పవిత్ర బైబిల్

ఈజీ టు రీడ్ వెర్షన్ (ERV) - తెలుగు
దినవృత్తాంతములు రెండవ గ్రంథము

దినవృత్తాంతములు రెండవ గ్రంథము అధ్యాయము 6

1 ಆಗ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಿನಲ್ಲಿ ವಾಸಿಸುತ್ತೇನೆ ಎಂದು ಹೇಳಿರುವೆಯಲ್ಲಾ! 2 ನಾನು ನಿನಗೋಸ್ಕರ ಆಲಯವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಲಿ” ಎಂದು ಪ್ರಾರ್ಥಿಸಿದನು. 3 {#1ಸೊಲೊಮೋನನ ಭಾಷಣ } ಸೊಲೊಮೋನನು ತನ್ನ ಮುಂದೆ ನೆರೆದಿದ್ದ ಎಲ್ಲಾ ಇಸ್ರೇಲ್ ಸಮೂಹದವರ ಕಡೆಗೆ ತಿರುಗಿ ಅವರನ್ನು ಆಶೀರ್ವದಿಸಿ, 4 “ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಿದ್ದಾನೆ. ಆತನು ದಾವೀದನಿಗೆ, 5 ‘ಈಜಿಪ್ಟಿನಿಂದ ನನ್ನ ಜನರನ್ನು ಬಿಡಿಸಿ ಹೊರ ತಂದಂದಿನಿಂದ ನನ್ನ ಆಲಯಕೋಸ್ಕರ ಇಸ್ರೇಲರ ಕುಲಗಳ ಯಾವ ಪಟ್ಟಣವನ್ನೂ ನಾನು ಆರಿಸಿಕೊಳ್ಳಲಿಲ್ಲ. ಇಸ್ರೇಲರನ್ನು ನಡಿಸುವುದಕ್ಕಾಗಿ ಒಬ್ಬ ನಾಯಕನನ್ನೂ ನಾನು ಆರಿಸಿಕೊಳ್ಳಲಿಲ್ಲ. 6 ಆದರೆ ಈಗ ನಾನು ನನ್ನ ಹೆಸರನ್ನು ಸ್ಥಾಪಿಸಲು ಜೆರುಸಲೇಮನ್ನು ಆರಿಸಿಕೊಂಡಿದ್ದೇನೆ; ದಾವೀದನನ್ನು ನನ್ನ ಜನರ ನಾಯಕನನ್ನಾಗಿ ಆರಿಸಿಕೊಂಡಿದ್ದೇನೆ’ ಎಂದು ಹೇಳಿದನು. 7 “ಇಸ್ರೇಲರ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು. 8 ಆದರೆ ದೇವರು ನನ್ನ ತಂದೆಗೆ, ‘ದಾವೀದನೇ, ನೀನು ನನಗಾಗಿ ಒಂದು ಆಲಯವನ್ನು ಕಟ್ಟಲು ಮನಸ್ಸು ಮಾಡಿರುವದು ಒಳ್ಳೆಯದೇ ಸರಿ! 9 ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನ ಸ್ವಂತ ಮಗನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು’ ಎಂದು ಹೇಳಿದನು. 10 ಯೆಹೋವನು ತಾನು ಕೊಟ್ಟ ಮಾತನ್ನು ಈಗ ನೆರವೇರಿಸಿದನು. ನಾನು ನನ್ನ ತಂದೆಯ ಸ್ಥಾನದಲ್ಲಿ ಅರಸನಾಗಿದ್ದೇನೆ. ದಾವೀದನು ನನ್ನ ತಂದೆ. ಈಗ ನಾನು ಇಸ್ರೇಲರ ರಾಜನು. ಇದು ದೇವರ ವಾಗ್ದಾನಕ್ಕನುಸಾರವಾಗಿದೆ. ನಾನು ಇಸ್ರೇಲರ ದೇವರಾದ ಯೆಹೋವನ ನಾಮಕ್ಕಾಗಿ ದೇವಾಲಯವನ್ನು ಕಟ್ಟಿರುತ್ತೇನೆ. 11 ಇದಲ್ಲದೆ ನಿಬಂಧನ ಶಾಸನವಿರುವ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದೇವಾಲಯದೊಳಗೆ ಇಟ್ಟಿರುತ್ತೇನೆ” ಎಂದು ಹೇಳಿದನು. 12 {#1ಸೊಲೊಮೋನನ ಪ್ರಾರ್ಥನೆ } ಯಜ್ಞವೇದಿಕೆಯ ಮುಂದೆ ಸೊಲೊಮೋನನು ಇಸ್ರೇಲರ ಜನರೆದುರಿಗೆ ನಿಂತುಕೊಂಡು ತನ್ನ ಕೈಗಳನ್ನೆತ್ತಿಕೊಂಡು ನಿಂತನು. 