పవిత్ర బైబిల్

ఈజీ టు రీడ్ వెర్షన్ (ERV) - తెలుగు
ఎఫెసీయులకు
1.
2. [PS]ಕ್ರಿಸ್ತ ಯೇಸುವಿನ ಅಪೊಸ್ತಲನಾಗಿರುವ ಪೌಲನು ಬರೆಯುವ ಪತ್ರ. ನಾನು ದೇವರ ಇಷ್ಟಾನುಸಾರವಾಗಿ ಅಪೊಸ್ತಲನಾಗಿದ್ದೇನೆ. ಎಫೆಸ[* ಎಫೆಸ ಕೆಲವು ಪ್ರಾಚೀನ ಪತ್ರಿಕೆಗಳಲ್ಲಿ ಈ ಪದವು ಇಲ್ಲ. ] ಪಟ್ಟಣದಲ್ಲಿ ವಾಸವಾಗಿರುವ ಮತ್ತು ಕ್ರಿಸ್ತಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪರಿಶುದ್ಧ ದೇವಜನರಿಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. [PE]
3. [PS]ನಮ್ಮ ತಂದೆಯಾದ ದೇವರು ಮತ್ತು ಪ್ರಭುವಾದ ಯೇಸು ಕ್ರಿಸ್ತನು ನಿಮಗೆ ಕೃಪೆಯನ್ನೂ ಶಾಂತಿಯನ್ನೂ ದಯಪಾಲಿಸಲಿ. [PE]{#1ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು } [PS]ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಪರಲೋಕದಲ್ಲಿರುವ ಪ್ರತಿಯೊಂದು ಆಶೀರ್ವಾದಗಳನ್ನು ದೇವರು ನಮಗೆ ಕ್ರಿಸ್ತನಲ್ಲಿ ದಯಪಾಲಿಸಿದ್ದಾನೆ.
4. ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡನು. ತನ್ನ ಸನ್ನಿಧಿಯಲ್ಲಿ ನಾವು ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂಬುದು ಆತನ ಉದ್ದೇಶವಾಗಿತ್ತು.
5. ನಮ್ಮ ಮೇಲಿನ ಪ್ರೀತಿಯಿಂದ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ಆತನು ಆಗಲೇ ನಿರ್ಧರಿಸಿದ್ದನು. ಅದು ಆತನ ಚಿತ್ತವಾಗಿತ್ತು ಮತ್ತು ಆತನಿಗೆ ಮೆಚ್ಚಿಕೆಕರವಾಗಿತ್ತು.
6. ದೇವರ ಅದ್ಭುತವಾದ ಕೃಪೆಯಿಂದಾದ ಈ ನಿರ್ಧಾರವು ಆತನಿಗೆ ಸ್ತೋತ್ರವನ್ನು ಉಂಟುಮಾಡುತ್ತದೆ. ದೇವರು ಆ ಕೃಪೆಯನ್ನು ತನ್ನ ಪ್ರಿಯನಾದ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾನೆ. [PE]
7. [PS]ಕ್ರಿಸ್ತನ ರಕ್ತದ ಮೂಲಕವಾಗಿ ನಮಗೆ ಬಿಡುಗಡೆಯಾಯಿತು. ದೇವರ ಮಹಾ ಕೃಪೆಯಿಂದ ನಮ್ಮ ಪಾಪಗಳು ಕ್ಷಮಿಸಲ್ಪಟ್ಟವು.
8. ದೇವರು ನಮಗೆ ಆ ಕೃಪೆಯನ್ನು ಸಂಪೂರ್ಣವಾಗಿಯೂ ಉಚಿತವಾಗಿಯೂ ತೋರಿದನು. ದೇವರು ತನ್ನ ರಹಸ್ಯವಾದ ಯೋಜನೆಯನ್ನು ನಮಗೆ ತಿಳಿಸುವುದರ ಮೂಲಕ ನಮಗೆ ಸಂಪೂರ್ಣವಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಟ್ಟನು.
9. ಇದು ದೇವರ ಚಿತ್ತವಾಗಿತ್ತು. ಕ್ರಿಸ್ತನ ಮೂಲಕ ಇದನ್ನು ನೆರವೇರಿಸಲು ಆತನು ಯೋಜನೆ ಮಾಡಿದನು.
10. ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು. [PE]
11. [PS]ನಾವು ದೇವರ ಮಕ್ಕಳಾಗಿರಬೇಕೆಂದು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಳ್ಳಲಾಯಿತು. ನಾವು ತನ್ನ ಮಕ್ಕಳಾಗಿರಬೇಕೆಂದು ದೇವರು ತನ್ನ ಚಿತ್ತಾನುಸಾರವಾಗಿ ಮೊದಲೇ ಯೋಜನೆ ಮಾಡಿದ್ದನು. ತನ್ನ ನಿರ್ಧಾರ ಮತ್ತು ಇಷ್ಟಗಳಿಗನುಸಾರವಾಗಿ ಪ್ರತಿಯೊಂದನ್ನು ನೆರವೇರಿಸುವಾತನು ದೇವರೇ.
12. ಕ್ರಿಸ್ತನನ್ನು ನಿರೀಕ್ಷಿಸಿಕೊಂಡಿರುವವರಲ್ಲಿ ನಾವೇ ಮೊದಲಿಗರು. ದೇವರ ಮಹಿಮೆಗೆ ಸ್ತೋತ್ರವನ್ನು ಉಂಟುಮಾಡಬೇಕೆಂದೇ ನಮ್ಮನ್ನು ಆರಿಸಿಕೊಳ್ಳಲಾಯಿತು.
13. ಇದು ನಿಮಗೂ ಅನ್ವಯಿಸುತ್ತದೆ. ನೀವು ಸತ್ಯ ಬೋಧನೆಯ ಬಗ್ಗೆ ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯ ಬಗ್ಗೆ ಕೇಳಿದಾಗ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರಿ. ದೇವರು ತನ್ನ ವಾಗ್ದಾನಕ್ಕನುಸಾರವಾಗಿ ನಿಮಗೆ ಪವಿತ್ರಾತ್ಮನನ್ನು ದಯಪಾಲಿಸುವುದರ ಮೂಲಕ ನಿಮ್ಮ ಮೇಲೆ ತನ್ನ ವಿಶೇಷವಾದ ಮುದ್ರೆಯನ್ನು ಹಾಕಿದನು.
14. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದವುಗಳನ್ನು ನಾವು ಹೊಂದಿಕೊಳ್ಳುತ್ತೇವೆ ಎಂಬುದಕ್ಕೆ ಆ ಪವಿತ್ರಾತ್ಮನೇ ಪ್ರಮಾಣವಾಗಿದ್ದಾನೆ. ದೇವರು ಸಂಪಾದಿಸಿಕೊಂಡ ಜನರಿಗೆ ಇದು ಸಂಪೂರ್ಣ ವಿಮೋಚನೆಯನ್ನು ಉಂಟುಮಾಡುತ್ತದೆ. ದೇವರ ಮಹಿಮೆಗೆ ಸ್ತೋತ್ರವಾಗ ಬೇಕೆಂಬುದೇ ಇದೆಲ್ಲದರ ಉದ್ದೇಶವಾಗಿದೆ. [PE]
15. {#1ಪೌಲನ ಪ್ರಾರ್ಥನೆ } [PS](15-16)ಆದಕಾರಣವೇ ನನ್ನ ಪ್ರಾರ್ಥನೆಗಳಲ್ಲಿ ನಾನು ನಿಮ್ಮನ್ನು ಜ್ಞಾಪಿಸಿಕೊಂಡು ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಸ್ತೋತ್ರ ಸಲ್ಲಿಸುತ್ತೇನೆ. ಪ್ರಭುವಾದ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ ಮತ್ತು ಎಲ್ಲಾ ದೇವಜನರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದಂದಿನಿಂದ ನಾನು ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
16.
17. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ಮಹಿಮಾ ಸ್ವರೂಪನಾದ ತಂದೆಯೂ ಆಗಿರುವಾತನಿಗೆ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ದೇವರ ಜ್ಞಾನದಿಂದ ಅಂದರೆ ಆತನು ನಿಮಗೆ ತಿಳಿಯಪಡಿಸಿದ ಜ್ಞಾನದಿಂದ ನಿಮ್ಮನ್ನು ವಿವೇಕಿಗಳನ್ನಾಗಿ ಮಾಡುವಂಥ ಆತ್ಮವನ್ನು ಆತನು ನಿಮಗೆ ಅನುಗ್ರಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. [PE]
18. [PS]ನೀವು ನಿಮ್ಮ ಹೃದಯದಲ್ಲಿ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಹೊಂದಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ನಾವು ಎಂಥ ನಿರೀಕ್ಷೆಯನ್ನು ಹೊಂದಿಕೊಳ್ಳಬೇಕೆಂದು ದೇವರು ನಮ್ಮನ್ನು ಆರಿಸಿಕೊಂಡನೆಂಬುದನ್ನು ಆಗ ತಿಳಿದುಕೊಳ್ಳುವಿರಿ; ಆತನು ತನ್ನ ಪರಿಶುದ್ಧ ಜನರಿಗೆ ವಾಗ್ದಾನ ಮಾಡಿದ ಆಶೀರ್ವಾದಗಳು ಎಷ್ಟು ಮಹಿಮಾತಿಶಯವಾಗಿವೆ ಎಂಬುದನ್ನು ತಿಳಿದುಕೊಳ್ಳುವಿರಿ.
19. ನಂಬಿಕೆಯಿಡುವಂಥ ನಮಗೆ ದೇವರ ಶಕ್ತಿಯು ಎಷ್ಟು ಮಹತ್ವವುಳ್ಳದ್ದಾಗಿದೆ ಎಂಬುದನ್ನೂ ಆಗ ನೀವು ತಿಳಿದುಕೊಳ್ಳುವಿರಿ. ಕ್ರಿಸ್ತನನ್ನು ಮರಣದಿಂದ ಜೀವಂತನಾಗಿ ಎಬ್ಬಿಸಲು ದೇವರು ಉಪಯೋಗಿಸಿದ ಮಹಾಶಕ್ತಿ ಅದೇ.
20. ದೇವರು ಕ್ರಿಸ್ತನನ್ನು ಪರಲೋಕದೊಳಗೆ ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು.
21. ದೇವರು ಕ್ರಿಸ್ತನನ್ನು ಎಲ್ಲಾ ಅಧಿಪತಿಗಳಿಗಿಂತಲೂ ಅಧಿಕಾರಿಗಳಿಗಿಂತಲೂ ಶಕ್ತಿಗಳಿಗಿಂತಲೂ ರಾಜರುಗಳಿಗಿಂತಲೂ ಪ್ರಮುಖನನ್ನಾಗಿ ಮಾಡಿದನು. ಈ ಲೋಕದಲ್ಲಾಗಲಿ ಮುಂದಿನ ಲೋಕದಲ್ಲಾಗಲಿ ಕೊಡಲ್ಪಟ್ಟಿರುವ ಯಾವುದೇ ಹೆಸರುಳ್ಳವರಿಗಿಂತಲೂ ಕ್ರಿಸ್ತನು ಪ್ರಮುಖನಾಗಿದ್ದಾನೆ.
22. ದೇವರು ಪ್ರತಿಯೊಂದನ್ನು ಕ್ರಿಸ್ತನ ಅಧಿಕಾರಕ್ಕೆ ಒಳಪಡಿಸಿದನು. ಸಭೆಗೋಸ್ಕರವಾಗಿ ದೇವರು ಆತನನ್ನು ಪ್ರತಿಯೊಂದರ ಮೇಲೆ ಶಿರಸ್ಸನ್ನಾಗಿ ಮಾಡಿದನು.
