿಗಳಿಂದ ನೋಡುತ್ತಿದ್ದಾನೆ.
పరమగీతము 2 : 10 (ERVTE)
ನನ್ನ ಪ್ರಿಯನು ನನಗೆ ಹೀಗೆಂದನು: “ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು, ನಾವು ದೂರ ಹೋಗೋಣ!
పరమగీతము 2 : 11 (ERVTE)
ಇಗೋ, ಚಳಿಗಾಲ ಕಳೆಯಿತು; ಮಳೆಗಾಲ ಮುಗಿದುಹೋಯಿತು.
పరమగీతము 2 : 12 (ERVTE)
ಭೂಮಿಯ ಮೇಲೆ ಹೂವುಗಳು ಕಾಣುತ್ತವೆ; ಪಕ್ಷಿಗಳು ಹಾಡುವ ಸಮಯವು ಬಂದಿದೆ. ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
పరమగీతము 2 : 13 (ERVTE)
ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ; ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ. ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು, ನಾವು ದೂರ ಹೋಗೋಣ!”
పరమగీతము 2 : 14 (ERVTE)
{#1ಪ್ರಿಯಕರ } ಬಂಡೆಯ ಬಿರುಕುಗಳಲ್ಲಿಯೂ ಜರಿಯ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ, ನಿನ್ನ ರೂಪವನ್ನು ತೋರಿಸು; ನಿನ್ನ ಸ್ವರವನ್ನು ಕೇಳಿಸು. ನಿನ್ನ ಸ್ವರ ಎಷ್ಟೋ ಮಧುರ! ನಿನ್ನ ರೂಪ ಎಷ್ಟೋ ಅಂದ!
పరమగీతము 2 : 15 (ERVTE)
{#1ಪ್ರಿಯತಮೆ ಸ್ತ್ರೀಯರಿಗೆ } ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ ನರಿಮರಿಗಳನ್ನೂ ಹಿಡಿಯಿರಿ! ನಮ್ಮ ದ್ರಾಕ್ಷಿತೋಟಗಳು ಈಗ ಹೂಬಿಡುತ್ತಿವೆ.
పరమగీతము 2 : 16 (ERVTE)
ನನ್ನ ಪ್ರಿಯನು ನನ್ನವನೇ! ನಾನು ಅವನವಳೇ! ಹಗಲು ತನ್ನ ಕೊನೆ ಉಸಿರೆಳೆಯುವತನಕ, ನೆರಳು ಓಡಿಹೋಗುವ ತನಕ
పరమగీతము 2 : 17 (ERVTE)
ನನ್ನ ಪ್ರಿಯನು ನೆಲದಾವರೆಗಳ ಮಧ್ಯದಲ್ಲಿ ಮೇಯಿಸುವನು. ನನ್ನ ಪ್ರಿಯನೇ, ಹೊರಡು, ಬೆತೇರ್ ಬೆಟ್ಟಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು!
❮
❯
1
2
3
4
5
6
7
8
9
10
11
12
13
14
15
16
17