13 ಸೊಲೊಮೋನನು ಒಂದು ತಾಮ್ರದ ಪೀಠವನ್ನು ತಯಾರಿಸಿದನು. ಅದರ ಉದ್ದ ಐದು ಮೊಳ; ಅಗಲ ಐದು ಮೊಳ; ಎತ್ತರ ಮೂರು ಮೊಳ; ಅದನ್ನು ಪ್ರಾಕಾರದ ಮಧ್ಯದಲ್ಲಿಟ್ಟು ಅದರ ಮೇಲೆ ಇಸ್ರೇಲಿನ ಸರ್ವಜನರ ಮುಂದೆ ಮೊಣಕಾಲೂರಿ ತನ್ನ ಕೈಗಳನ್ನು ಆಕಾಶದ ಕಡೆ ಎತ್ತಿ, 14 “ಇಸ್ರೇಲರ ದೇವರಾದ ಯೆಹೋವನೇ, ಭೂಪರಲೋಕಗಳಲ್ಲಿ ನಿನಗೆ ಸಮಾನರಾದ ಬೇರೆ ದೇವರುಗಳಿಲ್ಲ. ನೀನು ನಿನ್ನ ಪ್ರೀತಿ ಕರುಣೆಯಿಂದೊಡಗೂಡಿದ ವಾಗ್ದಾನಗಳನ್ನು ನೆರವೇರಿಸುವೆ. ನಿನ್ನ ಸೇವಕರು ಹೃದಯಪೂರ್ವಕವಾಗಿ ನಿನಗೆ ಯೋಗ್ಯರಾಗಿ ನಡೆದು, ನಿನ್ನ ಆಜ್ಞೆಗಳಿಗೆ ವಿಧೇಯರಾಗುವದಾದರೆ ಅವರ ವಿಷಯದಲ್ಲಿ ನಿನ್ನ ವಾಗ್ದಾನವನ್ನು ನೆರವೇರಿಸುವೆ. 15 ನಿನ್ನ ಸೇವಕನಾದ ದಾವೀದನಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸಿರುವೆ. ದಾವೀದನು ನನ್ನ ತಂದೆ. ಅವನಿಗೆ ನೀನು ವಾಗ್ದಾನವನ್ನು ಮಾಡಿರುವೆ. ಈ ದಿನ ನಿನ್ನ ವಾಗ್ದಾನವು ನಿನ್ನ ಹಸ್ತದ ಮೂಲಕ ನೆರವೇರಿತು. 16 ಇಸ್ರೇಲರ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ನನ್ನ ಆಜ್ಞೆಗಳಿಗೆ ವಿಧೇಯರಾಗಿದ್ದರೆ, ನಿನ್ನ ಸಂತಾನದವರೇ ಇಸ್ರೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು.’ ಎಂದು ವಾಗ್ದಾನ ಮಾಡಿದೆಯಲ್ಲಾ? 17 ಇಸ್ರೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನಿಗೆ ಕೊಟ್ಟಿರುವ ನಿನ್ನ ವಾಗ್ದಾನವು ನೆರವೇರಲಿ. 18 “ದೇವರೇ, ನೀನು ಭೂಮಿಯ ಮೇಲೆ ಜನರೊಂದಿಗೆ ವಾಸಿಸುವವನಲ್ಲವೆಂದು ತಿಳಿದಿದ್ದೇವೆ. ಆಕಾಶಮಂಡಲವಾಗಲಿ ಅತ್ಯುನ್ನತವಾದ ಆಕಾಶವಾಗಲಿ ನಿನಗೆ ವಾಸಸ್ಥಾನವಾಗಲು ಸಾಧ್ಯವಿಲ್ಲ. ಈಗ ನಾನು ಕಟ್ಟಿರುವ ಈ ಆಲಯವು ಸಹ ನಿನ್ನ ವಾಸಕ್ಕೆ ಸಾಲದು. 19 ನನ್ನ ಪ್ರಾರ್ಥನೆಗೆ ಲಕ್ಷ್ಯಕೊಡು ಎಂದು ನಿನ್ನನ್ನು ಬೇಡುತ್ತೇನೆ. ದೇವರಾದ ಯೆಹೋವನೇ, ನನ್ನ ಬೇಡಿಕೆಗಳನ್ನು ಮತ್ತು ಸ್ತೋತ್ರಗಳನ್ನು ಲಾಲಿಸು. ನಾನು ನಿನ್ನ ಸೇವಕನಾಗಿದ್ದೇನೆ. 20 ನಿನ್ನ ಕಣ್ಣುಗಳು ಹಗಲಿರುಳು ಈ ಆಲಯವನ್ನು ದೃಷ್ಟಿಸುತ್ತಲೇ ಇರಲಿ. ನೀನು ನಿನ್ನ ನಾಮವನ್ನು ಇಲ್ಲಿ ಸ್ಥಾಪಿಸುತ್ತೇನೆ ಎಂದು ಹೇಳಿರುವೆ. ನಾನು ಈ ದೇವಾಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವಾಗ ಆಲೈಸು. 21 ನಿನ್ನ ಜನರಾದ ಇಸ್ರೇಲರು ಮತ್ತು ನಾನು ಮಾಡುವ ಪ್ರಾರ್ಥನೆಯನ್ನು ಆಲೈಸು. ನಾವು ಈ ದೇವಾಲಯದ ಕಡೆಗೆ ತಿರುಗಿಕೊಂಡು ನಿನಗೆ ಪ್ರಾರ್ಥಿಸುವಾಗ ನಿನ್ನ ನಿವಾಸವಾದ ಪರಲೋಕದಿಂದ ನಮ್ಮ ಪ್ರಾರ್ಥನೆಯನ್ನು ಆಲೈಸು; ನಮ್ಮ ಪಾಪಗಳನ್ನು ಕ್ಷಮಿಸು. 