1. {#1ಬರಲಿಕ್ಕಿರುವ ಯೆಹೋವನ ದಿನ } [QS]ಚೀಯೋನಿನಲ್ಲಿ ತುತ್ತೂರಿಯನ್ನೂದಿರಿ. [QE][QS2]ನನ್ನ ಪವಿತ್ರ ಪರ್ವತದಲ್ಲಿ ಧ್ವನಿಯೆತ್ತಿ ಎಚ್ಚರಿಕೆ ನೀಡಿರಿ. [QE][QS]ದೇಶದಲ್ಲಿ ವಾಸಿಸುವ ಎಲ್ಲಾ ಜನರು ಭಯದಿಂದ ನಡುಗಲಿ. [QE][QS2]ಯೆಹೋವನ ಮಹಾದಿನವು ಬರಲಿದೆ; [QE][QS2]ಯೆಹೋವನ ಮಹಾದಿನವು ಹತ್ತಿರವೇ ಇದೆ. [QE]
2. [QS]ಆ ದಿನವು ಕರಾಳ ದಿನ. [QE][QS2]ಮೋಡದಿಂದ ತುಂಬಿದ ದಿನವಾಗಿದೆ. [QE][QS]ಅಂದು ಸೂರ್ಯೋದಯದ ಸಮಯದಲ್ಲಿ ಪರ್ವತದಲ್ಲಿ ಹರಡಿದ ಸೈನ್ಯವನ್ನು ನೀವು ನೋಡುವಿರಿ. [QE][QS2]ಅದು ಬಲಿಷ್ಠವಾದ ಮಹಾಸೈನ್ಯ. [QE][QS]ಅಂಥ ಸೈನ್ಯವು ಹಿಂದೆಂದೂ ಇರಲಿಲ್ಲ. [QE][QS2]ಇನ್ನು ಮುಂದೆಯೂ ಇರುವುದಿಲ್ಲ. [QE]
3. [QS]ಆ ಸೈನ್ಯವು ಸುಡುವ ಬೆಂಕಿಯಂತೆ ದೇಶವನ್ನು ನಾಶಮಾಡುವದು. [QE][QS2]ಏದೆನ್ ತೋಟದಂತೆ ಕಂಗೊಳಿಸುತ್ತಿದ್ದ ದೇಶವು [QE][QS]ಸೈನ್ಯವು ಬಂದ ಮೇಲೆ ಬೆಂಗಾಡಿನಂತಿರುವದು. [QE][QS2]ಅವರಿಂದ ಯಾರೂ ತಪ್ಪಿಸಿಕೊಳ್ಳಲಾರರು. [QE]
4. [QS]ಅವರು ಕುದುರೆಯಂತೆ ಕಾಣುವರು, [QE][QS2]ಯುದ್ಧದ ಕುದುರೆಯಂತೆ ಓಡುವರು. [QE]
5. [QS]ಕಿವಿಗೊಟ್ಟು ಕೇಳಿರಿ. [QE][QS]ಪರ್ವತಗಳ ಮೇಲೆ ಓಡುವ ರಥಗಳ [QE][QS2]ಶಬ್ದದಂತೆ ಅವರ ಶಬ್ದವು ಕೇಳುತ್ತದೆ. [QE][QS]ಬೆಂಕಿಯ ಜ್ವಾಲೆಗಳು ಹೊಟ್ಟನ್ನು ಸುಡುವಂತೆ [QE][QS2]ಅವರ ಶಬ್ದವು ಕೇಳುತ್ತದೆ. [QE][QS]ಬಲಿಷ್ಠರಾದ ಅವರು ಯುದ್ಧಕ್ಕೆ ಸಿದ್ಧರಾಗಿದ್ದಾರೆ. [QE]
6. [QS]ಈ ಸೈನ್ಯವನ್ನು ನೋಡುವ ಜನರು ಹೆದರಿ ನಡುಗುವರು; [QE][QS2]ಅವರ ಮುಖಗಳು ಕಂಗೆಡುವದು. [QE][PBR]
7. [QS]ಆ ಸೈನಿಕರು ವೇಗವಾಗಿ ಓಡುವರು; [QE][QS2]ಗೋಡೆ ಹತ್ತುವರು, [QE][QS]ನೇರವಾಗಿ ಮುಂದೆ ಹೋಗುವರು. [QE][QS2]ದಾರಿಯಿಂದ ಅತ್ತಿತ್ತ ಹೋಗರು; [QE]
