పవిత్ర బైబిల్

ఈజీ టు రీడ్ వెర్షన్ (ERV) - తెలుగు
సంఖ్యాకాండము
1. {#1ಜನರು ಮತ್ತೆ ಗುಣುಗುಟ್ಟಿದ್ದು } [PS]ಆ ರಾತ್ರಿಯಲ್ಲಿ ಜನರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು.
2. ಇಸ್ರೇಲರು ಮೋಶೆ ಆರೋನರ ವಿರುದ್ಧ ಗುಣುಗುಟ್ಟಿದರು. ಜನರೆಲ್ಲರೂ ಒಟ್ಟಾಗಿ ಮೋಶೆ ಆರೋನರ ಬಳಿಗೆ ಬಂದು, “ನಾವು ಈಜಿಪ್ಟಿನಲ್ಲಿಯಾಗಲೀ ಅಥವಾ ಈ ಮರುಭೂಮಿಯಲ್ಲಾಗಲಿ ಸತ್ತಿದ್ದರೆ ಒಳ್ಳೆಯದಿತ್ತು.
3. ಯುದ್ಧದಲ್ಲಿ ನಾವು ಸತ್ತುಹೋಗುವಂತೆ ಯೆಹೋವನು ನಮ್ಮನ್ನು ಈ ಹೊಸ ದೇಶಕ್ಕೆ ತರುತ್ತಿರುವುದೇಕೆ? ವೈರಿಗಳು ನಮ್ಮನ್ನು ಕೊಂದು ನಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತೆಗೆದುಕೊಳ್ಳುವರು. ನಾವು ಈಜಿಪ್ಟಿಗೆ ಮರಳಿಹೋಗುವುದೇ ಉತ್ತಮ” ಎಂದು ಹೇಳಿದರು. [PE]
4.
5. [PS]ಬಳಿಕ ಜನರು, “ನಾವು ಇನ್ನೊಬ್ಬ ನಾಯಕನನ್ನು ಆರಿಸಿಕೊಂಡು ಈಜಿಪ್ಟಿಗೆ ಮರಳಿಹೋಗೋಣ” ಎಂದು ಮಾತಾಡಿಕೊಂಡರು. [PE][PS]ಆಗ ಮೋಶೆ ಆರೋನರು ಇಸ್ರೇಲರ ಸರ್ವ ಸಮೂಹದವರ ಮುಂದೆ ಬೋರಲಬಿದ್ದರು.
6. ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬಂದವರಲ್ಲಿ ಇಬ್ಬರಾಗಿದ್ದರು. ಅವರು ಬೇಸರಗೊಂಡು ತಮ್ಮ ಬಟ್ಟೆಗಳನ್ನು ಹರಿದುಕೊಂಡರು.
7. ಇವರಿಬ್ಬರು ಇಸ್ರೇಲರೆಲ್ಲರಿಗೆ, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು,
8. ಅದು ಹಾಲೂ ಜೇನೂ ಹರಿಯುವ ದೇಶ. ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಆ ದೇಶದೊಳಗೆ ನಮ್ಮನ್ನು ಕರೆದೊಯ್ದು ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು.
9. ಹೀಗಿರುವುದರಿಂದ ಯೆಹೋವನಿಗೆ ವಿರುದ್ಧವಾಗಿ ಏಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ನಾವು ಅವರನ್ನು ಸೋಲಿಸಬಹುದು. ಅವರಿಗೆ ಯಾವ ಸಂರಕ್ಷಣೆ ಇರುವುದಿಲ್ಲ. ಆದರೆ ನಮ್ಮ ಕಡೆ ಯೆಹೋವನು ಇದ್ದಾನೆ. ಆದ್ದರಿಂದ ಭಯಪಡಬೇಡಿರಿ” ಅಂದರು. [PE]
10. [PS]ಎಲ್ಲಾ ಜನರು ಯೆಹೋಶುವನನ್ನು ಮತ್ತು ಕಾಲೇಬನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತಾಡತೊಡಗಿದರು. ಆದರೆ ಯೆಹೋವನ ಮಹಿಮೆ ದೇವದರ್ಶನಗುಡಾರ ಮೇಲೆ ಪ್ರತ್ಯಕ್ಷವಾದದ್ದು ಇಸ್ರೇಲರೆಲ್ಲರಿಗೆ ಕಾಣಿಸಿತು. ಯೆಹೋವನು ಮೋಶೆಯೊಡನೆ ಮಾತಾಡಿ,
11. “ಈ ಜನರು ಇನ್ನೆಷ್ಟು ಕಾಲದವರೆಗೆ ನನ್ನನ್ನು ತಿರಸ್ಕರಿಸುವರು? ನಾನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನೆಷ್ಟು ಕಾಲದವರೆಗೆ ನನ್ನನ್ನು ನಂಬದೆ ಇರುವರು?
