పవిత్ర బైబిల్

ఈజీ టు రీడ్ వెర్షన్ (ERV) - తెలుగు
యెషయా గ్రంథము
1. {#1ಯೆಹೋವನು ತನ್ನ ಜನರಿಗೆ ನ್ಯಾಯತೀರಿಸುವನು } [QS]ಎದೋಮಿನಿಂದ ಬರುತ್ತಿರುವ ಇವನು ಯಾರು? [QE][QS2]ಅವನು ಬೊಜ್ರದಿಂದ ಬರುತ್ತಿದ್ದಾನೆ. [QE][QS]ಆತನ ಬಟ್ಟೆಯು ಕಡುಕೆಂಪು ಬಣ್ಣದಿಂದ ತುಂಬಿದೆ. [QE][QS2]ತನ್ನ ಬಟ್ಟೆಯಲ್ಲಿ ಆತನು ಮಹಿಮಾಸ್ವರೂಪನಾಗಿ ಕಾಣುತ್ತಿದ್ದಾನೆ. [QE][QS]ಆತನು ತನ್ನ ಬಲಸಾಮರ್ಥ್ಯಗಳಿಂದಾಗಿ ನೇರವಾಗಿ ನಡೆಯುತ್ತಿದ್ದಾನೆ. [QE][QS2]ಆತನು, “ನಾನು ಸತ್ಯವನ್ನೇ ಹೇಳುತ್ತೇನೆ, [QE][QS2]ನಿನ್ನನ್ನು ರಕ್ಷಿಸಲು ನನಗೆ ಸಾಮರ್ಥ್ಯ ಉಂಟು” ಎಂದು ಹೇಳುವನು. [QE][PBR]
2. [QS]“ನಿನ್ನ ಬಟ್ಟೆ ಕಡುಕೆಂಪಾಗಲು ಕಾರಣವೇನು? [QE][QS2]ದ್ರಾಕ್ಷಿಹಣ್ಣುಗಳನ್ನು ತುಳಿದು ರಸ ತೆಗೆಯುವವನ ಬಟ್ಟೆಯಂತೆ ಅವು ಇವೆ.” [QE][PBR]
3. [QS]ಅವನ ಉತ್ತರ: “ದ್ರಾಕ್ಷಿತೊಟ್ಟಿಯಲ್ಲಿ ನಾನೊಬ್ಬನೇ ತುಳಿದೆನು. [QE][QS2]ಯಾರೂ ನನಗೆ ಸಹಾಯ ಮಾಡಲಿಲ್ಲ. [QE][QS]ನಾನು ಕೋಪಗೊಂಡು ದ್ರಾಕ್ಷಿಹಣ್ಣಿನ ಮೇಲೆ ತುಳಿದೆನು. [QE][QS2]ಅದರ ರಸ ನನ್ನ ಬಟ್ಟೆಯ ಮೇಲೆ ಹಾರಿತು. ಆದ್ದರಿಂದ ನನ್ನ ಬಟ್ಟೆಗಳು ಮಲಿನವಾದವು. [QE]
4. [QS]ಜನರನ್ನು ಶಿಕ್ಷಿಸಲು ನಾನೊಂದು ಸಮಯವನ್ನು ನಿಗದಿ ಮಾಡಿರುತ್ತೇನೆ. [QE][QS2]ಈಗ ನನ್ನ ಜನರನ್ನು ರಕ್ಷಿಸಿ ಕಾಪಾಡುವ ಸಮಯ ಬಂದಿದೆ. [QE]
