1. [PS]*ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ. *[PE][QS]ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ; [QE][QS2]ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ; [QE][QS2]ಆದ್ದರಿಂದ ನಿನ್ನನ್ನು ಕೊಂಡಾಡುವೆನು. [QE]
2. [QS]ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ [QE][QS2]ನೀನು ನನ್ನನ್ನು ಗುಣಪಡಿಸಿದೆ. [QE]
3. [QS]ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ; [QE][QS2]ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[* ನೀನು … ಕಾಪಾಡಿದೆ “ಯೆಹೋವನೇ, ನೀನು ನನ್ನನ್ನು ಪಾತಾಳದಿಂದ ಮೇಲೆತ್ತಿದೆ. ಪಾತಾಳದಲ್ಲಿರುವವರನ್ನು ಸೇರದಂತೆ ನನ್ನನ್ನು ಕಾಪಾಡಿ ನನ್ನ ಆತ್ಮವನ್ನು ಚೈತನ್ಯಗೊಳಿಸಿದೆ.” ] [QE][PBR]
4. [QS]ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ! [QE][QS2]ಆತನ ಪರಿಶುದ್ಧ ಹೆಸರನ್ನು[† ಹೆಸರು ಅಕ್ಷರಶಃ “ನೆನಪು,” “ಜ್ಞಾಪಕಾರ್ಥ.” ] ಕೊಂಡಾಡಿರಿ. [QE]
5. [QS]ಆತನ ಕೋಪವು ಕ್ಷಣಮಾತ್ರವಿರುವುದು. [QE][QS2]ಆತನ ಪ್ರೀತಿಯಾದರೋ ಶಾಶ್ವತವಾದದ್ದು. [QE][QS]ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ [QE][QS2]ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು. [QE][PBR]
6. [QS]ನಾನು ಸುರಕ್ಷಿತವಾಗಿದ್ದಾಗ [QE][QS2]ನನಗೆ ಕೇಡೇ ಇಲ್ಲವೆಂದುಕೊಂಡೆನು. [QE]
7. [QS]ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ [QE][QS2]ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು. [QE][QS]ಆದರೆ ನೀನು ನನಗೆ ವಿಮುಖನಾದಾಗ [QE][QS2]ಭಯದಿಂದ ನಡುಗತೊಡಗಿದೆ. [QE]
8. [QS]ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ; [QE][QS2]ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ. [QE]
9. [QS]“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ, [QE][QS2]ಅದರಿಂದ ಒಳ್ಳೆಯದೇನಾದೀತು? [QE][QS]ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು! [QE][QS2]ಅವರು ನಿನ್ನನ್ನು ಸ್ತುತಿಸುವುದಿಲ್ಲ! [QE][QS2]ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ. [QE]
10. [QS]ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು! [QE][QS2]ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು. [QE][PBR]
11. [QS]ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ. [QE][QS2]ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ [QE][QS2]ಹರ್ಷವಸ್ತ್ರಗಳನ್ನು ಹೊದಿಸಿದೆ. [QE]
12. [QS]ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು. [QE][QS2]ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು. [QE][PBR]