పవిత్ర బైబిల్

ఈజీ టు రీడ్ వెర్షన్ (ERV) - తెలుగు
రాజులు మొదటి గ్రంథము
1. [PS](1-2)ಸೊಲೊಮೋನನಿಂದ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ಇನ್ನೂ ಈಜಿಪ್ಟಿನಲ್ಲಿಯೇ ಇದ್ದನು. ಸೊಲೊಮೋನನು ಸತ್ತುಹೋದ ಸುದ್ದಿಯನ್ನು ಕೇಳಿ ಅವನು ಎಫ್ರಾಯೀಮ್ ಬೆಟ್ಟದಲ್ಲಿರುವ ಜೆರೆಧ ಎಂಬ ಪಟ್ಟಣಕ್ಕೆ ಹಿಂದಿರುಗಿದನು. ರಾಜನಾದ ಸೊಲೊಮೋನನು ಸತ್ತುಹೋದನು ಮತ್ತು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು. [PE][PS]ಅನಂತರ ಅವನ ಮಗನಾದ ರೆಹಬ್ಬಾಮನು ಹೊಸ ರಾಜನಾದನು.
2.
3. ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನನ್ನು ರಾಜನನ್ನಾಗಿ ಮಾಡಲು ಶೆಕೆಮಿಗೆ ಹೋದರು. ರೆಹಬ್ಬಾಮನೂ ರಾಜನಾಗಲು ಶೆಕೆಮಿಗೆ ಹೋದನು. ಜನರು ರೆಹಬ್ಬಾಮನಿಗೆ,
4. “ನಿನ್ನ ತಂದೆಯು ನಮ್ಮನ್ನು ಹೆಚ್ಚು ಕಷ್ಟದ ಕೆಲಸ ಮಾಡಲು ಬಲಾತ್ಕರಿಸಿದನು. ಈಗ ನೀನು ನಮಗೆ ಅದನ್ನು ಕಡಿಮೆಗೊಳಿಸು, ನಿನ್ನ ತಂದೆಯು ನಮ್ಮನ್ನು ಬಲಾತ್ಕರಿಸಿ ಮಾಡಿಸುತ್ತಿದ್ದ ಹೆಚ್ಚು ಕೆಲಸಗಳನ್ನು ನಿಲ್ಲಿಸು. ಆಗ ನಾವು ನಿನ್ನ ಸೇವೆಯನ್ನು ಮಾಡುವೆವು” ಎಂದು ಹೇಳಿದರು. [PE]
5.
6. [PS]ರೆಹಬ್ಬಾಮನು, “ಮೂರು ದಿನಗಳಾದ ಮೇಲೆ ನನ್ನ ಬಳಿಗೆ ಹಿಂದಿರುಗಿ ಬನ್ನಿ. ನಾನು ನಿಮಗೆ ಉತ್ತರವನ್ನು ಹೇಳುತ್ತೇನೆ” ಎಂದನು. ಆದ್ದರಿಂದ ಜನರು ಹೊರಟುಹೋದರು. [PE]
7. [PS]ಸೊಲೊಮೋನನ ಕಾಲದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಿದ್ದ ಕೆಲವು ಹಿರಿಯರು ಅಲ್ಲಿದ್ದರು. ರಾಜನಾದ ರೆಹಬ್ಬಾಮನು ಅವರಿಗೆ, “ನಾನು ಈ ಜನರಿಗೆ ಉತ್ತರ ಹೇಳಲೇಬೇಕು. ನಾನು ಏನು ಹೇಳಲಿ? ನಿಮ್ಮ ಆಲೋಚನೆಯೇನು?” ಎಂದು ಕೇಳಿದನು. [PE]
8. [PS]ಆ ಹಿರಿಯರು, “ಇಂದು ನೀನು ಅವರಿಗೆ ಸೇವಕನಂತೆ ಇರುವುದಾದರೆ, ಅವರು ನಿನ್ನ ಸೇವೆಯನ್ನು ನಿಜವಾಗಿಯೂ ಮಾಡುತ್ತಾರೆ. ನೀನು ಅವರೊಂದಿಗೆ ಕರುಣೆಯಿಂದ ಮಾತಾಡಿದರೆ, ಅವರು ಎಂದೆಂದಿಗೂ ನಿನಗಾಗಿ ದುಡಿಯುತ್ತಾರೆ” ಎಂದರು. [PE][PS]ಆದರೆ ರೆಹಬ್ಬಾಮನು ಈ ಸಲಹೆಗೆ ಕಿವಿಗೊಡಲಿಲ್ಲ. ಅವನು ತನ್ನ ಸ್ನೇಹಿತರಾದ ಯುವಜನರಿಗೆ,
9. “ಈ ಜನರು, ‘ನಿನ್ನ ತಂದೆ ಕೊಟ್ಟ ಕೆಲಸಕ್ಕಿಂತಲೂ ಸುಲಭವಾದ ಕೆಲಸವನ್ನು ನಮಗೆ ಕೊಡು’ ಎಂದು ಕೇಳುತ್ತಿದ್ದಾರೆ. ಈ ಜನರಿಗೆ ನಾನು ಉತ್ತರವನ್ನು ಹೇಳಲೇಬೇಕು. ಈ ವಿಷಯದಲ್ಲಿ ನಿಮ್ಮ ಆಲೋಚನೆಯೇನು? ನಾನು ಅವರಿಗೆ ಏನು ಹೇಳಬೇಕು?” ಎಂದು ಕೇಳಿದನು. [PE]
10. [PS]ರಾಜನ ಸ್ನೇಹಿತರಾದ ಯುವಕರು, “ಆ ಜನರು ನಿನ್ನ ಬಳಿಗೆ ಬಂದು, ‘ನಿನ್ನ ತಂದೆಯು ಬಲಾತ್ಕರಿಸಿ ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಿಸಿದನು. ಈಗ ನಮ್ಮ ಕೆಲಸವನ್ನು ಸುಲಭಗೊಳಿಸು’ ಎಂದು ಹೇಳಿದರು. ಆದ್ದರಿಂದ ನೀನು ಜಂಬದಿಂದ ಅವರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ಪೂರ್ಣದೇಹಕ್ಕಿಂತ ಶಕ್ತಿಯುಳ್ಳದ್ದಾಗಿದೆ.
