జెకర్యా 9 : 1 (ERVTE)
{#1ಇತರ ಜನಾಂಗಗಳ ಮೇಲೆ ನ್ಯಾಯತೀರ್ಪು } ಯೆಹೋವನಿಂದ ಬಂದ ಸಂದೇಶ: ಹದ್ರಾಕ್ ದೇಶದ ಮತ್ತು ಅದರ ರಾಜಧಾನಿಯಾದ ದಮಸ್ಕ ನಗರದ ವಿರುದ್ಧವಾಗಿ ಯೆಹೋವನ ಸಂದೇಶ: “ಇಸ್ರೇಲ್ ಕುಲದವರು ಮಾತ್ರವೇ ದೇವರನ್ನು ತಿಳಿದವರಲ್ಲ. ಪ್ರತಿಯೊಬ್ಬರೂ ಸಹಾಯಕ್ಕಾಗಿ ಆತನಿಗೆ ಮೊರೆಯಿಡುವರು.
జెకర్యా 9 : 2 (ERVTE)
ಈ ಸಂದೇಶವು ಹಮಾತನಿಗೆ ವಿರುದ್ಧವಾದದ್ದು. ಅವನ ಮೊರೆಯು ಹದ್ರಾಕ್ ದೇಶಕ್ಕೆ ತಾಗಿ ಇದೆ. ಈ ಸಂದೇಶವು ತೂರ್ ಚೀದೋನಿನ ಜನರ ವಿರುದ್ಧವಾಗಿಯೂ ಇದೆ. ಆ ಜನರು ಜ್ಞಾನಿಗಳೂ ಕುಶಲಕರ್ಮಿಗಳೂ ಆಗಿರಬಹುದು.
జెకర్యా 9 : 3 (ERVTE)
ತೂರ್ ಒಂದು ಕೋಟೆಯಂತೆ ಕಟ್ಟಲ್ಪಟ್ಟಿದೆ. ಅಲ್ಲಿರುವ ಜನರು ಬೆಳ್ಳಿಯನ್ನು ದೂಳಿನಂತೆ ಸಂಗ್ರಹಿಸಿರುತ್ತಾರೆ. ಬಂಗಾರವಂತೂ ಮಣ್ಣಿನ ತರಹ ಸಾಮಾನ್ಯವಾಗಿರುತ್ತದೆ.
జెకర్యా 9 : 4 (ERVTE)
ಆದರೆ ನಮ್ಮ ಒಡೆಯನಾದ ಯೆಹೋವನು ಅದೆಲ್ಲವನ್ನು ತೆಗೆದುಕೊಳ್ಳುವನು. ಆಕೆಯ ನೌಕಾಬಲವನ್ನು ಮುರಿದುಬಿಡುವನು. ಮತ್ತು ಆ ನಗರವು ಬೆಂಕಿಯಿಂದ ನಾಶವಾಗುವದು.
జెకర్యా 9 : 5 (ERVTE)
“ಅಷ್ಕೆಲೋನಿನ ಜನರು ಇದನ್ನು ನೋಡಿ ಭಯಗ್ರಸ್ತರಾಗುವರು. ಗಾಜದ ಜನರು ಭಯದಿಂದ ನಡುಗುವರು. ಮತ್ತು ಎಕ್ರೋನಿನ ಜನರು ಇದನ್ನೆಲ್ಲಾ ನೋಡಿ ನಿರೀಕ್ಷೆ ಇಲ್ಲದವರಾಗಿರುವರು. ಗಾಜದಲ್ಲಿ ಯಾವ ಅರಸನೂ ಉಳಿಯನು. ಅಷ್ಕೆಲೋನಿನಲ್ಲಿ ಯಾರೂ ವಾಸಿಸರು.
