1. {#1ಪ್ರಿಯಕರನು ಪ್ರಿಯತಮೆಗೆ } [QS]ನನ್ನ ಪ್ರಿಯಳೇ, ನೀನು ಬಹಳ ಸುಂದರಿ! [QE][QS2]ನೀನು ರೂಪವತಿ! [QE][QS]ಮುಸುಕಿನೊಳಗಿರುವ ನಿನ್ನ ಕಣ್ಣುಗಳು [QE][QS2]ಕೋಮಲವಾದ ಪಾರಿವಾಳಗಳಂತಿವೆ. [QE][QS]ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ [QE][QS2]ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ. [QE]
2. [QS]ನಿನ್ನ ಹಲ್ಲುಗಳು [QE][QS2]ಉಣ್ಣೆ ಕತ್ತರಿಸಿದ ನಂತರ ಸ್ನಾನ ಮಾಡಿಕೊಂಡು [QE][QS]ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ [QE][QS2]ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ. [QE]
3. [QS]ನಿನ್ನ ತುಟಿಗಳು ರೇಷ್ಮೆಯ ಕೆಂಪುದಾರದಂತಿವೆ. [QE][QS2]ನಿನ್ನ ಬಾಯಿ ಸುಂದರವಾಗಿದೆ. [QE][QS]ಮುಸುಕಿನೊಳಗಿರುವ ನಿನ್ನ ಕೆನ್ನೆಗಳು [QE][QS2]ದಾಳಿಂಬೆ ಹಣ್ಣಿನ ಎರಡು ಹೋಳುಗಳಂತಿವೆ. [QE]
4. [QS]ನಿನ್ನ ಕೊರಳು ದಾವೀದನ ಗೋಪುರದಂತೆ [QE][QS2]ಉದ್ದವಾಗಿದೆ ಮತ್ತು ತೆಳುವಾಗಿದೆ. [QE][QS]ಆ ಗೋಪುರದ ಗೋಡೆಗಳು [QE][QS2]ಸಾವಿರ ಗುರಾಣಿಗಳಿಂದಲೂ [QE][QS2]ಬಲಿಷ್ಠ ಸೈನಿಕರ ಗುರಾಣಿಗಳಿಂದಲೂ ಅಲಂಕೃತವಾಗಿವೆ.[* ನಿನ್ನ ಕೊರಳು … ಅಲಂಕೃತವಾಗಿವೆ ಅಥವಾ “ನಿನ್ನ ಕೊರಳು ಕಲ್ಲುಗಳ ಸಾಲುಗಳಿಂದ ಕಟ್ಟಲ್ಪಟ್ಟಿರುವ ದಾವೀದನ ಗೋಪುರದಂತಿದೆ.” ಇದರರ್ಥವೇನೆಂದರೆ, ಆಕೆ ಅನೇಕ ಕಂಠಹಾರಗಳನ್ನು ಒಂದರ ಮೇಲೊಂದು ಧರಿಸಿಕೊಂಡಿದ್ದರಿಂದ ಅವು ಗೋಪುರದ ಕಲ್ಲಿನ ಸಾಲುಗಳಂತೆ ಕಾಣಿಸಿತು. ] [QE]
5. [QS]ನಿನ್ನ ಎರಡು ಸ್ತನಗಳು ಅವಳಿಜವಳಿ ಜಿಂಕೆಮರಿಗಳಂತೆಯೂ [QE][QS2]ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ [QE][QS2]ಅವಳಿಜವಳಿ ಸಾರಂಗಗಳಂತೆಯೂ ಇವೆ. [QE]
6. [QS]ಹಗಲು ತನ್ನ ಕೊನೆ ಉಸಿರೆಳೆಯುವವರೆಗೆ [QE][QS2]ಮತ್ತು ನೆರಳುಗಳೆಲ್ಲಾ ಓಡಿಹೋಗುವವರೆಗೆ [QE][QS]ನಾನು ಗೋಲರಸದ ಬೆಟ್ಟಕ್ಕೂ [QE][QS2]ಧೂಪದ ಗುಡ್ಡಕ್ಕೂ ಹೋಗುವೆನು. [QE]
7. [QS]ನನ್ನ ಪ್ರಿಯೆ, ನೀನು ಸರ್ವಾಂಗಸುಂದರಿ. [QE][QS2]ನಿನಗೆ ಎಲ್ಲಿಯೂ ಕಲೆಗಳಿಲ್ಲ! [QE]