22 “ಒಬ್ಬನು ಇನ್ನೊಬ್ಬನಿಗೆ ವಿರುದ್ಧವಾಗಿ ದುಷ್ಕೃತ್ಯ ನಡೆಸಿದ್ದರೂ ನಿನ್ನ ಯಜ್ಞವೇದಿಕೆಯ ಮುಂದೆ ಬಂದು ತಾನು ಮಾಡಿಲ್ಲವೆಂದು ನಿನ್ನ ಹೆಸರಿನಲ್ಲಿ ಪ್ರಮಾಣ ಮಾಡಿದರೆ 23 ಅದನ್ನು ನೀನು ಪರಲೋಕದಿಂದ ಆಲೈಸಿ ನಿನ್ನ ಸೇವಕರ ನ್ಯಾಯತೀರಿಸು. ಕೇಡುಮಾಡಿದವನನ್ನು ಶಿಕ್ಷಿಸು; ಅವನು ಇನ್ನೊಬ್ಬನಿಗೆ ಮಾಡಿದ ದುಷ್ಕೃತ್ಯವು ಅವನಿಗೇ ತಟ್ಟುವಂತೆ ಮಾಡು. ಯಾವನು ನಿರಪರಾಧಿಯೆಂಬುದನ್ನು ತೋರಿಸಿಕೊಟ್ಟು ಅವನ ನೀತಿಗೆ ತಕ್ಕಂತೆ ಪ್ರತಿಫಲ ಕೊಡು. 24 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ವೈರಿಗಳು ಬಂದು ಅವರನ್ನು ಯುದ್ಧದಲ್ಲಿ ಸೋಲಿಸಿದರೂ ನಿನ್ನ ಜನರು ನಿನ್ನ ಕಡೆಗೆ ತಿರುಗಿ ತಮ್ಮ ಪಾಪಗಳನ್ನು ಒಪ್ಪಿಕೊಂಡು ಈ ದೇವಾಲಯಕ್ಕೆ ಬಂದು ನಿನ್ನ ಹೆಸರನ್ನು ಹೇಳಿಕೊಂಡು ನಿನಗೆ ಪ್ರಾರ್ಥಿಸಿ ಬೇಡಿಕೊಂಡರೆ 25 ಆಗ ನೀನು ಪರಲೋಕದಿಂದ ಅವರ ಮೊರೆಯನ್ನು ಲಾಲಿಸಿ, ನಿನ್ನ ಜನರ ಪಾಪಗಳನ್ನು ಮನ್ನಿಸು. ಅವರ ಪೂರ್ವಿಕರಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮತ್ತೆ ಬರಮಾಡು. 26 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ನೀನು ಆಕಾಶದಿಂದ ಮಳೆ ಬೀಳದಂತೆ ತಡೆದಾಗ ನಿನ್ನ ಜನರು ಪಶ್ಚಾತ್ತಾಪಪಟ್ಟು ಈ ದೇವಾಲಯದ ಕಡೆಗೆ ತಿರುಗಿ ನಿನ್ನನ್ನು ಪ್ರಾರ್ಥಿಸಿ ತಮ್ಮ ಪಾಪಗಳನ್ನು ಬಿಟ್ಟುಬಿಟ್ಟರೆ 27 ನೀನು ಪರಲೋಕದಿಂದ ಅವರನ್ನು ಆಲೈಸು. ಇಸ್ರೇಲರು ನಿನ್ನ ಸೇವಕರೂ ಪ್ರಜೆಗಳೂ ಆಗಿದ್ದಾರೆ. ಅವರು ಬದುಕುವಂತೆ ಸರಿಯಾದ ಮಾರ್ಗವನ್ನು ಅವರಿಗೆ ತೋರ್ಪಡಿಸು. ಅವರ ದೇಶದ ಮೇಲೆ ಮಳೆಯನ್ನು ಸುರಿಸು. ನಿನ್ನ ಜನರಿಗೆ ನೀನು ಆ ದೇಶವನ್ನೇ ಸ್ವಾಸ್ತ್ಯವಾಗಿ ಕೊಟ್ಟಿರುವೆ. 28 “ಆ ದೇಶದಲ್ಲಿ ಬರಗಾಲ ಬಂದಾಗ ಅಥವಾ ಸೋಂಕುರೋಗ ತಗಲಿದಾಗ, ಅಥವಾ ಮಿಡತೆಗಳಿಂದ ಬಾಧಿಸಲ್ಪಟ್ಟಾಗ, ವೈರಿಗಳು ಬಂದು ನಿನ್ನ ಜನರ ಮೇಲೆ ಅವರ ನಗರಗಳಲ್ಲಿಯೇ ಯುದ್ಧಮಾಡಿದಾಗ, ಅಥವಾ ಭಯಂಕರವಾದ ಕಾಯಿಲೆಯು ದೇಶದ ಜನರನ್ನು ಕಾಡಿದಾಗ 29 ತಮ್ಮ ಸಂಕಟಗಳ ಕುರಿತು ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಮೊರೆಯಿಡುವದಾದರೆ, 30 ನೀನು ಪರಲೋಕದಿಂದ ಅವರ ಮೊರೆಯನ್ನು ಆಲೈಸಿ ಅವರ ಪ್ರಾರ್ಥನೆಗೆ ಉತ್ತರವನ್ನು ದಯಪಾಲಿಸು; ಪ್ರತಿಯೊಬ್ಬನಿಗೂ ತಕ್ಕ ಪ್ರತಿಫಲವನ್ನು ಕೊಡು. ಯಾಕೆಂದರೆ ಪ್ರತಿಯೊಬ್ಬನ ಹೃದಯವನ್ನು ನೀನೊಬ್ಬನೇ ತಿಳಿದಿರುವೆ. 31 ಆಗ, ನಮ್ಮ ಪೂರ್ವಿಕರಿಗೆ ನೀನು ಅನುಗ್ರಹಿಸಿದ ದೇಶದಲ್ಲಿರುವ ನಿನ್ನ ಜನರು ನಿನಗೆ ಭಯಭಕ್ತಿಯಿಂದ ಸೇವೆ ಮಾಡುವರು. 