పవిత్ర బైబిల్

ఈజీ టు రీడ్ వెర్షన్ (ERV) - తెలుగు
లేవీయకాండము

లేవీయకాండము అధ్యాయము 2

1 {#1ಧಾನ್ಯಸಮರ್ಪಣೆಗಳು } “ಒಬ್ಬನು ದೇವರಾದ ಯೆಹೋವನಿಗೆ ಧಾನ್ಯಸಮರ್ಪಣೆ ಮಾಡಬೇಕೆಂದಿದ್ದರೆ, ಅದು ಗೋಧಿಹಿಟ್ಟಾಗಿರಬೇಕು. ಅವನು ಈ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯಿದು, ಧೂಪವನ್ನಿಡಬೇಕು. 2 ಬಳಿಕ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಯಾಜಕನು ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಅದನ್ನು ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 3 ಧಾನ್ಯಸಮರ್ಪಣೆಯಲ್ಲಿ ಉಳಿದ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರಿದ್ದಾಗಿವೆ. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ಸಮರ್ಪಣೆಯು ಮಹಾಪರಿಶುದ್ಧವಾಗಿದೆ. 4 {#1ಬೇಯಿಸಿದ ಧಾನ್ಯಸಮರ್ಪಣೆಗಳು } “ಒಬ್ಬನು ಒಲೆಯಲ್ಲಿ ಬೇಯಿಸಿದ ಧಾನ್ಯನೈವೇದ್ಯವನ್ನು ಅರ್ಪಿಸಿದರೆ, ಆಗ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯಾಗಲಿ ಅಥವಾ ಎಣ್ಣೆ ಹೊಯಿದು ಮಾಡಿದ ಕಡುಬುಗಳಾಗಲಿ ಆಗಿರಬೇಕು. 5 ನಿಮ್ಮ ಧಾನ್ಯನೈವೇದ್ಯವು ಕಬ್ಬಿಣದ ಹಂಚಿನಲ್ಲಿ ಬೇಯಿಸಲ್ಪಟ್ಟಿದ್ದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಶ್ರೇಷ್ಠ ಹಿಟ್ಟಿನಿಂದ ಮಾಡಿದ್ದಾಗಿರಬೇಕು. 6 ನೀವು ಅದನ್ನು ಚೂರುಚೂರುಗಳಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ಯಬೇಕು. ಅದು ಧಾನ್ಯನೈವೇದ್ಯವಾಗಿದೆ. 7 ನೀವು ಬಾಂಡ್ಲಿಯಲ್ಲಿ ಪಕ್ವಮಾಡಿದ ಪದಾರ್ಥವನ್ನು ಅರ್ಪಿಸಿದರೆ, ಅದು ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟಿನಿಂದ ಮಾಡಿದ್ದಾಗಿರಬೇಕು. 8 “ನೀವು ಈ ವಸ್ತುಗಳಿಂದ ಮಾಡಿದ ಧಾನ್ಯನೈವೇದ್ಯಗಳನ್ನು ಯೆಹೋವನಿಗೆ ಅರ್ಪಿಸುವುದಾದರೆ ನೀವು ಆ ವಸ್ತುಗಳನ್ನು ಯಾಜಕನ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಅದನ್ನು ವೇದಿಕೆಯ ಮೇಲಿಡುವನು. 