పవిత్ర బైబిల్

ఈజీ టు రీడ్ వెర్షన్ (ERV) - తెలుగు
యోబు గ్రంథము
1. {#1ಯೋಬನಿಗೆ ದೇವರ ಉತ್ತರ } [PS]ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು: [PE][PBR]
2. [QS]“ನನ್ನ ಉದ್ದೇಶಗಳನ್ನು ಮೂರ್ಖತನದ ಮಾತುಗಳಿಂದ ಗಲಿಬಿಲಿಗೊಳಿಸುತ್ತಿರುವ [QE][QS2]ಈ ಮನುಷ್ಯನು ಯಾರು? [QE]
3. [QS]ಯೋಬನೇ, ನಡುಕಟ್ಟಿಕೊಂಡು ಬಲಿಷ್ಠನಾಗಿರು. [QE][QS2]ನಾನು ನಿನಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗು. [QE][PBR]
4. [QS]“ಯೋಬನೇ, ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದೆ? [QE][QS2]ನೀನು ಬಹು ಜಾಣನಾಗಿದ್ದರೆ ನನಗೆ ಉತ್ತರಕೊಡು. [QE]
5. [QS]ಯೋಬನೇ, ಭೂಮಿಯ ಅಳತೆಗಳನ್ನು ಯಾರು ನಿರ್ಧರಿಸಿದರು? [QE][QS2]ಭೂಮಿಯ ಅಳತೆಯನ್ನು ನೂಲುಗುಂಡಿನಿಂದ ಅಳೆದವರು ಯಾರು? [QE]
6. [QS]ಭೂಮಿಯ ಆಧಾರಸ್ತಂಭಗಳು ಯಾವುದರ ಮೇಲೆ ನೆಲೆಗೊಂಡಿವೆ? [QE][QS2]ಭೂಮಿಯ ಅಸ್ತಿವಾರಕ್ಕೆ ಮೊದಲ ಕಲ್ಲನ್ನು ಹಾಕಿದವರು ಯಾರು? [QE]
7. [QS]ಅದು ಸಂಭವಿಸಿದಾಗ, ಮುಂಜಾನೆಯ ನಕ್ಷತ್ರಗಳು ಒಟ್ಟಾಗಿ ಹಾಡಿದವು; [QE][QS2]ದೇವದೂತರುಗಳು ಆನಂದಘೋಷ ಮಾಡಿದರು! [QE][PBR]
8. [QS]“ಯೋಬನೇ, ಭೂಮಿಯ ಗರ್ಭದೊಳಗಿಂದ ನುಗ್ಗಿ ಬರುವ ಸಮುದ್ರದ ನೀರನ್ನು [QE][QS2]ನಿಲ್ಲಿಸುವುದಕ್ಕಾಗಿ ಬಾಗಿಲುಗಳನ್ನು ಮುಚ್ಚಿದವರು ಯಾರು? [QE]
9. [QS]ಆ ಸಮಯದಲ್ಲಿ ನಾನು ಸಮುದ್ರವನ್ನು ಮೋಡಗಳಿಂದ ಮುಚ್ಚಿ [QE][QS2]ಕಾರ್ಗತ್ತಲನ್ನು ಬಟ್ಟೆಯಂತೆ ಸುತ್ತಿಟ್ಟೆನು. [QE]
10. [QS]ನಾನು ಸಮುದ್ರಕ್ಕೆ ಮೇರೆಯನ್ನು ನಿಗದಿಪಡಿಸಿ [QE][QS2]ಕದ ಹಾಕಿದ ಬಾಗಿಲುಗಳ ಹಿಂಭಾಗದಲ್ಲಿಟ್ಟೆನು. [QE]
11. [QS]ನಾನು ಸಮುದ್ರಕ್ಕೆ, ‘ನೀನು ಇಲ್ಲಿಯವರೆಗೆ ಬರಬಹುದು, ಆದರೆ ಇದಕ್ಕಿಂತ ಹೆಚ್ಚಿಗೆ ಬರಕೂಡದು. [QE][QS2]ನಿನ್ನ ಹೆಮ್ಮೆಯ ಅಲೆಗಳು ಇಲ್ಲೇ ನಿಲ್ಲಬೇಕು’ ಎಂದು ಅಪ್ಪಣೆಕೊಟ್ಟೆನು. [QE][PBR]