8. [QS]ಒಬ್ಬರಮೇಲೊಬ್ಬರು ಬೀಳದೆ ಪ್ರತಿಯೊಬ್ಬ ಸೈನಿಕನು [QE][QS2]ತನ್ನ ದಾರಿಯಲ್ಲಿಯೇ ಮುಂದುವರಿಯುವನು. [QE][QS]ಒಬ್ಬ ಸೈನಿಕನಿಗೆ ಗಾಯವಾಗಿ ಬಿದ್ದರೂ [QE][QS2]ಉಳಿದವರು ನಿಲ್ಲದೆ ಮುಂದಕ್ಕೆ ನುಗ್ಗುತ್ತಾ ಇರುವರು. [QE]
9. [QS]ಅವರು ಪಟ್ಟಣದ ಕಡೆಗೆ [QE][QS2]ಓಡಿ ತ್ವರೆಯಾಗಿ ಗೋಡೆ ಹತ್ತುವರು. [QE][QS]ಮನೆಯೊಳಗೆ ನುಗ್ಗುವರು; [QE][QS2]ಕಳ್ಳರಂತೆ ಕಿಟಕಿಯಿಂದ ನುಸುಳುವರು. [QE]
10. [QS]ಅವರ ಮುಂದೆ ಭೂಮಿಯೂ ಆಕಾಶವೂ ನಡುಗುವುದು; [QE][QS2]ಸೂರ್ಯಚಂದ್ರರು ಕಪ್ಪಾಗಿಹೋಗುವರು; ನಕ್ಷತ್ರಗಳು ಹೊಳಪನ್ನು ಕಳೆದುಕೊಳ್ಳುವುದು. [QE]
11. [QS]ಯೆಹೋವನು ತನ್ನ ಸೈನ್ಯವನ್ನು ಮಹಾಧ್ವನಿಯಿಂದ ಕರೆಯುತ್ತಾನೆ. [QE][QS2]ಆತನ ಶಿಬಿರವು ದೊಡ್ಡದಾಗಿದೆ. [QE][QS]ಆ ಸೈನ್ಯವು ಆತನ ಆಜ್ಞೆಯನ್ನು ಪಾಲಿಸುತ್ತದೆ; [QE][QS2]ಆ ಸೈನ್ಯವು ಮಹಾ ಬಲಿಷ್ಠವಾಗಿದೆ. [QE][QS]ಯೆಹೋವನ ಮಹಾದಿನವು ಮಹಾ ಭಯಂಕರವಾದ ದಿನವಾಗಿದೆ. [QE][QS2]ಅದನ್ನು ಸಹಿಸಲು ಯಾರಿಗೂ ಸಾಧ್ಯವಿಲ್ಲ. [QE]
12. {#1ಜನರು ಬದಲಾಗಬೇಕೆಂದು ಯೆಹೋವನು ಹೇಳುತ್ತಾನೆ } [QS]ಇದು ಯೆಹೋವನ ಸಂದೇಶ: [QE][QS2]“ನಿಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಬನ್ನಿರಿ, [QE][QS]ನೀವು ದುಷ್ಟತ್ವವನ್ನು ನಡಿಸಿರುವದರಿಂದ ದುಃಖಿಸಿರಿ, [QE][QS2]ಅಳಿರಿ, ಉಪವಾಸ ಮಾಡಿರಿ. [QE]
13. [QS]ನಿಮ್ಮ ಬಟ್ಟೆಗಳನ್ನಲ್ಲ, [QE][QS2]ಹೃದಯವನ್ನು ಹರಿಯಿರಿ.” [QE][QS]ನಿಮ್ಮ ದೇವರಾದ ಯೆಹೋವನ ಬಳಿಗೆ ಬನ್ನಿರಿ. [QE][QS2]ಆತನು ದಯಾಪರನೂ ಕನಿಕರವುಳ್ಳವನೂ ಆಗಿದ್ದಾನೆ. [QE][QS]ಆತನು ಬೇಗನೆ ಕೋಪಿಸುವುದಿಲ್ಲ. [QE][QS2]ಆತನಲ್ಲಿ ಆಳವಾದ ಪ್ರೀತಿ ಇದೆ. [QE][QS]ಆತನು ಯೋಚಿಸಿದ ಶಿಕ್ಷೆಯನ್ನು ಒಂದುವೇಳೆ ನಿಮಗೆ ಕೊಡದೆ [QE][QS2]ತನ್ನ ಮನಸ್ಸನ್ನು ಬದಲಾಯಿಸಬಹುದು. [QE]
