పవిత్ర బైబిల్

ఈజీ టు రీడ్ వెర్షన్ (ERV) - తెలుగు
ప్రసంగి
1. {#1ಸಾವು ನ್ಯಾಯವಾದದ್ದೇ? }
2. [PS]ನಾನು ಇವೆಲ್ಲವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಆಲೋಚಿಸಿದೆ. ಒಳ್ಳೆಯವರಿಗೂ ಜ್ಞಾನಿಗಳಿಗೂ ಅವರ ಕಾರ್ಯಗಳಿಗೂ ಸಂಭವಿಸುವುದೆಲ್ಲಾ ದೇವರ ಹತೋಟಿಯಲ್ಲಿದೆ. ತಾವು ಪ್ರೀತಿಗೆ ಗುರಿಯಾಗುವರೋ ದ್ವೇಷಕ್ಕೆ ಗುರಿಯಾಗುವರೋ ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸುವುದೂ ಅವರಿಗೆ ಗೊತ್ತಿಲ್ಲ. [PE]
3. [PS]ಆದರೆ ಎಲ್ಲರಿಗೂ ಸಂಭವಿಸುವುದು ಒಂದೇ. ಅದೇ ಮರಣ. ಒಳ್ಳೆಯವರಿಗೂ ಕೆಟ್ಟವರಿಗೂ ಶುದ್ಧರಿಗೂ ಅಶುದ್ಧರಿಗೂ ಯಜ್ಞಗಳನ್ನು ಅರ್ಪಿಸುವವರಿಗೂ ಅರ್ಪಿಸದವರಿಗೂ ಮರಣವಾಗುತ್ತದೆ. ಒಳ್ಳೆಯವನು ಸಹ ಕೇವಲ ಪಾಪಿಯಂತೆ ಸಾಯುವನು. ದೇವರಿಗೆ ವಿಶೇಷವಾದ ಹರಕೆಗಳನ್ನು ಮಾಡುವವನು ಸಹ ಆ ಹರಕೆಗಳನ್ನು ಮಾಡಲು ಭಯಪಡುವ ವ್ಯಕ್ತಿಯಂತೆ ಸಾಯುವನು. [PE][PS]ಈ ಲೋಕದ ಎಲ್ಲಾ ಕಾರ್ಯಗಳಲ್ಲಿ ಎಲ್ಲಕ್ಕಿಂತಲೂ ದುಃಖಕರವಾದದ್ದೇನೆಂದರೆ, ಎಲ್ಲರೂ ಒಂದೇ ರೀತಿಯಲ್ಲಿ ಅಂತ್ಯವಾಗುವರು. ಆದರೆ ಜನರು ದುಷ್ಟತನವನ್ನೂ ಮೂರ್ಖತನವನ್ನೂ ಆಲೋಚಿಸುತ್ತಲೇ ಇರುವುದು ಅಪಾಯಕರ. ಆಲೋಚನೆಗಳು ಅವರನ್ನು ಮರಣಕ್ಕೆ ನಡೆಸುತ್ತವೆ.
4. ಇನ್ನೂ ಜೀವದಿಂದಿರುವ ಪ್ರತಿಯೊಬ್ಬರಿಗೂ ನಿರೀಕ್ಷೆಯಿದೆ. [PE][PBR] [QS]ಜೀವಂತವಾಗಿರುವ ನಾಯಿ ಸತ್ತ ಸಿಂಹಕ್ಕಿಂತಲೂ ಉತ್ತಮ [QE][PBR] [MS]ಎಂಬ ನುಡಿ ಎಷ್ಟೋ ಸತ್ಯ. [ME]
5. [PS]ಜೀವಿತರಿಗೆ ಸಾಯುತ್ತೇವೆಂಬ ತಿಳಿವಳಿಕೆಯಿದೆ. ಆದರೆ ಸತ್ತವರಿಗೆ ಯಾವ ತಿಳಿವಳಿಕೆಯೂ ಇಲ್ಲ. ಸತ್ತವರಿಗೆ ಯಾವ ಪ್ರತಿಫಲವೂ ಇಲ್ಲ. ಜನರು ಅವರನ್ನು ಬೇಗನೆ ಮರೆತುಬಿಡುವರು.
6. ಅವರು ಸತ್ತಾಗಲೇ, ಅವರ ಪ್ರೀತಿ, ದ್ವೇಷ ಮತ್ತು ಹೊಟ್ಟೆಕಿಚ್ಚು ಅಳಿದುಹೋದವು; ಸತ್ತವರು ಭೂಲೋಕದ ಕಾರ್ಯಗಳಲ್ಲಿ ಇನ್ನೆಂದಿಗೂ ಪಾಲುಗಾರರಾಗುವುದಿಲ್ಲ. [PE]
7. {#1ಜೀವನದಲ್ಲಿ ಆನಂದಿಸಿ } [PS]ಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ಈ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ.
8. ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ನಿನ್ನನ್ನು ಅಲಂಕರಿಸಿಕೊ.
9. ನೀನು ಪ್ರಿಯ ಪತ್ನಿಯೊಡನೆ ಸುಖಪಡು. ನಿನ್ನ ಅಲ್ಪಕಾಲ ಜೀವಿತದ ದಿನಗಳಲ್ಲೆಲ್ಲಾ ಸುಖಪಡು. ಈ ಜೀವಿತವನ್ನು ನಿನಗೆ ಅನುಗ್ರಹಿಸಿರುವಾತನು ದೇವರೇ, ಇದೇ ನಿನ್ನ ಪಾಲು. ನಿನ್ನ ಈ ಜೀವಿತದ ಕೆಲಸಕಾರ್ಯಗಳನ್ನು ಸಂತೋಷದಿಂದ ಮಾಡು.
10. ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ. [PE]
11. {#1ಅದೃಷ್ಟವೇ? ನತಾದೃಷ್ಟವೇ? }
12. [PS]ಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ. [PE]
13. [PS]ಮನುಷ್ಯನಿಗೆ ಮುಂದೆ ಏನಾಗುವುದೋ ತಿಳಿಯದು. ಬಲೆಯಲ್ಲಿ ಸಿಕ್ಕಿಕೊಂಡಿರುವ ಮೀನಿನಂತೆಯೂ ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯಂತೆಯೂ ಮನುಷ್ಯನು ತನಗೆ ಸಂಭವಿಸುವ ಕೇಡುಗಳಿಗೆ ಗುರಿಯಾಗುವನು. [PE]{#1ಜ್ಞಾನದ ಶಕ್ತಿ } [PS]ಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು.
14. ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ಆ ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು.
15. ಆ ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ಆ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು.
16. ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಆ ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ. [PE][PBR]
17. [QS]ಜ್ಞಾನಿಯ ಮೆಲ್ಲನೆಯ ಮಾತುಗಳು ಮೂಢನಾದ ಅಧಿಪತಿಯು [QE][QS2]ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ. [QE]
18. [QS]ಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ, [QE][QS2]ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು. [QE][PBR]
మొత్తం 12 అధ్యాయాలు, ఎంపిక చేయబడింది అధ్యాయము 9 / 12
1 2 3 4 5 6 7 8 9 10 11 12
1 {#1ಸಾವು ನ್ಯಾಯವಾದದ್ದೇ? } 2 ನಾನು ಇವೆಲ್ಲವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಆಲೋಚಿಸಿದೆ. ಒಳ್ಳೆಯವರಿಗೂ ಜ್ಞಾನಿಗಳಿಗೂ ಅವರ ಕಾರ್ಯಗಳಿಗೂ ಸಂಭವಿಸುವುದೆಲ್ಲಾ ದೇವರ ಹತೋಟಿಯಲ್ಲಿದೆ. ತಾವು ಪ್ರೀತಿಗೆ ಗುರಿಯಾಗುವರೋ ದ್ವೇಷಕ್ಕೆ ಗುರಿಯಾಗುವರೋ ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸುವುದೂ ಅವರಿಗೆ ಗೊತ್ತಿಲ್ಲ. 3 ಆದರೆ ಎಲ್ಲರಿಗೂ ಸಂಭವಿಸುವುದು ಒಂದೇ. ಅದೇ ಮರಣ. ಒಳ್ಳೆಯವರಿಗೂ ಕೆಟ್ಟವರಿಗೂ ಶುದ್ಧರಿಗೂ ಅಶುದ್ಧರಿಗೂ ಯಜ್ಞಗಳನ್ನು ಅರ್ಪಿಸುವವರಿಗೂ ಅರ್ಪಿಸದವರಿಗೂ ಮರಣವಾಗುತ್ತದೆ. ಒಳ್ಳೆಯವನು ಸಹ ಕೇವಲ ಪಾಪಿಯಂತೆ ಸಾಯುವನು. ದೇವರಿಗೆ ವಿಶೇಷವಾದ ಹರಕೆಗಳನ್ನು ಮಾಡುವವನು ಸಹ ಆ ಹರಕೆಗಳನ್ನು ಮಾಡಲು ಭಯಪಡುವ ವ್ಯಕ್ತಿಯಂತೆ ಸಾಯುವನು. ಈ ಲೋಕದ ಎಲ್ಲಾ ಕಾರ್ಯಗಳಲ್ಲಿ ಎಲ್ಲಕ್ಕಿಂತಲೂ ದುಃಖಕರವಾದದ್ದೇನೆಂದರೆ, ಎಲ್ಲರೂ ಒಂದೇ ರೀತಿಯಲ್ಲಿ ಅಂತ್ಯವಾಗುವರು. ಆದರೆ ಜನರು ದುಷ್ಟತನವನ್ನೂ ಮೂರ್ಖತನವನ್ನೂ ಆಲೋಚಿಸುತ್ತಲೇ ಇರುವುದು ಅಪಾಯಕರ. ಆಲೋಚನೆಗಳು ಅವರನ್ನು ಮರಣಕ್ಕೆ ನಡೆಸುತ್ತವೆ. 