12. [QS]“ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ [QE][QS2]ಮುಂಜಾನೆಗಾಗಲಿ ಹಗಲಿಗಾಗಲಿ ಆರಂಭವಾಗೆಂದು ಆಜ್ಞಾಪಿಸಿರುವಿಯಾ? [QE]
13. [QS]ಯೋಬನೇ, ದುಷ್ಟರನ್ನು ಅವರು ಅಡಗಿಕೊಂಡಿರುವ ಸ್ಥಳಗಳಲ್ಲಿ ಹಿಡಿದು [QE][QS2]ನಡುಗಿಸಬೇಕೆಂದು ನೀನು ಮುಂಜಾನೆಯ ಬೆಳಕಿಗೆ ಎಂದಾದರೂ ಆಜ್ಞಾಪಿಸಿರುವಿಯಾ? [QE]
14. [QS]ಮುಂಜಾನೆಯ ಬೆಳಕು ಬೆಟ್ಟಗಳನ್ನೂ ಕಣಿವೆಗಳನ್ನೂ [QE][QS2]ಸ್ಪಷ್ಟವಾಗಿ ಕಾಣಮಾಡುತ್ತವೆ. [QE][QS]ಹಗಲುಬೆಳಕು ಭೂಮಿಗೆ ಬಂದಾಗ [QE][QS2]ಆ ಸ್ಥಳಗಳ ರೂಪಗಳು ಮೇಲಂಗಿಯ ನೆರಿಗೆಗಳಂತೆ ಎದ್ದುಕಾಣುತ್ತವೆ. [QE][QS]ಆ ಸ್ಥಳಗಳು ಮುದ್ರೆಯೊತ್ತಿದ [QE][QS2]ಜೇಡಿಮಣ್ಣಿನಂತೆ ರೂಪಗೊಳ್ಳುತ್ತವೆ. [QE]
15. [QS]ದುಷ್ಟರು ಹಗಲುಬೆಳಕನ್ನು ಇಷ್ಟಪಡುವುದಿಲ್ಲ. [QE][QS2]ಅದು ಪ್ರಕಾಶಮಾನವಾಗಿ ಹೊಳೆಯುವಾಗ, ದುಷ್ಕೃತ್ಯಗಳನ್ನು ಮಾಡದಂತೆ ಅದು ಅವರನ್ನು ತಡೆಯುತ್ತದೆ. [QE][PBR]
16. [QS]“ಯೋಬನೇ, ಸಮುದ್ರವು ಆರಂಭವಾಗುವ ಅತ್ಯಂತ ಆಳವಾದ ಭಾಗಗಳಿಗೆ ನೀನು ಎಂದಾದರೂ ಹೋಗಿರುವಿಯಾ? [QE][QS2]ಸಾಗರದ ತಳದ ಮೇಲೆ ನೀನು ಎಂದಾದರೂ ನಡೆದಿರುವಿಯಾ? [QE]
17. [QS]ಯೋಬನೇ, ಪಾತಾಳದ ದ್ವಾರಗಳನ್ನಾಗಲಿ [QE][QS2]ಘೋರಾಂಧಕಾರದ ಬಾಗಿಲುಗಳನ್ನಾಗಲಿ ನೀನು ಎಂದಾದರೂ ನೋಡಿರುವಿಯಾ? [QE]
18. [QS]ಯೋಬನೇ, ಭೂಮಿಯ ವಿಶಾಲತೆಯನ್ನು ನೋಡಿರುವಿಯಾ? [QE][QS2]ನೀನು ನಿಜವಾಗಿಯೂ ಅರ್ಥಮಾಡಿಕೊಳ್ಳುವಿಯಾ? [QE][QS2]ನಿನಗೆ ಇದೆಲ್ಲಾ ತಿಳಿದಿದ್ದರೆ, ನನಗೆ ಹೇಳು. [QE][PBR]
19. [QS]“ಯೋಬನೇ, ಬೆಳಕು ಎಲ್ಲಿಂದ ಬರುತ್ತದೆ? [QE][QS2]ಕತ್ತಲೆಯು ಎಲ್ಲಿಂದ ಬರುತ್ತದೆ? [QE]
20. [QS]ಯೋಬನೇ, ಬೆಳಕನ್ನೂ ಕತ್ತಲೆಯನ್ನೂ ಅವುಗಳ ಉಗಮಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? [QE][QS2]ಅಲ್ಲಿಗೆ ಹೋಗುವ ಮಾರ್ಗ ನಿನಗೆ ಗೊತ್ತಿದೆಯೋ? [QE]