11. ನನ್ನ ತಂದೆಯು ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ಆದರೆ ನಾನು ಮತ್ತಷ್ಟು ಕಷ್ಟದ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತೇನೆ. ನಿಮ್ಮಿಂದ ಕೆಲಸ ಮಾಡಿಸಲು ನಮ್ಮ ತಂದೆಯು ಚಾವಟಿಗಳಿಂದ ನಿಮ್ಮನ್ನು ಹೊಡೆಸಿದನು. ನಾನಾದರೋ ನಿಮ್ಮನ್ನು ಮುಳ್ಳುಕೋಲುಗಳಿಂದ ಮತ್ತಷ್ಟು ಕಠಿಣವಾಗಿ ಹೊಡೆಸುತ್ತೇನೆ’ ಎಂದು ತಿಳಿಸು” ಎಂಬುದಾಗಿ ಹೇಳಿಕೊಟ್ಟರು. [PE]
12. [PS]ರೆಹಬ್ಬಾಮನು ಜನರಿಗೆ, “ಮೂರು ದಿನಗಳ ನಂತರ ನನ್ನ ಬಳಿಗೆ ಮತ್ತೆ ಬನ್ನಿ” ಎಂದು ಹೇಳಿದ್ದನು. ಮೂರು ದಿನಗಳ ನಂತರ ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನ ಬಳಿಗೆ ಬಂದರು.
13. ಆ ಸಮಯದಲ್ಲಿ, ರೆಹಬ್ಬಾಮನು ಅವರೊಂದಿಗೆ ಕಠಿಣವಾಗಿ ಮಾತನಾಡಿದನು. ಹಿರಿಯರು ನೀಡಿದ ಸಲಹೆಗೆ ಅವನು ಕಿವಿಗೊಡಲಿಲ್ಲ.
14. ತನ್ನ ಸ್ನೇಹಿತರು ತಿಳಿಸಿದಂತೆಯೇ ಅವನು ಮಾಡಿದನು. ರೆಹಬ್ಬಾಮನು, “ನನ್ನ ತಂದೆಯು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ನಾನು ನಿಮಗೆ ಮತ್ತಷ್ಟು ಹೆಚ್ಚು ಕೆಲಸವನ್ನು ಕೊಡುತ್ತೇನೆ. ನನ್ನ ತಂದೆಯು ಬಾರುಕೋಲಿನಿಂದ ನಿಮ್ಮನ್ನು ಹೊಡೆಸಿದನು. ಆದರೆ ನಾನು ನಿಮ್ಮನ್ನು ಮತ್ತಷ್ಟು ಕಠಿಣವಾಗಿ ಮುಳ್ಳುಕೋಲುಗಳಿಂದ ಹೊಡೆಸುತ್ತೇನೆ” ಎಂದು ಹೇಳಿದನು.
15. ರಾಜನು ಜನರ ಅಪೇಕ್ಷೆಯನ್ನು ನೆರವೇರಿಸಲಿಲ್ಲ. ನೆಬಾಟನ ಮಗನಾದ ಯಾರೊಬ್ಬಾಮನಿಗೆ ತಾನು ಮಾಡಿದ್ದ ವಾಗ್ದಾನವನ್ನು ಈಡೇರಿಸಲು ಯೆಹೋವನೇ ಹೀಗೆ ಮಾಡಿದನು. ಯೆಹೋವನು ಪ್ರವಾದಿಯಾದ ಅಹೀಯನ ಮೂಲಕ ಈ ವಾಗ್ದಾನವನ್ನು ಮಾಡಿದ್ದನು. ಅಹೀಯನು ಶೀಲೋವಿನವನು. [PE]
16. [PS]ಇಸ್ರೇಲಿನ ಜನರೆಲ್ಲರೂ ಹೊಸರಾಜನು ತಮ್ಮ ಮಾತಿಗೆ ಕಿವಿಗೊಡಲಿಲ್ಲವೆಂಬುದನ್ನು ನೋಡಿದರು. ಆದ್ದರಿಂದ ಜನರೆಲ್ಲರೂ ರಾಜನಿಗೆ, [PE][PBR] [QS]“ದಾವೀದನ ಕುಟುಂಬದಲ್ಲಿ ನಾವೆಲ್ಲರೂ ಭಾಗಿಗಳೇ? [QE][QS2]ಇಲ್ಲ! ಇಷಯನ ಭೂಮಿಯಲ್ಲಿ ನಮಗೇನಾದರೂ ಪಾಲು ಸಿಕ್ಕುತ್ತದೆಯೇ? [QE][QS]ಇಲ್ಲ! ಇಸ್ರೇಲರೇ, ನಮ್ಮ ಮನೆಗಳಿಗೆ ನಾವು ಹೋಗೋಣ ನಡೆಯಿರಿ. [QE][QS2]ದಾವೀದನ ಮಗನು ತನ್ನ ಜನರನ್ನು ತಾನೇ ಆಳಲಿ!” [QE][PBR] [MS]ಎಂದು ಹೇಳಿದರು. ಇಸ್ರೇಲಿನ ಜನರೆಲ್ಲರೂ ಮನೆಗಳಿಗೆ ಹೋದರು.