12. ಸರಿ, ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು” ಎಂದು ಹೇಳಿದನು. [PE]
13. [PS]ಅದಕ್ಕೆ ಮೋಶೆ ಯೆಹೋವನಿಗೆ, “ನೀನು ನಿನ್ನ ಜನರಾದ ಇಸ್ರೇಲರನ್ನು ನಿನ್ನ ಶಕ್ತಿಯ ಮೂಲಕ ಈಜಿಪ್ಟಿನಿಂದ ಕರೆದುಕೊಂಡು ಬಂದೆ. ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು ಈ ಸುದ್ದಿಯನ್ನು ಕೇಳಿ ಕಾನಾನಿನ ನಿವಾಸಿಗಳಿಗೆ ಅದರ ಬಗ್ಗೆ ತಿಳಿಸುವರು.
14. ಅದಲ್ಲದೆ, ಈ ದೇಶದವರು ನೀನು ಇಸ್ರೇಲರ ಮಧ್ಯದಲ್ಲಿರುವ ಸಂಗತಿಯನ್ನು ಕೇಳಿದ್ದಾರೆ. ನೀನು ಇಸ್ರೇಲರಿಗೆ ಪ್ರತ್ಯಕ್ಷನಾಗಿ ಕಾಣಿಸಿಕೊಂಡದ್ದು ಅವರಿಗೆ ತಿಳಿದಿದೆ. ನಿನ್ನ ಮೇಘವು ಇಸ್ರೇಲರ ಮೇಲಿರುವುದು ಅವರಿಗೆ ಗೊತ್ತಿದೆ. ನೀನು ಇಸ್ರೇಲರನ್ನು ಹಗಲಲ್ಲಿ ಮೇಘಸ್ತಂಭದ ಮೂಲಕವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದ ಮೂಲಕವಾಗಿಯೂ ಮುನ್ನಡೆಸುತ್ತಿರುವುದು ಅವರಿಗೆ ತಿಳಿದಿದೆ.
15. ಹೀಗಿರಲಾಗಿ, ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ, ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ,
16. ‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಇಸ್ರೇಲರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ ಅವರನ್ನು ಮರುಭೂಮಿಯಲ್ಲಿ ನಾಶಮಾಡಿದನು’ ಎಂದು ಮಾತಾಡಿಕೊಳ್ಳುವರು. [PE]
17. [PS]“ಆದ್ದರಿಂದ ಒಡೆಯನೇ, ನೀನು ಹೇಳಿದಂತೆಯೇ ನಿನ್ನ ತಾಳ್ಮೆಯು ದೀರ್ಘವಾಗಿರಲಿ.
18. ನೀನು ನಿನ್ನ ವಿಷಯದಲ್ಲಿ ‘ಯೆಹೋವನು ದೀರ್ಘಶಾಂತನು, ಬಹುಪ್ರೀತಿಯುಳ್ಳವನು, ಅಪರಾಧ, ಪಾಪಗಳನ್ನು ಕ್ಷಮಿಸುವವನಾಗಿದ್ದರೂ ಎಲ್ಲಾ ದಂಡನೆಯನ್ನು ರದ್ದುಪಡಿಸದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ನೀನೇ ಹೇಳಿರುವಿಯಲ್ಲಾ!
19. ನಾವು ಈಜಿಪ್ಟಿನಿಂದ ಬಂದದ್ದು ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು. [PE]
20. [PS]ಅದಕ್ಕೆ ಯೆಹೋವನು, “ನೀನು ಕೇಳಿಕೊಂಡಂತೆ ನಾನು ಜನರನ್ನು ಕ್ಷಮಿಸುವೆನು.