21. [QS]ಯೋಬನೇ, ಇವು ನಿನಗೆ ತಿಳಿದಿವೆ, ಯಾಕೆಂದರೆ ನೀನು ಬಹು ವೃದ್ಧನೂ ಜ್ಞಾನಿಯೂ ಆಗಿರುವೆ. [QE][QS2]ನಾನು ಅವುಗಳನ್ನು ನಿರ್ಮಿಸಿದಾಗ ನೀನು ಅಲ್ಲಿ ವಾಸವಾಗಿರಲಿಲ್ಲವೇ? [QE][PBR]
22. [QS]“ಯೋಬನೇ, ನಾನು ಹಿಮವನ್ನೂ ಆಲಿಕಲ್ಲನ್ನೂ ಇಟ್ಟಿರುವ ಉಗ್ರಾಣಗಳೊಳಗೆ [QE][QS2]ನೀನು ಎಂದಾದರೂ ಹೋಗಿರುವಿಯಾ? [QE]
23. [QS]ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ಕಾಲಕ್ಕಾಗಿಯೂ [QE][QS2]ನಾನು ಅವುಗಳನ್ನು ಕೂಡಿಸಿಟ್ಟಿದ್ದೇನೆ. [QE]
24. [QS]ಯೋಬನೇ, ಸೂರ್ಯನು ಹೊರಟ ಸ್ಥಳಕ್ಕೂ ಪೂರ್ವದಿಕ್ಕಿನ ಗಾಳಿಯು ಭೂಮಿಯ ಮೇಲೆಲ್ಲಾ ಬೀಸುವುದಕ್ಕಾಗಿ ಹೊರಟುಬರುವ ಸ್ಥಳಕ್ಕೂ [QE][QS2]ನೀನು ಎಂದಾದರೂ ಹೋಗಿರುವಿಯಾ? [QE]
25. [QS]ಯೋಬನೇ, ದೊಡ್ಡ ಮಳೆಗಾಗಿ ಆಕಾಶದಲ್ಲಿ ಅಗೆದು ಸುರಂಗಮಾಡಿದವರು ಯಾರು? [QE][QS2]ಗುಡುಗು ಮಿಂಚಿನ ಮಳೆಗೆ ಹಾದಿಯನ್ನು ಮಾಡಿದವರು ಯಾರು? [QE]
26. [QS](26-27)ಯೋಬನೇ, ಯಾರೂ ವಾಸಿಸದಿರುವ ಸ್ಥಳದಲ್ಲಿ ನೀರು ಇರುವಂತೆಯೂ [QE][QS2]ಆ ನೀರು ಬರಿದಾದ ಸ್ಥಳವನ್ನು ತೃಪ್ತಿಪಡಿಸಿ ಬಹಳ ಹುಲ್ಲಿನಿಂದ ಅದನ್ನು ಹಸಿರುಗೊಳಿಸುವಂತೆಯೂ ಮಾಡಿದವರು ಯಾರು? [QE]
27.
28. [QS]ಯೋಬನೇ, ಮಳೆಗೆ ತಂದೆಯಿರುವನೇ? [QE][QS2]ಇಬ್ಬನಿಯ ಹನಿಗಳನ್ನು ನಿರ್ಮಿಸಿದವರು ಯಾರು? [QE]
29. [QS]ಯೋಬನೇ, ಮಂಜಿಗೆ ತಾಯಿ ಇರುವಳೇ? [QE][QS2]ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು? [QE]
30. [QS]ನೀರು ಕಲ್ಲಿನಂತೆ ಗಟ್ಟಿಯಾದಾಗ, [QE][QS2]ಸಾಗರಗಳ ಮೇಲ್ಭಾಗವು ಹೆಪ್ಪುಗಟ್ಟಿದಾಗ ಆಕಾಶದ ಹಿಮಕ್ಕೆ ಜನನ ಕೊಡುವವರು ಯಾರು? [QE][PBR]