17. ಆದರೆ ರೆಹಬ್ಬಾಮನು ಯೆಹೂದನಗರಗಳಲ್ಲಿ ವಾಸವಾಗಿದ್ದ ಇಸ್ರೇಲರನ್ನು ಆಳಿದನು. [ME]
18. [PS]ಅದೋರಾಮನೆಂಬ ಹೆಸರಿನ ಮನುಷ್ಯನು ಕೆಲಸಗಾರರ ಮೇಲ್ವಿಚಾರಕನಾಗಿದ್ದನು. ರಾಜನಾದ ರೆಹಬ್ಬಾಮನು ಜನರೊಂದಿಗೆ ಮಾತನಾಡಲು ಅದೋರಾಮನನ್ನು ಕಳುಹಿಸಿದನು. ಆದರೆ ಇಸ್ರೇಲಿನ ಜನರು ಅವನು ಸಾಯುವವರೆಗೆ ಅವನ ಕಡೆಗೆ ಕಲ್ಲುಗಳನ್ನು ಎಸೆದರು. ಆಗ ರೆಹಬ್ಬಾಮನು ತನ್ನ ರಥವನ್ನು ಹತ್ತಿ ತಪ್ಪಿಸಿಕೊಂಡು, ಜೆರುಸಲೇಮಿಗೆ ಓಡಿಹೋದನು.
19. ಹೀಗೆ ದಾವೀದನ ಕುಟುಂಬಕ್ಕೆ ವಿರೋಧವಾಗಿ ಇಸ್ರೇಲರು ದಂಗೆ ಎದ್ದರು. ಅವರು ಇಂದಿಗೂ ದಾವೀದನ ಕುಟುಂಬದ ವಿರೋಧಿಗಳಾಗಿದ್ದಾರೆ. [PE]
20.
21. [PS]ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆ ಎಂಬುದು ಇಸ್ರೇಲಿನ ಜನರೆಲ್ಲರಿಗೂ ತಿಳಿಯಿತು. ಅವರು ಅವನನ್ನು ಒಂದು ಸಭೆಗೆ ಕರೆಸಿ, ಅವನನ್ನು ಇಸ್ರೇಲಿನ ರಾಜನನ್ನಾಗಿ ನೇಮಿಸಿದರು. ಯೆಹೂದಕುಲವೊಂದು ಮಾತ್ರ ದಾವೀದನ ಕುಟುಂಬವನ್ನು ಅನುಸರಿಸಿತು. [PE][PS]ರೆಹಬ್ಬಾಮನು ಜೆರುಸಲೇಮಿಗೆ ಹಿಂದಿರುಗಿ ಹೋದನು. ಅವನು ಯೆಹೂದದ ಕುಟುಂಬಗಳನ್ನು ಮತ್ತು ಬೆನ್ಯಾಮೀನ್ ಕುಟುಂಬಗಳನ್ನು ಒಟ್ಟಾಗಿ ಸೇರಿಸಿದನು. ಅವರಲ್ಲಿ ಒಂದು ಲಕ್ಷದ ಎಂಭತ್ತು ಸಾವಿರ ಸೈನಿಕರಿದ್ದರು. ರೆಹಬ್ಬಾಮನು ಇಸ್ರೇಲಿನ ಜನರ ವಿರುದ್ಧ ಯುದ್ಧಮಾಡಲು ಅಪೇಕ್ಷಿಸಿದನು. ಅವನು ತನ್ನ ರಾಜ್ಯವನ್ನು ಪುನರ್‌ಸ್ಥಾಪಿಸಬೇಕೆಂದಿದ್ದನು.
22. ಆದರೆ ಯೆಹೋವನು ದೇವರ ಮನುಷ್ಯನೊಬ್ಬನೊಡನೆ ಮಾತನಾಡಿದನು. ಅವನ ಹೆಸರು ಶೆಮಾಯ. ಯೆಹೋವನು,
23. “ಯೆಹೂದದ ರಾಜನೂ ಸೊಲೊಮೋನನ ಮಗನೂ ಆದ ರೆಹಬ್ಬಾಮನೊಂದಿಗೆ, ಯೆಹೂದ ಮತ್ತು ಬೆನ್ಯಾಮೀನ್ ಜನರೆಲ್ಲರೊಂದಿಗೆ ಮಾತನಾಡು.
24. ನೀನು ಅವರಿಗೆ, ‘ನಿಮ್ಮ ಸೋದರರಾದ ಇಸ್ರೇಲರ ವಿರುದ್ಧ ನೀವು ಯುದ್ಧಕ್ಕೆ ಹೋಗಲೇಬಾರದೆಂದು ಯೆಹೋವನು ಹೇಳುತ್ತಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ಮನೆಗೆ ಹೋಗಬೇಕು. ಈ ಸಂಗತಿಗಳೆಲ್ಲ ಸಂಭವಿಸುವಂತೆ ನಾನೇ ಮಾಡಿದೆನು’ ಎಂದು ಹೇಳು” ಎಂಬುದಾಗಿ ತಿಳಿಸಿದನು. ಆದ್ದರಿಂದ ರೆಹಬ್ಬಾಮನ ಸೈನ್ಯದಲ್ಲಿನ ಜನರೆಲ್ಲರೂ ಯೆಹೋವನ ಆಜ್ಞೆಯನ್ನು ಅನುಸರಿಸಿದರು. ಅವರು ತಮ್ಮ ಮನೆಗಳಿಗೆ ಹೋದರು. [PE]
25.