9 ಬಳಿಕ ಯಾಜಕನು ಧಾನ್ಯನೈವೇದ್ಯದ ಸ್ವಲ್ಪ ಭಾಗವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 10 ಧಾನ್ಯನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಅವನ ಪುತ್ರರಿಗೂ ಸೇರುವುದು. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ನೈವೇದ್ಯವು ಮಹಾಪರಿಶುದ್ಧವಾಗಿದೆ. 11 “ನೀವು ಹುಳಿಹಿಟ್ಟಿನಿಂದ ಮಾಡಿದ[* “ಹುಳಿಹಿಟ್ಟಿನಿಂದ ಮಾಡಿದ” ನಿಂಬೆರಸ, ಹುಣಸೆಹಣ್ಣಿನ ರಸ. ] ಯಾವದನ್ನೂ ಯೆಹೋವನಿಗೆ ಧಾನ್ಯಸಮರ್ಪಣೆಯಾಗಿ ಕೊಡಬಾರದು. ನೀವು ಹುಳಿಯನ್ನಾಗಲಿ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಅಗ್ನಿಯ ಮೂಲಕ ಹೋಮಮಾಡಬಾರದು. 12 ನೀವು ಹುಳಿಯನ್ನು ಮತ್ತು ಜೇನುತುಪ್ಪವನ್ನು ಪ್ರಥಮಫಲವಾಗಿ ಅರ್ಪಿಸಬಹುದು. ಆದರೆ ಹುಳಿಯನ್ನು ಮತ್ತು ಜೇನುತುಪ್ಪವನ್ನು ವೇದಿಕೆಯ ಮೇಲೆ ಹೋಮಮಾಡಕೂಡದು. 13 ನೀವು ಅರ್ಪಿಸುವ ಪ್ರತಿ ಧಾನ್ಯಸಮರ್ಪಣೆಯಲ್ಲೂ ಉಪ್ಪನ್ನು ಹಾಕಬೇಕು. ನಿಮ್ಮ ಧಾನ್ಯಸಮರ್ಪಣೆಯಲ್ಲಿ ದೇವರ ಒಡಂಬಡಿಕೆಯೆಂಬ ಉಪ್ಪು ಇರಲೇಬೇಕು. ನೀವು ಅರ್ಪಿಸುವ ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉಪ್ಪನ್ನು ಸೇರಿಸಬೇಕು.” 14 {#1ಪ್ರಥಮಫಲದ ನೈವೇದ್ಯಗಳು } “ನೀವು ಪ್ರಥಮಫಲವನ್ನು ಯೆಹೋವನಿಗೆ ನೈವೇದ್ಯವಾಗಿ ಅರ್ಪಿಸುವಾಗ ಬೆಂಕಿಯಲ್ಲಿ ಸುಟ್ಟ ಗೋಧಿತೆನೆಗಳನ್ನು ತರಬೇಕು. ಅವುಗಳು ಜಜ್ಜಲ್ಪಟ್ಟ ಹಸಿ ತೆನೆಗಳಾಗಿರಬೇಕು. ಇದು ನಿಮ್ಮ ಪ್ರಥಮಫಲ ನೈವೇದ್ಯವಾಗಿರುವುದು. 15 ನೀವು ಅದಕ್ಕೆ ಎಣ್ಣೆಯನ್ನು ಹಾಕಿ ಅದರ ಮೇಲೆ ಧೂಪವನ್ನಿಡಬೇಕು. ಅದು ಧಾನ್ಯಸಮರ್ಪಣೆಯಾಗಿದೆ. 16 ಯಾಜಕನು ಜಜ್ಜಿದ ಧಾನ್ಯದಲ್ಲಿ ಒಂದು ಭಾಗವನ್ನೂ ಎಣ್ಣೆಯನ್ನೂ ಎಲ್ಲಾ ಧೂಪವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿದೆ.