5. [QS]ನಾನು ಸುತ್ತಲೂ ನೋಡಿದಾಗ ನನಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. [QE][QS2]ನನ್ನನ್ನು ಯಾರೂ ಬೆಂಬಲಿಸದೆ ಇರುವದನ್ನು ನೋಡಿ ನನಗೆ ಆಶ್ಚರ್ಯವಾಯಿತು. [QE][QS]ಆಗ ನನ್ನ ಜನರನ್ನು ರಕ್ಷಿಸಲು ನನ್ನ ಬಲವನ್ನೇ ಪ್ರಯೋಗಿಸಿದೆನು. [QE][QS2]ನನ್ನ ಕೋಪವೇ ನನ್ನನ್ನು ಬಲಪಡಿಸಿತು. [QE]
6. [QS]ನಾನು ಕೋಪಗೊಂಡಾಗ ಜನಾಂಗಗಳ ಮೇಲೆ ತುಳಿದಾಡಿದೆನು. [QE][QS2]ನಾನು ಸಿಟ್ಟುಗೊಂಡಾಗ ಅವರನ್ನು ಶಿಕ್ಷಿಸಿದೆನು. ಅವರ ರಕ್ತವನ್ನು ನೆಲದ ಮೇಲೆ ಚೆಲ್ಲಿದೆನು.” [QE]
7. {#1ಯೆಹೋವನು ತನ್ನ ಜನರಿಗೆ ಕರುಣೆತೋರುವನು } [QS]ಯೆಹೋವನು ಕರುಣಾಶೀಲನೆಂಬುದನ್ನು ನೆನಪು ಮಾಡಿಕೊಳ್ಳುವೆನು. [QE][QS2]ಆತನನ್ನು ಸ್ತುತಿಸಲು ನೆನಪುಮಾಡಿಕೊಳ್ಳುವೆನು. [QE][QS]ಇಸ್ರೇಲ್ ಕುಟುಂಬಕ್ಕೆ ಯೆಹೋವನು ಎಷ್ಟೋ ಮೇಲನ್ನು ಮಾಡಿದ್ದಾನೆ. [QE][QS]ನಮ್ಮ ಮೇಲೆ ಯೆಹೋವನು ತನ್ನ ದಯೆಯನ್ನು ಸುರಿಸಿದ್ದಾನೆ. [QE][QS2]ನಮಗೆ ಕರುಣೆಯನ್ನು ತೋರಿಸಿದ್ದಾನೆ. [QE]
8. [QS]ಯೆಹೋವನು ಹೇಳಿದ್ದೇನೆಂದರೆ: “ಇವರೇ ನನ್ನ ಜನರು. [QE][QS2]ಇವರೆಲ್ಲಾ ನನ್ನ ಸ್ವಂತ ಮಕ್ಕಳು.” [QE][QS]ಆದ್ದರಿಂದ ಯೆಹೋವನು ಅವರನ್ನು ರಕ್ಷಿಸಿದ್ದಾನೆ. [QE]
9. [QS]ಜನರಿಗೆ ಅನೇಕ ತೊಂದರೆಗಳು ಪ್ರಾಪ್ತವಾಗಿದ್ದವು. [QE][QS2]ಆದರೆ ಯೆಹೋವನು ಅವರಿಗೆ ವಿರುದ್ಧನಾಗಿರಲಿಲ್ಲ. [QE][QS]ಆತನು ಅವರನ್ನು ಪ್ರೀತಿಸಿ ಅವರಿಗಾಗಿ ಚಿಂತಿಸಿದನು; [QE][QS2]ತನ್ನ ವಿಶೇಷ ದೂತನನ್ನು ಕಳುಹಿಸಿ ಅವರನ್ನು ರಕ್ಷಿಸಿದನು. [QE][QS]ಯೆಹೋವನು ಅವರನ್ನು ನಿತ್ಯಕಾಲಕ್ಕೂ ಸಲಹುವನು. [QE][QS2]ತನ್ನ ಜನರಿಗೆ ಯೆಹೋವನು ಸಲಹುವದನ್ನು ನಿಲ್ಲಿಸಲಿಲ್ಲ. [QE]