26. [PS]ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಶೆಕೆಮ್ ನಗರವಿತ್ತು. ಯಾರೊಬ್ಬಾಮನು ಶೆಕೆಮನ್ನು ಒಂದು ಬಲಾಢ್ಯ ನಗರವನ್ನಾಗಿಸಿಕೊಂಡು ಅಲ್ಲಿ ನೆಲೆಸಿದನು. ತರುವಾಯ ಅವನು ಪೆನೂವೇಲ್ ನಗರಕ್ಕೆ ಹೋಗಿ ಅದನ್ನು ಬಲಪಡಿಸಿದನು. [PE][PS](26-27)ಯಾರೊಬ್ಬಾಮನು ತನ್ನಲ್ಲೇ, “ಜನರು ಜೆರುಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಹೋಗುವುದನ್ನೇ ಮುಂದುವರಿಸಿದರೆ, ಆಗ ಅವರು ದಾವೀದನ ಕುಟುಂಬವೇ ನಮ್ಮನ್ನು ಆಳಲಿ ಎಂದು ಅಪೇಕ್ಷೆಪಡಬಹುದು. ಜನರು ಯೆಹೂದದ ರಾಜನಾದ ರೆಹಬ್ಬಾಮನನ್ನೇ ಮತ್ತೆ ಅನುಸರಿಸಬಹುದು. ನಂತರ ಅವರು ನನ್ನನ್ನು ಕೊಂದುಬಿಡಬಹುದು.” ಅಂದುಕೊಂಡನು.
27.
28. ಬಳಿಕ ರಾಜನು ಈಗ ತಾನೇನು ಮಾಡಬೇಕೆಂದು ತನ್ನ ಸಲಹೆಗಾರರನ್ನು ಕೇಳಿದನು. ಅವರು ತಮ್ಮ ಸಲಹೆಯನ್ನು ಅವನಿಗೆ ನೀಡಿದರು. ಯಾರೊಬ್ಬಾಮನು ಎರಡು ಬಂಗಾರದ ಕರುಗಳನ್ನು ಮಾಡಿಸಿ ಜನರಿಗೆ, “ನೀವು ಆರಾಧಿಸಲು ಜೆರುಸಲೇಮಿಗೆ ಹೋಗಲೇಬಾರದು. ಇಸ್ರೇಲರೇ, ನಿಮ್ಮನ್ನು ಈಜಿಪ್ಟಿನಿಂದ ಹೊರತಂದ ದೇವರುಗಳು ಇಲ್ಲಿವೆ” ಎಂದು ಹೇಳಿದನು.
29. ರಾಜನಾದ ಯಾರೊಬ್ಬಾಮನು ಒಂದು ಬಂಗಾರದ ಕರುವನ್ನು ಬೇತೇಲಿನಲ್ಲಿರಿಸಿದನು; ಮತ್ತೊಂದು ಬಂಗಾರದ ಕರುವನ್ನು ದಾನ್ ನಗರದಲ್ಲಿರಿಸಿದನು.
30. ಆದರೆ ಇದು ಮಹಾ ಪಾಪವಾಗಿತ್ತು. ಇಸ್ರೇಲಿನ ಜನರು ಕರುಗಳನ್ನು ಆರಾಧಿಸಲು ಬೇತೇಲ್ ಮತ್ತು ದಾನ್ ನಗರಗಳಿಗೆ ಪ್ರಯಾಣ ಮಾಡಿದರು. [PE]
31. [PS]ಯಾರೊಬ್ಬಾಮನು ಎತ್ತರದ ಸ್ಥಳಗಳಲ್ಲಿ ಆಲಯಗಳನ್ನು ನಿರ್ಮಿಸಿದನು. ಅವನು ಇಸ್ರೇಲಿನ ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಂಡನು. (ಅವನು ಲೇವಿಯರ ಕುಲವೊಂದರಿಂದಲೇ ಯಾಜಕರನ್ನು ಆರಿಸಿಕೊಳ್ಳಲಿಲ್ಲ.)
32. ರಾಜನಾದ ಯಾರೊಬ್ಬಾಮನು ಹೊಸಹಬ್ಬದ ದಿನವನ್ನು ಆರಂಭಿಸಿದನು. ಈ ಹಬ್ಬವು ಯೆಹೂದ್ಯರ ಪಸ್ಕಹಬ್ಬದಂತಿತ್ತು. ಆದರೆ ಈ ಹಬ್ಬವು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಂದರ್ಭದಲ್ಲಿ ರಾಜನು ಬೇತೇಲ್ ನಗರದಲ್ಲಿ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಅರ್ಪಿಸಿದನು. ಅವನು ತಾನೇ ನಿರ್ಮಿಸಿದ ಕರುಗಳಿಗೆ ಯಜ್ಞಗಳನ್ನು ಅರ್ಪಿಸಿದನು. ರಾಜನಾದ ಯಾರೊಬ್ಬಾಮನು ತಾನು ನಿರ್ಮಿಸಿದ ಎತ್ತರದ ಸ್ಥಳಗಳಲ್ಲಿ ಸೇವೆಮಾಡಲು ಯಾಜಕರನ್ನು ಬೇತೇಲ್‌ನಲ್ಲಿಯೇ ಆರಿಸಿಕೊಂಡನು.