23. ಸಭೆಯು ಕ್ರಿಸ್ತನ ದೇಹವಾಗಿದೆ. ಸಭೆಯು ಕ್ರಿಸ್ತನಿಂದ ಆವರಿಸಲ್ಪಟ್ಟಿದೆ. ಆತನು ಸಮಸ್ತವನ್ನು ಪ್ರತಿಯೊಂದು ವಿಷಯದಲ್ಲಿಯೂ ಸಂಪೂರ್ಣಗೊಳಿಸುತ್ತಾನೆ. [PE]
మొత్తం 6 అధ్యాయాలు, ఎంపిక చేయబడింది అధ్యాయము 1 / 6
1 2 3 4 5 6
1 2 ಕ್ರಿಸ್ತ ಯೇಸುವಿನ ಅಪೊಸ್ತಲನಾಗಿರುವ ಪೌಲನು ಬರೆಯುವ ಪತ್ರ. ನಾನು ದೇವರ ಇಷ್ಟಾನುಸಾರವಾಗಿ ಅಪೊಸ್ತಲನಾಗಿದ್ದೇನೆ. ಎಫೆಸ[* ಎಫೆಸ ಕೆಲವು ಪ್ರಾಚೀನ ಪತ್ರಿಕೆಗಳಲ್ಲಿ ಈ ಪದವು ಇಲ್ಲ. ] ಪಟ್ಟಣದಲ್ಲಿ ವಾಸವಾಗಿರುವ ಮತ್ತು ಕ್ರಿಸ್ತಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪರಿಶುದ್ಧ ದೇವಜನರಿಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. 3 ನಮ್ಮ ತಂದೆಯಾದ ದೇವರು ಮತ್ತು ಪ್ರಭುವಾದ ಯೇಸು ಕ್ರಿಸ್ತನು ನಿಮಗೆ ಕೃಪೆಯನ್ನೂ ಶಾಂತಿಯನ್ನೂ ದಯಪಾಲಿಸಲಿ. {#1ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು } ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಪರಲೋಕದಲ್ಲಿರುವ ಪ್ರತಿಯೊಂದು ಆಶೀರ್ವಾದಗಳನ್ನು ದೇವರು ನಮಗೆ ಕ್ರಿಸ್ತನಲ್ಲಿ ದಯಪಾಲಿಸಿದ್ದಾನೆ. 4 ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡನು. ತನ್ನ ಸನ್ನಿಧಿಯಲ್ಲಿ ನಾವು ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂಬುದು ಆತನ ಉದ್ದೇಶವಾಗಿತ್ತು. 5 ನಮ್ಮ ಮೇಲಿನ ಪ್ರೀತಿಯಿಂದ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ಆತನು ಆಗಲೇ ನಿರ್ಧರಿಸಿದ್ದನು. ಅದು ಆತನ ಚಿತ್ತವಾಗಿತ್ತು ಮತ್ತು ಆತನಿಗೆ ಮೆಚ್ಚಿಕೆಕರವಾಗಿತ್ತು. 6 ದೇವರ ಅದ್ಭುತವಾದ ಕೃಪೆಯಿಂದಾದ ಈ ನಿರ್ಧಾರವು ಆತನಿಗೆ ಸ್ತೋತ್ರವನ್ನು ಉಂಟುಮಾಡುತ್ತದೆ. ದೇವರು ಆ ಕೃಪೆಯನ್ನು ತನ್ನ ಪ್ರಿಯನಾದ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾನೆ. 7 ಕ್ರಿಸ್ತನ ರಕ್ತದ ಮೂಲಕವಾಗಿ ನಮಗೆ ಬಿಡುಗಡೆಯಾಯಿತು. ದೇವರ ಮಹಾ ಕೃಪೆಯಿಂದ ನಮ್ಮ ಪಾಪಗಳು ಕ್ಷಮಿಸಲ್ಪಟ್ಟವು. 8 ದೇವರು ನಮಗೆ ಆ ಕೃಪೆಯನ್ನು ಸಂಪೂರ್ಣವಾಗಿಯೂ ಉಚಿತವಾಗಿಯೂ ತೋರಿದನು. ದೇವರು ತನ್ನ ರಹಸ್ಯವಾದ ಯೋಜನೆಯನ್ನು ನಮಗೆ ತಿಳಿಸುವುದರ ಮೂಲಕ ನಮಗೆ ಸಂಪೂರ್ಣವಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಟ್ಟನು. 