1. {#1ಹಿಂತಿರುಗಿಹೋದ ಸೆರೆಯವರು } [PS]ಸೆರೆಯಿಂದ ಮರಳಿಬಂದ ಸಂಸ್ಥಾನದವರ ವಿವರ, ಬಹಳ ವರ್ಷಗಳ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದಿದ್ದನು. ಇವರು ಜೆರುಸಲೇಮಿಗೆ ಹಿಂತಿರುಗಿ ಬಂದು ಎಲ್ಲರೂ ತಮ್ಮತಮ್ಮ ಸ್ವಂತ ಊರುಗಳಿಗೆ ಹೊರಟು ಹೋದರು.
2. ಜೆರುಬ್ಬಾಬೆಲನೊಂದಿಗೆ ಹಿಂತಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ. ಇಸ್ರೇಲರಲ್ಲಿ ಹಿಂತಿರುಗಿ ಬಂದವರ ಹೆಸರು ಮತ್ತು ಸಂಖ್ಯೆ: [PE][PBR]
3. [LS] ಪರೋಷಿನ ಸಂತತಿಯವರು 2,172 [LE]
4. [LS] ಶೆಫಟ್ಯನ ಸಂತತಿಯವರು 372 [LE]
5. [LS] ಅರಹನ ಸಂತತಿಯವರು 775 [LE]
6. [LS] ಯೇಷೂವ ಮತ್ತು ಯೋವಾಬನ ಕುಟುಂಬದ ಪಹತ್ ಮೋವಾಬಿನ ಸಂತತಿಯವರು 2,812 [LE]
7. [LS] ಏಲಾಮಿನ ಸಂತತಿಯವರು 1,254 [LE]
8. [LS] ಜತ್ತೂವಿನ ಸಂತತಿಯವರು 945 [LE]
9. [LS] ಜಕ್ಕೈಯ ಸಂತತಿಯವರು 760 [LE]
10. [LS] ಬಾನೀಯ ಸಂತತಿಯವರು 642 [LE]
11. [LS] ಬೇಬೈಯ ಸಂತತಿಯವರು 623 [LE]
12. [LS] ಅಜ್ಗಾದಿನ ಸಂತತಿಯವರು 1,222 [LE]
13. [LS] ಅದೋನೀಕಾಮನ ಸಂತತಿಯವರು 666 [LE]
14. [LS] ಬಿಗ್ವೈಯ ಸಂತತಿಯವರು 2,056 [LE]
15. [LS] ಆದೀನನ ಸಂತತಿಯವರು 454 [LE]
16. [LS] ಆಟೇರಿನವರಾದ ಹಿಜ್ಕೀಯನ ಸಂತತಿಯವರು 98 [LE]
17. [LS] ಬೇಚೈಯ ಸಂತತಿಯವರು 323 [LE]
18. [LS] ಯೋರನ ಸಂತತಿಯವರು 112 [LE]
19. [LS] ಹಾಷುಮಿನ ಸಂತತಿಯವರು 223 [LE]
20. [LS] ಗಿಬ್ಬಾರಿನ ಸಂತತಿಯವರು 95 [LE]
21. [LS] ಬೆತ್ಲೆಹೇಮಿನ ಊರಿನವರು 123 [LE]
22. [LS] ನೆಟೋಫ ಊರಿನವರು 56 [LE]
23. [LS] ಅನಾತೋತ್ ಊರಿನವರು 128 [LE]
24. [LS] ಅಜ್ಮಾವೆತ್ ಊರಿನವರು 42 [LE]
25. [LS] ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743 [LE]
26. [LS] ರಾಮಾ ಮತ್ತು ಗೆಬ ಊರುಗಳವರು 621 [LE]
27. [LS] ಮಿಕ್ಮಾಸಿನವರು 122 [LE]
28. [LS] ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223 [LE]
29. [LS] ನೆಬೋ ಊರಿನವರು 52 [LE]
30. [LS] ಮಗ್ಬೀಷ್ ಊರಿನವರು 156 [LE]
31. [LS] ಏಲಾಮ್ ಎಂಬ ಮತ್ತೊಂದು ಊರಿನವರು 1,254 [LE]
32. [LS] ಹಾರಿಮ್ ಊರಿನವರು 320 [LE]
33. [LS] ಲೋದ್, ಹಾದೀದ್, ಓನೋ ಊರುಗಳವರು 725 [LE]
