1. {#1ದೆಬೋರಳ ಜಯಗೀತೆ } [PS]ಇಸ್ರೇಲರು ಸೀಸೆರನನ್ನು ಸೋಲಿಸಿದ ದಿನ ದೆಬೋರಳು ಮತ್ತು ಅಬೀನೋವಮನ ಮಗನಾದ ಬಾರಾಕನು ಈ ಗೀತೆಯನ್ನು ಹಾಡಿದರು: [PE][PBR]
2. [QS]“ಇಸ್ರೇಲರು ಯುದ್ಧ ಸನ್ನದ್ಧರಾಗುತ್ತಿದ್ದಾರೆ; [QE][QS2]ಜನರು ಸ್ವಇಚ್ಛೆಯಿಂದ ಯುದ್ಧಕ್ಕೆ ಹೋಗಲು ಒಪ್ಪಿದ್ದಾರೆ; [QE][QS]ಯೆಹೋವನಿಗೆ ಸ್ತೋತ್ರವಾಗಲಿ! [QE][PBR]
3. [QS]“ಅರಸರೇ ಕೇಳಿರಿ, [QE][QS2]ಆಳುವವರೇ ಗಮನಿಸಿರಿ! [QE][QS]ನಾನು ಹಾಡುವೆನು. [QE][QS2]ನಾನು ಯೆಹೋವನನ್ನು ಕೀರ್ತಿಸುವೆನು. [QE][QS]ಇಸ್ರೇಲಿನ ದೇವರಾದ ಯೆಹೋವನಿಗೆ [QE][QS2]ನಾನು ಗಾನ ಮಾಡುವೆನು. [QE][PBR]
4. [QS]“ಯೆಹೋವನೇ, ನೀನು ಹಿಂದೆ ಸೆಯೀರಿನ ಪ್ರದೇಶದಿಂದ ಬಂದೆ. [QE][QS2]ನೀನು ಎದೋಮ್ಯರ ಪ್ರದೇಶದಿಂದ ನಡೆದುಕೊಂಡು ಹೋದೆ. [QE][QS]ನೀನು ನಡೆಯುವಾಗ ಭೂಮಿ ನಡುಗಿತು; ಆಕಾಶ ಹನಿಗರೆಯಿತು. [QE][QS2]ಮೇಘಮಂಡಲವು ಮಳೆಗರೆಯಿತು. [QE]
5. [QS]ಸೀನಾಯಿ ಬೆಟ್ಟದ ದೇವರಾದ ಯೆಹೋವನ ಎದುರಿಗೆ, [QE][QS2]ಇಸ್ರೇಲರ ದೇವರಾದ ಯೆಹೋವನ ಎದುರಿಗೆ, ಪರ್ವತಗಳು ನಡುಗಿದವು. [QE][PBR]
6. [QS]“ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ ಯಾಯೇಲಳ ದಿನಗಳಲ್ಲಿಯೂ [QE][QS2]ಮುಖ್ಯಮಾರ್ಗಗಳು ಬರಿದಾಗಿದ್ದವು. [QE][QS2]ವ್ಯಾಪಾರಿಗಳು[* ವ್ಯಾಪಾರಿಗಳು ವ್ಯಾಪಾರಿಗಳ ಗುಂಪು. ಸಾಮಾನ್ಯವಾಗಿ ವ್ಯಾಪಾರಿ ಗಳು ತಮ್ಮ ಕತ್ತೆಗಳ ಅಥವಾ ಒಂಟೆಗಳ ಮೇಲೆ ಸರಕುಗಳನ್ನು ಹೇರಿ ಕೊಂಡು ಒಂದು ಗುಂಪಿನಲ್ಲಿ ಪ್ರಯಾಣ ಮಾಡುತ್ತಿದ್ದರು. ] ಮತ್ತು ಪ್ರಯಾಣಿಕರು ಸೀಳುದಾರಿಯಿಂದ ಹೋಗುತ್ತಿದ್ದರು. [QE][PBR]
