పరమగీతము 6 : 1 (ERVTE)
{#1ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ } ನಿನ್ನ ಪ್ರಿಯನು ಎಲ್ಲಿಗೆ ಹೋದನು? ನೀನು ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿ. ನಿನ್ನ ಪ್ರಿಯನು ಯಾವ ಕಡೆಗೆ ಹೋದನು? ನೀನು ಹೇಳಿದರೆ, ನಾವು ನಿನಗೋಸ್ಕರ ಅವನನ್ನು ಹುಡುಕುವೆವು.
పరమగీతము 6 : 2 (ERVTE)
{#1ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ } ನನ್ನ ಪ್ರಿಯನು ತನ್ನ ತೋಟದಲ್ಲಿರುವ ಸುಗಂಧಸಸ್ಯಗಳ ದಿಬ್ಬಗಳಿಗೆ ಹೋಗಿದ್ದಾನೆ; ತೋಟಗಳಲ್ಲಿ ಮಂದೆಯನ್ನು ಮೇಯಿಸುವುದಕ್ಕೂ ನೆಲದಾವರೆಗಳನ್ನು ಕೊಯ್ಯುವುದಕ್ಕೂ ಹೋಗಿದ್ದಾನೆ.
పరమగీతము 6 : 3 (ERVTE)
ನನ್ನ ಪ್ರಿಯನು ನನ್ನವನೇ; ನಾನು ಅವನವಳೇ. ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.
పరమగీతము 6 : 4 (ERVTE)
{#1ಪ್ರಿಯಕರನು ಪ್ರಿಯತಮೆಗೆ } ನನ್ನ ಪ್ರಿಯಳೇ, ನೀನು ತಿರ್ಚ ಪಟ್ಟಣದಂತೆ ಸುಂದರಿ. ನೀನು ಜೆರುಸಲೇಮಿನಂತೆ ರೂಪವತಿ; ಜಯಧ್ವಜವೆತ್ತಿರುವ ಸೈನ್ಯದಂತೆ ಪ್ರಭಾವವುಳ್ಳವಳು.
పరమగీతము 6 : 5 (ERVTE)
ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು; ಅವು ನನ್ನನ್ನು ಉದ್ರೇಕಗೊಳಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
పరమగీతము 6 : 6 (ERVTE)
ನಿನ್ನ ಹಲ್ಲುಗಳು ಉಣ್ಣೆ ಕತ್ತಿರಿಸಿದ ನಂತರ ಸ್ನಾನ ಮಾಡಿಕೊಂಡು ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ.
పరమగీతము 6 : 7 (ERVTE)
ಮುಸುಕಿನೊಳಗಿರುವ ನಿನ್ನ ಕೆನ್ನೆಗಳು ದಾಳಿಂಬೆ ಹಣ್ಣಿನ ಎರಡು ಹೋಳುಗಳಂತಿವೆ.
పరమగీతము 6 : 8 (ERVTE)
ಅರವತ್ತು ಮಂದಿ ರಾಣಿಯರೂ ಎಂಭತ್ತು ಮಂದಿ ಉಪಪತ್ನಿಯರೂ ಲೆಕ್ಕವಿಲ್ಲದಷ್ಟು ಯುವತಿಯರೂ ನನಗಿದ್ದಾರೆ.
పరమగీతము 6 : 9 (ERVTE)
ಆದರೆ ನನ್ನ ಪಾರಿವಾಳವೂ ನಿರ್ಮಲೆಯೂ ಒಬ್ಬಳೇ ಒಬ್ಬಳು. ಆಕೆಯು ತನ್ನ ತಾಯಿಗೆ ಅಚ್ಚುಮೆಚ್ಚಿನವಳು. ಯುವತಿಯರು ಆಕೆಯನ್ನು ಕಂಡು ಹೊಗಳುವರು. ಹೌದು, ರಾಣಿಯರೂ ಉಪಪತ್ನಿಯರೂ ಆಕೆಯನ್ನು ಹೊಗಳುವರು.
పరమగీతము 6 : 10 (ERVTE)
{#1ಪ್ರಿಯತಮೆಗೆ ಸ್ತ್ರೀಯರ ಪ್ರಶಂಸೆ } ಸೂರ್ಯೋದಯದಂತೆ ಪ್ರಕಾಶಿಸುತ್ತಿರುವ ಈ ಯುವತಿ ಯಾರು? ಚಂದ್ರನಂತೆ ಸೌಮ್ಯಳೂ ಸೂರ್ಯನಂತೆ ಶುಭ್ರಳೂ ಜಯಧ್ವಜವೆತ್ತಿರುವ ಸೈನ್ಯದಂತೆ ಪ್ರಭಾವವುಳ್ಳವಳೂ ಆಗಿರುವ ಇವಳಾರು?
పరమగీతము 6 : 11 (ERVTE)
{#1ಪ್ರಿಯಕರನು ಪ್ರಿಯತಮೆಗೆ } ಕಣಿವೆಯ ಸಸ್ಯಗಳು ಹಣ್ಣುಬಿಟ್ಟಿವೆಯೋ ದ್ರಾಕ್ಷಿಬಳ್ಳಿಗಳು ಚಿಗುರಿದೆಯೋ ದಾಳಿಂಬರಗಳು ಹೂ ಬಿಟ್ಟಿವೆಯೋ ಎಂದು ನೋಡಲು ಬಾದಾಮಿ ಮರಗಳ ತೋಟಕ್ಕೆ ಹೋದೆನು.
పరమగీతము 6 : 12 (ERVTE)
ನಾನು ಅದನ್ನು ಗ್ರಹಿಸಿಕೊಳ್ಳುವುದಕ್ಕಿಂತ ಮೊದಲೇ, ನನ್ನ ಮನಸ್ಸು ದೇಶದ ಪ್ರಧಾನರ ರಥಗಳ ನಡುವೆ ನನ್ನನ್ನು ಕುಳ್ಳರಿಸಿತು.
పరమగీతము 6 : 13 (ERVTE)
{#1ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ } ಶೂಲಾಮಿತಳೇ, ಹಿಂತಿರುಗಿ ಬಾ, ಹಿಂತಿರುಗಿ ಬಾ! ಹಿಂತಿರುಗಿ ಬಾ, ಹಿಂತಿರುಗಿ ಬಾ, ನಾವು ನಿನ್ನನ್ನು ನೋಡಬೇಕು! ಮಹನಯಿಮ್ ನೃತ್ಯವನ್ನು[* ಮಹನಯಿಮ್ ನೃತ್ಯ ಅಥವಾ “ಜಯದ ನೃತ್ಯ.” ] ನೋಡುವಂತೆ ಶೂಲಾಮಿತಳನ್ನೇಕೆ ನೀವು ದೃಷ್ಟಿಸಿ ನೋಡುತ್ತಿರುವಿರಿ?

1 2 3 4 5 6 7 8 9 10 11 12 13