4 ಇನ್ನೂ ಜೀವದಿಂದಿರುವ ಪ್ರತಿಯೊಬ್ಬರಿಗೂ ನಿರೀಕ್ಷೆಯಿದೆ. ಜೀವಂತವಾಗಿರುವ ನಾಯಿ ಸತ್ತ ಸಿಂಹಕ್ಕಿಂತಲೂ ಉತ್ತಮ ಎಂಬ ನುಡಿ ಎಷ್ಟೋ ಸತ್ಯ. 5 ಜೀವಿತರಿಗೆ ಸಾಯುತ್ತೇವೆಂಬ ತಿಳಿವಳಿಕೆಯಿದೆ. ಆದರೆ ಸತ್ತವರಿಗೆ ಯಾವ ತಿಳಿವಳಿಕೆಯೂ ಇಲ್ಲ. ಸತ್ತವರಿಗೆ ಯಾವ ಪ್ರತಿಫಲವೂ ಇಲ್ಲ. ಜನರು ಅವರನ್ನು ಬೇಗನೆ ಮರೆತುಬಿಡುವರು. 6 ಅವರು ಸತ್ತಾಗಲೇ, ಅವರ ಪ್ರೀತಿ, ದ್ವೇಷ ಮತ್ತು ಹೊಟ್ಟೆಕಿಚ್ಚು ಅಳಿದುಹೋದವು; ಸತ್ತವರು ಭೂಲೋಕದ ಕಾರ್ಯಗಳಲ್ಲಿ ಇನ್ನೆಂದಿಗೂ ಪಾಲುಗಾರರಾಗುವುದಿಲ್ಲ. 7 {#1ಜೀವನದಲ್ಲಿ ಆನಂದಿಸಿ } ಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ಈ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ. 8 ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ನಿನ್ನನ್ನು ಅಲಂಕರಿಸಿಕೊ. 9 ನೀನು ಪ್ರಿಯ ಪತ್ನಿಯೊಡನೆ ಸುಖಪಡು. ನಿನ್ನ ಅಲ್ಪಕಾಲ ಜೀವಿತದ ದಿನಗಳಲ್ಲೆಲ್ಲಾ ಸುಖಪಡು. ಈ ಜೀವಿತವನ್ನು ನಿನಗೆ ಅನುಗ್ರಹಿಸಿರುವಾತನು ದೇವರೇ, ಇದೇ ನಿನ್ನ ಪಾಲು. ನಿನ್ನ ಈ ಜೀವಿತದ ಕೆಲಸಕಾರ್ಯಗಳನ್ನು ಸಂತೋಷದಿಂದ ಮಾಡು. 10 ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ. 11 {#1ಅದೃಷ್ಟವೇ? ನತಾದೃಷ್ಟವೇ? } 12 ಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ. 13 ಮನುಷ್ಯನಿಗೆ ಮುಂದೆ ಏನಾಗುವುದೋ ತಿಳಿಯದು. ಬಲೆಯಲ್ಲಿ ಸಿಕ್ಕಿಕೊಂಡಿರುವ ಮೀನಿನಂತೆಯೂ ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯಂತೆಯೂ ಮನುಷ್ಯನು ತನಗೆ ಸಂಭವಿಸುವ ಕೇಡುಗಳಿಗೆ ಗುರಿಯಾಗುವನು. {#1ಜ್ಞಾನದ ಶಕ್ತಿ } ಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು. 14 ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ಆ ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು. 15 ಆ ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ಆ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು. 16 ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಆ ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ. 17 ಜ್ಞಾನಿಯ ಮೆಲ್ಲನೆಯ ಮಾತುಗಳು ಮೂಢನಾದ ಅಧಿಪತಿಯು ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ. 18 ಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ, ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು.
మొత్తం 12 అధ్యాయాలు, ఎంపిక చేయబడింది అధ్యాయము 9 / 12
1 2 3 4 5 6 7 8 9 10 11 12
×

Alert

×

Telugu Letters Keypad References