7. [QS]“ದೆಬೋರಳೇ, ನೀನು ಬರುವವರೆಗೆ, [QE][QS2]ನೀನು ಇಸ್ರೇಲರಿಗೆ ತಾಯಿಯಾಗಿ ಬರುವವರೆಗೆ, ಶೂರರೇ ಇರಲಿಲ್ಲ. [QE][QS2]ಇಸ್ರೇಲಿನಲ್ಲಿ ವೀರರೇ ಇರಲಿಲ್ಲ. [QE]
8. [QS]ಅವರು ಹೊಸ ದೇವರುಗಳನ್ನು ಆರಿಸಿಕೊಂಡರು; [QE][QS2]ಅದಕ್ಕಾಗಿ ಅವರು ತಮ್ಮ ಪಟ್ಟಣ ದ್ವಾರಗಳಲ್ಲಿ ಯುದ್ಧ ಮಾಡಬೇಕಾಯಿತು. [QE][QS]ಇಸ್ರೇಲರ ನಲವತ್ತು ಸಾವಿರ ಸೈನಿಕರಲ್ಲಿ [QE][QS2]ಒಬ್ಬನಿಗೂ ಗುರಾಣಿ ಬರ್ಜಿಗಳಿರಲಿಲ್ಲ. [QE][PBR]
9. [QS]“ನನ್ನ ಹೃದಯವು ಇಸ್ರೇಲಿನ ಸೇನಾಧಿಪತಿಗಳ ಸಂಗಡವಿದೆ. [QE][QS2]ಈ ಸೇನಾಧಿಪತಿಗಳು ಇಸ್ರೇಲಿಗಾಗಿ ಯುದ್ಧಮಾಡಲು ಸ್ವಇಚ್ಛೆಯಿಂದ ಬಂದರು. [QE][QS]ಯೆಹೋವನಿಗೆ ಸ್ತೋತ್ರವಾಗಲಿ. [QE][PBR]
10. [QS]“ಬಿಳಿಯ ಕತ್ತೆಗಳ ಮೇಲೆ ಸವಾರಿ ಮಾಡುವವರೇ, [QE][QS2]ರತ್ನಗಂಬಳಿಯ ಮೇಲೆ ಕುಳಿತುಕೊಳ್ಳುವವರೇ, [QE][QS2]ಮಾರ್ಗಗಳ ಮೇಲೆ ಹೋಗುವ ಪ್ರಯಾಣಿಕರೇ, ಗಮನಿಸಿರಿ! [QE]
11. [QS]ತಾಳ ಝಲ್ಲರಿಗಳ ಧ್ವನಿಯನ್ನು ಕೇಳಿರಿ; [QE][QS2]ಬಾವಿಗಳ ಹತ್ತಿರ ನೆರೆದ ಜನಸಮೂಹದ ಧ್ವನಿಯನ್ನು ಕೇಳಿರಿ; [QE][QS]ಅಲ್ಲಿ ಅವು ಯೆಹೋವನ ವಿಜಯದ ಬಗ್ಗೆ ಹೇಳುತ್ತವೆ. [QE][QS]ಯೆಹೋವನ ಜನರು ಪಟ್ಟಣ ದ್ವಾರದಲ್ಲಿ ಯುದ್ಧಕ್ಕೆ ಹೋದಾಗ [QE][QS2]ಇಸ್ರೇಲಿನಲ್ಲಿ ಅವರ ವಿಜಯದ ಬಗ್ಗೆ ಹೇಳುತ್ತವೆ. [QE][PBR]
12. [QS]“ಏಳು, ಏಳು ದೆಬೋರಳೇ! [QE][QS2]ಏಳು, ಎದ್ದೇಳು, ಒಂದು ಗೀತೆಯನ್ನು ಹಾಡು! [QE][QS]ಬಾರಾಕನೇ, ಏಳು! [QE][QS2]ಅಬೀನೋವಮನ ಮಗನೇ, ಹೋಗು; ನಿನ್ನ ಶತ್ರುಗಳನ್ನು ಸೆರೆ ಹಿಡಿದುಕೊ! [QE][PBR]
13. [QS]“ಆಗ ಬದುಕಿಕೊಂಡಿದ್ದವರು ನಾಯಕರ ಬಳಿಗೆ ಹೋದರು. [QE][QS2]ಯೆಹೋವನ ಜನರೇ, ನನ್ನೊಂದಿಗೂ ಸೈನಿಕರೊಂದಿಗೂ ಬನ್ನಿರಿ. [QE][PBR]