32 “ಇಸ್ರೇಲಿನವನಲ್ಲದ ಪರದೇಶಿಯು ನಿನ್ನ ಪರಾಕ್ರಮವನ್ನೂ ನಿನ್ನ ಸಾಮರ್ಥ್ಯವನ್ನೂ ಕಂಡು ಕೇಳಿ ಇಲ್ಲಿಗೆ ಬಂದು ಈ ಆಲಯದ ಮುಂದೆ ನಿಂತುಕೊಂಡು ನಿನಗೆ ಪ್ರಾರ್ಥಿಸುವದಾದರೆ, 33 ಪರಲೋಕದಲ್ಲಿ ವಾಸಿಸುವ ನೀನು ಆ ಪರದೇಶಿಯ ಪ್ರಾರ್ಥನೆಯನ್ನು ಕೇಳಿ ಉತ್ತರಿಸು. ಆಗ ಇಸ್ರೇಲ್ ಜನರಂತೆ ಈ ಲೋಕದಲ್ಲಿರುವ ಜನರೆಲ್ಲಾ ನಿನ್ನ ವಿಷಯ ಕೇಳಿ ನಿನ್ನನ್ನು ಗೌರವಿಸುವರು. ನಾನು ಕಟ್ಟಿದ ಈ ದೇವಾಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂಬದು ಆಗ ಅವರಿಗೆ ಗೊತ್ತಾಗುವುದು. 34 “ನೀನು ನಿನ್ನ ಜನರನ್ನು ಅವರ ವೈರಿಗಳ ವಿರುದ್ಧವಾಗಿ ಯುದ್ಧಮಾಡಲು ಒಂದು ಸ್ಥಳಕ್ಕೆ ಕಳುಹಿಸುವಾಗ ನೀನು ಆರಿಸಿಕೊಂಡ ಈ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿದ ಈ ದೇವಾಲಯದ ಕಡೆಗೂ ಅವರು ತಿರುಗಿಕೊಂಡು ನಿನಗೆ ಪ್ರಾರ್ಥಿಸಿದರೆ 35 ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯ ಮಾಡು. 36 “ಜನರು ನಿನಗೆ ವಿರುದ್ಧವಾಗಿ ಪಾಪಮಾಡಬಹುದು; ಪಾಪಮಾಡದೆ ಇರುವವನು ಯಾವನೂ ಇಲ್ಲ. ಆಗ ನೀನು ಅವರ ಮೇಲೆ ಉರಿಗೊಂಡು ಅವರನ್ನು ಶಿಕ್ಷಿಸಲು ನೀನು ವೈರಿಗಳನ್ನು ಅವರ ಮೇಲೆ ಕಳುಹಿಸಿ ಅವರನ್ನು ಸೆರೆಹಿಡಿದು ದೂರದೇಶಕ್ಕೆ ಒಯ್ಯಲ್ಪಡುವಂತೆ ಮಾಡಿದಾಗ 37 ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ನಿನ್ನ ಕಡೆಗೆ ತಿರುಗಿಕೊಂಡು ತಾವು ಸೆರೆಯಲ್ಲಿರುವ ದೇಶದಿಂದ ನಿನಗೆ ಮೊರೆಯಿಟ್ಟು, ‘ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ. ನಾವು ದುಷ್ಟತ್ವದಲ್ಲಿ ಜೀವಿಸಿದ್ದೇವೆ’ ಎಂದು ಅರಿಕೆಮಾಡಿ 38 ತಮ್ಮ ಹೃದಯಪೂರ್ವಕವಾಗಿ ತಮ್ಮ ದೇಶದ ಕಡೆಗೆ, ಅಂದರೆ ನೀನು ಅವರ ಪೂರ್ವಿಕರಿಗೆ ಕೊಟ್ಟ ಈ ದೇಶದ ಕಡೆಗೂ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿಸಿದ ಈ ದೇವಾಲಯದ ಕಡೆಗೂ ಮುಖಮಾಡಿಕೊಂಡು ಪ್ರಾರ್ಥಿಸುವಾಗ, 39 ನಿನ್ನ ವಾಸಸ್ಥಾನವಾಗಿರುವ ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯಮಾಡು. ನಿನಗೆ ವಿರುದ್ಧವಾಗಿ ಪಾಪಮಾಡಿದವರನ್ನು ಕ್ಷಮಿಸು. 40 ನನ್ನ ದೇವರೇ, ಈ ಸ್ಥಳದಲ್ಲಿ ಪ್ರಾರ್ಥಿಸುವ ನಮ್ಮನ್ನು ವೀಕ್ಷಿಸಿ ನಮ್ಮ ಪ್ರಾರ್ಥನೆಗೆ ಕಿವಿಗೊಡು. 41 “ದೇವರಾದ ಯೆಹೋವನೇ, ಎದ್ದು ನಿನ್ನ ಸಾಮರ್ಥ್ಯವನ್ನು ತೋರಿಸುವ ಒಡಂಬಡಿಕೆಯ ಪೆಟ್ಟಿಗೆಯೊಡನೆ ನಿನ್ನ ವಾಸಸ್ಥಳಕ್ಕೆ ಬಾ. ನಿನ್ನ ಯಾಜಕರು ರಕ್ಷಣಾವಸ್ತ್ರವನ್ನು ಧರಿಸಿಕೊಂಡಿರಲಿ; ನಿನ್ನನ್ನು ಪ್ರೀತಿಸುವವರು ನಿನ್ನ ಒಳ್ಳೆಯತನದಲ್ಲಿ ಸಂತೋಷಪಡಲಿ. 42 ದೇವರಾದ ಯೆಹೋವನೇ, ನಿನ್ನಿಂದ ಅಭಿಷೇಕಿಸಲ್ಪಟ್ಟಿರುವ ಅರಸನನ್ನು ತಳ್ಳಿಬಿಡಬೇಡ. ನಿನಗೆ ನಂಬಿಗಸ್ತನಾದ ಸೇವಕನಾಗಿದ್ದ ದಾವೀದನನ್ನು ನೆನಪುಮಾಡಿಕೊ” ಎಂದು ಪ್ರಾರ್ಥಿಸಿದನು.