31. [QS]“ಯೋಬನೇ, ಪ್ಲೆಯಡ್ಸ್[* ಪ್ಲೆಯಡ್ಸ್ ಅಥವಾ ಕೃತ್ತಿಕೆ ಇದೊಂದು ಪ್ರಸಿದ್ಧವಾದ ನಕ್ಷತ್ರಪುಂಜ. ಇದನ್ನು ಆಗಾಗ “ಏಳು ಸಹೋದರಿಯರು” ಎಂದು ಕರೆಯುವ ವಾಡಿಕೆಯುಂಟು. ] ಎಂಬ ನಕ್ಷತ್ರಗುಂಪನ್ನು ನೀನು ಕಟ್ಟಬಲ್ಲೆಯಾ? [QE][QS2]ನೀನು ಒರೈಯನ್ [† ಒರೈಯನ್ ಅಥವಾ ಮೃಗಶಿರ ಇದು ಸಹ ಪ್ರಸಿದ್ಧವಾದ ಒಂದು ನಕ್ಷತ್ರಪುಂಜ. ಇದನ್ನು ಸಾಮಾನ್ಯವಾಗಿ ಒಬ್ಬ ಬೇಟೆಗಾರ ಅಥವಾ ಬಲಶಾಲಿಯಾದ ಸೈನಿಕನಿಗೆ ಹೋಲಿಸಲ್ಪಡುತ್ತದೆ. ] ನಕ್ಷತ್ರ ಗುಂಪಿನ ನಡುಪಟ್ಟಿಯನ್ನು ಬಿಚ್ಚಬಲ್ಲೆಯಾ? [QE]
32. [QS]ಯೋಬನೇ, ನೀನು ಸಮಯಕ್ಕೆ ಸರಿಯಾಗಿ ನಕ್ಷತ್ರರಾಶಿಗಳನ್ನು ಬರಮಾಡಬಲ್ಲೆಯಾ? [QE][QS2]ನೀನು ಬೇರ್[‡ ಬೇರ್ ಅಥವಾ ಸಪ್ತರ್ಷಿ. ಇದು ಸಹ ನಕ್ಷತ್ರಪುಂಜಗಳಲ್ಲಿ ಒಂದು. ] ನಕ್ಷತ್ರಗಳನ್ನು ಅದರ ಮರಿಗಳೊಂದಿಗೆ ನಡೆಸಬಲ್ಲೆಯಾ? [QE]
33. [QS]ಯೋಬನೇ, ಆಕಾಶವನ್ನು ಆಳುವ ನಿಯಮಗಳು ನಿನಗೆ ಗೊತ್ತಿವೆಯೋ? [QE][QS2]ಅವುಗಳ ಆಳ್ವಿಕೆಯನ್ನು ನೀನು ಭೂಮಿಯ ಮೇಲೆ ಆರಂಭಿಸಬಲ್ಲೆಯಾ? [QE][PBR]
34. [QS]“ಯೋಬನೇ, ನೀನು ಮೋಡಗಳಿಗೆ ಮಹಾಧ್ವನಿಯಿಂದ ಆಜ್ಞಾಪಿಸಿ [QE][QS2]ಅವು ನಿನ್ನನ್ನು ದೊಡ್ಡ ಮಳೆಯಿಂದ ಆವರಿಸಿಕೊಳ್ಳುವಂತೆ ಮಾಡಬಲ್ಲೆಯಾ? [QE]
35. [QS]ಯೋಬನೇ, ನೀನು ಸಿಡಿಲಿಗೆ ಆಜ್ಞಾಪಿಸಬಲ್ಲೆಯಾ? [QE][QS2]ಅದು ನಿನ್ನ ಬಳಿಗೆ ಬಂದು, ‘ಇಗೋ ಬಂದಿದ್ದೇನೆ; [QE][QS2]ತಮಗೇನಾಗಬೇಕು’ ಎನ್ನುವುದೇ? [QE][PBR]
36. [QS]“ಯೋಬನೇ, ಮನುಷ್ಯರನ್ನು ಜ್ಞಾನಿಗಳನ್ನಾಗಿ ಮಾಡುವವರು ಯಾರು? [QE][QS2]ಅವರ ಅಂತರಾಳದಲ್ಲಿ ಜ್ಞಾನವನ್ನು ಇಡುವವರು ಯಾರು? [QE]
37. [QS]ಮೋಡಗಳನ್ನು ಲೆಕ್ಕಿಸಿ [QE][QS2]ಮಳೆ ಸುರಿಸಲು ಅವುಗಳನ್ನು ಮೊಗಚಿಹಾಕಿ [QE]
38. [QS]ಧೂಳನ್ನು ಮಣ್ಣನ್ನಾಗಿಯೂ ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ [QE][QS2]ಮಾಡುವ ಜ್ಞಾನಿ ಯಾರು? [QE][PBR]
39. [QS](39-40)“ಯೋಬನೇ, ಹೆಣ್ಣುಸಿಂಹಕ್ಕೆ ನೀನು ಆಹಾರವನ್ನು ಹುಡುಕುವೆಯಾ? [QE][QS2]ಗವಿಗಳಲ್ಲಿ ಮಲಗಿಕೊಂಡಿರುವ ಸಿಂಹಗಳಿಗೂ ಪೊದೆಯಲ್ಲಿ ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಿಗೂ ನೀನು ಉಣಿಸಬಲ್ಲೆಯಾ? [QE]
40.