10. [QS]ಆದರೆ ಜನರು ಯೆಹೋವನಿಗೆ ವಿರುದ್ಧವಾಗಿ ಎದ್ದರು. [QE][QS2]ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. [QE][QS]ಯೆಹೋವನು ಅವರ ಶತ್ರುವಾಗಿ ಪರಿಣಮಿಸಿದನು. [QE][QS2]ಅಂಥಾ ಜನರಿಗೆ ವಿರುದ್ಧವಾಗಿ ಯೆಹೋವನು ಯುದ್ಧಮಾಡಿದನು. [QE][PBR]
11. [QS]ಆದರೆ ಯೆಹೋವನು ಬಹಳ ಕಾಲದ ಹಿಂದೆ ನಡೆದುದನ್ನು ಇನ್ನೂ ಜ್ಞಾಪಕದಲ್ಲಿಟ್ಟುಕೊಂಡಿದ್ದಾನೆ. [QE][QS2]ಆತನು ಮೋಶೆಯನ್ನೂ ಅವನ ಜನರನ್ನೂ ನೆನಪುಮಾಡಿಕೊಳ್ಳುತ್ತಾನೆ. [QE][QS]ಆ ಜನರನ್ನು ಸಮುದ್ರದ ಮೂಲಕ ಬರಮಾಡಿದವನು ಯೆಹೋವನೇ. [QE][QS2]ಆತನು ತನ್ನ ಕುರಿಮಂದೆಯನ್ನು ನಡೆಸಲು ತನ್ನ ಕುರುಬರನ್ನು ಉಪಯೋಗಿಸಿದನು. [QE][QS2]ಆದರೆ ಈಗ ಯೆಹೋವನೆಲ್ಲಿ? [QE][QS]ಮೋಶೆಯಲ್ಲಿ ತನ್ನ ಪವಿತ್ರಾತ್ಮನನ್ನು ಇಟ್ಟ ಯೆಹೋವನೆಲ್ಲಿ? [QE]
12. [QS]ಯೆಹೋವನು ಮೋಶೆಯನ್ನು ತನ್ನ ಬಲವಾದ ಹಸ್ತದಿಂದ ನಡೆಸಿದನು. [QE][QS2]ತನ್ನ ಅದ್ಭುತ ಶಕ್ತಿಯಿಂದ ಮೋಶೆಯನ್ನು ನಡೆಸಿದನು. [QE][QS]ತನ್ನ ಜನರು ಸಮುದ್ರದೊಳಗಿಂದ ನಡೆದುಹೋಗಲೆಂದು ಯೆಹೋವನು ಸಮುದ್ರವನ್ನು ಇಬ್ಭಾಗ ಮಾಡಿದನು. [QE][QS2]ಅಂಥಾ ಅದ್ಭುತಕಾರ್ಯಗಳ ನಿಮಿತ್ತ ತನ್ನ ಹೆಸರನ್ನು ಪ್ರಸಿದ್ಧಿಪಡಿಸಿದನು. [QE]
13. [QS]ಆಳವಾದ ಸಮುದ್ರದೊಳಗಿಂದ ಯೆಹೋವನು ತನ್ನ ಜನರನ್ನು ನಡೆಸಿದನು. [QE][QS2]ಕುದುರೆಯು ಮರುಭೂಮಿಯಲ್ಲಿ ನಡೆಯುವಂತೆ [QE][QS2]ಜನರು ಎಡವಿಬೀಳದೆ ನಡೆದರು. [QE]