1. {#1ಧಾನ್ಯಸಮರ್ಪಣೆಗಳು } “ಒಬ್ಬನು ದೇವರಾದ ಯೆಹೋವನಿಗೆ ಧಾನ್ಯಸಮರ್ಪಣೆ ಮಾಡಬೇಕೆಂದಿದ್ದರೆ, ಅದು ಗೋಧಿಹಿಟ್ಟಾಗಿರಬೇಕು. ಅವನು ಈ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯಿದು, ಧೂಪವನ್ನಿಡಬೇಕು. 2. ಬಳಿಕ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಯಾಜಕನು ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಅದನ್ನು ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 3. ಧಾನ್ಯಸಮರ್ಪಣೆಯಲ್ಲಿ ಉಳಿದ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರಿದ್ದಾಗಿವೆ. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ಸಮರ್ಪಣೆಯು ಮಹಾಪರಿಶುದ್ಧವಾಗಿದೆ. 4. {#1ಬೇಯಿಸಿದ ಧಾನ್ಯಸಮರ್ಪಣೆಗಳು } “ಒಬ್ಬನು ಒಲೆಯಲ್ಲಿ ಬೇಯಿಸಿದ ಧಾನ್ಯನೈವೇದ್ಯವನ್ನು ಅರ್ಪಿಸಿದರೆ, ಆಗ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯಾಗಲಿ ಅಥವಾ ಎಣ್ಣೆ ಹೊಯಿದು ಮಾಡಿದ ಕಡುಬುಗಳಾಗಲಿ ಆಗಿರಬೇಕು. 5. ನಿಮ್ಮ ಧಾನ್ಯನೈವೇದ್ಯವು ಕಬ್ಬಿಣದ ಹಂಚಿನಲ್ಲಿ ಬೇಯಿಸಲ್ಪಟ್ಟಿದ್ದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಶ್ರೇಷ್ಠ ಹಿಟ್ಟಿನಿಂದ ಮಾಡಿದ್ದಾಗಿರಬೇಕು. 6. ನೀವು ಅದನ್ನು ಚೂರುಚೂರುಗಳಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ಯಬೇಕು. ಅದು ಧಾನ್ಯನೈವೇದ್ಯವಾಗಿದೆ. 7. ನೀವು ಬಾಂಡ್ಲಿಯಲ್ಲಿ ಪಕ್ವಮಾಡಿದ ಪದಾರ್ಥವನ್ನು ಅರ್ಪಿಸಿದರೆ, ಅದು ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟಿನಿಂದ ಮಾಡಿದ್ದಾಗಿರಬೇಕು. 8. “ನೀವು ಈ ವಸ್ತುಗಳಿಂದ ಮಾಡಿದ ಧಾನ್ಯನೈವೇದ್ಯಗಳನ್ನು ಯೆಹೋವನಿಗೆ ಅರ್ಪಿಸುವುದಾದರೆ ನೀವು ಆ ವಸ್ತುಗಳನ್ನು ಯಾಜಕನ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಅದನ್ನು ವೇದಿಕೆಯ ಮೇಲಿಡುವನು. 9. ಬಳಿಕ ಯಾಜಕನು ಧಾನ್ಯನೈವೇದ್ಯದ ಸ್ವಲ್ಪ ಭಾಗವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 10. ಧಾನ್ಯನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಅವನ ಪುತ್ರರಿಗೂ ಸೇರುವುದು. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ನೈವೇದ್ಯವು ಮಹಾಪರಿಶುದ್ಧವಾಗಿದೆ. 11. “ನೀವು ಹುಳಿಹಿಟ್ಟಿನಿಂದ ಮಾಡಿದ[* “ಹುಳಿಹಿಟ್ಟಿನಿಂದ ಮಾಡಿದ” ನಿಂಬೆರಸ, ಹುಣಸೆಹಣ್ಣಿನ ರಸ. ] ಯಾವದನ್ನೂ ಯೆಹೋವನಿಗೆ ಧಾನ್ಯಸಮರ್ಪಣೆಯಾಗಿ ಕೊಡಬಾರದು. ನೀವು ಹುಳಿಯನ್ನಾಗಲಿ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಅಗ್ನಿಯ ಮೂಲಕ ಹೋಮಮಾಡಬಾರದು. 