41. [QS]ಕಾಗೆಗಳು ಆಹಾರವಿಲ್ಲದೆ ಅಲೆದಾಡುತ್ತಿರುವ ಅವುಗಳ ಮರಿಗಳು ದೇವರಿಗೆ ಮೊರೆಯಿಡುವಾಗ [QE][QS2]ಅವುಗಳಿಗೆ ಆಹಾರವನ್ನು ಒದಗಿಸುವವರು ಯಾರು? [QE][PBR]
మొత్తం 42 అధ్యాయాలు, ఎంపిక చేయబడింది అధ్యాయము 38 / 42
1 {#1ಯೋಬನಿಗೆ ದೇವರ ಉತ್ತರ } ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು: 2 “ನನ್ನ ಉದ್ದೇಶಗಳನ್ನು ಮೂರ್ಖತನದ ಮಾತುಗಳಿಂದ ಗಲಿಬಿಲಿಗೊಳಿಸುತ್ತಿರುವ ಈ ಮನುಷ್ಯನು ಯಾರು? 3 ಯೋಬನೇ, ನಡುಕಟ್ಟಿಕೊಂಡು ಬಲಿಷ್ಠನಾಗಿರು. ನಾನು ನಿನಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗು. 4 “ಯೋಬನೇ, ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದೆ? ನೀನು ಬಹು ಜಾಣನಾಗಿದ್ದರೆ ನನಗೆ ಉತ್ತರಕೊಡು. 5 ಯೋಬನೇ, ಭೂಮಿಯ ಅಳತೆಗಳನ್ನು ಯಾರು ನಿರ್ಧರಿಸಿದರು? ಭೂಮಿಯ ಅಳತೆಯನ್ನು ನೂಲುಗುಂಡಿನಿಂದ ಅಳೆದವರು ಯಾರು? 6 ಭೂಮಿಯ ಆಧಾರಸ್ತಂಭಗಳು ಯಾವುದರ ಮೇಲೆ ನೆಲೆಗೊಂಡಿವೆ? ಭೂಮಿಯ ಅಸ್ತಿವಾರಕ್ಕೆ ಮೊದಲ ಕಲ್ಲನ್ನು ಹಾಕಿದವರು ಯಾರು? 7 ಅದು ಸಂಭವಿಸಿದಾಗ, ಮುಂಜಾನೆಯ ನಕ್ಷತ್ರಗಳು ಒಟ್ಟಾಗಿ ಹಾಡಿದವು; ದೇವದೂತರುಗಳು ಆನಂದಘೋಷ ಮಾಡಿದರು! 8 “ಯೋಬನೇ, ಭೂಮಿಯ ಗರ್ಭದೊಳಗಿಂದ ನುಗ್ಗಿ ಬರುವ ಸಮುದ್ರದ ನೀರನ್ನು ನಿಲ್ಲಿಸುವುದಕ್ಕಾಗಿ ಬಾಗಿಲುಗಳನ್ನು ಮುಚ್ಚಿದವರು ಯಾರು? 9 ಆ ಸಮಯದಲ್ಲಿ ನಾನು ಸಮುದ್ರವನ್ನು ಮೋಡಗಳಿಂದ ಮುಚ್ಚಿ ಕಾರ್ಗತ್ತಲನ್ನು ಬಟ್ಟೆಯಂತೆ ಸುತ್ತಿಟ್ಟೆನು. 10 ನಾನು ಸಮುದ್ರಕ್ಕೆ ಮೇರೆಯನ್ನು ನಿಗದಿಪಡಿಸಿ ಕದ ಹಾಕಿದ ಬಾಗಿಲುಗಳ ಹಿಂಭಾಗದಲ್ಲಿಟ್ಟೆನು. 11 ನಾನು ಸಮುದ್ರಕ್ಕೆ, ‘ನೀನು ಇಲ್ಲಿಯವರೆಗೆ ಬರಬಹುದು, ಆದರೆ ಇದಕ್ಕಿಂತ ಹೆಚ್ಚಿಗೆ ಬರಕೂಡದು. ನಿನ್ನ ಹೆಮ್ಮೆಯ ಅಲೆಗಳು ಇಲ್ಲೇ ನಿಲ್ಲಬೇಕು’ ಎಂದು ಅಪ್ಪಣೆಕೊಟ್ಟೆನು. 