14. [QS]ಹೊಲದಲ್ಲಿ ನಡೆಯುತ್ತಿರುವಾಗ ಒಂದು ದನವೂ ಬೀಳಲಿಲ್ಲ. [QE][QS2]ಅದೇ ರೀತಿಯಲ್ಲಿ ಸಮುದ್ರದ ಮಧ್ಯದಲ್ಲಿ ನಡೆಯುವಾಗ ಅವರು ಬೀಳಲಿಲ್ಲ. [QE][QS]ವಿಶ್ರಾಂತಿಯ ಸ್ಥಳಕ್ಕೆ ಯೆಹೋವನ ಆತ್ಮವು ಅವರನ್ನು ನಡೆಸಿತು. [QE][QS2]ದಾರಿಯುದ್ದಕ್ಕೂ ಜನರು ಸುರಕ್ಷಿತರಾಗಿದ್ದರು. [QE][QS]ಯೆಹೋವನೇ, ಹೀಗೆ ನೀನು ನಿನ್ನ ಜನರನ್ನು ನಡೆಸಿದೆ. [QE][QS2]ಹೀಗೆ ನೀನು ನಿನ್ನ ಹೆಸರನ್ನು ಆಶ್ಚರ್ಯಕರವನ್ನಾಗಿ ಮಾಡಿರುವೆ. [QE]
15. {#1ಸಹಾಯಕ್ಕಾಗಿ ದೇವರಿಗೆ ಪ್ರಾರ್ಥನೆ } [QS]ಯೆಹೋವನೇ, ಈಗ ನಡೆಯುವ ಸಂಗತಿಗಳನ್ನು [QE][QS2]ಪರಲೋಕದಿಂದ ನೋಡು. [QE][QS]ಪರಲೋಕದಲ್ಲಿರುವ ನಿನ್ನ ಪವಿತ್ರಸ್ಥಾನದಿಂದ ನಮ್ಮನ್ನು ದೃಷ್ಟಿಸು. [QE][QS2]ನಮ್ಮ ಮೇಲಿನ ಗಾಢವಾದ ಪ್ರೀತಿ ಎಲ್ಲಿದೆ? [QE][QS2]ನಿನ್ನ ಅಂತರಂಗದೊಳಗಿಂದ ಬಂದ ಕಾರ್ಯಗಳೆಲ್ಲಿ? [QE][QS2]ನಮ್ಮ ಮೇಲೆ ನಿನಗಿರುವ ಕರುಣೆ ಎಲ್ಲಿ? [QE][QS2]ನಿನ್ನ ದಯಾಪರವಾದ ಪ್ರೀತಿಯನ್ನು ನಮ್ಮಿಂದ ಯಾಕೆ ಅಡಗಿಸುವೆ? [QE]
16. [QS]ನೀನು ನಮ್ಮ ತಂದೆಯಾಗಿರುವೆ. [QE][QS2]ಅಬ್ರಹಾಮನಿಗೆ ನಮ್ಮ ಪರಿಚಯವಿಲ್ಲ. [QE][QS2]ಇಸ್ರೇಲನು ನಮ್ಮನ್ನು ಗುರುತಿಸುವುದಿಲ್ಲ. [QE][QS]ಯೆಹೋವನೇ, ನೀನೇ ನಮ್ಮ ತಂದೆ. [QE][QS2]ನೀನೇ ನಮ್ಮನ್ನು ಯಾವಾಗಲೂ ರಕ್ಷಿಸಿದಾತನು. [QE]
17. [QS]ಯೆಹೋವನೇ, ನೀನು ನಮ್ಮನ್ನು ನಿನ್ನಿಂದ ದೂರ ಮಾಡಿರುವೆ. [QE][QS2]ನಾವು ನಿನ್ನನ್ನು ಹಿಂಬಾಲಿಸಬೇಕೆಂದರೂ ಹಾಗೆ ಆಗದಂತೆ ಅದನ್ನೇಕೆ ಕಷ್ಟಕರವಾಗಿ ಮಾಡಿರುವೆ? [QE][QS]ಯೆಹೋವನೇ, ನಮ್ಮ ಬಳಿಗೆ ಹಿಂದಿರುಗಿ ಬಾ. [QE][QS2]ನಾವು ನಿನ್ನ ಸೇವಕರಾಗಿದ್ದೇವೆ. [QE][QS]ನಮ್ಮ ಬಳಿಗೆ ಬಂದು ಸಹಾಯಮಾಡು. [QE][QS2]ನಮ್ಮ ಕುಟುಂಬಗಳು ನಿನ್ನವೇ. [QE]