21. ಆದಾಗ್ಯೂ ನನ್ನ ಜೀವದಾಣೆ ಮತ್ತು ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರಬೇಕೆಂಬುವ ನಿಶ್ಚಯ ವಾಕ್ಯದ ಆಣೆ,
22. ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಾನು ನಡಿಸಿರುವ ಮಹಾತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಜನರೆಲ್ಲರೂ ಪದೇಪದೇ ನನ್ನನ್ನು ಪರೀಕ್ಷಿಸಿದ್ದರಿಂದ ಮತ್ತು ನನಗೆ ವಿಧೇಯರಾಗದಿದ್ದ ಕಾರಣ,
23. ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ. ನನ್ನನ್ನು ತಿರಸ್ಕರಿಸಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ.
24. ಆದರೆ ನನ್ನ ಸೇವಕನಾದ ಕಾಲೇಬನು ಅವರ ಹಾಗಲ್ಲ, ಅವನು ನನ್ನನ್ನು ಮನಃಪೂರ್ವಕವಾಗಿ ಹಿಂಬಾಲಿಸಿದ್ದಾನೆ. ಆದ್ದರಿಂದ ಅವನು ಸಂಚರಿಸಿ ನೋಡಿದ ದೇಶಕ್ಕೆ ಅವನನ್ನು ಬರಮಾಡುವೆನು ಮತ್ತು ಅವನ ಸಂತತಿಯವರು ಆ ದೇಶವನ್ನು ಹೊಂದುವರು.
25. ಅಮಾಲೇಕ್ಯರೂ ಕಾನಾನ್ಯರೂ ಆ ಕಣಿವೆಯಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಕೆಂಪುಸಮುದ್ರಕ್ಕೆ ಹೋಗುವ ದಾರಿಯ ಮೂಲಕ ಮರುಭೂಮಿಗೆ ಮರಳಿ ಪ್ರಯಾಣ ಮಾಡಬೇಕು” ಎಂದು ಹೇಳಿದನು. [PE]
26. {#1ಯೆಹೋವನು ಜನರನ್ನು ಶಿಕ್ಷಿಸಿದ್ದು } [PS](26-27)ಯೆಹೋವನು ಮೋಶೆ ಆರೋನರಿಗೆ, “ಈ ದುಷ್ಟ ಸಮೂಹದವರು ನನಗೆ ವಿರುದ್ಧವಾಗಿ ಇನ್ನೆಷ್ಟರವರೆಗೆ ಗುಣುಗುಟ್ಟುತ್ತಲೇ ಇರುತ್ತಾರೆ. ಇಸ್ರೇಲರು ನನಗೆ ವಿರೋಧವಾಗಿ ಗುಣುಗುಟ್ಟುವುದು ನನಗೆ ಕೇಳಿಸಿದೆ.
27.
28. ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ‘ಯೆಹೋವನು ಹೇಳುವುದೇನೆಂದರೆ: ನನ್ನ ಜೀವದಾಣೆ. ನೀವು ಏನನ್ನು ಹೇಳಿದಿರೋ ಅದನ್ನೇ ನಿಮಗೆ ಮಾಡುತ್ತೇನೆ;
29. ನಿಮ್ಮ ಶವಗಳು ಈ ಮರುಭೂಮಿಯಲ್ಲಿಯೇ ಬೀಳುವವು. ನೀವು ನನಗೆ ವಿರೋಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಲೆಕ್ಕಿಸಲ್ಪಟ್ಟವರೆಲ್ಲರೂ ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು.
30. ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಬೇರೆ ಯಾರೂ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಸೇರುವುದಿಲ್ಲ.
31. ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಪ್ರವೇಶಿಸುವಂತೆ ಮಾಡುವೆನು. ನೀವು ತಿರಸ್ಕರಿಸಿದ ದೇಶವನ್ನು ಅವರು ಅನುಭೋಗಿಸುವರು.
32. ನೀವಂತೂ ಈ ಮರುಭೂಮಿಯಲ್ಲಿ ಸಾಯುವಿರಿ. ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲ್ಲಿ ಪರ್ಯಂತರ ಬೀಳುವವು. [PE]
33. [PS]“ ‘ನಿಮ್ಮ ಅಪನಂಬಿಗಸ್ತಿಕೆಯ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನೀವು ಸಾಯುವತನಕ ನಲವತ್ತು ವರ್ಷ ಮರುಭೂಮಿಯಲ್ಲಿ ಅಲೆದಾಡುವರು.
34. ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ ನಲವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ. ನನ್ನನ್ನು ತಿರಸ್ಕರಿಸುವುದೆಂದರೆ ಏನೆಂಬುದು ನಿಮಗೆ ಗೊತ್ತಾಗುತ್ತದೆ.’ [PE]
35.
36. [PS]“ಇದು ಯೆಹೋವನೆಂಬ ನಾನು ಹೇಳಿದ ಮಾತು. ನನಗೆ ವಿರೋಧವಾಗಿ ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಖಂಡಿತವಾಗಿ ಮಾಡುತ್ತೇನೆ. ಈ ಮರುಭೂಮಿಯಲ್ಲಿಯೇ ಇವರೆಲ್ಲರೂ ಸಾಯಬೇಕು” ಎಂದು ಹೇಳಿದನು. [PE][PS](36-37)ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟು ಹಿಂದಿರುಗಿಬಂದು ಆ ದೇಶದ ವಿಷಯದಲ್ಲಿ ಅಶುಭಸಮಾಚಾರವನ್ನು ಹೇಳಿ ಸರ್ವಸಮೂಹದರವರನ್ನು ಅವರಿಗೆ ವಿರೋಧವಾಗಿ ಗುಣುಗುಟ್ಟುವಂತೆ ಮಾಡಿದ ಹತ್ತು ಜನರು ಯೆಹೋವನಿಂದ ವ್ಯಾಧಿಗೊಳಗಾಗಿ ಸತ್ತರು.
37.
38. ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನ ಹೊರತು ಉಳಿದ ಹತ್ತು ಮಂದಿ ಸತ್ತರು. ಯೆಹೋವನು ಅವರಿಬ್ಬರನ್ನು ಉಳಿಸಿದನು. ಅವರಿಗೆ ವ್ಯಾಧಿಯು ತಗಲಲಿಲ್ಲ. [PE]
39. {#1ಜನರು ಕಾನಾನಿಗೆ ಹೋಗಲು ಪ್ರಯತ್ನಿಸಿದ್ದು } [PS]ಮೋಶೆಯು ಈ ಎಲ್ಲಾ ಸಂಗತಿಗಳನ್ನು ಇಸ್ರೇಲರಿಗೆಲ್ಲಾ ಹೇಳಲಾಗಿ ಅವರು ಬಹಳ ದುಃಖಪಟ್ಟರು.
40. ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ. ಯೆಹೋವನು ವಾಗ್ದಾನ ಮಾಡಿರುವ ದೇಶಕ್ಕೆ ಹೋಗಲು ನಾವು ಈಗ ಸಿದ್ಧರಾಗಿದ್ದೇವೆ” ಎಂದು ಹೇಳಿದರು. [PE]
41. [PS]ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ನೀವು ಯಶಸ್ವಿಯಾಗುವುದಿಲ್ಲ.
42. ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ. ನೀವು ಆ ದೇಶಕ್ಕೆ ಹೋಗಬೇಡಿರಿ. ಇಲ್ಲವಾದರೆ, ನಿಮ್ಮ ಶತ್ರುಗಳಿಂದ ಸೋಲಿಸಲ್ಪಡುವಿರಿ.
43. ಅಮಾಲೇಕ್ಯರೂ ಕಾನಾನ್ಯರೂ ನಿಮ್ಮನ್ನು ಎದುರಿಸಲು ಅಲ್ಲಿರುವುದರಿಂದ ನೀವು ಅವರ ಖಡ್ಗದಿಂದ ಸಾಯುವಿರಿ. ನೀವು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು. [PE]
44. [PS]ಆದರೆ ಜನರು ಮೋಶೆಯ ಮಾತನ್ನು ನಂಬಲಿಲ್ಲ. ಅವರು ಪರ್ವತಪ್ರದೇಶದ ಕಡೆಗೆ ಹೊರಟರು. ಆದರೆ ಮೋಶೆಯೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯೂ ಜನರೊಂದಿಗೆ ಹೋಗಲಿಲ್ಲ.