14. [QS]“ಅಮಾಲೇಕ್ ಪರ್ವತ ಪ್ರದೇಶದಲ್ಲಿ ವಾಸಮಾಡುತ್ತಿದ್ದ ಎಫ್ರಾಯೀಮ್ಯರು ಬಂದರು; [QE][QS2]ನಿನ್ನನ್ನೂ ನಿನ್ನ ಜನರನ್ನೂ ಅನುಸರಿಸುತ್ತಿದ್ದ ಬೆನ್ಯಾಮೀನ್ಯರೂ ಬಂದರು; [QE][QS]ಮಾಕೀರನ ಕುಲದಿಂದ ನಾಯಕರು ಬಂದರು; [QE][QS2]ಜೆಬುಲೂನ್ ಕುಲದಿಂದ ನಾಯಕರು ಕಂಚಿನ ದೊಣ್ಣೆಗಳೊಡನೆ ಬಂದರು. [QE]
15. [QS]ಇಸ್ಸಾಕಾರ್ ಕುಲದ ನಾಯಕರು ದೆಬೋರಳ ಜೊತೆಯಲ್ಲಿದ್ದರು. [QE][QS2]ಇಸ್ಸಾಕಾರ್ ಕುಲದವರು ಬಾರಾಕನಿಗೆ ನಂಬಿಗಸ್ತರಾಗಿದ್ದರು. [QE][QS2]ಅವರು ಕಾಲು ನಡಿಗೆಯಿಂದ ಕಣಿವೆಗೆ ಬಂದರು. [QE][PBR] [QS]“ರೂಬೇನ್ಯರೇ, ನಿಮ್ಮ ಸೈನ್ಯದಲ್ಲಿ ತುಂಬ ಶೂರರಿದ್ದಾರೆ. [QE]
[QS2]16. ಹೀಗಿರಲು ನೀನು ಕುರಿಯ ಹಟ್ಟಿಗಳ ಗೋಡೆಗೆ ಒರಗಿಕೊಂಡು ಕುಳಿತಿರುವುದೇಕೆ? [QE][QS]ರೂಬೇನ್ಯರ ಶೂರ ಸೈನಿಕರು ಯುದ್ಧದ ಬಗ್ಗೆ ಬಹಳವಾಗಿ ಯೋಚಿಸಿದರು, [QE][QS2]ಆದರೆ ಕುರಿಗಳಿಗಾಗಿ ಬಾರಿಸುವ ಸಂಗೀತವನ್ನು ಕೇಳುತ್ತಾ ಮನೆಯಲ್ಲಿ ಇದ್ದುಬಿಟ್ಟರು. [QE]
17. [QS]ಗಿಲ್ಯಾದಿನ ಜನರು ಜೋರ್ಡನ್ ನದಿಯ ಆಚೆಯ ದಡದಲ್ಲಿದ್ದ ತಮ್ಮ ಶಿಬಿರಗಳಲ್ಲಿ ಇದ್ದುಬಿಟ್ಟರು.[† ರೂಬೇನ್ಯರ … ಇದ್ದುಬಿಟ್ಟರು ಈ ಗೀತೆ ರೂಬೇನ್ಯರನ್ನು ತಮಾಷೆ ಮಾಡುತ್ತದೆ. ] [QE][QS2]ದಾನ್ ಕುಲದವರೇ, ನೀವೇಕೆ ನಿಮ್ಮ ಹಡಗುಗಳಲ್ಲಿಯೇ ಉಳಿದುಬಿಟ್ಟಿರಿ? [QE][QS]ಆಶೇರ್ ಕುಲದವರು ಸಮುದ್ರತೀರದಲ್ಲಿರುವ [QE][QS2]ತಮ್ಮ ಸುರಕ್ಷಿತವಾದ ಬಂದರುಗಳಲ್ಲಿ ಉಳಿದುಕೊಂಡರು. [QE][PBR]
18. [QS]“ಆದರೆ ಜೆಬುಲೂನ್ಯರೂ ನಫ್ತಾಲ್ಯರೂ ಆ ಬೆಟ್ಟಗಳ ಮೇಲೆ [QE][QS2]ತಮ್ಮ ಜೀವವನ್ನೇ ಮುಡಿಪಾಗಿಟ್ಟು ಯುದ್ಧ ಮಾಡಿದರು. [QE]