18. [QS]ನಿನ್ನ ಪವಿತ್ರ ಜನರು ತಮ್ಮ ದೇಶದಲ್ಲಿ ಸ್ವಲ್ಪಕಾಲಕ್ಕೆ ಮಾತ್ರ ವಾಸಿಸಿದರು. [QE][QS2]ಆಗ ನಮ್ಮ ಶತ್ರುಗಳು ಬಂದು ನಿನ್ನ ಪವಿತ್ರ ಆಲಯದಲ್ಲಿ ತುಳಿದಾಡಿದರು. [QE]
19. [QS]ಕೆಲವರು ನಿನ್ನನ್ನು ಅನುಸರಿಸುವದಿಲ್ಲ. [QE][QS2]ಅವರು ನಿನ್ನ ಹೆಸರಿನಿಂದ ಕರೆಯಲ್ಪಡುವದಿಲ್ಲ. [QE][QS2]ನಾವು ಅವರಂತೆ ಇದ್ದೆವು. [QE][PBR]
మొత్తం 66 అధ్యాయాలు, ఎంపిక చేయబడింది అధ్యాయము 63 / 66
1 {#1ಯೆಹೋವನು ತನ್ನ ಜನರಿಗೆ ನ್ಯಾಯತೀರಿಸುವನು } ಎದೋಮಿನಿಂದ ಬರುತ್ತಿರುವ ಇವನು ಯಾರು? ಅವನು ಬೊಜ್ರದಿಂದ ಬರುತ್ತಿದ್ದಾನೆ. ಆತನ ಬಟ್ಟೆಯು ಕಡುಕೆಂಪು ಬಣ್ಣದಿಂದ ತುಂಬಿದೆ. ತನ್ನ ಬಟ್ಟೆಯಲ್ಲಿ ಆತನು ಮಹಿಮಾಸ್ವರೂಪನಾಗಿ ಕಾಣುತ್ತಿದ್ದಾನೆ. ಆತನು ತನ್ನ ಬಲಸಾಮರ್ಥ್ಯಗಳಿಂದಾಗಿ ನೇರವಾಗಿ ನಡೆಯುತ್ತಿದ್ದಾನೆ. ಆತನು, “ನಾನು ಸತ್ಯವನ್ನೇ ಹೇಳುತ್ತೇನೆ, ನಿನ್ನನ್ನು ರಕ್ಷಿಸಲು ನನಗೆ ಸಾಮರ್ಥ್ಯ ಉಂಟು” ಎಂದು ಹೇಳುವನು. 2 “ನಿನ್ನ ಬಟ್ಟೆ ಕಡುಕೆಂಪಾಗಲು ಕಾರಣವೇನು? ದ್ರಾಕ್ಷಿಹಣ್ಣುಗಳನ್ನು ತುಳಿದು ರಸ ತೆಗೆಯುವವನ ಬಟ್ಟೆಯಂತೆ ಅವು ಇವೆ.” 3 ಅವನ ಉತ್ತರ: “ದ್ರಾಕ್ಷಿತೊಟ್ಟಿಯಲ್ಲಿ ನಾನೊಬ್ಬನೇ ತುಳಿದೆನು. ಯಾರೂ ನನಗೆ ಸಹಾಯ ಮಾಡಲಿಲ್ಲ. ನಾನು ಕೋಪಗೊಂಡು ದ್ರಾಕ್ಷಿಹಣ್ಣಿನ ಮೇಲೆ ತುಳಿದೆನು. ಅದರ ರಸ ನನ್ನ ಬಟ್ಟೆಯ ಮೇಲೆ ಹಾರಿತು. ಆದ್ದರಿಂದ ನನ್ನ ಬಟ್ಟೆಗಳು ಮಲಿನವಾದವು. 4 ಜನರನ್ನು ಶಿಕ್ಷಿಸಲು ನಾನೊಂದು ಸಮಯವನ್ನು ನಿಗದಿ ಮಾಡಿರುತ್ತೇನೆ. ಈಗ ನನ್ನ ಜನರನ್ನು ರಕ್ಷಿಸಿ ಕಾಪಾಡುವ ಸಮಯ ಬಂದಿದೆ. 