1. [PS]*ರಚನೆಗಾರ: ದಾವೀದ. *[PE][QS]ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ತೊರೆದಿರುವೆ? [QE][QS2]ನನ್ನನ್ನು ರಕ್ಷಿಸದೆ ಯಾಕೆ ಬಹುದೂರವಾಗಿರುವೆ! [QE][QS2]ಸಹಾಯಕ್ಕಾಗಿ ನಾನು ಗೋಳಾಡುತ್ತಿದ್ದರೂ ಕೇಳದೆ ಯಾಕೆ ಬಹದೂರವಾಗಿರುವೆ? [QE]
2. [QS]ನನ್ನ ದೇವರೇ, ಹಗಲಿನಲ್ಲಿ ನಾನು ನಿನ್ನನ್ನು ಕೂಗಿಕೊಂಡೆನು, [QE][QS2]ಆದರೂ ನೀನು ನನಗೆ ಉತ್ತರಿಸಲಿಲ್ಲ. [QE][QS]ರಾತ್ರಿಯಲ್ಲೂ ನಿನ್ನನ್ನು ಕೂಗಿಕೊಳ್ಳುತ್ತಲೇ ಇದ್ದೆನು. [QE][PBR]
3. [QS]ದೇವರೇ, ಪರಿಶುದ್ಧನು ನೀನೇ. [QE][QS2]ನೀನು ರಾಜನಂತೆ ಕುಳಿತಿರುವೆ. ಇಸ್ರೇಲರ ಸ್ತುತಿಗಳೇ ನಿನ್ನ ಸಿಂಹಾಸನ. [QE]
4. [QS]ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟಿದ್ದರು. [QE][QS2]ಅವರು ನಿನ್ನಲ್ಲಿಯೇ ಭರವಸವಿಟ್ಟಿದ್ದರು, ನೀನು ಅವರನ್ನು ರಕ್ಷಿಸಿದೆ. [QE]
5. [QS]ನಮ್ಮ ಪೂರ್ವಿಕರು ನಿನ್ನಲ್ಲಿ ಮೊರೆಯಿಟ್ಟಾಗ ಅವರನ್ನು ಶತ್ರುಗಳಿಂದ ಬಿಡಿಸಿದೆ. [QE][QS2]ನಿನ್ನಲ್ಲಿ ಭರವಸವಿಟ್ಟಿದ್ದ ಅವರಿಗೆ ನಿರಾಶೆಯಾಗಲಿಲ್ಲ. [QE]
6. [QS]ಹೀಗಿರಲು, ನಾನು ಹುಳವೇ? ನಾನು ಮನುಷ್ಯನಲ್ಲವೇ? [QE][QS2]ನನ್ನ ವಿಷಯದಲ್ಲಿ ಜನರು ನಾಚಿಕೆಪಡುತ್ತಾರೆ; ಅವರು ನನ್ನನ್ನು ತಿರಸ್ಕರಿಸುತ್ತಾರೆ. [QE]
7. [QS]ನನ್ನನ್ನು ನೋಡಿದವರೆಲ್ಲರೂ ಗೇಲಿಮಾಡುವರು. [QE][QS2]ಅವರು ಓರೆ ತುಟಿಮಾಡಿ ತಲೆಯಾಡಿಸುತ್ತಾ, [QE]
8. [QS]“ಯೆಹೋವನಿಗೆ ಮೊರೆಯಿಡು, [QE][QS2]ಆತನು ನಿನ್ನನ್ನು ರಕ್ಷಿಸಬಹುದು. [QE][QS2]ಆತನು ನಿನ್ನನ್ನು ಬಹಳವಾಗಿ ಇಷ್ಟಪಡುವುದಾದರೆ ನಿನ್ನನ್ನು ಖಂಡಿತವಾಗಿ ರಕ್ಷಿಸುವನು” ಅನ್ನುತ್ತಾರೆ. [QE][PBR]
9. [QS]ನಾನಂತೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ. ಹುಟ್ಟಿದ ದಿನದಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ. [QE][QS2]ನಾನಿನ್ನೂ ತಾಯಿಯ ಗರ್ಭದಲ್ಲಿದ್ದಾಗ ನನಗೆ ಭರವಸೆ ನೀಡಿ ಸಂತೈಸಿದವನು ನೀನೇ. [QE]
10. [QS]ಹುಟ್ಟಿದ ದಿನದಿಂದಲೂ ನೀನೇ ನನ್ನ ದೇವರಾಗಿರುವೆ. [QE][QS2]ತಾಯಿಯ ಗರ್ಭದಿಂದ ಬಂದಂದಿನಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ. [QE][PBR]
11. [QS]ಹೀಗಿರಲು, ನನ್ನನ್ನು ತೊರೆಯಬೇಡ! [QE][QS2]ಆಪತ್ತು ಸಮೀಪಿಸಿದೆ, ನನಗೆ ಸಹಾಯಮಾಡಲು ಯಾರೂ ಇಲ್ಲ. [QE]
12. [QS]ಜನರು ನನ್ನನ್ನು ಸುತ್ತುಗಟ್ಟಿದ್ದಾರೆ; [QE][QS2]ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ. [QE]
13. [QS]ಪ್ರಾಣಿಯೊಂದನ್ನು ಸೀಳಿಹಾಕುತ್ತಾ ಗರ್ಜಿಸುವ ಸಿಂಹದಂತೆ [QE][QS2]ಅವರ ಬಾಯಿಗಳು ಅಗಲವಾಗಿ ತೆರೆದಿವೆ. [QE][PBR]
14. [QS]ನೆಲದ ಮೇಲೆ ಸುರಿದ ನೀರಿನಂತೆ [QE][QS2]ನನ್ನ ಬಲವು ಇಲ್ಲವಾಗಿದೆ; [QE][QS]ಮೂಳೆಗಳು ಸಡಿಲಗೊಂಡಿವೆ; [QE][QS2]ಹೃದಯವು ಮೇಣದಂತೆ ಕರಗಿಹೋಗಿದೆ. [QE]
15. [QS]ನನ್ನ ಶಕ್ತಿಯು ಒಡೆದುಹೋದ ಮಡಿಕೆಯ ಒಣ ತುಂಡಿನಂತಿದೆ. [QE][QS2]ನನ್ನ ನಾಲಿಗೆಯು ಬಾಯಿ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತಿದೆ. [QE][QS2]ನೀನು ನನ್ನನ್ನು ಮಣ್ಣಿಗೆ ಸೇರಿಸಿರುವೆ. [QE]