1. ಆಗ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಿನಲ್ಲಿ ವಾಸಿಸುತ್ತೇನೆ ಎಂದು ಹೇಳಿರುವೆಯಲ್ಲಾ! 2. ನಾನು ನಿನಗೋಸ್ಕರ ಆಲಯವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಲಿ” ಎಂದು ಪ್ರಾರ್ಥಿಸಿದನು. 3. {#1ಸೊಲೊಮೋನನ ಭಾಷಣ } ಸೊಲೊಮೋನನು ತನ್ನ ಮುಂದೆ ನೆರೆದಿದ್ದ ಎಲ್ಲಾ ಇಸ್ರೇಲ್ ಸಮೂಹದವರ ಕಡೆಗೆ ತಿರುಗಿ ಅವರನ್ನು ಆಶೀರ್ವದಿಸಿ, 4. “ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಿದ್ದಾನೆ. ಆತನು ದಾವೀದನಿಗೆ, 5. ‘ಈಜಿಪ್ಟಿನಿಂದ ನನ್ನ ಜನರನ್ನು ಬಿಡಿಸಿ ಹೊರ ತಂದಂದಿನಿಂದ ನನ್ನ ಆಲಯಕೋಸ್ಕರ ಇಸ್ರೇಲರ ಕುಲಗಳ ಯಾವ ಪಟ್ಟಣವನ್ನೂ ನಾನು ಆರಿಸಿಕೊಳ್ಳಲಿಲ್ಲ. ಇಸ್ರೇಲರನ್ನು ನಡಿಸುವುದಕ್ಕಾಗಿ ಒಬ್ಬ ನಾಯಕನನ್ನೂ ನಾನು ಆರಿಸಿಕೊಳ್ಳಲಿಲ್ಲ. 6. ಆದರೆ ಈಗ ನಾನು ನನ್ನ ಹೆಸರನ್ನು ಸ್ಥಾಪಿಸಲು ಜೆರುಸಲೇಮನ್ನು ಆರಿಸಿಕೊಂಡಿದ್ದೇನೆ; ದಾವೀದನನ್ನು ನನ್ನ ಜನರ ನಾಯಕನನ್ನಾಗಿ ಆರಿಸಿಕೊಂಡಿದ್ದೇನೆ’ ಎಂದು ಹೇಳಿದನು. 7. “ಇಸ್ರೇಲರ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು. 8. ಆದರೆ ದೇವರು ನನ್ನ ತಂದೆಗೆ, ‘ದಾವೀದನೇ, ನೀನು ನನಗಾಗಿ ಒಂದು ಆಲಯವನ್ನು ಕಟ್ಟಲು ಮನಸ್ಸು ಮಾಡಿರುವದು ಒಳ್ಳೆಯದೇ ಸರಿ! 9. ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನ ಸ್ವಂತ ಮಗನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು’ ಎಂದು ಹೇಳಿದನು. 10. ಯೆಹೋವನು ತಾನು ಕೊಟ್ಟ ಮಾತನ್ನು ಈಗ ನೆರವೇರಿಸಿದನು. ನಾನು ನನ್ನ ತಂದೆಯ ಸ್ಥಾನದಲ್ಲಿ ಅರಸನಾಗಿದ್ದೇನೆ. ದಾವೀದನು ನನ್ನ ತಂದೆ. ಈಗ ನಾನು ಇಸ್ರೇಲರ ರಾಜನು. ಇದು ದೇವರ ವಾಗ್ದಾನಕ್ಕನುಸಾರವಾಗಿದೆ. ನಾನು ಇಸ್ರೇಲರ ದೇವರಾದ ಯೆಹೋವನ ನಾಮಕ್ಕಾಗಿ ದೇವಾಲಯವನ್ನು ಕಟ್ಟಿರುತ್ತೇನೆ. 11. ಇದಲ್ಲದೆ ನಿಬಂಧನ ಶಾಸನವಿರುವ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದೇವಾಲಯದೊಳಗೆ ಇಟ್ಟಿರುತ್ತೇನೆ” ಎಂದು ಹೇಳಿದನು. 12. {#1ಸೊಲೊಮೋನನ ಪ್ರಾರ್ಥನೆ } ಯಜ್ಞವೇದಿಕೆಯ ಮುಂದೆ ಸೊಲೊಮೋನನು ಇಸ್ರೇಲರ ಜನರೆದುರಿಗೆ ನಿಂತುಕೊಂಡು ತನ್ನ ಕೈಗಳನ್ನೆತ್ತಿಕೊಂಡು ನಿಂತನು. 13. ಸೊಲೊಮೋನನು ಒಂದು ತಾಮ್ರದ ಪೀಠವನ್ನು ತಯಾರಿಸಿದನು. ಅದರ ಉದ್ದ ಐದು ಮೊಳ; ಅಗಲ ಐದು ಮೊಳ; ಎತ್ತರ ಮೂರು ಮೊಳ; ಅದನ್ನು ಪ್ರಾಕಾರದ ಮಧ್ಯದಲ್ಲಿಟ್ಟು ಅದರ ಮೇಲೆ ಇಸ್ರೇಲಿನ ಸರ್ವಜನರ ಮುಂದೆ ಮೊಣಕಾಲೂರಿ ತನ್ನ ಕೈಗಳನ್ನು ಆಕಾಶದ ಕಡೆ ಎತ್ತಿ, 14. “ಇಸ್ರೇಲರ ದೇವರಾದ ಯೆಹೋವನೇ, ಭೂಪರಲೋಕಗಳಲ್ಲಿ ನಿನಗೆ ಸಮಾನರಾದ ಬೇರೆ ದೇವರುಗಳಿಲ್ಲ. ನೀನು ನಿನ್ನ ಪ್ರೀತಿ ಕರುಣೆಯಿಂದೊಡಗೂಡಿದ ವಾಗ್ದಾನಗಳನ್ನು ನೆರವೇರಿಸುವೆ. ನಿನ್ನ ಸೇವಕರು ಹೃದಯಪೂರ್ವಕವಾಗಿ ನಿನಗೆ ಯೋಗ್ಯರಾಗಿ ನಡೆದು, ನಿನ್ನ ಆಜ್ಞೆಗಳಿಗೆ ವಿಧೇಯರಾಗುವದಾದರೆ ಅವರ ವಿಷಯದಲ್ಲಿ ನಿನ್ನ ವಾಗ್ದಾನವನ್ನು ನೆರವೇರಿಸುವೆ. 15. ನಿನ್ನ ಸೇವಕನಾದ ದಾವೀದನಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸಿರುವೆ. ದಾವೀದನು ನನ್ನ ತಂದೆ. ಅವನಿಗೆ ನೀನು ವಾಗ್ದಾನವನ್ನು ಮಾಡಿರುವೆ. ಈ ದಿನ ನಿನ್ನ ವಾಗ್ದಾನವು ನಿನ್ನ ಹಸ್ತದ ಮೂಲಕ ನೆರವೇರಿತು. 