12. ನೀವು ಹುಳಿಯನ್ನು ಮತ್ತು ಜೇನುತುಪ್ಪವನ್ನು ಪ್ರಥಮಫಲವಾಗಿ ಅರ್ಪಿಸಬಹುದು. ಆದರೆ ಹುಳಿಯನ್ನು ಮತ್ತು ಜೇನುತುಪ್ಪವನ್ನು ವೇದಿಕೆಯ ಮೇಲೆ ಹೋಮಮಾಡಕೂಡದು. 13. ನೀವು ಅರ್ಪಿಸುವ ಪ್ರತಿ ಧಾನ್ಯಸಮರ್ಪಣೆಯಲ್ಲೂ ಉಪ್ಪನ್ನು ಹಾಕಬೇಕು. ನಿಮ್ಮ ಧಾನ್ಯಸಮರ್ಪಣೆಯಲ್ಲಿ ದೇವರ ಒಡಂಬಡಿಕೆಯೆಂಬ ಉಪ್ಪು ಇರಲೇಬೇಕು. ನೀವು ಅರ್ಪಿಸುವ ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉಪ್ಪನ್ನು ಸೇರಿಸಬೇಕು.” 14. {#1ಪ್ರಥಮಫಲದ ನೈವೇದ್ಯಗಳು } “ನೀವು ಪ್ರಥಮಫಲವನ್ನು ಯೆಹೋವನಿಗೆ ನೈವೇದ್ಯವಾಗಿ ಅರ್ಪಿಸುವಾಗ ಬೆಂಕಿಯಲ್ಲಿ ಸುಟ್ಟ ಗೋಧಿತೆನೆಗಳನ್ನು ತರಬೇಕು. ಅವುಗಳು ಜಜ್ಜಲ್ಪಟ್ಟ ಹಸಿ ತೆನೆಗಳಾಗಿರಬೇಕು. ಇದು ನಿಮ್ಮ ಪ್ರಥಮಫಲ ನೈವೇದ್ಯವಾಗಿರುವುದು. 15. ನೀವು ಅದಕ್ಕೆ ಎಣ್ಣೆಯನ್ನು ಹಾಕಿ ಅದರ ಮೇಲೆ ಧೂಪವನ್ನಿಡಬೇಕು. ಅದು ಧಾನ್ಯಸಮರ್ಪಣೆಯಾಗಿದೆ. 16. ಯಾಜಕನು ಜಜ್ಜಿದ ಧಾನ್ಯದಲ್ಲಿ ಒಂದು ಭಾಗವನ್ನೂ ಎಣ್ಣೆಯನ್ನೂ ಎಲ್ಲಾ ಧೂಪವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿದೆ.
  • లేవీయకాండము అధ్యాయము 1  
  • లేవీయకాండము అధ్యాయము 2  
  • లేవీయకాండము అధ్యాయము 3  
  • లేవీయకాండము అధ్యాయము 4  
  • లేవీయకాండము అధ్యాయము 5  
  • లేవీయకాండము అధ్యాయము 6  
  • లేవీయకాండము అధ్యాయము 7  
  • లేవీయకాండము అధ్యాయము 8  
  • లేవీయకాండము అధ్యాయము 9  
  • లేవీయకాండము అధ్యాయము 10  
  • లేవీయకాండము అధ్యాయము 11  
  • లేవీయకాండము అధ్యాయము 12  
  • లేవీయకాండము అధ్యాయము 13  
  • లేవీయకాండము అధ్యాయము 14  
  • లేవీయకాండము అధ్యాయము 15  
  • లేవీయకాండము అధ్యాయము 16  
  • లేవీయకాండము అధ్యాయము 17  
  • లేవీయకాండము అధ్యాయము 18  
  • లేవీయకాండము అధ్యాయము 19  
  • లేవీయకాండము అధ్యాయము 20  
  • లేవీయకాండము అధ్యాయము 21  
  • లేవీయకాండము అధ్యాయము 22  
  • లేవీయకాండము అధ్యాయము 23  
  • లేవీయకాండము అధ్యాయము 24  
  • లేవీయకాండము అధ్యాయము 25  
  • లేవీయకాండము అధ్యాయము 26  
  • లేవీయకాండము అధ్యాయము 27  
×

Alert

×

Telugu Letters Keypad References