పరమగీతము 8 : 1 (ERVTE)
ನೀನು ನನ್ನ ಅಣ್ಣನ ಹಾಗಿದ್ದರೆ, ತಾಯಿ ಹಾಲನ್ನು ಕುಡಿಯುವ ಮಗುವಿನಂತೆ ಇದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ನಾನು ನಿನ್ನನ್ನು ಹೊರಗೆ ಕಂಡು ನಿನಗೆ ಮುದ್ದಿಡುತ್ತಿದ್ದೆನು; ಆಗ ಯಾರೂ ನನ್ನ ಮೇಲೆ ದೋಷಾರೋಪಣೆ ಮಾಡುತ್ತಿರಲಿಲ್ಲ!
పరమగీతము 8 : 2 (ERVTE)
ನಾನು ನಿನ್ನನ್ನು ನಡೆಸಿಕೊಂಡು ನನ್ನ ತಾಯಿಯು ನನಗೆ ಉಪದೇಶಿಸಿದ ಕೋಣೆಗೆ ಬರುತ್ತಿದ್ದೆನು. ನಾನು ನಿನಗೆ ಸಾಂಬಾರ ಪದಾರ್ಥಗಳನ್ನು ಸೇರಿಸಿದ ದ್ರಾಕ್ಷಾರಸವನ್ನು, ದಾಳಿಂಬೆ ಹಣ್ಣಿನ ರಸವನ್ನು ಕುಡಿಯಲು ಕೊಡುತ್ತಿದ್ದೆನು.
పరమగీతము 8 : 3 (ERVTE)
{#1ಪ್ರಿಯತಮೆ ಸ್ತ್ರೀಯರಿಗೆ } ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳುತ್ತಿತ್ತು.
పరమగీతము 8 : 4 (ERVTE)
ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸುವುದಿಲ್ಲವೆಂದು ನನಗೆ ಪ್ರಮಾಣ ಮಾಡಿರಿ.
పరమగీతము 8 : 5 (ERVTE)
{#1ಜೆರುಸಲೇಮಿನ ಸ್ತ್ರೀಯರು } ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುತ್ತಿರುವ ಈ ಯುವತಿ ಯಾರು? {#1ಪ್ರಿಯತಮೆ ಪ್ರಿಯಕರನಿಗೆ } ನಾನು ನಿನ್ನನ್ನು ಸೇಬಿನ ಮರದ ಕೆಳಗೆ ಎಬ್ಬಿಸಿದೆನು. ನಿನ್ನ ತಾಯಿಯು ನಿನ್ನನ್ನು ಗರ್ಭಧರಿಸಿದ್ದು ಅಲ್ಲಿಯೇ. ನೀನು ಹುಟ್ಟಿದ್ದೂ ಅಲ್ಲಿಯೇ.
పరమగీతము 8 : 6 (ERVTE)
ನನ್ನನ್ನು ನಿನ್ನ ಹೃದಯದ ಮೇಲೆ ಮುದ್ರೆಯನ್ನಾಗಿಯೂ, ನಿನ್ನ ಬೆರಳಿನಲ್ಲಿರುವ ಮುದ್ರೆಯೊತ್ತಿದ ಉಂಗುರದಂತೆಯೂ ಇಟ್ಟುಕೋ. ಪ್ರೀತಿಯು ಮರಣದಷ್ಟೇ ಬಲಿಷ್ಠ; ಕಾಮೋದ್ರೇಕವು ಸಮಾಧಿಯಷ್ಟೇ ಬಲಿಷ್ಠ. ಅದರ ಜ್ವಾಲೆಗಳು ಧಗಧಗಿಸುವ ಬೆಂಕಿ. ಅದು ಅತಿ ತೀಕ್ಷ್ಣವಾದ ಅಗ್ನಿಯೇ.
పరమగీతము 8 : 7 (ERVTE)
ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು; ನದಿಗಳು ಪ್ರೀತಿಯನ್ನು ಮುಳುಗಿಸಲಾರವು. ಒಬ್ಬನು ಪ್ರೀತಿಗೋಸ್ಕರ ತನ್ನ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟರೆ ಅವನು ಕೇವಲ ತಿರಸ್ಕಾರಕ್ಕೆ ಗುರಿಯಾಗುವನು.