33. ರಾಜನಾದ ಯಾರೊಬ್ಬಾಮನು ಇಸ್ರೇಲರಿಗೆ ತನ್ನದೇ ಆದ ಹಬ್ಬದ ದಿನವನ್ನು ಆರಿಸಿಕೊಂಡನು. ಅದು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಮಯದಲ್ಲಿ ಅವನು ತಾನು ನಿರ್ಮಿಸಿದ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಮತ್ತು ಧೂಪವನ್ನು ಅರ್ಪಿಸಿದನು. ಇದು ಬೇತೇಲ್ ನಗರದಲ್ಲಿ ನಡೆಯಿತು. [PE]
మొత్తం 22 అధ్యాయాలు, ఎంపిక చేయబడింది అధ్యాయము 12 / 22
1 (1-2)ಸೊಲೊಮೋನನಿಂದ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ಇನ್ನೂ ಈಜಿಪ್ಟಿನಲ್ಲಿಯೇ ಇದ್ದನು. ಸೊಲೊಮೋನನು ಸತ್ತುಹೋದ ಸುದ್ದಿಯನ್ನು ಕೇಳಿ ಅವನು ಎಫ್ರಾಯೀಮ್ ಬೆಟ್ಟದಲ್ಲಿರುವ ಜೆರೆಧ ಎಂಬ ಪಟ್ಟಣಕ್ಕೆ ಹಿಂದಿರುಗಿದನು. ರಾಜನಾದ ಸೊಲೊಮೋನನು ಸತ್ತುಹೋದನು ಮತ್ತು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು. ಅನಂತರ ಅವನ ಮಗನಾದ ರೆಹಬ್ಬಾಮನು ಹೊಸ ರಾಜನಾದನು. 2 3 ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನನ್ನು ರಾಜನನ್ನಾಗಿ ಮಾಡಲು ಶೆಕೆಮಿಗೆ ಹೋದರು. ರೆಹಬ್ಬಾಮನೂ ರಾಜನಾಗಲು ಶೆಕೆಮಿಗೆ ಹೋದನು. ಜನರು ರೆಹಬ್ಬಾಮನಿಗೆ, 4 “ನಿನ್ನ ತಂದೆಯು ನಮ್ಮನ್ನು ಹೆಚ್ಚು ಕಷ್ಟದ ಕೆಲಸ ಮಾಡಲು ಬಲಾತ್ಕರಿಸಿದನು. ಈಗ ನೀನು ನಮಗೆ ಅದನ್ನು ಕಡಿಮೆಗೊಳಿಸು, ನಿನ್ನ ತಂದೆಯು ನಮ್ಮನ್ನು ಬಲಾತ್ಕರಿಸಿ ಮಾಡಿಸುತ್ತಿದ್ದ ಹೆಚ್ಚು ಕೆಲಸಗಳನ್ನು ನಿಲ್ಲಿಸು. ಆಗ ನಾವು ನಿನ್ನ ಸೇವೆಯನ್ನು ಮಾಡುವೆವು” ಎಂದು ಹೇಳಿದರು. 5 6 ರೆಹಬ್ಬಾಮನು, “ಮೂರು ದಿನಗಳಾದ ಮೇಲೆ ನನ್ನ ಬಳಿಗೆ ಹಿಂದಿರುಗಿ ಬನ್ನಿ. ನಾನು ನಿಮಗೆ ಉತ್ತರವನ್ನು ಹೇಳುತ್ತೇನೆ” ಎಂದನು. ಆದ್ದರಿಂದ ಜನರು ಹೊರಟುಹೋದರು. 7 ಸೊಲೊಮೋನನ ಕಾಲದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಿದ್ದ ಕೆಲವು ಹಿರಿಯರು ಅಲ್ಲಿದ್ದರು. ರಾಜನಾದ ರೆಹಬ್ಬಾಮನು ಅವರಿಗೆ, “ನಾನು ಈ ಜನರಿಗೆ ಉತ್ತರ ಹೇಳಲೇಬೇಕು. ನಾನು ಏನು ಹೇಳಲಿ? ನಿಮ್ಮ ಆಲೋಚನೆಯೇನು?” ಎಂದು ಕೇಳಿದನು. 8 ಆ ಹಿರಿಯರು, “ಇಂದು ನೀನು ಅವರಿಗೆ ಸೇವಕನಂತೆ ಇರುವುದಾದರೆ, ಅವರು ನಿನ್ನ ಸೇವೆಯನ್ನು ನಿಜವಾಗಿಯೂ ಮಾಡುತ್ತಾರೆ. ನೀನು ಅವರೊಂದಿಗೆ ಕರುಣೆಯಿಂದ ಮಾತಾಡಿದರೆ, ಅವರು ಎಂದೆಂದಿಗೂ ನಿನಗಾಗಿ ದುಡಿಯುತ್ತಾರೆ” ಎಂದರು. ಆದರೆ ರೆಹಬ್ಬಾಮನು ಈ ಸಲಹೆಗೆ ಕಿವಿಗೊಡಲಿಲ್ಲ. ಅವನು ತನ್ನ ಸ್ನೇಹಿತರಾದ ಯುವಜನರಿಗೆ, 9 “ಈ ಜನರು, ‘ನಿನ್ನ ತಂದೆ ಕೊಟ್ಟ ಕೆಲಸಕ್ಕಿಂತಲೂ ಸುಲಭವಾದ ಕೆಲಸವನ್ನು ನಮಗೆ ಕೊಡು’ ಎಂದು ಕೇಳುತ್ತಿದ್ದಾರೆ. ಈ ಜನರಿಗೆ ನಾನು ಉತ್ತರವನ್ನು ಹೇಳಲೇಬೇಕು. ಈ ವಿಷಯದಲ್ಲಿ ನಿಮ್ಮ ಆಲೋಚನೆಯೇನು? ನಾನು ಅವರಿಗೆ ಏನು ಹೇಳಬೇಕು?” ಎಂದು ಕೇಳಿದನು. 