34. [LS] ಜೆರಿಕೊ ಊರಿನವರು 345 [LE]
35. [LS] ಸೆನಾಹ ಊರಿನವರು 3,630 [LE][PBR]
36. [MS] ಯಾಜಕರು ಯಾರೆಂದರೆ: [ME][LS]ಯೇಷೂವನ ಕುಟುಂಬಕ್ಕೆ ಸೇರಿದ ಯೆದಾಯನ ಸಂತತಿಯವರು 973 [LE]
37. [LS] ಇಮ್ಮೇರನ ಸಂತತಿಯವರು 1,052 [LE]
38. [LS] ಪಷ್ಹೂರನ ಸಂತತಿಯವರು 1,247 [LE]
39. [LS] ಹಾರಿಮನ ಸಂತತಿಯವರು 1,017 [LE][PBR]
40. [MS] ಲೇವಿ ಕುಲದವರು ಯಾರೆಂದರೆ: [ME][LS]ಹೋದವ್ಯನ ಕುಟುಂಬಕ್ಕೆ ಸೇರಿದ ಯೇಷೂವ ಮತ್ತು ಕದ್ಮೀಯೇಲರ ಸಂತತಿಯವರು 74 [LE][PBR]
41. [MS] ಗಾಯಕರು ಯಾರೆಂದರೆ: [ME][LS]ಆಸಾಫನ ಸಂತತಿಯವರು 128 [LE][PBR]
42. [MS] ದ್ವಾರಪಾಲಕರು ಯಾರೆಂದರೆ: [ME][LS]ಶಲ್ಲೂಮ್, ಅಟೇರ್, ಟಲ್ಮೋನ್, ಅಕ್ಕೂಬ್, ಹಟೀಟ್ ಮತ್ತು ಶೋಬೈ. ಇವರ ಸಂತತಿಯರು ಒಟ್ಟು 139 [LE][PBR]
43. [MS] ದೇವಾಲಯದ ವಿಶೇಷ ಸೇವಕರು ಯಾರೆಂದರೆ: [ME][LS]ಜೀಹ, ಹಸೂಫ, ಟಬ್ಬಾವೋತ್, [LE]
44. [LS] ಕೇರೋಸ್, ಸೀಯಹಾ, ಪಾದೋನ್, [LE]
45. [LS] ಲೆಬಾನ, ಹಗಾಬ, ಅಕ್ಕೂಬ್, [LE]
46. [LS] ಹಾಗಾಬ್, ಶೆಮ್ಲೈ, ಹಾನಾನ್, [LE]
47. [LS] ಗಿದ್ದೇಲ್, ಗಹರ್, ರೆವಾಯ, [LE]
48. [LS] ರೆಚೀನ್, ನೆಕೋದ, ಗಜ್ಜಾಮ್, [LE]
49. [LS] ಉಜ್ಜ, ಪಾಸೇಹ, ಬೇಸೈ, [LE]
50. [LS] ಅಸ್ನ, ಮೆಗೂನೀಮ್, ನೆಫೀಸೀಮ್, [LE]
51. [LS] ಬಕ್ಬೂಕ್, ಹಕ್ಕೂಫ, ಹರ್ಹೂರ್, [LE]
52. [LS] ಬಚ್ಲೂತ್, ಮೆಹೀದ, ಹರ್ಷ, [LE]
53. [LS] ಬರ್ಕೋಸ್, ಸೀಸೆರ, ತೆಮಹ, [LE]
54. [LS] ನೆಚೀಹ, ಹಟೀಫ ಇವರ ಸಂತತಿಯವರು. [LE][PBR]
55. [MS] ಸೊಲೊಮೋನನ ಸೇವಕರ ಸಂತತಿಯವರು: [ME][LS]ಸೋಟೈ, ಹಸ್ಸೋಫೆರೆತ್, ಪೆರೂಧ, [LE]
56. [LS] ಯಾಲ, ದರ್ಕೋನ್, ಗಿದ್ದೇಲ್, [LE]
57. [LS] ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೀ ಇವರ ಸಂತತಿಯವರು. [LE]
58. [LS] ದೇವಾಲಯದ ಎಲ್ಲಾ ಸೇವಕರೂ ಸೊಲೊಮೋನನ ಸೇವಕರೂ ಒಟ್ಟು ಸೇರಿ 392 [LE][PBR]
59. (59-60) [MS] ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಕೆಲವರು ಬಂದರು. ಇವರ ಕುಟುಂಬಗಳು ಇಸ್ರೇಲ್ ಕುಟುಂಬಕ್ಕೆ ಸೇರಿದವುಗಳಾಗಿವೆ ಎಂದು ರುಜುವಾತುಪಡಿಸಲು ಇವರಿಗೆ ಸಾಧ್ಯವಾಗಲಿಲ್ಲ. ಅವರು ಯಾರೆಂದರೆ: [ME][PBR] [LS]ದೆಲಾಯ, ಟೋಬೀಯ ಮತ್ತು ನೆಕೋದನ ಸಂತತಿಯವರು 652 [LE][PBR]
60.