9 ಇದು ದೇವರ ಚಿತ್ತವಾಗಿತ್ತು. ಕ್ರಿಸ್ತನ ಮೂಲಕ ಇದನ್ನು ನೆರವೇರಿಸಲು ಆತನು ಯೋಜನೆ ಮಾಡಿದನು. 10 ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು. 11 ನಾವು ದೇವರ ಮಕ್ಕಳಾಗಿರಬೇಕೆಂದು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಳ್ಳಲಾಯಿತು. ನಾವು ತನ್ನ ಮಕ್ಕಳಾಗಿರಬೇಕೆಂದು ದೇವರು ತನ್ನ ಚಿತ್ತಾನುಸಾರವಾಗಿ ಮೊದಲೇ ಯೋಜನೆ ಮಾಡಿದ್ದನು. ತನ್ನ ನಿರ್ಧಾರ ಮತ್ತು ಇಷ್ಟಗಳಿಗನುಸಾರವಾಗಿ ಪ್ರತಿಯೊಂದನ್ನು ನೆರವೇರಿಸುವಾತನು ದೇವರೇ. 12 ಕ್ರಿಸ್ತನನ್ನು ನಿರೀಕ್ಷಿಸಿಕೊಂಡಿರುವವರಲ್ಲಿ ನಾವೇ ಮೊದಲಿಗರು. ದೇವರ ಮಹಿಮೆಗೆ ಸ್ತೋತ್ರವನ್ನು ಉಂಟುಮಾಡಬೇಕೆಂದೇ ನಮ್ಮನ್ನು ಆರಿಸಿಕೊಳ್ಳಲಾಯಿತು. 13 ಇದು ನಿಮಗೂ ಅನ್ವಯಿಸುತ್ತದೆ. ನೀವು ಸತ್ಯ ಬೋಧನೆಯ ಬಗ್ಗೆ ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯ ಬಗ್ಗೆ ಕೇಳಿದಾಗ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರಿ. ದೇವರು ತನ್ನ ವಾಗ್ದಾನಕ್ಕನುಸಾರವಾಗಿ ನಿಮಗೆ ಪವಿತ್ರಾತ್ಮನನ್ನು ದಯಪಾಲಿಸುವುದರ ಮೂಲಕ ನಿಮ್ಮ ಮೇಲೆ ತನ್ನ ವಿಶೇಷವಾದ ಮುದ್ರೆಯನ್ನು ಹಾಕಿದನು. 14 ದೇವರು ತನ್ನ ಜನರಿಗೆ ವಾಗ್ದಾನ ಮಾಡಿದವುಗಳನ್ನು ನಾವು ಹೊಂದಿಕೊಳ್ಳುತ್ತೇವೆ ಎಂಬುದಕ್ಕೆ ಆ ಪವಿತ್ರಾತ್ಮನೇ ಪ್ರಮಾಣವಾಗಿದ್ದಾನೆ. ದೇವರು ಸಂಪಾದಿಸಿಕೊಂಡ ಜನರಿಗೆ ಇದು ಸಂಪೂರ್ಣ ವಿಮೋಚನೆಯನ್ನು ಉಂಟುಮಾಡುತ್ತದೆ. ದೇವರ ಮಹಿಮೆಗೆ ಸ್ತೋತ್ರವಾಗ ಬೇಕೆಂಬುದೇ ಇದೆಲ್ಲದರ ಉದ್ದೇಶವಾಗಿದೆ. 15 {#1ಪೌಲನ ಪ್ರಾರ್ಥನೆ } (15-16)ಆದಕಾರಣವೇ ನನ್ನ ಪ್ರಾರ್ಥನೆಗಳಲ್ಲಿ ನಾನು ನಿಮ್ಮನ್ನು ಜ್ಞಾಪಿಸಿಕೊಂಡು ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಸ್ತೋತ್ರ ಸಲ್ಲಿಸುತ್ತೇನೆ. ಪ್ರಭುವಾದ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ ಮತ್ತು ಎಲ್ಲಾ ದೇವಜನರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದಂದಿನಿಂದ ನಾನು ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 