10 ರಾಜನ ಸ್ನೇಹಿತರಾದ ಯುವಕರು, “ಆ ಜನರು ನಿನ್ನ ಬಳಿಗೆ ಬಂದು, ‘ನಿನ್ನ ತಂದೆಯು ಬಲಾತ್ಕರಿಸಿ ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಿಸಿದನು. ಈಗ ನಮ್ಮ ಕೆಲಸವನ್ನು ಸುಲಭಗೊಳಿಸು’ ಎಂದು ಹೇಳಿದರು. ಆದ್ದರಿಂದ ನೀನು ಜಂಬದಿಂದ ಅವರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ಪೂರ್ಣದೇಹಕ್ಕಿಂತ ಶಕ್ತಿಯುಳ್ಳದ್ದಾಗಿದೆ. 11 ನನ್ನ ತಂದೆಯು ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ಆದರೆ ನಾನು ಮತ್ತಷ್ಟು ಕಷ್ಟದ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತೇನೆ. ನಿಮ್ಮಿಂದ ಕೆಲಸ ಮಾಡಿಸಲು ನಮ್ಮ ತಂದೆಯು ಚಾವಟಿಗಳಿಂದ ನಿಮ್ಮನ್ನು ಹೊಡೆಸಿದನು. ನಾನಾದರೋ ನಿಮ್ಮನ್ನು ಮುಳ್ಳುಕೋಲುಗಳಿಂದ ಮತ್ತಷ್ಟು ಕಠಿಣವಾಗಿ ಹೊಡೆಸುತ್ತೇನೆ’ ಎಂದು ತಿಳಿಸು” ಎಂಬುದಾಗಿ ಹೇಳಿಕೊಟ್ಟರು. 12 ರೆಹಬ್ಬಾಮನು ಜನರಿಗೆ, “ಮೂರು ದಿನಗಳ ನಂತರ ನನ್ನ ಬಳಿಗೆ ಮತ್ತೆ ಬನ್ನಿ” ಎಂದು ಹೇಳಿದ್ದನು. ಮೂರು ದಿನಗಳ ನಂತರ ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನ ಬಳಿಗೆ ಬಂದರು. 13 ಆ ಸಮಯದಲ್ಲಿ, ರೆಹಬ್ಬಾಮನು ಅವರೊಂದಿಗೆ ಕಠಿಣವಾಗಿ ಮಾತನಾಡಿದನು. ಹಿರಿಯರು ನೀಡಿದ ಸಲಹೆಗೆ ಅವನು ಕಿವಿಗೊಡಲಿಲ್ಲ. 14 ತನ್ನ ಸ್ನೇಹಿತರು ತಿಳಿಸಿದಂತೆಯೇ ಅವನು ಮಾಡಿದನು. ರೆಹಬ್ಬಾಮನು, “ನನ್ನ ತಂದೆಯು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ನಾನು ನಿಮಗೆ ಮತ್ತಷ್ಟು ಹೆಚ್ಚು ಕೆಲಸವನ್ನು ಕೊಡುತ್ತೇನೆ. ನನ್ನ ತಂದೆಯು ಬಾರುಕೋಲಿನಿಂದ ನಿಮ್ಮನ್ನು ಹೊಡೆಸಿದನು. ಆದರೆ ನಾನು ನಿಮ್ಮನ್ನು ಮತ್ತಷ್ಟು ಕಠಿಣವಾಗಿ ಮುಳ್ಳುಕೋಲುಗಳಿಂದ ಹೊಡೆಸುತ್ತೇನೆ” ಎಂದು ಹೇಳಿದನು. 15 ರಾಜನು ಜನರ ಅಪೇಕ್ಷೆಯನ್ನು ನೆರವೇರಿಸಲಿಲ್ಲ. ನೆಬಾಟನ ಮಗನಾದ ಯಾರೊಬ್ಬಾಮನಿಗೆ ತಾನು ಮಾಡಿದ್ದ ವಾಗ್ದಾನವನ್ನು ಈಡೇರಿಸಲು ಯೆಹೋವನೇ ಹೀಗೆ ಮಾಡಿದನು. ಯೆಹೋವನು ಪ್ರವಾದಿಯಾದ ಅಹೀಯನ ಮೂಲಕ ಈ ವಾಗ್ದಾನವನ್ನು ಮಾಡಿದ್ದನು. ಅಹೀಯನು ಶೀಲೋವಿನವನು. 16 ಇಸ್ರೇಲಿನ ಜನರೆಲ್ಲರೂ ಹೊಸರಾಜನು ತಮ್ಮ ಮಾತಿಗೆ ಕಿವಿಗೊಡಲಿಲ್ಲವೆಂಬುದನ್ನು ನೋಡಿದರು. ಆದ್ದರಿಂದ ಜನರೆಲ್ಲರೂ ರಾಜನಿಗೆ, “ದಾವೀದನ ಕುಟುಂಬದಲ್ಲಿ ನಾವೆಲ್ಲರೂ ಭಾಗಿಗಳೇ? ಇಲ್ಲ! ಇಷಯನ ಭೂಮಿಯಲ್ಲಿ ನಮಗೇನಾದರೂ ಪಾಲು ಸಿಕ್ಕುತ್ತದೆಯೇ? ಇಲ್ಲ! ಇಸ್ರೇಲರೇ, ನಮ್ಮ ಮನೆಗಳಿಗೆ ನಾವು ಹೋಗೋಣ ನಡೆಯಿರಿ. ದಾವೀದನ ಮಗನು ತನ್ನ ಜನರನ್ನು ತಾನೇ ಆಳಲಿ!” ಎಂದು ಹೇಳಿದರು. ಇಸ್ರೇಲಿನ ಜನರೆಲ್ಲರೂ ಮನೆಗಳಿಗೆ ಹೋದರು. 