14. [QS]ಒಂದುವೇಳೆ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿದರೂ ಬದಲಾಯಿಸಬಹುದು. [QE][QS2]ಒಂದುವೇಳೆ ಆತನು ನಿಮಗಾಗಿ ಆಶೀರ್ವಾದವನ್ನು ಬಿಟ್ಟುಹೋಗಬಹುದು. [QE][QS]ಆಗ ನೀವು ದೇವರಾದ ಯೆಹೋವನಿಗೆ ಧಾನ್ಯ [QE][QS2]ಮತ್ತು ಪಾನಸಮರ್ಪಣೆ ಮಾಡುವಿರಿ. [QE]
15. {#1ಯೆಹೋವನಿಗೆ ಪ್ರಾರ್ಥಿಸಿರಿ } [QS]ಚೀಯೋನಿನಲ್ಲಿ ತುತ್ತೂರಿ ಊದಿರಿ. [QE][QS2]ವಿಶೇಷ ಕೂಟಕ್ಕಾಗಿ ಜನರನ್ನು ಕೂಡಿಸಿರಿ. [QE][QS2]ಉಪವಾಸದ ದಿನ ಗೊತ್ತುಮಾಡಿರಿ. [QE]
16. [QS]ವಿಶೇಷ ಕೂಟಕ್ಕಾಗಿ [QE][QS2]ಜನರನ್ನು ಒಟ್ಟಾಗಿ ಕೂಡಿಸಿರಿ. [QE][QS]ಪ್ರಾಯಸ್ಥರನ್ನು ಕೂಡಿಸಿರಿ. [QE][QS2]ಮಕ್ಕಳನ್ನೂ ಕೂಡಿಸಿರಿ. ಮೊಲೆಹಾಲು ಕುಡಿಯುವ ಶಿಶುಗಳನ್ನೂ ಒಟ್ಟಾಗಿ ಸೇರಿಸಿರಿ. [QE][QS]ವಧುವರರು ತಮ್ಮ [QE][QS2]ಶೋಭನದ ಕೋಣೆಯಿಂದ ಹೊರಬರಲಿ. [QE]
17. [QS]ಯೆಹೋವನ ಸೇವಕರಾದ ಯಾಜಕರು [QE][QS2]ಮಂಟಪಕ್ಕೂ ವೇದಿಕೆಗೂ ಮಧ್ಯದಲ್ಲಿ ಗೋಳಾಡಲಿ. [QE][QS]ಆ ಜನರೆಲ್ಲಾ ಹೀಗೆ ಹೇಳಬೇಕು, “ಯೆಹೋವನೇ, ನಿನ್ನ ಜನರ ಮೇಲೆ ಕರುಣೆ ಇಡು, [QE][QS2]ನಿನ್ನ ಜನರನ್ನು ನಾಚಿಕೆಗೆ ತುತ್ತಾಗುವಂತೆ ಮಾಡಬೇಡ. [QE][QS2]ನಿನ್ನ ಜನರ ವಿಷಯವಾಗಿ ಅನ್ಯಜನರು ಗೇಲಿ ಮಾಡದಿರಲಿ. [QE][QS]ಇತರ ದೇಶದ ಜನರು ನಮಗೆ ಹಾಸ್ಯ ಮಾಡುತ್ತಾ, [QE][QS2]‘ಅವರ ದೇವರು ಎಲ್ಲಿ?’ ಎಂದು ಹೇಳದ ಹಾಗೆ ಮಾಡು.” [QE]
18. {#1ಯೆಹೋವನು ದೇಶವನ್ನು ಸುಸ್ಥಿತಿಗೆ ತರುವನು } [QS]ಆಗ ಯೆಹೋವನು ತನ್ನ ದೇಶದ ಬಗ್ಗೆ ಆಸಕ್ತಿ ತೋರಿಸಿದನು. [QE][QS2]ತನ್ನ ಜನರ ಬಗ್ಗೆ ದುಃಖಿಸಿದನು. [QE]
19. [QS]ಯೆಹೋವನು ತನ್ನ ಜನರೊಂದಿಗೆ ಮಾತನಾಡಿ ಹೀಗೆ ಹೇಳಿದನು: [QE][QS]“ನಾನು ನಿಮಗೆ ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕಳುಹಿಸುವೆನು. [QE][QS2]ನಿಮಗೆ ಬೇಕಾದಷ್ಟು ಇರುವದು. [QE][QS2]ಅನ್ಯ ಜನಾಂಗದವರೆದುರು ನಿಮ್ಮನ್ನು ಇನ್ನು ಮುಂದೆ ನಾಚಿಕೆಗೆ ಗುರಿಪಡಿಸುವುದಿಲ್ಲ. [QE]