16. ಇಸ್ರೇಲರ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ನನ್ನ ಆಜ್ಞೆಗಳಿಗೆ ವಿಧೇಯರಾಗಿದ್ದರೆ, ನಿನ್ನ ಸಂತಾನದವರೇ ಇಸ್ರೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು.’ ಎಂದು ವಾಗ್ದಾನ ಮಾಡಿದೆಯಲ್ಲಾ? 17. ಇಸ್ರೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನಿಗೆ ಕೊಟ್ಟಿರುವ ನಿನ್ನ ವಾಗ್ದಾನವು ನೆರವೇರಲಿ. 18. “ದೇವರೇ, ನೀನು ಭೂಮಿಯ ಮೇಲೆ ಜನರೊಂದಿಗೆ ವಾಸಿಸುವವನಲ್ಲವೆಂದು ತಿಳಿದಿದ್ದೇವೆ. ಆಕಾಶಮಂಡಲವಾಗಲಿ ಅತ್ಯುನ್ನತವಾದ ಆಕಾಶವಾಗಲಿ ನಿನಗೆ ವಾಸಸ್ಥಾನವಾಗಲು ಸಾಧ್ಯವಿಲ್ಲ. ಈಗ ನಾನು ಕಟ್ಟಿರುವ ಈ ಆಲಯವು ಸಹ ನಿನ್ನ ವಾಸಕ್ಕೆ ಸಾಲದು. 19. ನನ್ನ ಪ್ರಾರ್ಥನೆಗೆ ಲಕ್ಷ್ಯಕೊಡು ಎಂದು ನಿನ್ನನ್ನು ಬೇಡುತ್ತೇನೆ. ದೇವರಾದ ಯೆಹೋವನೇ, ನನ್ನ ಬೇಡಿಕೆಗಳನ್ನು ಮತ್ತು ಸ್ತೋತ್ರಗಳನ್ನು ಲಾಲಿಸು. ನಾನು ನಿನ್ನ ಸೇವಕನಾಗಿದ್ದೇನೆ. 20. ನಿನ್ನ ಕಣ್ಣುಗಳು ಹಗಲಿರುಳು ಈ ಆಲಯವನ್ನು ದೃಷ್ಟಿಸುತ್ತಲೇ ಇರಲಿ. ನೀನು ನಿನ್ನ ನಾಮವನ್ನು ಇಲ್ಲಿ ಸ್ಥಾಪಿಸುತ್ತೇನೆ ಎಂದು ಹೇಳಿರುವೆ. ನಾನು ಈ ದೇವಾಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವಾಗ ಆಲೈಸು. 21. ನಿನ್ನ ಜನರಾದ ಇಸ್ರೇಲರು ಮತ್ತು ನಾನು ಮಾಡುವ ಪ್ರಾರ್ಥನೆಯನ್ನು ಆಲೈಸು. ನಾವು ಈ ದೇವಾಲಯದ ಕಡೆಗೆ ತಿರುಗಿಕೊಂಡು ನಿನಗೆ ಪ್ರಾರ್ಥಿಸುವಾಗ ನಿನ್ನ ನಿವಾಸವಾದ ಪರಲೋಕದಿಂದ ನಮ್ಮ ಪ್ರಾರ್ಥನೆಯನ್ನು ಆಲೈಸು; ನಮ್ಮ ಪಾಪಗಳನ್ನು ಕ್ಷಮಿಸು. 22. “ಒಬ್ಬನು ಇನ್ನೊಬ್ಬನಿಗೆ ವಿರುದ್ಧವಾಗಿ ದುಷ್ಕೃತ್ಯ ನಡೆಸಿದ್ದರೂ ನಿನ್ನ ಯಜ್ಞವೇದಿಕೆಯ ಮುಂದೆ ಬಂದು ತಾನು ಮಾಡಿಲ್ಲವೆಂದು ನಿನ್ನ ಹೆಸರಿನಲ್ಲಿ ಪ್ರಮಾಣ ಮಾಡಿದರೆ 23. ಅದನ್ನು ನೀನು ಪರಲೋಕದಿಂದ ಆಲೈಸಿ ನಿನ್ನ ಸೇವಕರ ನ್ಯಾಯತೀರಿಸು. ಕೇಡುಮಾಡಿದವನನ್ನು ಶಿಕ್ಷಿಸು; ಅವನು ಇನ್ನೊಬ್ಬನಿಗೆ ಮಾಡಿದ ದುಷ್ಕೃತ್ಯವು ಅವನಿಗೇ ತಟ್ಟುವಂತೆ ಮಾಡು. ಯಾವನು ನಿರಪರಾಧಿಯೆಂಬುದನ್ನು ತೋರಿಸಿಕೊಟ್ಟು ಅವನ ನೀತಿಗೆ ತಕ್ಕಂತೆ ಪ್ರತಿಫಲ ಕೊಡು. 24. “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ವೈರಿಗಳು ಬಂದು ಅವರನ್ನು ಯುದ್ಧದಲ್ಲಿ ಸೋಲಿಸಿದರೂ ನಿನ್ನ ಜನರು ನಿನ್ನ ಕಡೆಗೆ ತಿರುಗಿ ತಮ್ಮ ಪಾಪಗಳನ್ನು ಒಪ್ಪಿಕೊಂಡು ಈ ದೇವಾಲಯಕ್ಕೆ ಬಂದು ನಿನ್ನ ಹೆಸರನ್ನು ಹೇಳಿಕೊಂಡು ನಿನಗೆ ಪ್ರಾರ್ಥಿಸಿ ಬೇಡಿಕೊಂಡರೆ 25. ಆಗ ನೀನು ಪರಲೋಕದಿಂದ ಅವರ ಮೊರೆಯನ್ನು ಲಾಲಿಸಿ, ನಿನ್ನ ಜನರ ಪಾಪಗಳನ್ನು ಮನ್ನಿಸು. ಅವರ ಪೂರ್ವಿಕರಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮತ್ತೆ ಬರಮಾಡು. 26. “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ನೀನು ಆಕಾಶದಿಂದ ಮಳೆ ಬೀಳದಂತೆ ತಡೆದಾಗ ನಿನ್ನ ಜನರು ಪಶ್ಚಾತ್ತಾಪಪಟ್ಟು ಈ ದೇವಾಲಯದ ಕಡೆಗೆ ತಿರುಗಿ ನಿನ್ನನ್ನು ಪ್ರಾರ್ಥಿಸಿ ತಮ್ಮ ಪಾಪಗಳನ್ನು ಬಿಟ್ಟುಬಿಟ್ಟರೆ 27. ನೀನು ಪರಲೋಕದಿಂದ ಅವರನ್ನು ಆಲೈಸು. ಇಸ್ರೇಲರು ನಿನ್ನ ಸೇವಕರೂ ಪ್ರಜೆಗಳೂ ಆಗಿದ್ದಾರೆ. ಅವರು ಬದುಕುವಂತೆ ಸರಿಯಾದ ಮಾರ್ಗವನ್ನು ಅವರಿಗೆ ತೋರ್ಪಡಿಸು. ಅವರ ದೇಶದ ಮೇಲೆ ಮಳೆಯನ್ನು ಸುರಿಸು. ನಿನ್ನ ಜನರಿಗೆ ನೀನು ಆ ದೇಶವನ್ನೇ ಸ್ವಾಸ್ತ್ಯವಾಗಿ ಕೊಟ್ಟಿರುವೆ. 