జెకర్యా 9 : 6 (ERVTE)
ಅಷ್ಡೋದಿನ ಜನರಿಗೆ ತಮ್ಮ ತಂದೆ ಯಾರು ಎಂದು ತಿಳಿಯರು. ನಾನು ಅಹಂಕಾರದ ಪಿಲಿಷ್ಟಿಯ ಜನರನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
జెకర్యా 9 : 7 (ERVTE)
ಅವರು ನಿಷಿದ್ಧ ಆಹಾರಪದಾರ್ಥವನ್ನಾಗಲಿ ರಕ್ತದಿಂದಿರುವ ಮಾಂಸವನ್ನಾಗಲಿ ಇನ್ನು ಮುಂದೆ ತಿನ್ನುವದಿಲ್ಲ. ಪಿಲಿಷ್ಟಿಯರಲ್ಲಿ ಯಾರಾದರೂ ಉಳಿದರೆ ಅವರು ನನ್ನ ಜನರೊಂದಿಗೆ ಒಂದಾಗುವರು. ಎಕ್ರೋನಿನ ಯೆಬೂಸಿಯರಂತೆ ಅವರು ಯೆಹೊದದ ಇನ್ನೊಂದು ಸಂತತಿಯವರಾಗುವರು. ನಾನು ನನ್ನ ದೇಶವನ್ನು ಸಂರಕ್ಷಿಸುವೆನು.
జెకర్యా 9 : 8 (ERVTE)
ಶತ್ರುಸೈನ್ಯವು ಅದರೊಳಗಿಂದ ದಾಟಿಹೋಗಲು ನಾನು ಬಿಡೆನು. ಇನ್ನು ಮುಂದೆ ನನ್ನ ಜನರಿಗೆ ಅವರು ಹಾನಿಮಾಡದಂತೆ ಮಾಡುವೆನು. ಕಳೆದುಹೋದ ಸಮಯಗಳಲ್ಲಿ ಅವರೆಷ್ಟು ಸಂಕಟ ಅನುಭವಿಸಿದರೆಂದು ನನ್ನ ಸ್ವಂತ ಕಣ್ಣುಗಳಿಂದ ನೋಡಿರುತ್ತೇನೆ.”
జెకర్యా 9 : 9 (ERVTE)
{#1ಭವಿಷ್ಯತ್ತಿನ ಅರಸನು } ಚೀಯೋನ್ ನಗರಿಯೇ, ಹರ್ಷಿಸು! ಜೆರುಸಲೇಮ್ ಜನರೇ, ಸಂತೋಷದಿಂದ ಆರ್ಭಟಿಸಿರಿ. ನಿಮ್ಮ ಅರಸನು ನಿಮ್ಮ ಬಳಿಗೆ ಬರುತ್ತಿದ್ದಾನೆ! ಆತನು ವಿಜಯಶಾಲಿಯಾದ ನೀತಿವಂತನಾಗಿದ್ದಾನೆ. ಆದರೆ ದೀನನಂತೆ ಕತ್ತೆಯ ಮೇಲೆ, ಹೌದು, ಕತ್ತೆಯ ಮರಿಯ ಮೇಲೆ ಸವಾರಿ ಮಾಡಿಕೊಂಡು ಬರುವನು.
జెకర్యా 9 : 10 (ERVTE)
ಅರಸನು ಹೀಗೆನ್ನುತ್ತಾನೆ: “ಎಫ್ರಾಯೀಮಿನಲ್ಲಿ ರಥಗಳನ್ನೂ ಜೆರುಸಲೇಮಿನಲ್ಲಿ ಅಶ್ವಾರೂಢರಾದ ಸೈನಿಕರನ್ನೂ ನಾಶಮಾಡಿದೆನು; ಯುದ್ಧದ ಬಿಲ್ಲುಗಳನ್ನು ತುಂಡು ಮಾಡಿದೆನು.” ಆ ಅರಸನು ಸಮಾಧಾನದ ವರ್ತಮಾನವನ್ನು ರಾಜ್ಯಗಳಿಗೆ ತರುವನು. ಸಮುದ್ರದಿಂದ ಸಮುದ್ರದ ತನಕ ಯುಫ್ರೇಟೀಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೆ ಆತನು ರಾಜ್ಯವನ್ನಾಳುವನು.
జెకర్యా 9 : 11 (ERVTE)
{#1ಯೆಹೋವನು ತನ್ನ ಜನರನ್ನು ಕಾಪಾಡುವನು } ಜೆರುಸಲೇಮೇ, ನಾವು ನಿನ್ನ ಒಡಂಬಡಿಕೆಗೆ ಮುದ್ರೆ ಹಾಕಲು ರಕ್ತವನ್ನು ಉಪಯೋಗಿಸಿದೆವು. ಆದ್ದರಿಂದ ನೆಲದ ಹೊಂಡದೊಳಗಿಂದ ಜನರನ್ನು ಬಿಡುಗಡೆ ಮಾಡಿದ್ದೇನೆ.