5 ನಾನು ಸುತ್ತಲೂ ನೋಡಿದಾಗ ನನಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. ನನ್ನನ್ನು ಯಾರೂ ಬೆಂಬಲಿಸದೆ ಇರುವದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆಗ ನನ್ನ ಜನರನ್ನು ರಕ್ಷಿಸಲು ನನ್ನ ಬಲವನ್ನೇ ಪ್ರಯೋಗಿಸಿದೆನು. ನನ್ನ ಕೋಪವೇ ನನ್ನನ್ನು ಬಲಪಡಿಸಿತು. 6 ನಾನು ಕೋಪಗೊಂಡಾಗ ಜನಾಂಗಗಳ ಮೇಲೆ ತುಳಿದಾಡಿದೆನು. ನಾನು ಸಿಟ್ಟುಗೊಂಡಾಗ ಅವರನ್ನು ಶಿಕ್ಷಿಸಿದೆನು. ಅವರ ರಕ್ತವನ್ನು ನೆಲದ ಮೇಲೆ ಚೆಲ್ಲಿದೆನು.” 7 {#1ಯೆಹೋವನು ತನ್ನ ಜನರಿಗೆ ಕರುಣೆತೋರುವನು } ಯೆಹೋವನು ಕರುಣಾಶೀಲನೆಂಬುದನ್ನು ನೆನಪು ಮಾಡಿಕೊಳ್ಳುವೆನು. ಆತನನ್ನು ಸ್ತುತಿಸಲು ನೆನಪುಮಾಡಿಕೊಳ್ಳುವೆನು. ಇಸ್ರೇಲ್ ಕುಟುಂಬಕ್ಕೆ ಯೆಹೋವನು ಎಷ್ಟೋ ಮೇಲನ್ನು ಮಾಡಿದ್ದಾನೆ. ನಮ್ಮ ಮೇಲೆ ಯೆಹೋವನು ತನ್ನ ದಯೆಯನ್ನು ಸುರಿಸಿದ್ದಾನೆ. ನಮಗೆ ಕರುಣೆಯನ್ನು ತೋರಿಸಿದ್ದಾನೆ. 8 ಯೆಹೋವನು ಹೇಳಿದ್ದೇನೆಂದರೆ: “ಇವರೇ ನನ್ನ ಜನರು. ಇವರೆಲ್ಲಾ ನನ್ನ ಸ್ವಂತ ಮಕ್ಕಳು.” ಆದ್ದರಿಂದ ಯೆಹೋವನು ಅವರನ್ನು ರಕ್ಷಿಸಿದ್ದಾನೆ. 9 ಜನರಿಗೆ ಅನೇಕ ತೊಂದರೆಗಳು ಪ್ರಾಪ್ತವಾಗಿದ್ದವು. ಆದರೆ ಯೆಹೋವನು ಅವರಿಗೆ ವಿರುದ್ಧನಾಗಿರಲಿಲ್ಲ. ಆತನು ಅವರನ್ನು ಪ್ರೀತಿಸಿ ಅವರಿಗಾಗಿ ಚಿಂತಿಸಿದನು; ತನ್ನ ವಿಶೇಷ ದೂತನನ್ನು ಕಳುಹಿಸಿ ಅವರನ್ನು ರಕ್ಷಿಸಿದನು. ಯೆಹೋವನು ಅವರನ್ನು ನಿತ್ಯಕಾಲಕ್ಕೂ ಸಲಹುವನು. ತನ್ನ ಜನರಿಗೆ ಯೆಹೋವನು ಸಲಹುವದನ್ನು ನಿಲ್ಲಿಸಲಿಲ್ಲ. 10 ಆದರೆ ಜನರು ಯೆಹೋವನಿಗೆ ವಿರುದ್ಧವಾಗಿ ಎದ್ದರು. ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. ಯೆಹೋವನು ಅವರ ಶತ್ರುವಾಗಿ ಪರಿಣಮಿಸಿದನು. ಅಂಥಾ ಜನರಿಗೆ ವಿರುದ್ಧವಾಗಿ ಯೆಹೋವನು ಯುದ್ಧಮಾಡಿದನು. 11 ಆದರೆ ಯೆಹೋವನು ಬಹಳ ಕಾಲದ ಹಿಂದೆ ನಡೆದುದನ್ನು ಇನ್ನೂ ಜ್ಞಾಪಕದಲ್ಲಿಟ್ಟುಕೊಂಡಿದ್ದಾನೆ. ಆತನು ಮೋಶೆಯನ್ನೂ ಅವನ ಜನರನ್ನೂ ನೆನಪುಮಾಡಿಕೊಳ್ಳುತ್ತಾನೆ. ಆ ಜನರನ್ನು ಸಮುದ್ರದ ಮೂಲಕ ಬರಮಾಡಿದವನು ಯೆಹೋವನೇ. ಆತನು ತನ್ನ ಕುರಿಮಂದೆಯನ್ನು ನಡೆಸಲು ತನ್ನ ಕುರುಬರನ್ನು ಉಪಯೋಗಿಸಿದನು. ಆದರೆ ಈಗ ಯೆಹೋವನೆಲ್ಲಿ? ಮೋಶೆಯಲ್ಲಿ ತನ್ನ ಪವಿತ್ರಾತ್ಮನನ್ನು ಇಟ್ಟ ಯೆಹೋವನೆಲ್ಲಿ? 12 ಯೆಹೋವನು ಮೋಶೆಯನ್ನು ತನ್ನ ಬಲವಾದ ಹಸ್ತದಿಂದ ನಡೆಸಿದನು. ತನ್ನ ಅದ್ಭುತ ಶಕ್ತಿಯಿಂದ ಮೋಶೆಯನ್ನು ನಡೆಸಿದನು. ತನ್ನ ಜನರು ಸಮುದ್ರದೊಳಗಿಂದ ನಡೆದುಹೋಗಲೆಂದು ಯೆಹೋವನು ಸಮುದ್ರವನ್ನು ಇಬ್ಭಾಗ ಮಾಡಿದನು. ಅಂಥಾ ಅದ್ಭುತಕಾರ್ಯಗಳ ನಿಮಿತ್ತ ತನ್ನ ಹೆಸರನ್ನು ಪ್ರಸಿದ್ಧಿಪಡಿಸಿದನು. 13 ಆಳವಾದ ಸಮುದ್ರದೊಳಗಿಂದ ಯೆಹೋವನು ತನ್ನ ಜನರನ್ನು ನಡೆಸಿದನು. ಕುದುರೆಯು ಮರುಭೂಮಿಯಲ್ಲಿ ನಡೆಯುವಂತೆ ಜನರು ಎಡವಿಬೀಳದೆ ನಡೆದರು. 14 ಹೊಲದಲ್ಲಿ ನಡೆಯುತ್ತಿರುವಾಗ ಒಂದು ದನವೂ ಬೀಳಲಿಲ್ಲ. ಅದೇ ರೀತಿಯಲ್ಲಿ ಸಮುದ್ರದ ಮಧ್ಯದಲ್ಲಿ ನಡೆಯುವಾಗ ಅವರು ಬೀಳಲಿಲ್ಲ. ವಿಶ್ರಾಂತಿಯ ಸ್ಥಳಕ್ಕೆ ಯೆಹೋವನ ಆತ್ಮವು ಅವರನ್ನು ನಡೆಸಿತು. ದಾರಿಯುದ್ದಕ್ಕೂ ಜನರು ಸುರಕ್ಷಿತರಾಗಿದ್ದರು. ಯೆಹೋವನೇ, ಹೀಗೆ ನೀನು ನಿನ್ನ ಜನರನ್ನು ನಡೆಸಿದೆ. ಹೀಗೆ ನೀನು ನಿನ್ನ ಹೆಸರನ್ನು ಆಶ್ಚರ್ಯಕರವನ್ನಾಗಿ ಮಾಡಿರುವೆ. 