28. “ಆ ದೇಶದಲ್ಲಿ ಬರಗಾಲ ಬಂದಾಗ ಅಥವಾ ಸೋಂಕುರೋಗ ತಗಲಿದಾಗ, ಅಥವಾ ಮಿಡತೆಗಳಿಂದ ಬಾಧಿಸಲ್ಪಟ್ಟಾಗ, ವೈರಿಗಳು ಬಂದು ನಿನ್ನ ಜನರ ಮೇಲೆ ಅವರ ನಗರಗಳಲ್ಲಿಯೇ ಯುದ್ಧಮಾಡಿದಾಗ, ಅಥವಾ ಭಯಂಕರವಾದ ಕಾಯಿಲೆಯು ದೇಶದ ಜನರನ್ನು ಕಾಡಿದಾಗ 29. ತಮ್ಮ ಸಂಕಟಗಳ ಕುರಿತು ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಮೊರೆಯಿಡುವದಾದರೆ, 30. ನೀನು ಪರಲೋಕದಿಂದ ಅವರ ಮೊರೆಯನ್ನು ಆಲೈಸಿ ಅವರ ಪ್ರಾರ್ಥನೆಗೆ ಉತ್ತರವನ್ನು ದಯಪಾಲಿಸು; ಪ್ರತಿಯೊಬ್ಬನಿಗೂ ತಕ್ಕ ಪ್ರತಿಫಲವನ್ನು ಕೊಡು. ಯಾಕೆಂದರೆ ಪ್ರತಿಯೊಬ್ಬನ ಹೃದಯವನ್ನು ನೀನೊಬ್ಬನೇ ತಿಳಿದಿರುವೆ. 31. ಆಗ, ನಮ್ಮ ಪೂರ್ವಿಕರಿಗೆ ನೀನು ಅನುಗ್ರಹಿಸಿದ ದೇಶದಲ್ಲಿರುವ ನಿನ್ನ ಜನರು ನಿನಗೆ ಭಯಭಕ್ತಿಯಿಂದ ಸೇವೆ ಮಾಡುವರು. 32. “ಇಸ್ರೇಲಿನವನಲ್ಲದ ಪರದೇಶಿಯು ನಿನ್ನ ಪರಾಕ್ರಮವನ್ನೂ ನಿನ್ನ ಸಾಮರ್ಥ್ಯವನ್ನೂ ಕಂಡು ಕೇಳಿ ಇಲ್ಲಿಗೆ ಬಂದು ಈ ಆಲಯದ ಮುಂದೆ ನಿಂತುಕೊಂಡು ನಿನಗೆ ಪ್ರಾರ್ಥಿಸುವದಾದರೆ, 33. ಪರಲೋಕದಲ್ಲಿ ವಾಸಿಸುವ ನೀನು ಆ ಪರದೇಶಿಯ ಪ್ರಾರ್ಥನೆಯನ್ನು ಕೇಳಿ ಉತ್ತರಿಸು. ಆಗ ಇಸ್ರೇಲ್ ಜನರಂತೆ ಈ ಲೋಕದಲ್ಲಿರುವ ಜನರೆಲ್ಲಾ ನಿನ್ನ ವಿಷಯ ಕೇಳಿ ನಿನ್ನನ್ನು ಗೌರವಿಸುವರು. ನಾನು ಕಟ್ಟಿದ ಈ ದೇವಾಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂಬದು ಆಗ ಅವರಿಗೆ ಗೊತ್ತಾಗುವುದು. 34. “ನೀನು ನಿನ್ನ ಜನರನ್ನು ಅವರ ವೈರಿಗಳ ವಿರುದ್ಧವಾಗಿ ಯುದ್ಧಮಾಡಲು ಒಂದು ಸ್ಥಳಕ್ಕೆ ಕಳುಹಿಸುವಾಗ ನೀನು ಆರಿಸಿಕೊಂಡ ಈ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿದ ಈ ದೇವಾಲಯದ ಕಡೆಗೂ ಅವರು ತಿರುಗಿಕೊಂಡು ನಿನಗೆ ಪ್ರಾರ್ಥಿಸಿದರೆ 35. ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯ ಮಾಡು. 36. “ಜನರು ನಿನಗೆ ವಿರುದ್ಧವಾಗಿ ಪಾಪಮಾಡಬಹುದು; ಪಾಪಮಾಡದೆ ಇರುವವನು ಯಾವನೂ ಇಲ್ಲ. ಆಗ ನೀನು ಅವರ ಮೇಲೆ ಉರಿಗೊಂಡು ಅವರನ್ನು ಶಿಕ್ಷಿಸಲು ನೀನು ವೈರಿಗಳನ್ನು ಅವರ ಮೇಲೆ ಕಳುಹಿಸಿ ಅವರನ್ನು ಸೆರೆಹಿಡಿದು ದೂರದೇಶಕ್ಕೆ ಒಯ್ಯಲ್ಪಡುವಂತೆ ಮಾಡಿದಾಗ 37. ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ನಿನ್ನ ಕಡೆಗೆ ತಿರುಗಿಕೊಂಡು ತಾವು ಸೆರೆಯಲ್ಲಿರುವ ದೇಶದಿಂದ ನಿನಗೆ ಮೊರೆಯಿಟ್ಟು, ‘ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ. ನಾವು ದುಷ್ಟತ್ವದಲ್ಲಿ ಜೀವಿಸಿದ್ದೇವೆ’ ಎಂದು ಅರಿಕೆಮಾಡಿ 38. ತಮ್ಮ ಹೃದಯಪೂರ್ವಕವಾಗಿ ತಮ್ಮ ದೇಶದ ಕಡೆಗೆ, ಅಂದರೆ ನೀನು ಅವರ ಪೂರ್ವಿಕರಿಗೆ ಕೊಟ್ಟ ಈ ದೇಶದ ಕಡೆಗೂ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿಸಿದ ಈ ದೇವಾಲಯದ ಕಡೆಗೂ ಮುಖಮಾಡಿಕೊಂಡು ಪ್ರಾರ್ಥಿಸುವಾಗ, 39. ನಿನ್ನ ವಾಸಸ್ಥಾನವಾಗಿರುವ ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯಮಾಡು. ನಿನಗೆ ವಿರುದ್ಧವಾಗಿ ಪಾಪಮಾಡಿದವರನ್ನು ಕ್ಷಮಿಸು. 40. ನನ್ನ ದೇವರೇ, ಈ ಸ್ಥಳದಲ್ಲಿ ಪ್ರಾರ್ಥಿಸುವ ನಮ್ಮನ್ನು ವೀಕ್ಷಿಸಿ ನಮ್ಮ ಪ್ರಾರ್ಥನೆಗೆ ಕಿವಿಗೊಡು. 