45. ಆಗ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾನ್ಯರೂ ಇಳಿದುಬಂದು ಅವರನ್ನು ಸೋಲಿಸಿ ಹೊರ್ಮಾ ಪಟ್ಟಣದವರೆಗೂ ಅಟ್ಟಿಸಿಕೊಂಡುಬಂದು ಸಂಹರಿಸಿದರು. [PE]
మొత్తం 36 అధ్యాయాలు, ఎంపిక చేయబడింది అధ్యాయము 14 / 36
1 {#1ಜನರು ಮತ್ತೆ ಗುಣುಗುಟ್ಟಿದ್ದು } ಆ ರಾತ್ರಿಯಲ್ಲಿ ಜನರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು. 2 ಇಸ್ರೇಲರು ಮೋಶೆ ಆರೋನರ ವಿರುದ್ಧ ಗುಣುಗುಟ್ಟಿದರು. ಜನರೆಲ್ಲರೂ ಒಟ್ಟಾಗಿ ಮೋಶೆ ಆರೋನರ ಬಳಿಗೆ ಬಂದು, “ನಾವು ಈಜಿಪ್ಟಿನಲ್ಲಿಯಾಗಲೀ ಅಥವಾ ಈ ಮರುಭೂಮಿಯಲ್ಲಾಗಲಿ ಸತ್ತಿದ್ದರೆ ಒಳ್ಳೆಯದಿತ್ತು. 3 ಯುದ್ಧದಲ್ಲಿ ನಾವು ಸತ್ತುಹೋಗುವಂತೆ ಯೆಹೋವನು ನಮ್ಮನ್ನು ಈ ಹೊಸ ದೇಶಕ್ಕೆ ತರುತ್ತಿರುವುದೇಕೆ? ವೈರಿಗಳು ನಮ್ಮನ್ನು ಕೊಂದು ನಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತೆಗೆದುಕೊಳ್ಳುವರು. ನಾವು ಈಜಿಪ್ಟಿಗೆ ಮರಳಿಹೋಗುವುದೇ ಉತ್ತಮ” ಎಂದು ಹೇಳಿದರು. 4 5 ಬಳಿಕ ಜನರು, “ನಾವು ಇನ್ನೊಬ್ಬ ನಾಯಕನನ್ನು ಆರಿಸಿಕೊಂಡು ಈಜಿಪ್ಟಿಗೆ ಮರಳಿಹೋಗೋಣ” ಎಂದು ಮಾತಾಡಿಕೊಂಡರು. ಆಗ ಮೋಶೆ ಆರೋನರು ಇಸ್ರೇಲರ ಸರ್ವ ಸಮೂಹದವರ ಮುಂದೆ ಬೋರಲಬಿದ್ದರು. 6 ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬಂದವರಲ್ಲಿ ಇಬ್ಬರಾಗಿದ್ದರು. ಅವರು ಬೇಸರಗೊಂಡು ತಮ್ಮ ಬಟ್ಟೆಗಳನ್ನು ಹರಿದುಕೊಂಡರು. 7 ಇವರಿಬ್ಬರು ಇಸ್ರೇಲರೆಲ್ಲರಿಗೆ, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು, 8 ಅದು ಹಾಲೂ ಜೇನೂ ಹರಿಯುವ ದೇಶ. ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಆ ದೇಶದೊಳಗೆ ನಮ್ಮನ್ನು ಕರೆದೊಯ್ದು ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು. 9 ಹೀಗಿರುವುದರಿಂದ ಯೆಹೋವನಿಗೆ ವಿರುದ್ಧವಾಗಿ ಏಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ನಾವು ಅವರನ್ನು ಸೋಲಿಸಬಹುದು. ಅವರಿಗೆ ಯಾವ ಸಂರಕ್ಷಣೆ ಇರುವುದಿಲ್ಲ. ಆದರೆ ನಮ್ಮ ಕಡೆ ಯೆಹೋವನು ಇದ್ದಾನೆ. ಆದ್ದರಿಂದ ಭಯಪಡಬೇಡಿರಿ” ಅಂದರು. 10 ಎಲ್ಲಾ ಜನರು ಯೆಹೋಶುವನನ್ನು ಮತ್ತು ಕಾಲೇಬನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತಾಡತೊಡಗಿದರು. ಆದರೆ ಯೆಹೋವನ ಮಹಿಮೆ ದೇವದರ್ಶನಗುಡಾರ ಮೇಲೆ ಪ್ರತ್ಯಕ್ಷವಾದದ್ದು ಇಸ್ರೇಲರೆಲ್ಲರಿಗೆ ಕಾಣಿಸಿತು. ಯೆಹೋವನು ಮೋಶೆಯೊಡನೆ ಮಾತಾಡಿ, 11 “ಈ ಜನರು ಇನ್ನೆಷ್ಟು ಕಾಲದವರೆಗೆ ನನ್ನನ್ನು ತಿರಸ್ಕರಿಸುವರು? ನಾನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನೆಷ್ಟು ಕಾಲದವರೆಗೆ ನನ್ನನ್ನು ನಂಬದೆ ಇರುವರು? 12 ಸರಿ, ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು” ಎಂದು ಹೇಳಿದನು.