15 {#1ಸಹಾಯಕ್ಕಾಗಿ ದೇವರಿಗೆ ಪ್ರಾರ್ಥನೆ } ಯೆಹೋವನೇ, ಈಗ ನಡೆಯುವ ಸಂಗತಿಗಳನ್ನು ಪರಲೋಕದಿಂದ ನೋಡು. ಪರಲೋಕದಲ್ಲಿರುವ ನಿನ್ನ ಪವಿತ್ರಸ್ಥಾನದಿಂದ ನಮ್ಮನ್ನು ದೃಷ್ಟಿಸು. ನಮ್ಮ ಮೇಲಿನ ಗಾಢವಾದ ಪ್ರೀತಿ ಎಲ್ಲಿದೆ? ನಿನ್ನ ಅಂತರಂಗದೊಳಗಿಂದ ಬಂದ ಕಾರ್ಯಗಳೆಲ್ಲಿ? ನಮ್ಮ ಮೇಲೆ ನಿನಗಿರುವ ಕರುಣೆ ಎಲ್ಲಿ? ನಿನ್ನ ದಯಾಪರವಾದ ಪ್ರೀತಿಯನ್ನು ನಮ್ಮಿಂದ ಯಾಕೆ ಅಡಗಿಸುವೆ? 16 ನೀನು ನಮ್ಮ ತಂದೆಯಾಗಿರುವೆ. ಅಬ್ರಹಾಮನಿಗೆ ನಮ್ಮ ಪರಿಚಯವಿಲ್ಲ. ಇಸ್ರೇಲನು ನಮ್ಮನ್ನು ಗುರುತಿಸುವುದಿಲ್ಲ. ಯೆಹೋವನೇ, ನೀನೇ ನಮ್ಮ ತಂದೆ. ನೀನೇ ನಮ್ಮನ್ನು ಯಾವಾಗಲೂ ರಕ್ಷಿಸಿದಾತನು. 17 ಯೆಹೋವನೇ, ನೀನು ನಮ್ಮನ್ನು ನಿನ್ನಿಂದ ದೂರ ಮಾಡಿರುವೆ. ನಾವು ನಿನ್ನನ್ನು ಹಿಂಬಾಲಿಸಬೇಕೆಂದರೂ ಹಾಗೆ ಆಗದಂತೆ ಅದನ್ನೇಕೆ ಕಷ್ಟಕರವಾಗಿ ಮಾಡಿರುವೆ? ಯೆಹೋವನೇ, ನಮ್ಮ ಬಳಿಗೆ ಹಿಂದಿರುಗಿ ಬಾ. ನಾವು ನಿನ್ನ ಸೇವಕರಾಗಿದ್ದೇವೆ. ನಮ್ಮ ಬಳಿಗೆ ಬಂದು ಸಹಾಯಮಾಡು. ನಮ್ಮ ಕುಟುಂಬಗಳು ನಿನ್ನವೇ. 18 ನಿನ್ನ ಪವಿತ್ರ ಜನರು ತಮ್ಮ ದೇಶದಲ್ಲಿ ಸ್ವಲ್ಪಕಾಲಕ್ಕೆ ಮಾತ್ರ ವಾಸಿಸಿದರು. ಆಗ ನಮ್ಮ ಶತ್ರುಗಳು ಬಂದು ನಿನ್ನ ಪವಿತ್ರ ಆಲಯದಲ್ಲಿ ತುಳಿದಾಡಿದರು. 19 ಕೆಲವರು ನಿನ್ನನ್ನು ಅನುಸರಿಸುವದಿಲ್ಲ. ಅವರು ನಿನ್ನ ಹೆಸರಿನಿಂದ ಕರೆಯಲ್ಪಡುವದಿಲ್ಲ. ನಾವು ಅವರಂತೆ ಇದ್ದೆವು.
మొత్తం 66 అధ్యాయాలు, ఎంపిక చేయబడింది అధ్యాయము 63 / 66
×

Alert

×

Telugu Letters Keypad References