19. [QS]ಕಾನಾನ್ಯ ಅರಸರು ಬಂದು ಯುದ್ಧಮಾಡಿದರು; [QE][QS2]ಅವರು ಮೆಗಿದ್ದೋ ಪ್ರವಾಹಗಳ ಬಳಿಯಲ್ಲಿರುವ ತಾನಾಕದಲ್ಲಿ ಹೋರಾಡಿದರು. [QE][QS2]ಆದರೆ ಅವರು ಯಾವ ಸಂಪತ್ತನ್ನು ತೆಗೆದುಕೊಂಡು ಹೋಗಲಿಲ್ಲ! [QE]
20. [QS]ಪರಲೋಕದಿಂದ ನಕ್ಷತ್ರಗಳು ಯುದ್ಧ ಮಾಡಿದವು. [QE][QS2]ನಕ್ಷತ್ರಗಳು ಆಕಾಶಪಥದಿಂದ ಸೀಸೆರನೊಡನೆ ಯುದ್ಧ ಮಾಡಿದವು. [QE]
21. [QS]ಪೂರ್ವಕಾಲದಿಂದ ಪ್ರಸಿದ್ಧವಾದ ಕೀಷೋನ್ ನದಿಯು [QE][QS2]ಸೀಸೆರನ ಜನರನ್ನು ಕೊಚ್ಚಿಕೊಂಡು ಹೋಯಿತು. [QE][QS]ನನ್ನ ಆತ್ಮವೇ, ಧೈರ್ಯದಿಂದ ಮುನ್ನುಗ್ಗು! [QE]
22. [QS]ಸೀಸೆರನ ಬಲಿಷ್ಠವಾದ ಕುದುರೆಗಳು ಭರದಿಂದ ಓಡಿದವು. [QE][QS2]ಆ ಕುದುರೆಗಳ ಕಾಲುಗಳು ನೆಲಕ್ಕೆ ಅಪ್ಪಳಿಸಿದವು. [QE][PBR]
23. [QS]“ಮೇರೋಜ್ ಊರಿಗೆ ಶಾಪಹಾಕಿರಿ; [QE][QS2]ಅಲ್ಲಿಯ ಜನರಿಗೆ ಶಾಪಹಾಕಿರಿ; [QE][QS]ಏಕೆಂದರೆ ಅವರು ಯೆಹೋವನ ಸಹಾಯಕ್ಕೆ ತಮ್ಮ ಸೈನ್ಯದೊಂದಿಗೆ ಬರಲಿಲ್ಲ” [QE][QS2]ಎಂದನು ಯೆಹೋವನ ದೂತನು. [QE]
24. [QS]ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳಿಗೆ [QE][QS2]ಎಲ್ಲ ಹೆಂಗಸರಿಗಿಂತಲೂ ಹೆಚ್ಚಿಗೆ ದೇವರ ಆಶೀರ್ವಾದವಾಗುವುದು. [QE]
25. [QS]ಸೀಸೆರನು ನೀರು ಕೇಳಿದನು; [QE][QS2]ಯಾಯೇಲಳು ಅವನಿಗೆ ಹಾಲು ಕೊಟ್ಟಳು. [QE][QS]ಅರಸನಿಗೆ ಯೋಗ್ಯವಾದ ಬಟ್ಟಲಲ್ಲಿ [QE][QS2]ಅವಳು ಅವನಿಗೆ ಕೆನೆಯನ್ನು ತಂದಳು. [QE]
26. [QS]ನಂತರ ಯಾಯೇಲಳು ಕೈಚಾಚಿ ಗುಡಾರದ ಗೂಟವನ್ನು ತೆಗೆದುಕೊಂಡಳು. [QE][QS2]ಅವಳು ಬಲಗೈಯನ್ನು ಚಾಚಿ ದೊಡ್ಡ ಕೊಡತಿಯನ್ನು ತೆಗೆದುಕೊಂಡಳು, [QE][QS]ಆ ಕೊಡತಿಯಿಂದ ಸೀಸೆರನ ತಲೆಯನ್ನು ಬಿರುಸಾಗಿ ಒಡೆದುಬಿಟ್ಟಳು; [QE][QS2]ಅವನ ಕಣತಲೆಗೆ ತಿವಿದು ಬಡಿದಳು. [QE]
