పరమగీతము 3 : 1 (ERVTE)
{#1ಪ್ರಿಯತಮೆ } ರಾತ್ರಿಯಲ್ಲಿಯೂ ನನ್ನ ಪ್ರಾಣಪ್ರಿಯನಿಗಾಗಿ ಹಾಸಿಗೆಯ ಮೇಲೆ ಹುಡುಕಿದೆನು. ಎಷ್ಟು ಹುಡುಕಿದರೂ ಅವನು ಸಿಕ್ಕಲಿಲ್ಲ.
పరమగీతము 3 : 2 (ERVTE)
ಈಗ ನಾನು ಎದ್ದು ನಗರದಲ್ಲೆಲ್ಲಾ ಸುತ್ತಾಡುವೆನು. ನನ್ನ ಪ್ರಿಯನಿಗಾಗಿ ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ಹುಡುಕುವೆನು. ನಾನು ಅವನಿಗಾಗಿ ಹುಡುಕಿದೆ, ಆದರೆ ಅವನು ಸಿಕ್ಕಲಿಲ್ಲ.
పరమగీతము 3 : 3 (ERVTE)
ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರನ್ನು ಕಂಡು, “ನನ್ನ ಪ್ರಿಯನನ್ನು ನೋಡಿದಿರಾ?” ಎಂದು ಕೇಳಿದೆನು.
పరమగీతము 3 : 4 (ERVTE)
ಅಲ್ಲಿಂದ ಸ್ವಲ್ಪದೂರ ಹೋದಾಗ, ನನ್ನ ಪ್ರಿಯನನ್ನು ಕಂಡು ಅಪ್ಪಿಕೊಂಡೆ. ನನ್ನ ತಾಯಿಯ ಮನೆಗೆ, ಅಂದರೆ ನನ್ನನ್ನು ಹೆತ್ತವಳ ಕೋಣೆಗೆ ಸೇರುವತನಕ ಅವನನ್ನು ಬಿಡದೆ ಹಿಡಿದುಕೊಂಡೇ ಹೋದೆನು.
పరమగీతము 3 : 5 (ERVTE)
{#1ಪ್ರಿಯತಮೆ ಸ್ತ್ರೀಯರಿಗೆ } ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ ನನಗೆ ಪ್ರಮಾಣಮಾಡಿರಿ.
పరమగీతము 3 : 6 (ERVTE)
{#1ಜೆರುಸಲೇಮಿನ ಸ್ತ್ರೀಯರ ಮಾತುಗಳು } [+ ಮಹಾ ಜನಸಮೂಹದೊಡನೆ] ಅಡವಿಯಿಂದ ಬರುತ್ತಿರುವ ಈ ಸ್ತ್ರೀ ಯಾರು? ಗೋಲರಸ, ಧೂಪ, ವರ್ತಕರ ಸಕಲ ಸುಗಂಧ ದ್ರವ್ಯಗಳನ್ನು ಸುಡುವಾಗ ಮೇಲೇರುವ ಹೊಗೆಯಂತೆ ಧೂಳು ಮೇಲೇರುತ್ತಿದೆ.
పరమగీతము 3 : 7 (ERVTE)
ನೋಡಿ, ಅದು ಸೊಲೋಮೋನನ ಪಲ್ಲಕ್ಕಿ. ಅದರ ಸುತ್ತಲೂ ಅರವತ್ತು ಮಂದಿ ಸೈನಿಕರಿದ್ದಾರೆ. ಅವರು ಇಸ್ರೇಲಿನ ಸೈನಿಕರು!
పరమగీతము 3 : 8 (ERVTE)
ಯುದ್ಧವೀರರಾದ ಅವರು ಕೈಯಲ್ಲಿ ಕತ್ತಿ ಹಿಡಿದಿದ್ದಾರೆ; ರಾತ್ರಿಯ ಅಪಾಯದ ನಿಮಿತ್ತ ಅವರು ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾರೆ.
పరమగీతము 3 : 9 (ERVTE)
ರಾಜನಾದ ಸೊಲೊಮೋನನು ತನಗೋಸ್ಕರ ಪಲ್ಲಕ್ಕಿಯನ್ನು ಲೆಬನೋನಿನ ದೇವದಾರು ಮರದಿಂದ ಮಾಡಿಸಿದ್ದಾನೆ.
పరమగీతము 3 : 10 (ERVTE)
ಅದರ ಕಂಬಗಳನ್ನು ಬೆಳ್ಳಿಯಿಂದಲೂ ಅದರ ಅಡ್ಡಕಂಬಗಳನ್ನು ಚಿನ್ನದಿಂದಲೂ ಮಾಡಲಾಗಿದೆ. ಅದರ ಆಸನವನ್ನು ನೇರಳೆ ಬಣ್ಣದ ಬಟ್ಟೆಯಿಂದ ಹೊದಿಸಲಾಗಿದೆ. ಆ ಬಟ್ಟೆಯನ್ನು ಜೆರುಸಲೇಮಿನ ಸ್ತ್ರೀಯರು ಕಸೂತಿ ಕೆಲಸದಿಂದ ಅಲಂಕರಿಸಿದ್ದಾರೆ.
పరమగీతము 3 : 11 (ERVTE)
ಚೀಯೋನಿನ ಸ್ತ್ರೀಯರೇ, ಹೊರಗೆ ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ. ಅವನ ಮದುವೆಯ ದಿನದಲ್ಲಿ ಹೃದಯವು ಹರ್ಷಗೊಂಡಿದ್ದಾಗ ಅವನ ತಾಯಿ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.

1 2 3 4 5 6 7 8 9 10 11