12 “ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ ಮುಂಜಾನೆಗಾಗಲಿ ಹಗಲಿಗಾಗಲಿ ಆರಂಭವಾಗೆಂದು ಆಜ್ಞಾಪಿಸಿರುವಿಯಾ? 13 ಯೋಬನೇ, ದುಷ್ಟರನ್ನು ಅವರು ಅಡಗಿಕೊಂಡಿರುವ ಸ್ಥಳಗಳಲ್ಲಿ ಹಿಡಿದು ನಡುಗಿಸಬೇಕೆಂದು ನೀನು ಮುಂಜಾನೆಯ ಬೆಳಕಿಗೆ ಎಂದಾದರೂ ಆಜ್ಞಾಪಿಸಿರುವಿಯಾ? 14 ಮುಂಜಾನೆಯ ಬೆಳಕು ಬೆಟ್ಟಗಳನ್ನೂ ಕಣಿವೆಗಳನ್ನೂ ಸ್ಪಷ್ಟವಾಗಿ ಕಾಣಮಾಡುತ್ತವೆ. ಹಗಲುಬೆಳಕು ಭೂಮಿಗೆ ಬಂದಾಗ ಆ ಸ್ಥಳಗಳ ರೂಪಗಳು ಮೇಲಂಗಿಯ ನೆರಿಗೆಗಳಂತೆ ಎದ್ದುಕಾಣುತ್ತವೆ. ಆ ಸ್ಥಳಗಳು ಮುದ್ರೆಯೊತ್ತಿದ ಜೇಡಿಮಣ್ಣಿನಂತೆ ರೂಪಗೊಳ್ಳುತ್ತವೆ. 15 ದುಷ್ಟರು ಹಗಲುಬೆಳಕನ್ನು ಇಷ್ಟಪಡುವುದಿಲ್ಲ. ಅದು ಪ್ರಕಾಶಮಾನವಾಗಿ ಹೊಳೆಯುವಾಗ, ದುಷ್ಕೃತ್ಯಗಳನ್ನು ಮಾಡದಂತೆ ಅದು ಅವರನ್ನು ತಡೆಯುತ್ತದೆ. 16 “ಯೋಬನೇ, ಸಮುದ್ರವು ಆರಂಭವಾಗುವ ಅತ್ಯಂತ ಆಳವಾದ ಭಾಗಗಳಿಗೆ ನೀನು ಎಂದಾದರೂ ಹೋಗಿರುವಿಯಾ? ಸಾಗರದ ತಳದ ಮೇಲೆ ನೀನು ಎಂದಾದರೂ ನಡೆದಿರುವಿಯಾ? 17 ಯೋಬನೇ, ಪಾತಾಳದ ದ್ವಾರಗಳನ್ನಾಗಲಿ ಘೋರಾಂಧಕಾರದ ಬಾಗಿಲುಗಳನ್ನಾಗಲಿ ನೀನು ಎಂದಾದರೂ ನೋಡಿರುವಿಯಾ? 18 ಯೋಬನೇ, ಭೂಮಿಯ ವಿಶಾಲತೆಯನ್ನು ನೋಡಿರುವಿಯಾ? ನೀನು ನಿಜವಾಗಿಯೂ ಅರ್ಥಮಾಡಿಕೊಳ್ಳುವಿಯಾ? ನಿನಗೆ ಇದೆಲ್ಲಾ ತಿಳಿದಿದ್ದರೆ, ನನಗೆ ಹೇಳು. 19 “ಯೋಬನೇ, ಬೆಳಕು ಎಲ್ಲಿಂದ ಬರುತ್ತದೆ? ಕತ್ತಲೆಯು ಎಲ್ಲಿಂದ ಬರುತ್ತದೆ? 20 ಯೋಬನೇ, ಬೆಳಕನ್ನೂ ಕತ್ತಲೆಯನ್ನೂ ಅವುಗಳ ಉಗಮಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅಲ್ಲಿಗೆ ಹೋಗುವ ಮಾರ್ಗ ನಿನಗೆ ಗೊತ್ತಿದೆಯೋ? 21 ಯೋಬನೇ, ಇವು ನಿನಗೆ ತಿಳಿದಿವೆ, ಯಾಕೆಂದರೆ ನೀನು ಬಹು ವೃದ್ಧನೂ ಜ್ಞಾನಿಯೂ ಆಗಿರುವೆ. ನಾನು ಅವುಗಳನ್ನು ನಿರ್ಮಿಸಿದಾಗ ನೀನು ಅಲ್ಲಿ ವಾಸವಾಗಿರಲಿಲ್ಲವೇ? 