41. “ದೇವರಾದ ಯೆಹೋವನೇ, ಎದ್ದು ನಿನ್ನ ಸಾಮರ್ಥ್ಯವನ್ನು ತೋರಿಸುವ ಒಡಂಬಡಿಕೆಯ ಪೆಟ್ಟಿಗೆಯೊಡನೆ ನಿನ್ನ ವಾಸಸ್ಥಳಕ್ಕೆ ಬಾ. ನಿನ್ನ ಯಾಜಕರು ರಕ್ಷಣಾವಸ್ತ್ರವನ್ನು ಧರಿಸಿಕೊಂಡಿರಲಿ; ನಿನ್ನನ್ನು ಪ್ರೀತಿಸುವವರು ನಿನ್ನ ಒಳ್ಳೆಯತನದಲ್ಲಿ ಸಂತೋಷಪಡಲಿ. 42. ದೇವರಾದ ಯೆಹೋವನೇ, ನಿನ್ನಿಂದ ಅಭಿಷೇಕಿಸಲ್ಪಟ್ಟಿರುವ ಅರಸನನ್ನು ತಳ್ಳಿಬಿಡಬೇಡ. ನಿನಗೆ ನಂಬಿಗಸ್ತನಾದ ಸೇವಕನಾಗಿದ್ದ ದಾವೀದನನ್ನು ನೆನಪುಮಾಡಿಕೊ” ಎಂದು ಪ್ರಾರ್ಥಿಸಿದನು.
  • దినవృత్తాంతములు రెండవ గ్రంథము అధ్యాయము 1  
  • దినవృత్తాంతములు రెండవ గ్రంథము అధ్యాయము 2  
  • దినవృత్తాంతములు రెండవ గ్రంథము అధ్యాయము 3  
  • దినవృత్తాంతములు రెండవ గ్రంథము అధ్యాయము 4  
  • దినవృత్తాంతములు రెండవ గ్రంథము అధ్యాయము 5  
  • దినవృత్తాంతములు రెండవ గ్రంథము అధ్యాయము 6  
  • దినవృత్తాంతములు రెండవ గ్రంథము అధ్యాయము 7  
  • దినవృత్తాంతములు రెండవ గ్రంథము అధ్యాయము 8  
  • దినవృత్తాంతములు రెండవ గ్రంథము అధ్యాయము 9  
  • దినవృత్తాంతములు రెండవ గ్రంథము అధ్యాయము 10  
  • దినవృత్తాంతములు రెండవ గ్రంథము అధ్యాయము 11  
  • దినవృత్తాంతములు రెండవ గ్రంథము అధ్యాయము 12  
  • దినవృత్తాంతములు రెండవ గ్రంథము అధ్యాయము 13  
  • దినవృత్తాంతములు రెండవ గ్రంథము అధ్యాయము 14  
  • దినవృత్తాంతములు రెండవ గ్రంథము అధ్యాయము 15  
  • దినవృత్తాంతములు రెండవ గ్రంథము అధ్యాయము 16  
  • దినవృత్తాంతములు రెండవ గ్రంథము అధ్యాయము 17  
  • దినవృత్తాంతములు రెండవ గ్రంథము అధ్యాయము 18  
  • దినవృత్తాంతములు రెండవ గ్రంథము అధ్యాయము 19  
  • దినవృత్తాంతములు రెండవ గ్రంథము అధ్యాయము 20  
  • దినవృత్తాంతములు రెండవ గ్రంథము అధ్యాయము 21  
  • దినవృత్తాంతములు రెండవ గ్రంథము అధ్యాయము 22  
  • దినవృత్తాంతములు రెండవ గ్రంథము అధ్యాయము 23  
  • దినవృత్తాంతములు రెండవ గ్రంథము అధ్యాయము 24  
  • దినవృత్తాంతములు రెండవ గ్రంథము అధ్యాయము 25  
  • దినవృత్తాంతములు రెండవ గ్రంథము అధ్యాయము 26  
  • దినవృత్తాంతములు రెండవ గ్రంథము అధ్యాయము 27  
  • దినవృత్తాంతములు రెండవ గ్రంథము అధ్యాయము 28  
  • దినవృత్తాంతములు రెండవ గ్రంథము అధ్యాయము 29  
  • దినవృత్తాంతములు రెండవ గ్రంథము అధ్యాయము 30  
  • దినవృత్తాంతములు రెండవ గ్రంథము అధ్యాయము 31  
  • దినవృత్తాంతములు రెండవ గ్రంథము అధ్యాయము 32  
  • దినవృత్తాంతములు రెండవ గ్రంథము అధ్యాయము 33  
  • దినవృత్తాంతములు రెండవ గ్రంథము అధ్యాయము 34  
  • దినవృత్తాంతములు రెండవ గ్రంథము అధ్యాయము 35  
  • దినవృత్తాంతములు రెండవ గ్రంథము అధ్యాయము 36  
×

Alert

×

Telugu Letters Keypad References