20. [QS]ಉತ್ತರದಿಂದ ಬಂದ ದಂಡನ್ನು ನಿಮ್ಮ ದೇಶದಿಂದ ಹೊರಡಿಸುವೆನು. [QE][QS2]ಅವರನ್ನು ಒಣ ಬೆಂಗಾಡಿಗೆ ಕಳುಹಿಸುವೆನು. [QE][QS]ಅವರಲ್ಲಿ ಕೆಲವರು ಪೂರ್ವದ ಸಮುದ್ರಕ್ಕೆ ಹೋಗುವರು, [QE][QS2]ಕೆಲವರು ಪಶ್ಚಿಮದ ಸಮುದ್ರಕ್ಕೆ ಹೋಗುವರು. [QE][QS]ಅವರು ಭಯಂಕರ ಕೃತ್ಯಗಳನ್ನು ಮಾಡಿದುದರಿಂದ [QE][QS2]ಸತ್ತು ಕೊಳೆಯುವ ಸ್ಥಿತಿಗೆ ಬರಮಾಡುವೆನು. [QE][QS]ಆಗ ಭಯಂಕರ ಹೊಲಸು ವಾಸನೆ ಇರುವದು.” [QE]
21. {#1ದೇಶವು ಹೊಸತಾಗಿ ಮಾಡಲ್ಪಡುವದು } [QS]ದೇಶವೇ, ಭಯಪಡದಿರು. [QE][QS2]ಯೆಹೋವನು ಮಹತ್ಕಾರ್ಯವನ್ನು ಮಾಡಲಿರುವದರಿಂದ [QE][QS2]ಸಂತೋಷದಿಂದ ಆನಂದಿಸು. [QE]
22. [QS]ಅಡವಿಯಲ್ಲಿರುವ ಪ್ರಾಣಿಗಳೇ, ಭಯಪಡಬೇಡಿ. [QE][QS2]ಮರುಭೂಮಿಯು ಹುಲ್ಲುಗಾವಲಾಗುವದು. [QE][QS]ಮರಗಳು ಹಣ್ಣುಗಳನ್ನು ಬಿಡುವವು. [QE][QS2]ಅಂಜೂರದ ಮರಗಳೂ ದ್ರಾಕ್ಷಿಬಳ್ಳಿಗಳೂ ಬಹಳ ಹಣ್ಣುಗಳನ್ನು ಬಿಡುವವು. [QE][PBR]
23. [QS]ಆದ್ದರಿಂದ ಚೀಯೋನಿನ ಜನರೇ, ಸಂತೋಷಪಡಿರಿ. [QE][QS2]ನಿಮ್ಮ ದೇವರಾದ ಯೆಹೋವನಲ್ಲಿ ಸಂತೋಷಿಸಿರಿ. [QE][QS]ಆತನು ನಿಮಗೆ ಮಳೆ ಸುರಿಸುವನು. [QE][QS2]ಹಿಂದಿನಂತೆ ನಿಮಗೆ ಮುಂಗಾರು, ಹಿಂಗಾರು ಮಳೆಗಳನ್ನು ಸುರಿಸುವನು. [QE]
24. [QS]ಕಣಜಗಳು ಗೋದಿಯಿಂದ ತುಂಬಿರುವವು. [QE][QS2]ಪಿಪಾಯಿಗಳು ಎಣ್ಣೆಯಿಂದಲೂ ದ್ರಾಕ್ಷಾರಸದಿಂದಲೂ ತುಂಬಿತುಳುಕುವವು. [QE]
25. [QS]“ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ನನ್ನ ಸೈನ್ಯವನ್ನು ಕಳುಹಿಸಿದೆನು. [QE][QS2]ಮಿಡತೆಗಳ ಗುಂಪು, ದೊಡ್ಡ ಮಿಡತೆ, [QE][QS2]ನಾಶಮಾಡುವ ಮಿಡತೆ, ಹಾರುವ ಮಿಡತೆ, ಚೂರಿ ಮಿಡತೆಗಳು ಬಂದು ನಿಮಗಿದ್ದದ್ದನ್ನೆಲ್ಲಾ ತಿಂದುಬಿಟ್ಟವು. [QE][QS]ಆದರೆ ಯೆಹೋವನಾದ ನಾನು ನಿಮ್ಮ ಸಂಕಟಕಾಲಕ್ಕೆ ಬದಲಾಗಿ [QE][QS2]ಸುಭಿಕ್ಷ ಕಾಲವನ್ನು ದಯಪಾಲಿಸುವೆನು. [QE]