13 ಅದಕ್ಕೆ ಮೋಶೆ ಯೆಹೋವನಿಗೆ, “ನೀನು ನಿನ್ನ ಜನರಾದ ಇಸ್ರೇಲರನ್ನು ನಿನ್ನ ಶಕ್ತಿಯ ಮೂಲಕ ಈಜಿಪ್ಟಿನಿಂದ ಕರೆದುಕೊಂಡು ಬಂದೆ. ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು ಈ ಸುದ್ದಿಯನ್ನು ಕೇಳಿ ಕಾನಾನಿನ ನಿವಾಸಿಗಳಿಗೆ ಅದರ ಬಗ್ಗೆ ತಿಳಿಸುವರು.
14 ಅದಲ್ಲದೆ, ಈ ದೇಶದವರು ನೀನು ಇಸ್ರೇಲರ ಮಧ್ಯದಲ್ಲಿರುವ ಸಂಗತಿಯನ್ನು ಕೇಳಿದ್ದಾರೆ. ನೀನು ಇಸ್ರೇಲರಿಗೆ ಪ್ರತ್ಯಕ್ಷನಾಗಿ ಕಾಣಿಸಿಕೊಂಡದ್ದು ಅವರಿಗೆ ತಿಳಿದಿದೆ. ನಿನ್ನ ಮೇಘವು ಇಸ್ರೇಲರ ಮೇಲಿರುವುದು ಅವರಿಗೆ ಗೊತ್ತಿದೆ. ನೀನು ಇಸ್ರೇಲರನ್ನು ಹಗಲಲ್ಲಿ ಮೇಘಸ್ತಂಭದ ಮೂಲಕವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದ ಮೂಲಕವಾಗಿಯೂ ಮುನ್ನಡೆಸುತ್ತಿರುವುದು ಅವರಿಗೆ ತಿಳಿದಿದೆ. 15 ಹೀಗಿರಲಾಗಿ, ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ, ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ, 16 ‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಇಸ್ರೇಲರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ ಅವರನ್ನು ಮರುಭೂಮಿಯಲ್ಲಿ ನಾಶಮಾಡಿದನು’ ಎಂದು ಮಾತಾಡಿಕೊಳ್ಳುವರು.
17 “ಆದ್ದರಿಂದ ಒಡೆಯನೇ, ನೀನು ಹೇಳಿದಂತೆಯೇ ನಿನ್ನ ತಾಳ್ಮೆಯು ದೀರ್ಘವಾಗಿರಲಿ. 18 ನೀನು ನಿನ್ನ ವಿಷಯದಲ್ಲಿ ‘ಯೆಹೋವನು ದೀರ್ಘಶಾಂತನು, ಬಹುಪ್ರೀತಿಯುಳ್ಳವನು, ಅಪರಾಧ, ಪಾಪಗಳನ್ನು ಕ್ಷಮಿಸುವವನಾಗಿದ್ದರೂ ಎಲ್ಲಾ ದಂಡನೆಯನ್ನು ರದ್ದುಪಡಿಸದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ನೀನೇ ಹೇಳಿರುವಿಯಲ್ಲಾ! 19 ನಾವು ಈಜಿಪ್ಟಿನಿಂದ ಬಂದದ್ದು ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು. 20 ಅದಕ್ಕೆ ಯೆಹೋವನು, “ನೀನು ಕೇಳಿಕೊಂಡಂತೆ ನಾನು ಜನರನ್ನು ಕ್ಷಮಿಸುವೆನು. 21 ಆದಾಗ್ಯೂ ನನ್ನ ಜೀವದಾಣೆ ಮತ್ತು ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರಬೇಕೆಂಬುವ ನಿಶ್ಚಯ ವಾಕ್ಯದ ಆಣೆ, 22 ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಾನು ನಡಿಸಿರುವ ಮಹಾತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಜನರೆಲ್ಲರೂ ಪದೇಪದೇ ನನ್ನನ್ನು ಪರೀಕ್ಷಿಸಿದ್ದರಿಂದ ಮತ್ತು ನನಗೆ ವಿಧೇಯರಾಗದಿದ್ದ ಕಾರಣ, 23 ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ. ನನ್ನನ್ನು ತಿರಸ್ಕರಿಸಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ. 