పరమగీతము 8 : 8 (ERVTE)
{#1ಪ್ರಿಯತಮೆಯ ಸಹೋದರರು } ನಮಗೆ ಚಿಕ್ಕ ತಂಗಿಯಿದ್ದಾಳೆ, ಆಕೆಯ ಸ್ತನಗಳು ಇನ್ನೂ ಬೆಳೆದಿಲ್ಲ. ಆಕೆಯ ನಿಶ್ಚಿತಾರ್ಥ ದಿನದಲ್ಲಿ ನಮ್ಮ ತಂಗಿಗೋಸ್ಕರ ನಾವೇನು ಮಾಡಬೇಕು?
పరమగీతము 8 : 9 (ERVTE)
ಆಕೆ ಕೋಟೆಯಾಗಿದ್ದರೆ ಅದರ ಮೇಲೆ ಬೆಳ್ಳಿಯ ಗೋಪುರಗಳನ್ನು ಕಟ್ಟುತ್ತಿದ್ದೆವು. ಆಕೆ ಬಾಗಿಲಾಗಿದ್ದರೆ, ಶ್ರೇಷ್ಠವಾದ ದೇವದಾರು ಮರದ ಹಲಗೆಗಳಿಂದ ಅದನ್ನು ಹೊದಿಸುತ್ತಿದ್ದೆವು.
పరమగీతము 8 : 10 (ERVTE)
{#1ಪ್ರಿಯತಮೆಯು ಸಹೋದರರಿಗೆ ಕೊಡುವ ಉತ್ತರ } ನಾನು ಕೋಟೆ; ನನ್ನ ಸ್ತನಗಳೇ ಅದರ ಗೋಪುರಗಳು. ಹೀಗೆ ಸೊಲೊಮೋನನು ನನ್ನಲ್ಲಿ ತೃಪ್ತನಾದನು.
పరమగీతము 8 : 11 (ERVTE)
{#1ಪ್ರಿಯಕರ } ಸೊಲೊಮೋನನಿಗೆ ಬಾಲ್ಹಾಮೋನಿನಲ್ಲಿ ದ್ರಾಕ್ಷಿತೋಟವಿತ್ತು. ಅವನು ಅದನ್ನು ರೈತರಿಗೆ ಒಪ್ಪಿಸಿದನು. ಪ್ರತಿಯೊಬ್ಬನು ಹಣ್ಣಿಗಾಗಿ ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಡಬೇಕಿತ್ತು.
పరమగీతము 8 : 12 (ERVTE)
ಆದರೆ ನನ್ನ ಸ್ವಂತ ದ್ರಾಕ್ಷಿತೋಟವು ನನ್ನೆದುರಿನಲ್ಲಿದೆ. ಸೊಲೊಮೋನನೇ, ಆ ಸಾವಿರ ಬೆಳ್ಳಿನಾಣ್ಯಗಳು ನಿನಗಿರಲಿ. ತೋಟವನ್ನು ನೋಡಿಕೊಳ್ಳುವವರಿಗೆ ಇನ್ನೂರು ಬೆಳ್ಳಿನಾಣ್ಯಗಳಿರಲಿ.
పరమగీతము 8 : 13 (ERVTE)
{#1ಪ್ರಿಯಕರ ಪ್ರಿಯತಮೆಗೆ } ಉದ್ಯಾನವನಗಳಲ್ಲಿ ವಾಸಿಸುವವಳೇ, ಗೆಳೆಯರು ನಿನ್ನ ಸ್ವರ ಕೇಳಬೇಕೆಂದಿದ್ದಾರೆ, ನನಗೂ ಸಹ ಕೇಳಿಸಲಿ.
పరమగీతము 8 : 14 (ERVTE)
{#1ಪ್ರಿಯತಮೆ ಪ್ರಿಯಕರನಿಗೆ } ನನ್ನ ಪ್ರಿಯನೇ, ತ್ವರೆಪಡು. ಸುಗಂಧಸಸ್ಯ ಪರ್ವತಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು.
❮
❯
1
2
3
4
5
6
7
8
9
10
11
12
13
14