16. [QS]ದುಷ್ಟರು ನಾಯಿಗಳಂತೆ ನನ್ನನ್ನು ಸುತ್ತಿಕೊಂಡಿದ್ದಾರೆ. [QE][QS2]ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.[* ಅವರು … ತಿವಿದಿದ್ದಾರೆ ಪುರಾತನ ಕಾಲದ ಗ್ರೀಕ್ ಅನುವಾದದ ಪ್ರಕಾರ. “ಅವರು ನನ್ನ ಕೈಗಳನ್ನು ಮತ್ತು ಕಾಲುಗಳನ್ನು ತಿವಿದಿದ್ದಾರೆ.” ಹೀಬ್ರೂವಿನಲ್ಲಿ, “ತಿವಿದಿದ್ದಾರೆ” ಎಂಬ ಪದವೇ “ಸಿಂಹದಂತೆ” ಎಂಬರ್ಥವನ್ನು ಕೊಡುತ್ತದೆ. ] [QE]
17. [QS]ನನ್ನ ಮೂಳೆಗಳು ಎದ್ದುಕಾಣುತ್ತಿವೆ! [QE][QS2]ಜನರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದಾರೆ! [QE][QS2]ಅವರು ನನ್ನನ್ನೇ ನೋಡುತ್ತಿದ್ದಾರೆ! [QE]
18. [QS]ಅವರು ನನ್ನ ಮೇಲ್ಹೊದಿಕೆಯನ್ನು ಪಾಲು ಮಾಡಿಕೊಳ್ಳುವರು; [QE][QS2]ನನ್ನ ನಿಲುವಂಗಿಗಾಗಿ ಚೀಟುಹಾಕುವರು. [QE][PBR]
19. [QS]ಯೆಹೋವನೇ, ನನ್ನನ್ನು ತೊರೆಯಬೇಡ! [QE][QS2]ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು! [QE]
20. [QS]ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು. [QE][QS2]ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು. [QE]
21. [QS]ನನ್ನನ್ನು ಸಿಂಹದ ಬಾಯಿಂದ ಬಿಡಿಸು; [QE][QS2]ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು. [QE][PBR]
22. [QS]ನಿನ್ನ ಕುರಿತು ನನ್ನ ಸಹೋದರರಿಗೆ ಹೇಳುವೆನು; [QE][QS2]ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು. [QE]
23. [QS]ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ. [QE][QS2]ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ! [QE][QS2]ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ! [QE]
24. [QS]ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ; [QE][QS2]ಆತನು ಅವರನ್ನು ದ್ವೇಷಿಸುವುದಿಲ್ಲ. [QE][QS]ಅವರು ಆತನನ್ನು ಕೂಗಿಕೊಳ್ಳುವಾಗ [QE][QS2]ಆತನು ಅವರಿಗೆ ಮರೆಯಾಗುವುದಿಲ್ಲ. [QE][PBR]
25. [QS]ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; [QE][QS2]ನನ್ನ ಯಜ್ಞಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು. [QE]
26. [QS]ಬಡವರು ತಿಂದು ತೃಪ್ತರಾಗುವರು. [QE][QS2]ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ! [QE][QS2]ನಿಮ್ಮ ಹೃದಯಗಳು ಯಾವಾಗಲೂ ಸಂತೋಷವಾಗಿರಲಿ.[† ಸಂತೋಷವಾಗಿರಲಿ ಅಕ್ಷರಶಃ, “ಜೀವಿಸಲಿ.” ] [QE]
27. [QS]ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ. [QE][QS2]ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ. [QE]
28. [QS]ಯಾಕೆಂದರೆ ಯೆಹೋವನೇ ರಾಜನು! [QE][QS2]ಆತನು ಜನಾಂಗಗಳನ್ನೆಲ್ಲಾ ಆಳುವನು. [QE]
29. [QS]ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು. [QE][QS2]ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು. [QE]
30. [QS]ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು. [QE][QS2]ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು. [QE]
31. [QS]ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ [QE][QS2]ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[‡ ಈ ವಚನಗಳನ್ನು ಹೀಬ್ರೂ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಕಷ್ಟ. ] [QE][PBR]