జెకర్యా 9 : 12 (ERVTE)
ಸೆರೆಹಿಡಿಯಲ್ಪಟ್ಟವರೇ, ಮನೆಗೆ ಹೋಗಿ. ಈಗ ನಿಮಗೊಂದು ನಿರೀಕ್ಷೆಯಿದೆ. ನಾನು ನಿಮಗೆ ಖಂಡಿತವಾಗಿ ಹೇಳುವುದೇನೆಂದರೆ, ನಾನು ತಿರುಗಿ ಬರುತ್ತೇನೆ.
జెకర్యా 9 : 13 (ERVTE)
ಯೆಹೂದನೇ, ನಾನು ನಿನ್ನನ್ನು ಬಿಲ್ಲಿನಂತೆ ಉಪಯೋಗಿಸುವೆನು. ಎಫ್ರಾಯೀಮನೇ, ನಾನು ನಿನ್ನನ್ನು ಬಾಣದಂತೆ ಉಪಯೋಗಿಸುವೆನು. ಇಸ್ರೇಲೇ, ಗ್ರೀಸಿನ ಜನರೊಂದಿಗೆ ಯುದ್ಧಮಾಡಲು ನಾನು ನಿನ್ನನ್ನು ಖಡ್ಗದಂತೆ ಉಪಯೋಗಿಸುವೆನು.
జెకర్యా 9 : 14 (ERVTE)
ಯೆಹೋವನು ಅವರಿಗೆ ಕಾಣಿಸಿಕೊಂಡು ತನ್ನ ಬಾಣವನ್ನು ಮಿಂಚಿನ ವೇಗದಲ್ಲಿ ಹಾರಿಸುವನು. ನನ್ನ ಒಡೆಯನಾದ ಯೆಹೋವನು ತುತ್ತೂರಿ ಊದಿದಾಗ ಮರುಭೂಮಿಯ ಬಿರುಗಾಳಿಯಂತೆ ಸೈನ್ಯವು ಮುಂದಕ್ಕೆ ನುಗ್ಗುವುದು.
జెకర్యా 9 : 15 (ERVTE)
ಸರ್ವಶಕ್ತನಾದ ದೇವರು ಅವರನ್ನು ಕಾಪಾಡುವನು. ಸೈನಿಕರು ಶತ್ರುವನ್ನು ಜಯಿಸಲು ಕವಣೆ ಮತ್ತು ಕಲ್ಲುಗಳನ್ನು ಉಪಯೋಗಿಸುವರು. ಶತ್ರುಗಳ ರಕ್ತವನ್ನು ಚೆಲ್ಲುವರು. ಅದು ದ್ರಾಕ್ಷಾರಸದಂತೆ ಹರಿಯುವದು. ಅದು ಯಜ್ಞವೇದಿಕೆಯ ಮೂಲೆಗಳಲ್ಲಿ ರಕ್ತವನ್ನು ಹೊಯಿದಂತೆ ಕಾಣುವುದು.
జెకర్యా 9 : 16 (ERVTE)
ಆ ಸಮಯಗಳಲ್ಲಿ ದೇವರಾದ ಯೆಹೋವನು, ಕುರುಬನು ತನ್ನ ಕುರಿಗಳನ್ನು ಸಂರಕ್ಷಿಸುವ ರೀತಿಯಲ್ಲಿ ತನ್ನ ಜನರನ್ನು ರಕ್ಷಿಸುವನು. ಅವರು ಆತನಿಗೆ ಅಮೂಲ್ಯರಾಗಿರುವರು. ಆತನ ಕೈಯಲ್ಲಿ ಹೊಳೆಯುವ ಆಭರಣದಂತಿರುವರು.
జెకర్యా 9 : 17 (ERVTE)
ಆಗ ಪ್ರತಿಯೊಂದು ಸುಂದರವೂ ರಮಣೀಯವೂ ಆಗಿರುವುದು. ಬೆಳೆಯು ಸುಭಿಕ್ಷವಾಗಿರುವುದು. ಆಹಾರ ಮತ್ತು ದ್ರಾಕ್ಷಾರಸ ಮಾತ್ರವೇ ಅಲ್ಲ, ಎಲ್ಲಾ ಯೌವನಸ್ಥರೂ ಯೌವನಸ್ಥೆಯರೂ ಹಾಗೆಯೇ ಇರುವರು.

1 2 3 4 5 6 7 8 9 10 11 12 13 14 15 16 17