24 ಆದರೆ ನನ್ನ ಸೇವಕನಾದ ಕಾಲೇಬನು ಅವರ ಹಾಗಲ್ಲ, ಅವನು ನನ್ನನ್ನು ಮನಃಪೂರ್ವಕವಾಗಿ ಹಿಂಬಾಲಿಸಿದ್ದಾನೆ. ಆದ್ದರಿಂದ ಅವನು ಸಂಚರಿಸಿ ನೋಡಿದ ದೇಶಕ್ಕೆ ಅವನನ್ನು ಬರಮಾಡುವೆನು ಮತ್ತು ಅವನ ಸಂತತಿಯವರು ಆ ದೇಶವನ್ನು ಹೊಂದುವರು. 25 ಅಮಾಲೇಕ್ಯರೂ ಕಾನಾನ್ಯರೂ ಆ ಕಣಿವೆಯಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಕೆಂಪುಸಮುದ್ರಕ್ಕೆ ಹೋಗುವ ದಾರಿಯ ಮೂಲಕ ಮರುಭೂಮಿಗೆ ಮರಳಿ ಪ್ರಯಾಣ ಮಾಡಬೇಕು” ಎಂದು ಹೇಳಿದನು. 26 {#1ಯೆಹೋವನು ಜನರನ್ನು ಶಿಕ್ಷಿಸಿದ್ದು } (26-27)ಯೆಹೋವನು ಮೋಶೆ ಆರೋನರಿಗೆ, “ಈ ದುಷ್ಟ ಸಮೂಹದವರು ನನಗೆ ವಿರುದ್ಧವಾಗಿ ಇನ್ನೆಷ್ಟರವರೆಗೆ ಗುಣುಗುಟ್ಟುತ್ತಲೇ ಇರುತ್ತಾರೆ. ಇಸ್ರೇಲರು ನನಗೆ ವಿರೋಧವಾಗಿ ಗುಣುಗುಟ್ಟುವುದು ನನಗೆ ಕೇಳಿಸಿದೆ. 27 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ‘ಯೆಹೋವನು ಹೇಳುವುದೇನೆಂದರೆ: ನನ್ನ ಜೀವದಾಣೆ. ನೀವು ಏನನ್ನು ಹೇಳಿದಿರೋ ಅದನ್ನೇ ನಿಮಗೆ ಮಾಡುತ್ತೇನೆ; 29 ನಿಮ್ಮ ಶವಗಳು ಈ ಮರುಭೂಮಿಯಲ್ಲಿಯೇ ಬೀಳುವವು. ನೀವು ನನಗೆ ವಿರೋಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಲೆಕ್ಕಿಸಲ್ಪಟ್ಟವರೆಲ್ಲರೂ ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. 30 ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಬೇರೆ ಯಾರೂ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಸೇರುವುದಿಲ್ಲ. 31 ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಪ್ರವೇಶಿಸುವಂತೆ ಮಾಡುವೆನು. ನೀವು ತಿರಸ್ಕರಿಸಿದ ದೇಶವನ್ನು ಅವರು ಅನುಭೋಗಿಸುವರು. 32 ನೀವಂತೂ ಈ ಮರುಭೂಮಿಯಲ್ಲಿ ಸಾಯುವಿರಿ. ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲ್ಲಿ ಪರ್ಯಂತರ ಬೀಳುವವು. 33 “ ‘ನಿಮ್ಮ ಅಪನಂಬಿಗಸ್ತಿಕೆಯ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನೀವು ಸಾಯುವತನಕ ನಲವತ್ತು ವರ್ಷ ಮರುಭೂಮಿಯಲ್ಲಿ ಅಲೆದಾಡುವರು. 34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ ನಲವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ. ನನ್ನನ್ನು ತಿರಸ್ಕರಿಸುವುದೆಂದರೆ ಏನೆಂಬುದು ನಿಮಗೆ ಗೊತ್ತಾಗುತ್ತದೆ.’ 