61. [MS] ಯಾಜಕರಾದ ಹಬಯ್ಯ, ಹಕ್ಕೋಜ್, ಬರ್ಜಿಲ್ಲೈ ಇವರ ಸಂತತಿಯವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.) [ME][PBR]
62. [PS]ಇವರು ಹುಡುಕಿದರೂ ತಮ್ಮ ವಂಶಾವಳಿ ಪತ್ರವನ್ನು ಕಂಡುಕೊಳ್ಳಲಾಗಲಿಲ್ಲ. ಆದ್ದರಿಂದ ಇವರು ಅಶುದ್ಧರೆಂದು ಪರಿಗಣಿಸಲ್ಪಟ್ಟು ಯಾಜಕತ್ವದಿಂದ ತಳ್ಳಲ್ಪಟ್ಟರು.
63. ಊರೀಮ್ ತುಮ್ಮೀಮ್‌ಗಳ ಮೂಲಕ ದೇವರ ಚಿತ್ತವನ್ನು ತಿಳಿಯಲು ಶಕ್ತನಾದ ಯಾಜಕನು ದೊರಕುವ ತನಕ ಇವರು ದೇವರಿಗೆ ಅರ್ಪಿಸಿದ್ದ ಪರಿಶುದ್ಧ ಆಹಾರವನ್ನು ತಿನ್ನಬಾರದೆಂದು ದೇಶಾಧಿಪತಿಯು ಆಜ್ಞಾಪಿಸಿದನು. [PE]
64. [PS](64-65)ಹೀಗೆ ಒಟ್ಟು ನಲವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿ ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. ಇವರಲ್ಲಿನ ಅವರ ಏಳು ಸಾವಿರದ ಮುನ್ನೂರ ಮೂವತ್ತೇಳು ಸೇವಕಸೇವಕಿಯರನ್ನು ಸೇರಿಸಲಿಲ್ಲ. ಇವರೊಂದಿಗೆ ಇನ್ನೂರು ಮಂದಿ ಗಾಯಕಗಾಯಕಿಯರೂ ಇದ್ದರು.
65.
66. (66-67)ಅವರ ಬಳಿಯಲ್ಲಿ ಏಳುನೂರ ಮೂವತ್ತಾರು ಕುದುರೆಗಳು, ಇನ್ನೂರ ನಲವತ್ತೈದು ಹೇಸರಕತ್ತೆಗಳು, ನಾನೂರ ಮೂವತ್ತೈದು ಒಂಟೆಗಳು ಮತ್ತು ಆರು ಸಾವಿರದ ಏಳುನೂರ ಇಪ್ಪತ್ತು ಕತ್ತೆಗಳೂ ಇದ್ದವು. [PE]
67.
68. [PS]ಈ ಗುಂಪು ಜೆರುಸಲೇಮಿನಲ್ಲಿದ್ದ ದೇವಾಲಯದ ಬಳಿ ಬಂದಾಗ ಆ ದೇವಾಲಯವನ್ನು ಮತ್ತೆ ನಿರ್ಮಿಸಲು ಕುಟುಂಬದ ನಾಯಕರುಗಳು ತಮ್ಮತಮ್ಮ ಕಾಣಿಕೆಗಳನ್ನು ಕೊಟ್ಟರು. ಕೆಡವಲ್ಪಟ್ಟಿದ್ದ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ಕಟ್ಟಲು ಪ್ರಾರಂಭಿಸುವರು.
69. ದೇವಾಯಲ ಕಟ್ಟಲು ಅವರು ತಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ಕೊಟ್ಟರು. ಒಟ್ಟು ಐನೂರು ಕಿಲೋಗ್ರಾಂ ಬಂಗಾರ, ಮೂರು ಸಾವಿರ ಕಿಲೋಗ್ರಾಂ ಬೆಳ್ಳಿ, ನೂರು ಯಾಜಕರು ಧರಿಸಬೇಕಾದ ಬಟ್ಟೆಗಳನ್ನು ದಾನ ಮಾಡಿದರು. [PE]
70. [PS]ಅವರಲ್ಲಿದ್ದ ಯಾಜಕರು, ಲೇವಿಯರು ಮತ್ತು ಇನ್ನಿತರರು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದರು. ಇವರೊಳಗೆ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಉಳಿದ ಇಸ್ರೇಲ್ ಜನರು ತಮ್ಮತಮ್ಮ ಊರುಗಳಲ್ಲಿ ವಾಸಿಸಿದರು. [PE]