26. [QS]ಆಗ ನಿಮಗೆ ತಿನ್ನಲು ಏನೂ ಕಡಿಮೆ ಇರುವುದಿಲ್ಲ. [QE][QS2]ನೀವು ಸಂತೃಪ್ತರಾಗುವಿರಿ. [QE][QS]ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ. [QE][QS2]ಆತನು ನಿಮಗೆ ಆಶ್ಚರ್ಯವಾದ ಕಾರ್ಯವನ್ನು ಮಾಡಿದ್ದಾನೆ. [QE][QS]ನನ್ನ ಜನರು ಇನ್ನು ಮುಂದೆ ಎಂದೂ ನಾಚಿಕೆಗೆ ಗುರಿಯಾಗರು. [QE]
27. [QS]ಇಸ್ರೇಲರೊಂದಿಗೆ ನಾನು ಇದ್ದೇನೆ ಎಂದು ನೀವು ತಿಳಿಯುವಿರಿ. [QE][QS2]ನಿಮ್ಮ ದೇವರಾದ ಯೆಹೋವನು ನಾನೇ ಎಂದು ನೀವು ತಿಳಿಯುವಿರಿ. [QE][QS2]ನನ್ನ ಹೊರತು ಬೇರೆ ದೇವರುಗಳಿಲ್ಲ. [QE][QS]ನನ್ನ ಜನರು ಇನ್ನು ಮುಂದೆ ನಾಚಿಕೆಗೆ ಗುರಿಯಾಗುವುದಿಲ್ಲ.” [QE]
28. {#1ದೇವರು ಎಲ್ಲಾ ಜನರ ಮೇಲೆ ತನ್ನ ಆತ್ಮವನ್ನು ಸುರಿಸುವನು } [QS]“ಆ ಬಳಿಕ ನಾನು [QE][QS2]ನನ್ನ ಆತ್ಮವನ್ನು ಎಲ್ಲಾ ತರದ ಜನರ ಮೇಲೆ ಸುರಿಸುವೆನು. [QE][QS]ನಿಮ್ಮ ಗಂಡುಹೆಣ್ಣು ಮಕ್ಕಳು ಪ್ರವಾದಿಸುವರು. [QE][QS2]ನಿಮ್ಮ ವೃದ್ಧರು ಕನಸು ಕಾಣುವರು. [QE][QS2]ನಿಮ್ಮ ಯುವಕರಿಗೆ ದರ್ಶನಗಳಾಗುವವು. [QE]
29. [QS]ಆ ಸಮಯದಲ್ಲಿ ಸೇವಕಸೇವಕಿಯರ ಮೇಲೆಯೂ [QE][QS2]ನನ್ನ ಆತ್ಮವನ್ನು ಸುರಿಸುವೆನು. [QE]
30. [QS]ಭೂಮ್ಯಾಕಾಶಗಳಲ್ಲಿ ವಿಚಿತ್ರ ಸಂಗತಿಗಳನ್ನು ನಾನು ತೋರಿಸುವೆನು. [QE][QS2]ಅಲ್ಲಿ ರಕ್ತ, ಬೆಂಕಿ ಮತ್ತು ದಟ್ಟವಾದ ಹೊಗೆಯು ಇರುವುದು. [QE]
31. [QS]ಸೂರ್ಯನು ಕತ್ತಲಾಗುವನು, [QE][QS2]ಚಂದ್ರನು ರಕ್ತದಂತಾಗುವನು. [QE][QS2]ಆಗ ಯೆಹೋವನ ಭಯಂಕರ ದಿನವು ಬರುವುದು. [QE]
32. [QS]ಆಗ ಯೆಹೋವನ ಹೆಸರನ್ನು ಹೇಳಿಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು. [QE][QS2]ಚೀಯೋನ್ ಪರ್ವತದಲ್ಲಿಯೂ ಜೆರುಸಲೇಮಿನಲ್ಲಿಯೂ ರಕ್ಷಿಸಲ್ಪಟ್ಟ ಜನರಿರುವರು. [QE][QS2]ಯೆಹೋವನು ಹೇಳಿದ ಪ್ರಕಾರವೇ ಇದು ಆಗುವುದು. [QE][QS]ಉಳಿದ ಜನರಲ್ಲಿ ಯೆಹೋವನು ಕರೆದಿರುವ [QE][QS2]ಜನರು ಸೇರಿಕೊಂಡಿರುವರು. [QE][PBR]