పరమగీతము 7 : 1 (ERVTE)
{#1ಪ್ರಿಯಕರನ ಪ್ರಶಂಸೆ } ರಾಜಕುಮಾರಿಯೇ, ಪಾದರಕ್ಷೆಗಳಲ್ಲಿರುವ ನಿನ್ನ ಪಾದಗಳು ಎಷ್ಟೋ ಸುಂದರವಾಗಿವೆ. ನಿನ್ನ ದುಂಡಾದ ತೊಡೆಗಳು ಶಿಲ್ಪಿಯು ಮಾಡಿದ ಆಭರಣಗಳಂತಿವೆ.
పరమగీతము 7 : 2 (ERVTE)
ನಿನ್ನ ಹೊಕ್ಕಳು ದ್ರಾಕ್ಷಾರಸದಿಂದ ತುಂಬಿರುವ ಗುಂಡು ಬಟ್ಟಲಿನಂತಿದೆ.[* ಬಟ್ಟಲು ಅಥವಾ “ಕೆತ್ತಿದ ಪಾತ್ರೆ” ಉಳಿಯಿಂದ ಕೆತ್ತಿ ಮಾಡಿದ ಪಾತ್ರೆ. ದ್ರಾಕ್ಷಾರಸವನ್ನು ಇದರಲ್ಲಿ ಮಿಶ್ರಣ ಮಾಡಿದ ನಂತರ ಬಟ್ಟಲುಗಳಿಗೆ ಹಾಕುತ್ತಿದ್ದರು. ಚಂದ್ರಬಿಂಬದಂತೆ ಪಾತ್ರೆ ಅಥವಾ “ಅರ್ಧ ಚಂದ್ರಾಕಾರದ ಪಾತ್ರೆ” ಎಂಬರ್ಥವನ್ನೂ ಇದು ಕೊಡಬಲ್ಲದು. ] ನಿನ್ನ ಉದರವು ನೆಲದಾವರೆಗಳಿಂದ ಅಲಂಕರಿಸಲ್ಪಟ್ಟಿರುವ ಗೋಧಿಯ ರಾಶಿಯಂತಿದೆ.
పరమగీతము 7 : 3 (ERVTE)
ನಿನ್ನ ಸ್ತನಗಳು ಪ್ರಾಯದ ಸಾರಂಗದ ಎರಡು ಅವಳಿ ಮರಿಗಳಂತಿವೆ.
పరమగీతము 7 : 4 (ERVTE)
ನಿನ್ನ ಕೊರಳು ದಂತಗೋಪುರದಂತಿದೆ. ನಿನ್ನ ಕಣ್ಣುಗಳು ಬತ್‌ರಬ್ಬೀಮ್‌ನ ಬಾಗಿಲ ಬಳಿಯಲ್ಲಿರುವ ಹೆಷ್ಬೋನಿನ ಸರೋವರಗಳಂತಿವೆ. ನಿನ್ನ ಮೂಗು ದಮಸ್ಕದ ಕಡೆಗಿರುವ ಲೆಬನೋನಿನ ಗೋಪುರದಂತಿದೆ.
పరమగీతము 7 : 5 (ERVTE)
ನಿನ್ನ ತಲೆಯು ಕರ್ಮೆಲ್ ಬೆಟ್ಟದಂತಿದೆ. ನಿನ್ನ ತಲೆಕೂದಲು ರೇಷ್ಮೆಯಂತಿದೆ. ನಿನ್ನ ಉದ್ದವಾದ, ಸುಂದರವಾದ ಕೂದಲು ರಾಜನನ್ನು ಸಹ ಆಕರ್ಷಿಸುತ್ತದೆ!
పరమగీతము 7 : 6 (ERVTE)
ಪ್ರಿಯಳೇ, ನೀನೆಷ್ಟೋ ಸೌಂದರ್ಯವತಿ. ನಿನ್ನ ರೂಪ ಮನೋಹರ; ನಿನ್ನ ಪ್ರೇಮವು ಆನಂದ ಪೂರ್ಣವಾಗಿದೆ.
పరమగీతము 7 : 7 (ERVTE)
ನೀನು ಖರ್ಜೂರದ ಮರದಂತೆ ಎತ್ತರವಾಗಿರುವೆ. ನಿನ್ನ ಸ್ತನಗಳು ಖರ್ಜೂರ ಮರದ ಹಣ್ಣಿನ ಗೊಂಚಲುಗಳಂತಿವೆ.
పరమగీతము 7 : 8 (ERVTE)
ನಾನು ಖರ್ಜೂರದ ಮರವನ್ನು ಹತ್ತುವೆನು. ನಾನು ಅದರ ಕೊಂಬೆಗಳನ್ನು ಹಿಡಿದುಕೊಳ್ಳುವೆನು. ನಿನ್ನ ಸ್ತನಗಳು ದ್ರಾಕ್ಷಿಯ ಗೊಂಚಲುಗಳಂತಿರಲಿ. ನಿನ್ನ ಉಸಿರಿನ ವಾಸನೆಯು ಸೇಬು ಹಣ್ಣುಗಳಂತಿರಲಿ.
పరమగీతము 7 : 9 (ERVTE)
ನಿನ್ನ ಬಾಯಿ ಉತ್ತಮವಾದ ದ್ರಾಕ್ಷಾರಸದಂತಿರಲಿ. ನನ್ನ ಪ್ರಿಯೆಗಾಗಿ ಈ ದ್ರಾಕ್ಷಾರಸವು ಮೆಲ್ಲನೆ ಇಳಿದುಹೋಗುವುದು. ನಿದ್ರಿಸುವವರ ತುಟಿಗಳಲ್ಲಿ ಅದು ಸರಾಗವಾಗಿ ಹರಿದುಹೋಗುವುದು.
పరమగీతము 7 : 10 (ERVTE)
{#1ಪ್ರಿಯತಮೆ ಪ್ರಿಯಕರನಿಗೆ } ನಾನು ನನ್ನ ಪ್ರಿಯನವಳೇ. ಅವನಿಗೆ ನನ್ನ ಮೇಲೇ ಆಸೆ.
పరమగీతము 7 : 11 (ERVTE)
ನನ್ನ ಪ್ರಿಯನೇ, ಬಾ! ನಾವು ತೋಟಕ್ಕೆ ಹೋಗೋಣ, ನಾವು ಹಳ್ಳಿಗಳಲ್ಲಿ ಇರೋಣ.
పరమగీతము 7 : 12 (ERVTE)
ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ. ದ್ರಾಕ್ಷೆಯು ಚಿಗುರಿದೆಯೋ ಅದರ ಹೂವು ಅರಳಿದೆಯೋ ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ. ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.
పరమగీతము 7 : 13 (ERVTE)
ಕಾಮಜನಕ ಸಸಿಗಳು ಸುವಾಸನೆ ಬೀರುತ್ತವೆ. ನನ್ನ ಪ್ರಿಯನೇ, ನಾನು ನಿನಗೋಸ್ಕರ ಉಳಿಸಿದ ರುಚಿಕರವಾದ ಬಗೆಬಗೆಯ ಹೊಸ ಮತ್ತು ಹಳೆ ಹಣ್ಣುಗಳು ನಮ್ಮ ಬಾಗಿಲ ಬಳಿಯಲ್ಲಿವೆ.
❮
❯
1
2
3
4
5
6
7
8
9
10
11
12
13