17 ಆದರೆ ರೆಹಬ್ಬಾಮನು ಯೆಹೂದನಗರಗಳಲ್ಲಿ ವಾಸವಾಗಿದ್ದ ಇಸ್ರೇಲರನ್ನು ಆಳಿದನು. 18 ಅದೋರಾಮನೆಂಬ ಹೆಸರಿನ ಮನುಷ್ಯನು ಕೆಲಸಗಾರರ ಮೇಲ್ವಿಚಾರಕನಾಗಿದ್ದನು. ರಾಜನಾದ ರೆಹಬ್ಬಾಮನು ಜನರೊಂದಿಗೆ ಮಾತನಾಡಲು ಅದೋರಾಮನನ್ನು ಕಳುಹಿಸಿದನು. ಆದರೆ ಇಸ್ರೇಲಿನ ಜನರು ಅವನು ಸಾಯುವವರೆಗೆ ಅವನ ಕಡೆಗೆ ಕಲ್ಲುಗಳನ್ನು ಎಸೆದರು. ಆಗ ರೆಹಬ್ಬಾಮನು ತನ್ನ ರಥವನ್ನು ಹತ್ತಿ ತಪ್ಪಿಸಿಕೊಂಡು, ಜೆರುಸಲೇಮಿಗೆ ಓಡಿಹೋದನು. 19 ಹೀಗೆ ದಾವೀದನ ಕುಟುಂಬಕ್ಕೆ ವಿರೋಧವಾಗಿ ಇಸ್ರೇಲರು ದಂಗೆ ಎದ್ದರು. ಅವರು ಇಂದಿಗೂ ದಾವೀದನ ಕುಟುಂಬದ ವಿರೋಧಿಗಳಾಗಿದ್ದಾರೆ. 20 21 ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆ ಎಂಬುದು ಇಸ್ರೇಲಿನ ಜನರೆಲ್ಲರಿಗೂ ತಿಳಿಯಿತು. ಅವರು ಅವನನ್ನು ಒಂದು ಸಭೆಗೆ ಕರೆಸಿ, ಅವನನ್ನು ಇಸ್ರೇಲಿನ ರಾಜನನ್ನಾಗಿ ನೇಮಿಸಿದರು. ಯೆಹೂದಕುಲವೊಂದು ಮಾತ್ರ ದಾವೀದನ ಕುಟುಂಬವನ್ನು ಅನುಸರಿಸಿತು. ರೆಹಬ್ಬಾಮನು ಜೆರುಸಲೇಮಿಗೆ ಹಿಂದಿರುಗಿ ಹೋದನು. ಅವನು ಯೆಹೂದದ ಕುಟುಂಬಗಳನ್ನು ಮತ್ತು ಬೆನ್ಯಾಮೀನ್ ಕುಟುಂಬಗಳನ್ನು ಒಟ್ಟಾಗಿ ಸೇರಿಸಿದನು. ಅವರಲ್ಲಿ ಒಂದು ಲಕ್ಷದ ಎಂಭತ್ತು ಸಾವಿರ ಸೈನಿಕರಿದ್ದರು. ರೆಹಬ್ಬಾಮನು ಇಸ್ರೇಲಿನ ಜನರ ವಿರುದ್ಧ ಯುದ್ಧಮಾಡಲು ಅಪೇಕ್ಷಿಸಿದನು. ಅವನು ತನ್ನ ರಾಜ್ಯವನ್ನು ಪುನರ್‌ಸ್ಥಾಪಿಸಬೇಕೆಂದಿದ್ದನು. 22 ಆದರೆ ಯೆಹೋವನು ದೇವರ ಮನುಷ್ಯನೊಬ್ಬನೊಡನೆ ಮಾತನಾಡಿದನು. ಅವನ ಹೆಸರು ಶೆಮಾಯ. ಯೆಹೋವನು, 23 “ಯೆಹೂದದ ರಾಜನೂ ಸೊಲೊಮೋನನ ಮಗನೂ ಆದ ರೆಹಬ್ಬಾಮನೊಂದಿಗೆ, ಯೆಹೂದ ಮತ್ತು ಬೆನ್ಯಾಮೀನ್ ಜನರೆಲ್ಲರೊಂದಿಗೆ ಮಾತನಾಡು. 24 ನೀನು ಅವರಿಗೆ, ‘ನಿಮ್ಮ ಸೋದರರಾದ ಇಸ್ರೇಲರ ವಿರುದ್ಧ ನೀವು ಯುದ್ಧಕ್ಕೆ ಹೋಗಲೇಬಾರದೆಂದು ಯೆಹೋವನು ಹೇಳುತ್ತಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ಮನೆಗೆ ಹೋಗಬೇಕು. ಈ ಸಂಗತಿಗಳೆಲ್ಲ ಸಂಭವಿಸುವಂತೆ ನಾನೇ ಮಾಡಿದೆನು’ ಎಂದು ಹೇಳು” ಎಂಬುದಾಗಿ ತಿಳಿಸಿದನು. ಆದ್ದರಿಂದ ರೆಹಬ್ಬಾಮನ ಸೈನ್ಯದಲ್ಲಿನ ಜನರೆಲ್ಲರೂ ಯೆಹೋವನ ಆಜ್ಞೆಯನ್ನು ಅನುಸರಿಸಿದರು. ಅವರು ತಮ್ಮ ಮನೆಗಳಿಗೆ ಹೋದರು. 