8. [QS]ನನ್ನ ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ! [QE][QS2]ಲೆಬನೋನಿನಿಂದ ನನ್ನೊಂದಿಗೆ ಬಾ! [QE][QS]ಅಮಾನದ ತುದಿಯಿಂದಲೂ [QE][QS2]ಶೆನೀರಿನ ತುದಿಯಿಂದಲೂ ಹೆರ್ಮೋನಿನ ತುದಿಯಿಂದಲೂ [QE][QS2]ಸಿಂಹದ ಗವಿಗಳಿಂದಲೂ ಚಿರತೆಗಳ ಬೆಟ್ಟಗಳಿಂದಲೂ ಬಾ! [QE]
9. [QS]ನನ್ನ ಪ್ರಿಯಳೇ, ನನ್ನ ವಧುವೇ, ನೀನು ನನ್ನ ಹೃದಯವನ್ನು ಅಪಹರಿಸಿರುವೆ. [QE][QS2]ನಿನ್ನ ನೋಟದಿಂದಲೂ ನಿನ್ನ ಮುತ್ತಿನಹಾರದಿಂದಲೂ ನನ್ನ ಹೃದಯವನ್ನು ವಶಪಡಿಸಿಕೊಂಡಿದ್ದಿ. [QE]
10. [QS]ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ! [QE][QS2]ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಎಷ್ಟೋ ಉತ್ತಮ! [QE][QS]ನಿನ್ನ ತೈಲದ ಪರಿಮಳವು [QE][QS2]ಸಕಲ ಬಗೆಯ ಸುಗಂಧ ದ್ರವ್ಯಗಳಿಗಿಂತಲೂ ಉತ್ತಮ! [QE]
11. [QS]ನನ್ನ ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; [QE][QS2]ಹಾಲೂ ಜೇನೂ ನಿನ್ನ ನಾಲಿಗೆಯೊಳಗಿವೆ. [QE][QS]ನಿನ್ನ ಬಟ್ಟೆಗಳು ಪರಿಮಳದ್ರವ್ಯದಂತೆ[† ಪರಿಮಳದ್ರವ್ಯ ಅಥವಾ “ಲೆಬನೋನ್.” ] [QE][QS2]ಸುವಾಸನೆಭರಿತವಾಗಿವೆ. [QE]
12. [QS]ನನ್ನ ಪ್ರಿಯಳೇ, ನನ್ನ ವಧುವೇ, [QE][QS2]ನೀನು ಕದಹಾಕಿದ ತೋಟದಂತಿರುವೆ; [QE][QS]ಬೇಲಿಯೊಳಗಿರುವ ಬುಗ್ಗೆಯಂತಿರುವೆ; [QE][QS2]ಮುಚ್ಚಿ ಮುದ್ರಿಸಿದ ಚಿಲುಮೆಯಂತಿರುವೆ. [QE]
13. [QS]ನಿನ್ನ ಅಂಗಾಂಗಗಳು ದಾಳಿಂಬೆ ಮರಗಳಿಂದಲೂ [QE][QS2]ರುಚಿಕರವಾದ ಹಣ್ಣಿನ ಮರಗಳಿಂದಲೂ ಗೋರಂಟಿ, [QE]
14. [QS]ನಾರ್ಡ್, ಜಟಾಮಾಂಸಿ, ಕೇಸರಿ, ಬಜೆ, ಲವಂಗಚಕ್ಕೆ, ರಕ್ತಬೋಳ, ಅಗುರು, ಸಾಂಬ್ರಾಣಿ ಗಿಡ ಮತ್ತು ದಾಲ್ಚಿನ್ನಿ [QE][QS2]ಎಂಬ ಸುಗಂಧದ ಸಸ್ಯಗಳಿಂದಲೂ ಕೂಡಿರುವ ತೋಟಗಳಂತಿವೆ. [QE]
15. [QS]ನೀನು ತೋಟದ ಬುಗ್ಗೆಯಂತಿರುವೆ; [QE][QS2]ಹೊಸ ನೀರಿನ ಬಾವಿಯಂತಿರುವೆ; [QE][QS2]ಲೆಬನೋನಿನ ಬೆಟ್ಟಗಳಿಂದ ಹರಿದುಬರುತ್ತಿರುವ ನೀರಿನಂತಿರುವೆ. [QE]
16. {#1ಪ್ರಿಯತಮೆ } [QS]ಉತ್ತರದ ಗಾಳಿಯೇ, ಎಚ್ಚರವಾಗು! [QE][QS2]ದಕ್ಷಿಣದ ಗಾಳಿಯೇ, ಬಾ! [QE][QS]ನನ್ನ ತೋಟದ ಮೇಲೆ ಬೀಸು. [QE][QS2]ಅದರ ಸುವಾಸನೆಯು ಹರಡಿಕೊಳ್ಳಲಿ. [QE][QS]ನನ್ನ ಪ್ರಿಯನು ನನ್ನ ತೋಟವನ್ನು ಪ್ರವೇಶಿಸಲಿ. [QE][QS2]ಅವನು ಅದರ ರುಚಿಕರವಾದ ಹಣ್ಣನ್ನು ತಿನ್ನಲಿ. [QE]