16 17 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ಮಹಿಮಾ ಸ್ವರೂಪನಾದ ತಂದೆಯೂ ಆಗಿರುವಾತನಿಗೆ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ದೇವರ ಜ್ಞಾನದಿಂದ ಅಂದರೆ ಆತನು ನಿಮಗೆ ತಿಳಿಯಪಡಿಸಿದ ಜ್ಞಾನದಿಂದ ನಿಮ್ಮನ್ನು ವಿವೇಕಿಗಳನ್ನಾಗಿ ಮಾಡುವಂಥ ಆತ್ಮವನ್ನು ಆತನು ನಿಮಗೆ ಅನುಗ್ರಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. 18 ನೀವು ನಿಮ್ಮ ಹೃದಯದಲ್ಲಿ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಹೊಂದಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ನಾವು ಎಂಥ ನಿರೀಕ್ಷೆಯನ್ನು ಹೊಂದಿಕೊಳ್ಳಬೇಕೆಂದು ದೇವರು ನಮ್ಮನ್ನು ಆರಿಸಿಕೊಂಡನೆಂಬುದನ್ನು ಆಗ ತಿಳಿದುಕೊಳ್ಳುವಿರಿ; ಆತನು ತನ್ನ ಪರಿಶುದ್ಧ ಜನರಿಗೆ ವಾಗ್ದಾನ ಮಾಡಿದ ಆಶೀರ್ವಾದಗಳು ಎಷ್ಟು ಮಹಿಮಾತಿಶಯವಾಗಿವೆ ಎಂಬುದನ್ನು ತಿಳಿದುಕೊಳ್ಳುವಿರಿ. 19 ನಂಬಿಕೆಯಿಡುವಂಥ ನಮಗೆ ದೇವರ ಶಕ್ತಿಯು ಎಷ್ಟು ಮಹತ್ವವುಳ್ಳದ್ದಾಗಿದೆ ಎಂಬುದನ್ನೂ ಆಗ ನೀವು ತಿಳಿದುಕೊಳ್ಳುವಿರಿ. ಕ್ರಿಸ್ತನನ್ನು ಮರಣದಿಂದ ಜೀವಂತನಾಗಿ ಎಬ್ಬಿಸಲು ದೇವರು ಉಪಯೋಗಿಸಿದ ಮಹಾಶಕ್ತಿ ಅದೇ. 20 ದೇವರು ಕ್ರಿಸ್ತನನ್ನು ಪರಲೋಕದೊಳಗೆ ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. 21 ದೇವರು ಕ್ರಿಸ್ತನನ್ನು ಎಲ್ಲಾ ಅಧಿಪತಿಗಳಿಗಿಂತಲೂ ಅಧಿಕಾರಿಗಳಿಗಿಂತಲೂ ಶಕ್ತಿಗಳಿಗಿಂತಲೂ ರಾಜರುಗಳಿಗಿಂತಲೂ ಪ್ರಮುಖನನ್ನಾಗಿ ಮಾಡಿದನು. ಈ ಲೋಕದಲ್ಲಾಗಲಿ ಮುಂದಿನ ಲೋಕದಲ್ಲಾಗಲಿ ಕೊಡಲ್ಪಟ್ಟಿರುವ ಯಾವುದೇ ಹೆಸರುಳ್ಳವರಿಗಿಂತಲೂ ಕ್ರಿಸ್ತನು ಪ್ರಮುಖನಾಗಿದ್ದಾನೆ. 22 ದೇವರು ಪ್ರತಿಯೊಂದನ್ನು ಕ್ರಿಸ್ತನ ಅಧಿಕಾರಕ್ಕೆ ಒಳಪಡಿಸಿದನು. ಸಭೆಗೋಸ್ಕರವಾಗಿ ದೇವರು ಆತನನ್ನು ಪ್ರತಿಯೊಂದರ ಮೇಲೆ ಶಿರಸ್ಸನ್ನಾಗಿ ಮಾಡಿದನು. 23 ಸಭೆಯು ಕ್ರಿಸ್ತನ ದೇಹವಾಗಿದೆ. ಸಭೆಯು ಕ್ರಿಸ್ತನಿಂದ ಆವರಿಸಲ್ಪಟ್ಟಿದೆ. ಆತನು ಸಮಸ್ತವನ್ನು ಪ್ರತಿಯೊಂದು ವಿಷಯದಲ್ಲಿಯೂ ಸಂಪೂರ್ಣಗೊಳಿಸುತ್ತಾನೆ.
మొత్తం 6 అధ్యాయాలు, ఎంపిక చేయబడింది అధ్యాయము 1 / 6
1 2 3 4 5 6
×

Alert

×

Telugu Letters Keypad References