25 26 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಶೆಕೆಮ್ ನಗರವಿತ್ತು. ಯಾರೊಬ್ಬಾಮನು ಶೆಕೆಮನ್ನು ಒಂದು ಬಲಾಢ್ಯ ನಗರವನ್ನಾಗಿಸಿಕೊಂಡು ಅಲ್ಲಿ ನೆಲೆಸಿದನು. ತರುವಾಯ ಅವನು ಪೆನೂವೇಲ್ ನಗರಕ್ಕೆ ಹೋಗಿ ಅದನ್ನು ಬಲಪಡಿಸಿದನು. (26-27)ಯಾರೊಬ್ಬಾಮನು ತನ್ನಲ್ಲೇ, “ಜನರು ಜೆರುಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಹೋಗುವುದನ್ನೇ ಮುಂದುವರಿಸಿದರೆ, ಆಗ ಅವರು ದಾವೀದನ ಕುಟುಂಬವೇ ನಮ್ಮನ್ನು ಆಳಲಿ ಎಂದು ಅಪೇಕ್ಷೆಪಡಬಹುದು. ಜನರು ಯೆಹೂದದ ರಾಜನಾದ ರೆಹಬ್ಬಾಮನನ್ನೇ ಮತ್ತೆ ಅನುಸರಿಸಬಹುದು. ನಂತರ ಅವರು ನನ್ನನ್ನು ಕೊಂದುಬಿಡಬಹುದು.” ಅಂದುಕೊಂಡನು. 27 28 ಬಳಿಕ ರಾಜನು ಈಗ ತಾನೇನು ಮಾಡಬೇಕೆಂದು ತನ್ನ ಸಲಹೆಗಾರರನ್ನು ಕೇಳಿದನು. ಅವರು ತಮ್ಮ ಸಲಹೆಯನ್ನು ಅವನಿಗೆ ನೀಡಿದರು. ಯಾರೊಬ್ಬಾಮನು ಎರಡು ಬಂಗಾರದ ಕರುಗಳನ್ನು ಮಾಡಿಸಿ ಜನರಿಗೆ, “ನೀವು ಆರಾಧಿಸಲು ಜೆರುಸಲೇಮಿಗೆ ಹೋಗಲೇಬಾರದು. ಇಸ್ರೇಲರೇ, ನಿಮ್ಮನ್ನು ಈಜಿಪ್ಟಿನಿಂದ ಹೊರತಂದ ದೇವರುಗಳು ಇಲ್ಲಿವೆ” ಎಂದು ಹೇಳಿದನು. 29 ರಾಜನಾದ ಯಾರೊಬ್ಬಾಮನು ಒಂದು ಬಂಗಾರದ ಕರುವನ್ನು ಬೇತೇಲಿನಲ್ಲಿರಿಸಿದನು; ಮತ್ತೊಂದು ಬಂಗಾರದ ಕರುವನ್ನು ದಾನ್ ನಗರದಲ್ಲಿರಿಸಿದನು. 30 ಆದರೆ ಇದು ಮಹಾ ಪಾಪವಾಗಿತ್ತು. ಇಸ್ರೇಲಿನ ಜನರು ಕರುಗಳನ್ನು ಆರಾಧಿಸಲು ಬೇತೇಲ್ ಮತ್ತು ದಾನ್ ನಗರಗಳಿಗೆ ಪ್ರಯಾಣ ಮಾಡಿದರು. 31 ಯಾರೊಬ್ಬಾಮನು ಎತ್ತರದ ಸ್ಥಳಗಳಲ್ಲಿ ಆಲಯಗಳನ್ನು ನಿರ್ಮಿಸಿದನು. ಅವನು ಇಸ್ರೇಲಿನ ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಂಡನು. (ಅವನು ಲೇವಿಯರ ಕುಲವೊಂದರಿಂದಲೇ ಯಾಜಕರನ್ನು ಆರಿಸಿಕೊಳ್ಳಲಿಲ್ಲ.) 32 ರಾಜನಾದ ಯಾರೊಬ್ಬಾಮನು ಹೊಸಹಬ್ಬದ ದಿನವನ್ನು ಆರಂಭಿಸಿದನು. ಈ ಹಬ್ಬವು ಯೆಹೂದ್ಯರ ಪಸ್ಕಹಬ್ಬದಂತಿತ್ತು. ಆದರೆ ಈ ಹಬ್ಬವು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಂದರ್ಭದಲ್ಲಿ ರಾಜನು ಬೇತೇಲ್ ನಗರದಲ್ಲಿ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಅರ್ಪಿಸಿದನು. ಅವನು ತಾನೇ ನಿರ್ಮಿಸಿದ ಕರುಗಳಿಗೆ ಯಜ್ಞಗಳನ್ನು ಅರ್ಪಿಸಿದನು. ರಾಜನಾದ ಯಾರೊಬ್ಬಾಮನು ತಾನು ನಿರ್ಮಿಸಿದ ಎತ್ತರದ ಸ್ಥಳಗಳಲ್ಲಿ ಸೇವೆಮಾಡಲು ಯಾಜಕರನ್ನು ಬೇತೇಲ್‌ನಲ್ಲಿಯೇ ಆರಿಸಿಕೊಂಡನು. 33 ರಾಜನಾದ ಯಾರೊಬ್ಬಾಮನು ಇಸ್ರೇಲರಿಗೆ ತನ್ನದೇ ಆದ ಹಬ್ಬದ ದಿನವನ್ನು ಆರಿಸಿಕೊಂಡನು. ಅದು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಮಯದಲ್ಲಿ ಅವನು ತಾನು ನಿರ್ಮಿಸಿದ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಮತ್ತು ಧೂಪವನ್ನು ಅರ್ಪಿಸಿದನು. ಇದು ಬೇತೇಲ್ ನಗರದಲ್ಲಿ ನಡೆಯಿತು.
మొత్తం 22 అధ్యాయాలు, ఎంపిక చేయబడింది అధ్యాయము 12 / 22
×

Alert

×

Telugu Letters Keypad References