22 “ಯೋಬನೇ, ನಾನು ಹಿಮವನ್ನೂ ಆಲಿಕಲ್ಲನ್ನೂ ಇಟ್ಟಿರುವ ಉಗ್ರಾಣಗಳೊಳಗೆ ನೀನು ಎಂದಾದರೂ ಹೋಗಿರುವಿಯಾ? 23 ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ಕಾಲಕ್ಕಾಗಿಯೂ ನಾನು ಅವುಗಳನ್ನು ಕೂಡಿಸಿಟ್ಟಿದ್ದೇನೆ. 24 ಯೋಬನೇ, ಸೂರ್ಯನು ಹೊರಟ ಸ್ಥಳಕ್ಕೂ ಪೂರ್ವದಿಕ್ಕಿನ ಗಾಳಿಯು ಭೂಮಿಯ ಮೇಲೆಲ್ಲಾ ಬೀಸುವುದಕ್ಕಾಗಿ ಹೊರಟುಬರುವ ಸ್ಥಳಕ್ಕೂ ನೀನು ಎಂದಾದರೂ ಹೋಗಿರುವಿಯಾ? 25 ಯೋಬನೇ, ದೊಡ್ಡ ಮಳೆಗಾಗಿ ಆಕಾಶದಲ್ಲಿ ಅಗೆದು ಸುರಂಗಮಾಡಿದವರು ಯಾರು? ಗುಡುಗು ಮಿಂಚಿನ ಮಳೆಗೆ ಹಾದಿಯನ್ನು ಮಾಡಿದವರು ಯಾರು? 26 (26-27)ಯೋಬನೇ, ಯಾರೂ ವಾಸಿಸದಿರುವ ಸ್ಥಳದಲ್ಲಿ ನೀರು ಇರುವಂತೆಯೂ ಆ ನೀರು ಬರಿದಾದ ಸ್ಥಳವನ್ನು ತೃಪ್ತಿಪಡಿಸಿ ಬಹಳ ಹುಲ್ಲಿನಿಂದ ಅದನ್ನು ಹಸಿರುಗೊಳಿಸುವಂತೆಯೂ ಮಾಡಿದವರು ಯಾರು? 27 28 ಯೋಬನೇ, ಮಳೆಗೆ ತಂದೆಯಿರುವನೇ? ಇಬ್ಬನಿಯ ಹನಿಗಳನ್ನು ನಿರ್ಮಿಸಿದವರು ಯಾರು? 29 ಯೋಬನೇ, ಮಂಜಿಗೆ ತಾಯಿ ಇರುವಳೇ? ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು? 30 ನೀರು ಕಲ್ಲಿನಂತೆ ಗಟ್ಟಿಯಾದಾಗ, ಸಾಗರಗಳ ಮೇಲ್ಭಾಗವು ಹೆಪ್ಪುಗಟ್ಟಿದಾಗ ಆಕಾಶದ ಹಿಮಕ್ಕೆ ಜನನ ಕೊಡುವವರು ಯಾರು? 31 “ಯೋಬನೇ, ಪ್ಲೆಯಡ್ಸ್[* ಪ್ಲೆಯಡ್ಸ್ ಅಥವಾ ಕೃತ್ತಿಕೆ ಇದೊಂದು ಪ್ರಸಿದ್ಧವಾದ ನಕ್ಷತ್ರಪುಂಜ. ಇದನ್ನು ಆಗಾಗ “ಏಳು ಸಹೋದರಿಯರು” ಎಂದು ಕರೆಯುವ ವಾಡಿಕೆಯುಂಟು. ] ಎಂಬ ನಕ್ಷತ್ರಗುಂಪನ್ನು ನೀನು ಕಟ್ಟಬಲ್ಲೆಯಾ? ನೀನು ಒರೈಯನ್ [† ಒರೈಯನ್ ಅಥವಾ ಮೃಗಶಿರ ಇದು ಸಹ ಪ್ರಸಿದ್ಧವಾದ ಒಂದು ನಕ್ಷತ್ರಪುಂಜ. ಇದನ್ನು ಸಾಮಾನ್ಯವಾಗಿ ಒಬ್ಬ ಬೇಟೆಗಾರ ಅಥವಾ ಬಲಶಾಲಿಯಾದ ಸೈನಿಕನಿಗೆ ಹೋಲಿಸಲ್ಪಡುತ್ತದೆ. ] ನಕ್ಷತ್ರ ಗುಂಪಿನ ನಡುಪಟ್ಟಿಯನ್ನು ಬಿಚ್ಚಬಲ್ಲೆಯಾ? 