27. [QS]ಅವನು ಯಾಯೇಲಳ ಪಾದಗಳ ಬಳಿಯಲ್ಲಿ [QE][QS2]ಬಗ್ಗಿಕೊಂಡು ಉರುಳಿಬಿದ್ದನು; [QE][QS]ಅವನು ಅವಳ ಪಾದಗಳ ಬಳಿಯಲ್ಲಿ ಕುಸಿದುಬಿದ್ದನು. [QE][QS2]ಸೀಸೆರನು ಕುಸಿದುಬಿದ್ದಲ್ಲಿಯೇ ಸತ್ತನು. [QE][PBR]
28. [QS]“ಸೀಸೆರನ ತಾಯಿ ಕಿಟಿಕಿಯ ಮೂಲಕ ನೋಡಿದಳು; [QE][QS2]ಆಕೆಯು ತೆರೆಯ ಮೂಲಕ ನೋಡಿ ಕೂಗಿದಳು. [QE][QS]‘ಸೀಸೆರನ ರಥಾಗಮನಕ್ಕೆ ಇಷ್ಟು ತಡವೇಕೆ? [QE][QS2]ಅವನ ರಥದ ಕುದುರೆಗಳ ಧ್ವನಿ ಬರಲು ಇಷ್ಟು ತಡವೇಕೆ?’ ಅಂದಳು. [QE][PBR]
29. [QS]“ಅವಳ ಸೇವಕಿಯರಲ್ಲಿ ಅತಿಬುದ್ಧಿವಂತಳು ಹೀಗೆ ಉತ್ತರಿಸಿದಳು. [QE][QS2]ಹೌದು, ಸೇವಕಿಯು ಉತ್ತರಿಸಿದಳು, [QE]
30. [QS]‘ಖಂಡಿತವಾಗಿ ಅವರು ಗೆದ್ದಿದ್ದಾರೆ, [QE][QS2]ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ! [QE][QS]ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ! [QE][QS2]ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು. [QE][QS]ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು. [QE][QS2]ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು; [QE][QS2]ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’ [QE][PBR]
31. [QS]“ಯೆಹೋವನೇ, ನಿನ್ನ ವೈರಿಗಳೆಲ್ಲಾ ಹೀಗೇ ಸಾಯಲಿ; [QE][QS2]ಆದರೆ ನಿನ್ನನ್ನು ಪ್ರೀತಿಸುವವರೆಲ್ಲರೂ ಬಲವಾಗಿದ್ದು ಉದಯಿಸುವ ಸೂರ್ಯನಂತೆ ಬೆಳಗಲಿ!” [QE][PBR] [PS]ನಲವತ್ತು ವರ್ಷಗಳವರೆಗೆ ದೇಶದಲ್ಲಿ ಶಾಂತಿ ನೆಲೆಸಿತ್ತು. [PE]