35 36 “ಇದು ಯೆಹೋವನೆಂಬ ನಾನು ಹೇಳಿದ ಮಾತು. ನನಗೆ ವಿರೋಧವಾಗಿ ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಖಂಡಿತವಾಗಿ ಮಾಡುತ್ತೇನೆ. ಈ ಮರುಭೂಮಿಯಲ್ಲಿಯೇ ಇವರೆಲ್ಲರೂ ಸಾಯಬೇಕು” ಎಂದು ಹೇಳಿದನು. (36-37)ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟು ಹಿಂದಿರುಗಿಬಂದು ಆ ದೇಶದ ವಿಷಯದಲ್ಲಿ ಅಶುಭಸಮಾಚಾರವನ್ನು ಹೇಳಿ ಸರ್ವಸಮೂಹದರವರನ್ನು ಅವರಿಗೆ ವಿರೋಧವಾಗಿ ಗುಣುಗುಟ್ಟುವಂತೆ ಮಾಡಿದ ಹತ್ತು ಜನರು ಯೆಹೋವನಿಂದ ವ್ಯಾಧಿಗೊಳಗಾಗಿ ಸತ್ತರು. 37 38 ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನ ಹೊರತು ಉಳಿದ ಹತ್ತು ಮಂದಿ ಸತ್ತರು. ಯೆಹೋವನು ಅವರಿಬ್ಬರನ್ನು ಉಳಿಸಿದನು. ಅವರಿಗೆ ವ್ಯಾಧಿಯು ತಗಲಲಿಲ್ಲ. 39 {#1ಜನರು ಕಾನಾನಿಗೆ ಹೋಗಲು ಪ್ರಯತ್ನಿಸಿದ್ದು } ಮೋಶೆಯು ಈ ಎಲ್ಲಾ ಸಂಗತಿಗಳನ್ನು ಇಸ್ರೇಲರಿಗೆಲ್ಲಾ ಹೇಳಲಾಗಿ ಅವರು ಬಹಳ ದುಃಖಪಟ್ಟರು. 40 ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ. ಯೆಹೋವನು ವಾಗ್ದಾನ ಮಾಡಿರುವ ದೇಶಕ್ಕೆ ಹೋಗಲು ನಾವು ಈಗ ಸಿದ್ಧರಾಗಿದ್ದೇವೆ” ಎಂದು ಹೇಳಿದರು. 41 ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ನೀವು ಯಶಸ್ವಿಯಾಗುವುದಿಲ್ಲ. 42 ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ. ನೀವು ಆ ದೇಶಕ್ಕೆ ಹೋಗಬೇಡಿರಿ. ಇಲ್ಲವಾದರೆ, ನಿಮ್ಮ ಶತ್ರುಗಳಿಂದ ಸೋಲಿಸಲ್ಪಡುವಿರಿ. 43 ಅಮಾಲೇಕ್ಯರೂ ಕಾನಾನ್ಯರೂ ನಿಮ್ಮನ್ನು ಎದುರಿಸಲು ಅಲ್ಲಿರುವುದರಿಂದ ನೀವು ಅವರ ಖಡ್ಗದಿಂದ ಸಾಯುವಿರಿ. ನೀವು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು. 44 ಆದರೆ ಜನರು ಮೋಶೆಯ ಮಾತನ್ನು ನಂಬಲಿಲ್ಲ. ಅವರು ಪರ್ವತಪ್ರದೇಶದ ಕಡೆಗೆ ಹೊರಟರು. ಆದರೆ ಮೋಶೆಯೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯೂ ಜನರೊಂದಿಗೆ ಹೋಗಲಿಲ್ಲ. 45 ಆಗ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾನ್ಯರೂ ಇಳಿದುಬಂದು ಅವರನ್ನು ಸೋಲಿಸಿ ಹೊರ್ಮಾ ಪಟ್ಟಣದವರೆಗೂ ಅಟ್ಟಿಸಿಕೊಂಡುಬಂದು ಸಂಹರಿಸಿದರು.
మొత్తం 36 అధ్యాయాలు, ఎంపిక చేయబడింది అధ్యాయము 14 / 36
×

Alert

×

Telugu Letters Keypad References