32 ಯೋಬನೇ, ನೀನು ಸಮಯಕ್ಕೆ ಸರಿಯಾಗಿ ನಕ್ಷತ್ರರಾಶಿಗಳನ್ನು ಬರಮಾಡಬಲ್ಲೆಯಾ? ನೀನು ಬೇರ್[‡ ಬೇರ್ ಅಥವಾ ಸಪ್ತರ್ಷಿ. ಇದು ಸಹ ನಕ್ಷತ್ರಪುಂಜಗಳಲ್ಲಿ ಒಂದು. ] ನಕ್ಷತ್ರಗಳನ್ನು ಅದರ ಮರಿಗಳೊಂದಿಗೆ ನಡೆಸಬಲ್ಲೆಯಾ? 33 ಯೋಬನೇ, ಆಕಾಶವನ್ನು ಆಳುವ ನಿಯಮಗಳು ನಿನಗೆ ಗೊತ್ತಿವೆಯೋ? ಅವುಗಳ ಆಳ್ವಿಕೆಯನ್ನು ನೀನು ಭೂಮಿಯ ಮೇಲೆ ಆರಂಭಿಸಬಲ್ಲೆಯಾ? 34 “ಯೋಬನೇ, ನೀನು ಮೋಡಗಳಿಗೆ ಮಹಾಧ್ವನಿಯಿಂದ ಆಜ್ಞಾಪಿಸಿ ಅವು ನಿನ್ನನ್ನು ದೊಡ್ಡ ಮಳೆಯಿಂದ ಆವರಿಸಿಕೊಳ್ಳುವಂತೆ ಮಾಡಬಲ್ಲೆಯಾ? 35 ಯೋಬನೇ, ನೀನು ಸಿಡಿಲಿಗೆ ಆಜ್ಞಾಪಿಸಬಲ್ಲೆಯಾ? ಅದು ನಿನ್ನ ಬಳಿಗೆ ಬಂದು, ‘ಇಗೋ ಬಂದಿದ್ದೇನೆ; ತಮಗೇನಾಗಬೇಕು’ ಎನ್ನುವುದೇ? 36 “ಯೋಬನೇ, ಮನುಷ್ಯರನ್ನು ಜ್ಞಾನಿಗಳನ್ನಾಗಿ ಮಾಡುವವರು ಯಾರು? ಅವರ ಅಂತರಾಳದಲ್ಲಿ ಜ್ಞಾನವನ್ನು ಇಡುವವರು ಯಾರು? 37 ಮೋಡಗಳನ್ನು ಲೆಕ್ಕಿಸಿ ಮಳೆ ಸುರಿಸಲು ಅವುಗಳನ್ನು ಮೊಗಚಿಹಾಕಿ 38 ಧೂಳನ್ನು ಮಣ್ಣನ್ನಾಗಿಯೂ ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ ಮಾಡುವ ಜ್ಞಾನಿ ಯಾರು? 39 (39-40)“ಯೋಬನೇ, ಹೆಣ್ಣುಸಿಂಹಕ್ಕೆ ನೀನು ಆಹಾರವನ್ನು ಹುಡುಕುವೆಯಾ? ಗವಿಗಳಲ್ಲಿ ಮಲಗಿಕೊಂಡಿರುವ ಸಿಂಹಗಳಿಗೂ ಪೊದೆಯಲ್ಲಿ ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಿಗೂ ನೀನು ಉಣಿಸಬಲ್ಲೆಯಾ? 40 41 ಕಾಗೆಗಳು ಆಹಾರವಿಲ್ಲದೆ ಅಲೆದಾಡುತ್ತಿರುವ ಅವುಗಳ ಮರಿಗಳು ದೇವರಿಗೆ ಮೊರೆಯಿಡುವಾಗ ಅವುಗಳಿಗೆ ಆಹಾರವನ್ನು ಒದಗಿಸುವವರು ಯಾರು?
మొత్తం 42 అధ్యాయాలు, ఎంపిక చేయబడింది అధ్యాయము 38 / 42
×

Alert

×

Telugu Letters Keypad References